ಆಕ್ಟೋಬರ್ ತಿಂಗಳಲ್ಲಿ ಹೆಚ್ಚು ಮಾರಾಟವಾದ 10 ಕಾರುಗಳಿವು

2019ರ ಅಕ್ಟೋಬರ್ ತಿಂಗಳಿನಲ್ಲಿ ಅತೀ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಮಾರುತಿ ಸುಜುಕಿ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ, ಡಿಜೈರ್ ಕಾಂಪ್ಯಾಕ್ಟ್ - ಸೆಡಾನ್ ಈ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ.

ಆಕ್ಟೋಬರ್ ತಿಂಗಳಲ್ಲಿ ಹೆಚ್ಚು ಮಾರಾಟವಾದ 10 ಕಾರುಗಳಿವು

ಮಾರುತಿ ಸುಜುಕಿ ಡಿಜೈರ್ ಕಾರು, ಸ್ವಿಫ್ಟ್ ಮತ್ತು ಅಲ್ಟೋವನ್ನು ಹಿಂದಿಕ್ಕಿ 2019ರ ಅಕ್ಟೋಬರ್‍‍‍ನಲ್ಲಿ ಭಾರತದಲ್ಲಿ ಹೆಚ್ಚು ಮಾರಾಟವಾದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ ತಿಂಗಳು ಮಾರುತಿ ಡಿಜೈರ್ ಕಾಂಪ್ಯಾಕ್ಟ್ ಸೆಡಾನ್ ಕಾರಿನ 19,569 ಯುನಿ‍ಟ್‍ಗಳು ಮಾರಾಟವಾಗಿವೆ. ಕಾಂಪ್ಯಾಕ್ಟ್ ಸೆಡಾನ್ ಉತ್ತಮವಾಗಿ ಮಾರಾಟವಾಗುತ್ತಿದೆ.

ಆಕ್ಟೋಬರ್ ತಿಂಗಳಲ್ಲಿ ಹೆಚ್ಚು ಮಾರಾಟವಾದ 10 ಕಾರುಗಳಿವು

ಮಾರುತಿ ಸುಜುಕಿ ಸ್ವಿಫ್ಟ್, ಈ ಟಾಪ್-10 ಪಟ್ಟಿಯಲ್ಲಿ ಹೆಚ್ಚು ಮಾರಾಟವಾದ ಎರಡನೇ ಕಾರು ಆಗಿದೆ. ಮೂರನೇ ತಲೆಮಾರಿನ ಸ್ವಿಫ್ಟ್ ಕಾರ್ ಅನ್ನು 2019ರ ಅಕ್ಟೋಬರ್‍‍ನಲ್ಲಿ 19,401 ಯು‍ನಿಟ್‍ಗಳನ್ನು ಮಾರಾಟ ಮಾಡಲಾಗಿದೆ. ಪ್ರಸ್ತುತ ಜನಪ್ರಿಯ ಅಲ್ಟೋವನ್ನು ಹಿಂದಿಕ್ಕಿ ಸ್ವಿಫ್ಟ್ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಹ್ಯಾಚ್‍ಬ್ಯಾಕ್ ಆಗಿದೆ.

ಆಕ್ಟೋಬರ್ ತಿಂಗಳಲ್ಲಿ ಹೆಚ್ಚು ಮಾರಾಟವಾದ 10 ಕಾರುಗಳಿವು

ಮಾರುತಿ ಆಲ್ಟೊ ಟಾಪ್-10 ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. 800 ಸಿಸಿ ಮತ್ತು 998 ಸಿಸಿ ಎರಡೂ ರೂಪಾಂತರಗಳಲ್ಲಿ ಲಭ್ಯವಿರುವ ಮಾರುತಿ ಅಲ್ಟೋ ಹಿಂದಿನ ತಿಂಗಳಲ್ಲಿ 17,903 ಯು‍‍ನಿ‍ಟ್‍ಗಳಷ್ಟು ಮಾರಾಟವಾಗಿದೆ. ಮಾರುತಿ ಅಲ್ಟೋ ಕೆ10 ಕಾರಿನ ಎಂಜಿನ್ ಅನ್ನು ಶೀಘ್ರದಲ್ಲೇ ಮುಂಬರುವ ಬಿಎಸ್-6 ನಿಯಮಕ್ಕೆ ಅನುಸಾರವಾಗಿ ನವೀಕರಿಸುವ ಸಾಧ್ಯತೆಗಳಿವೆ.

