ಹೊಸ ವರ್ಷಕ್ಕೆ ಹೊಸ ದರಪಟ್ಟಿ ಬಿಡುಗಡೆ ಮಾಡಿದ ಹ್ಯುಂಡೈ ಇಂಡಿಯಾ

ವಾಹನಗಳ ಉತ್ಪಾದನಾ ವೆಚ್ಚ ನಿರ್ವಹಣೆಗಾಗಿ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳು ತಮ್ಮ ವಿವಿಧ ವಾಹನ ಮಾದರಿಗಳ ಬೆಲೆಯನ್ನು ಹೆಚ್ಚಿಸುತ್ತಿದ್ದು, ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಪ್ರಮುಖ ಕಾರುಗಳ ಬೆಲೆ ಹೆಚ್ಚಿಸಿ ಹೊಸ ದರ ಪಟ್ಟಿಯನ್ನು ಸಿದ್ದಪಡಿಸಿರುವುದು ಬಹಿರಂಗವಾಗಿದೆ.

ಹೊಸ ವರ್ಷಕ್ಕೆ ಹೊಸ ದರಪಟ್ಟಿ ಬಿಡುಗಡೆ ಮಾಡಿದ ಹ್ಯುಂಡೈ ಇಂಡಿಯಾ

ಹೊಸ ವಾಹನಗಳ ಬಿಡಿಭಾಗಗಳ ಬೆಲೆಯು ನಿರಂತರವಾಗಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ 2021ರ ಜನವರಿ 1ರಿಂದಲೇ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳು ಬೆಲೆ ಹೆಚ್ಚಳಕ್ಕಾಗಿ ನಿರ್ಧರಿಸಿದ್ದು, ಹ್ಯುಂಡೈ ಮೋಟಾರ್ಸ್ ಕೂಡಾ ತನ್ನ ಪ್ರಮುಖ ಕಾರು ಮಾದರಿಗಳ ಬೆಲೆ ಹೆಚ್ಚಳ ಮಾಡುತ್ತಿರುವುದಾಗಿ ಅಧಿಕೃತವಾಗಿಯೇ ಹೇಳಿಕೊಂಡಿದೆ. ಹೊಸ ದರಪಟ್ಟಿಯು ಜನವರಿ 1ರಂದೇ ಅನ್ವಯವಾಗಲಿದ್ದು, ವಿವಿಧ ವೆರಿಯೆಂಟ್‍ಗಳಿಗೆ ಅನುಗುಣವಾಗಿ ಶೇ. 1.50 ರಿಂದ ಶೇ. 2 ರಷ್ಟು ಬೆಲೆ ಹೆಚ್ಚಿಸಲಾಗಿದೆ.

ಹೊಸ ವರ್ಷಕ್ಕೆ ಹೊಸ ದರಪಟ್ಟಿ ಬಿಡುಗಡೆ ಮಾಡಿದ ಹ್ಯುಂಡೈ ಇಂಡಿಯಾ

ಪರಿಷ್ಕರಣೆ ಮಾಡಲಾದ ದರಪಟ್ಟಿಯಲ್ಲಿ ಹ್ಯುಂಡೈ ಕಾರುಗಳ ಬೆಲೆಯು ಕನಿಷ್ಠ ರೂ. 7,521 ರಿಂದ ಗರಿಷ್ಠ ರೂ. 32,880 ಬೆಲೆ ಹೆಚ್ಚಳ ಮಾಡಲಾಗಿದ್ದು, ಐ20 ಹೊಸ ಕಾರಿನ ಬೆಲೆಯಲ್ಲಿ ಕನಿಷ್ಠ ಮತ್ತು ವೆರ್ನಾ ಸೆಡಾನ್ ಮಾದರಿಯಲ್ಲಿ ಗರಿಷ್ಠ ಏರಿಕೆ ಮಾಡಲಾಗಿದೆ.

ಹೊಸ ವರ್ಷಕ್ಕೆ ಹೊಸ ದರಪಟ್ಟಿ ಬಿಡುಗಡೆ ಮಾಡಿದ ಹ್ಯುಂಡೈ ಇಂಡಿಯಾ

ಹೊಸ ದರಪಟ್ಟಿಯನ್ನು ಹ್ಯುಂಡೈ ಕಂಪನಿಯು ಜನವರಿ 1ರಂದು ಅಧಿಕೃತವಾಗಿ ಪ್ರಕಟಿಸುವ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಟುತ್ತಿದ್ದು, ಡೀಲರ್ಸ್‌ಗಳಿಗೆ ರವಾನಿಸಲಾದ ಹೊಸದರಪಟ್ಟಿಯು ಬೆಲೆ ಏರಿಕೆಯ ಮಾಹಿತಿಯನ್ನು ದೃಡಪಡಿಸಿದೆ.

ಹೊಸ ವರ್ಷಕ್ಕೆ ಹೊಸ ದರಪಟ್ಟಿ ಬಿಡುಗಡೆ ಮಾಡಿದ ಹ್ಯುಂಡೈ ಇಂಡಿಯಾ

ಹೊಸದರಪಟ್ಟಿಯಲ್ಲಿ ಹ್ಯುಂಡೈ ಜನಪ್ರಿಯ ಕಾರು ಮಾದರಿಯಾದ ಕ್ರೆಟಾ ಎಸ್‌ಯುವಿಯು ರೂ. 27,335 ಹೆಚ್ಚುವರಿ ದರ ಪಡೆದುಕೊಂಡಲ್ಲಿ ವೆನ್ಯೂ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ರೂ. 25,672, ವೆರ್ನಾ ಸೆಡಾನ್ ಕಾರು ಮಾದರಿಯು ರೂ. 32,880, ಸ್ಯಾಂಟ್ರೊ ಹ್ಯಾಚ್‌ಬ್ಯಾಕ್ ಕಾರು ಮಾದರಿಯು ರೂ. 9,112 ಹೆಚ್ಚುವರಿ ಬೆಲೆ ಪಡೆದುಕೊಂಡಿದೆ.

ಹೊಸ ವರ್ಷಕ್ಕೆ ಹೊಸ ದರಪಟ್ಟಿ ಬಿಡುಗಡೆ ಮಾಡಿದ ಹ್ಯುಂಡೈ ಇಂಡಿಯಾ

ಇನ್ನುಳಿದಂತೆ ಗ್ರಾಂಡ್ ಐ10 ನಿಯೋಸ್ ಕಾರು ಮಾದರಿಯಲ್ಲಿ ಪೆಟ್ರೋಲ್ ಆವೃತ್ತಿಯು ರೂ. 8,652 ಮತ್ತು ಸಿಎನ್‌ಜಿ ಆವೃತ್ತಿಯು ರೂ. 14,556 ಹೆಚ್ಚುವರಿ ಪಡೆದುಕೊಂಡಿದ್ದು, ಔರಾ ಕಂಪ್ಯಾಕ್ಟ್ ಸೆಡಾನ್ ಮಾದರಿಯಲ್ಲಿ ಪೆಟ್ರೋಲ್ ಆವೃತ್ತಿಯು ರೂ. 11,745 ಮತ್ತು ಸಿಎನ್‌ಜಿ ಆವೃತ್ತಿಯು ರೂ. 17,988 ಬೆಲೆ ಹೊಂದಿದೆ.

ಕಾರು ಮಾದರಿ ಹೆಚ್ಚಳವಾದ ಬೆಲೆ
ಕ್ರೆಟಾ ರೂ. 27,335
ವೆನ್ಯೂ ರೂ. 25,672
ವೆರ್ನಾ ರೂ. 32,880
ಸ್ಯಾಂಟ್ರೊ ರೂ. 9,112
ಗ್ರಾಂಡ್ ಐ10 ನಿಯೋಸ್ ರೂ. 8,652 ಸಿಎನ್‌ಜಿ - ರೂ. 14,556
ಔರಾ ರೂ. 11,745 ಸಿಎನ್‌ಜಿ - ರೂ. 17,988
ಐ20 ರೂ. 7,521
ಹೊಸ ವರ್ಷಕ್ಕೆ ಹೊಸ ದರಪಟ್ಟಿ ಬಿಡುಗಡೆ ಮಾಡಿದ ಹ್ಯುಂಡೈ ಇಂಡಿಯಾ