ಆಕ್ಟೋಬರ್ ತಿಂಗಳಲ್ಲಿ ಹೆಚ್ಚು ಮಾರಾಟವಾದ 10 ಕಾರುಗಳಿವು

ಮಾರುತಿಯ ಪ್ರೀಮಿಯಂ ಹ್ಯಾಚ್‍‍ಬ್ಯಾಕ್ ಬಲೆನೊ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಗಳಿಸಿದೆ. ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ 16,237 ಯು‍‍ನಿಟ್‍‍ಗಳನ್ನು ಮಾರಾಟ ಮಾಡಲಾಗಿದೆ. ಪ್ರೀಮಿಯಂ ಹ್ಯಾಚ್‍ಬ್ಯಾಕ್ ವಿಭಾಗದಲ್ಲಿ ಬಲೆನೋ ಮುನ್ನಡೆ ಸಾಧಿಸುತ್ತಿದೆ.

ಆಕ್ಟೋಬರ್ ತಿಂಗಳಲ್ಲಿ ಹೆಚ್ಚು ಮಾರಾಟವಾದ 10 ಕಾರುಗಳಿವು

ಹ್ಯುಂಡೈ ಎಲೈಟ್ ಐ 20 ಟಾಪ್-10 ಪಟ್ಟಿಯಲ್ಲಿ ಐದನೇ ಸ್ಥಾನವನ್ನು ಪಡೆದಿದೆ. ಎಲೈಟ್ ಐ20 ಹ್ಯಾಚ್‍‍ಬ್ಯಾಕ್ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಮಾಸಿಕ ಮಾರಾಟದಲ್ಲಿ ಸುಧಾರಣೆಯನ್ನು ಕಂಡಿದೆ. ಭಾರತದಲ್ಲಿ ಹ್ಯುಂಡೈ ಕಂಪನಿಯ ಹೆಚ್ಚು ಮಾರಾಟವಾದ ಮಾದರಿ ಇದಾಗಿದೆ. ಕಳೆದ ತಿಂಗಳು 14,683 ಯು‍ನಿ‍ಟ್‍ಗಳು ಮಾರಾಟವಾಗಿವೆ.

ಆಕ್ಟೋಬರ್ ತಿಂಗಳಲ್ಲಿ ಹೆಚ್ಚು ಮಾರಾಟವಾದ 10 ಕಾರುಗಳಿವು

ಜನಪ್ರಿಯ ಟಾಲ್‍‍ಬಾಯ್ ಮಾರುತಿ ಸುಜುಕಿಯ ವ್ಯಾಗನ್‍ಆರ್ ಕಾರು ಟಾಪ್-10 ಪಟ್ಟಿಯಲ್ಲಿ ಆರನೇ ಸ್ಥಾನವನ್ನು ಪಡೆದುಕೊಂಡಿದೆ. ಹಿಂದಿನ ತಿಂಗಳಿಗೆ ಹೋಲಿಸಿದರೆ ವ್ಯಾಗನ್‍ಆರ್ ಮಾರಾಟದಲ್ಲಿ ಇಳಿಮುಖವಾಗಿದೆ. ಮಾರುತಿ ವ್ಯಾಗನ್‍ಆರ್ ಇದೇ ವರ್ಷದ ಆಕ್ಟೋಬರ್ ತಿಂಗಳಲ್ಲಿ 14,359 ಯು‍ನಿ‍ಟ್‍ಗಳು ಮಾರಾಟವಾಗಿವೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಆಕ್ಟೋಬರ್ ತಿಂಗಳಲ್ಲಿ ಹೆಚ್ಚು ಮಾರಾಟವಾದ 10 ಕಾರುಗಳಿವು