ಇತ್ತೀಚೆಗೆ ಬಿಡುಗಡೆಗೊಂಡಿದ್ದ ನ್ಯೂ ಜನರೇಷನ್ ಐ20 ಕಾರಿನ ಬೆಲೆಯಲ್ಲೂ ಹೆಚ್ಚಳ ಮಾಡಲಾಗಿದ್ದು, ಹೊಸ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾದರಿಯು ರೂ. 7,521 ಹೆಚ್ಚುವರಿ ಬೆಲೆ ಪಡೆದುಕೊಂಡಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಹೊಸ ವರ್ಷಕ್ಕೆ ಹೊಸ ದರಪಟ್ಟಿ ಬಿಡುಗಡೆ ಮಾಡಿದ ಹ್ಯುಂಡೈ ಇಂಡಿಯಾ

ಹ್ಯುಂಡೈ ಮೋಟಾರ್ಸ್ ಮಾತ್ರವಲ್ಲದೆ ಬಹುತೇಕ ಆಟೋ ಉತ್ಪಾದನಾ ಕಂಪನಿಗಳು ಹೊಸ ವಾಹನಗಳ ಬೆಲೆಯನ್ನು ಹೆಚ್ಚಳ ಮಾಡುತ್ತಿದ್ದು, ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಕಾರು ಖರೀದಿಯ ಯೋಜನೆಯಲ್ಲಿರುವ ಗ್ರಾಹಕರಿಗೆ ಬೆಲೆ ಬಿಸಿತಟ್ಟಲಿದೆ.

ಹೊಸ ವರ್ಷಕ್ಕೆ ಹೊಸ ದರಪಟ್ಟಿ ಬಿಡುಗಡೆ ಮಾಡಿದ ಹ್ಯುಂಡೈ ಇಂಡಿಯಾ

ಇನ್ನು ಕರೋನಾ ವೈರಸ್ ಪರಿಣಾಮ ಆರಂಭ ದಿನಗಳಲ್ಲಿ ಕುಸಿತ ಕಂಡಿದ್ದ ಹೊಸ ವಾಹನಗಳ ಮಾರಾಟವು ತದನಂತರದ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಹ್ಯುಂಡೈ ಕೂಡಾ ಹೊಸ ಕಾರು ಮಾರಾಟದಲ್ಲಿ ಭರ್ಜರಿಯಾಗಿ ಮುನ್ನಡೆ ಕಾಯ್ದುಕೊಳ್ಳುತ್ತಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಹೊಸ ವರ್ಷಕ್ಕೆ ಹೊಸ ದರಪಟ್ಟಿ ಬಿಡುಗಡೆ ಮಾಡಿದ ಹ್ಯುಂಡೈ ಇಂಡಿಯಾ

ಲಾಕ್‌ಡೌನ್ ನಂತರ ಏಪ್ರಿಲ್ ಮತ್ತು ಮೇ ತಿಂಗಳಿನ ಹೊಸ ವಾಹನ ಮಾರಾಟದಲ್ಲಿ ಸಾಕಷ್ಟು ಇಳಿಕೆಯಾಗಿದ್ದರಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಆಟೋ ಕಂಪನಿಗಳು ನಂತರದ ದಿನಗಳಲ್ಲಿ ಹಲವಾರು ಆಫರ್‌ಗಳನ್ನು ನೀಡುವ ಮೂಲಕ ವಾಹನ ಮಾರಾಟದಲ್ಲಿ ಹಂತ ಹಂತವಾಗಿ ಚೇತರಿಕೆ ಕಂಡಿದ್ದವು. ಇದೀಗ ವಾಹನ ಮಾರಾಟವು ಸುಧಾರಿಸುತ್ತಿದ್ದಂತೆ ಬೆಲೆ ಹೆಚ್ಚಳ ಮಾಡಿ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್ ನೀಡಿವೆ.

Most Read Articles

Kannada
English summary
Hyundai Car Price Hike From January 2021. Read in Kannada.
Story first published: Thursday, December 31, 2020, 18:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X