ಇಲ್ಲಿಯವರೆಗೆ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳ ಪಟ್ಟಿಯಲ್ಲಿ ಹೆಚ್ಚಾಗಿ ಮಾರುತಿ ಸುಜುಕಿ ಮತ್ತು ಹ್ಯುಂಡೈ ಮಾದರಿಗಳು ಪ್ರಾಬಲ್ಯವನ್ನು ಸಾಧಿಸಿವೆ. ಇತ್ತೀಚೆಗೆ ಬಿಡುಗಡೆಯಾದ ಕಿಯಾ ಸೆಲ್ಟೋಸ್ ಅಂತಿಮವಾಗಿ ಏಳೆನೇ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಕಿಯಾ ಸೆಲ್ಟೋಸ್ ದೇಶಿಯ ಮಾರುಕಟ್ಟೆಯಲ್ಲಿ 12,850 ಯು‍‍ನಿಟ್‍ಗಳಷ್ಟು ಮಾರಾಟವಾಗಿದೆ. ಕಿಯಾ ಸೆಲ್ಟೋಸ್ ದೇಶದಲ್ಲಿ ಹೆಚ್ಚು ಮಾರಾಟವಾದ ಎಸ್‍‍ಯು‍ವಿಯಾಗಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಆಕ್ಟೋಬರ್ ತಿಂಗಳಲ್ಲಿ ಹೆಚ್ಚು ಮಾರಾಟವಾದ 10 ಕಾರುಗಳಿವು

ಇತ್ತೀಚೆಗೆ ಬಿಡುಗಡೆಯಾದ ಮಾರುತಿ ಸುಜುಕಿ ಎಸ್‍-ಪ್ರೆಸ್ಸೊ ಟಾಪ್-10 ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಎಸ್-ಪ್ರೆಸ್ಸೊ ದೇಶಿಯ ಮಾರುಕಟ್ಟೆಯಲ್ಲಿ 10,634 ಯು‍‍ನಿ‍ಟ್‍ಗಳು ಮಾರಾಟವಾಗಿವೆ.ಇನ್ನೂ ಮಾರುತಿ ಸುಜುಕಿ ವಿಟಾರಾ ಬ್ರಿಝಾ ಬಹಳ ಹಿಂದಿನಿಂದಲೂ ದೇಶದಲ್ಲಿ ಹೆಚ್ಚು ಮಾರಾಟವಾಗುತ್ತಿದ್ದ ಎಸ್‍ಯು‍ವಿಯಾಗಿದೆ. ಆದರೆ ಹ್ಯುಂಡೈ ವೆನ್ಯೂ ಮತ್ತು ಕಿಯಾ ಸೆಲ್ಟೋಸ್‍‍ನ ಪ್ರಬಲ ಪೈಪೋಟಿಯಿಂದಾಗಿ ಈ ಬಾರಿ 10,227 ಯು‍ನಿ‍ಟ್‍ಗಳನ್ನು ಮಾರಾಟ ಮಾಡಲಾಗಿದೆ.ಕೊನೆಯದಾಗಿ ಟಾಪ್-10 ಪಟ್ಟಿಯಲ್ಲಿ ಮಾರುತಿ ಸುಜುಕಿಯ ಇಕೊ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ. ಮಾರುತಿ ಸುಜುಕಿ ಇಕೊ ಹಿಂದಿನ ತಿಂಗಳಲ್ಲಿ 10,011 ಯುನಿ‍ಟ್‍ಗಳನ್ನು ಮಾರಾಟ ಮಾಡಲಾಗಿವೆ.

ಆಕ್ಟೋಬರ್ ತಿಂಗಳಲ್ಲಿ ಹೆಚ್ಚು ಮಾರಾಟವಾದ 10 ಕಾರುಗಳಿವು

ಅಕ್ಟೋಬರ್ ತಿಂಗಳಲ್ಲಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯನ್ನು ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಕೆಲವು ಗಮನಾರ್ಹ ಬದಲಾವಣೆಗಳು ಕಂಡಿದೆ. ಕಿಯಾ ಸೆಲ್ಟೋಸ್ ಮತ್ತು ಹ್ಯುಂಡೈ ಕ್ರೆಟಾ ಮತ್ತು ವೆನ್ಯೂ ಎಸ್‍‍ಯು‍ವಿಗಳು ಹೊಸದಾಗಿ ಟಾಪ್-10 ಪಟ್ಟಿಯಲ್ಲಿ ಸೇರ್ಪಡೆಯಾಗಿವೆ.

Most Read Articles

Kannada
English summary
Top-Selling Cars In India For October 2019: Kia Seltos Enters Top-10 As Best-Selling SUV - Read in Kannada
Story first published: Tuesday, November 5, 2019, 18:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X