ಜನಪ್ರಿಯ ಹ್ಯುಂಡೈ ಕಾರುಗಳ ಮೇಲೆ ರೂ.1 ಲಕ್ಷದವರೆಗೆ ಭರ್ಜರಿ ಇಯರ್ ಎಂಡ್ ಆಫರ್

ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಜನಪ್ರಿಯ ವಾಹನ ತಯಾರಕ ಕಂಪನಿಗಳು ತಮ್ಮ ಸರಣಿಯ ವಾಹನಗಳ ಮೇಲೆ ಇಯರ್ ಎಂಡ್ ಆಫರ್ ಅನ್ನು ಘೋಷಿಸುತ್ತಿದೆ. ಇದೀಗ ದೇಶದ ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಹ್ಯುಂಡೈ ತನ್ನ ಆಯ್ದ ಮಾದರಿಗಳ ಮೇಲೆ ಭರ್ಜರಿ ಇಯರ್ ಎಂಡ್ ಅಫ್ ಘೋಷಿಸಿದೆ.

ಜನಪ್ರಿಯ ಹ್ಯುಂಡೈ ಕಾರುಗಳ ಮೇಲೆ ರೂ.1 ಲಕ್ಷದವರೆಗೆ ಭರ್ಜರಿ ಇಯರ್ ಎಂಡ್ ಆಫರ್

ಹ್ಯುಂಡೈನ ಮಾದರಿ ಮತ್ತು ರೂಪಾಂತರಗಳನ್ನು ಅವಲಂಬಿಸಿ ರೂ.1 ಲಕ್ಷಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ. ಇದರಲ್ಲಿ ನಗದು ರಿಯಾಯಿತಿಗಳು, ಎಕ್ಸ್‌ಚೆಂಜ್ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯಿತಿಯನ್ನು ಒಳಗೊಂಡಿದೆ. ಹ್ಯುಂಡೈನ ಸ್ಯಾಂಟ್ರೋ, ಗ್ರ್ಯಾಂಡ್ 10, ಗ್ರ್ಯಾಂಡ್ ಐ10 ನಿಯೊಸ್, ಎಲೈಟ್ ಐ 20, ಒರಾ ಮತ್ತು ಎಲಾಂಟ್ರ ಕಾರುಗಳಿಗೆ ಈ ರಿಯಾಯಿತಿಗಳು ಲಭ್ಯವಿದೆ. ಖರೀದಿದಾರರು ದೇಶಾದ್ಯಂತ ತಮ್ಮ ಹತ್ತಿರದ ಅಧಿಕೃತ ಡೀಲರುಗಳ ಮೂಲಕ ಈ ರಿಯಾಯಿತಿಗಳನ್ನು ಪಡೆಯಬಹುದು.

ಜನಪ್ರಿಯ ಹ್ಯುಂಡೈ ಕಾರುಗಳ ಮೇಲೆ ರೂ.1 ಲಕ್ಷದವರೆಗೆ ಭರ್ಜರಿ ಇಯರ್ ಎಂಡ್ ಆಫರ್

ಇದರೊಂದಿಗೆ ಬ್ರ್ಯಾಂಡ್‌ನ ಕ್ಲಿಕ್-ಟು-ಬೈ ಪ್ಲಾಟ್‌ಫಾರ್ಮ್ ಬಳಸಿ ಆನ್‌ಲೈನ್‌ನಲ್ಲಿ ತಮ್ಮ ನೆಚ್ಚಿನ ಮಾದರಿಯನ್ನು ಬುಕ್ ಮಾಡಬಹುದು ಮತ್ತು ಹಬ್ಬದ ಕೊಡುಗೆಗಳನ್ನು ಪಡೆಯಬಹುದು. ಈ ತಿಂಗಳ ಅಂತ್ಯದವರೆಗೂ ಈ ಆಫರ್ ಲಭ್ಯವಿರುತ್ತದೆ.

MOST READ: ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳಿವು

ಜನಪ್ರಿಯ ಹ್ಯುಂಡೈ ಕಾರುಗಳ ಮೇಲೆ ರೂ.1 ಲಕ್ಷದವರೆಗೆ ಭರ್ಜರಿ ಇಯರ್ ಎಂಡ್ ಆಫರ್

ಹ್ಯುಂಡೈ ಸ್ಯಾಂಟ್ರೊ

ಹ್ಯುಂಡೈ ಸ್ಯಾಂಟ್ರೊ ಬ್ರ್ಯಾಂಡ್‌ನ ಎಂಟ್ರಿ ಲೆವೆಲ್ ಮಾದರಿಯಾಗಿದೆ. ಹ್ಯುಂಡೈ ಸ್ಯಾಂಟ್ರೊ ಕಾರಿಗೆ ಒಟ್ಟು ರೂ.50,000 ಗಳವರೆಗೆ ರಿಯಾಯಿತಿಯನ್ನು ನೀಡಲಾಗುತ್ತದೆ. ಇದರಲ್ಲಿ ರೂ.30 ಸಾವಿರ ಗಳವರೆಗೆ ನಗದು ರಿಯಾಯಿತಿ, ರೂ.15 ಸಾವಿರಗಳ ಎಕ್ಸ್‌ಚೆಂಜ್ ಬೋನಸ್ ಮತ್ತು ರೂ.5,000 ಗಳವರೆಗೆ ಕಾರ್ಪೊರೇಟ್ ರಿಯಾಯಿತಿಯನ್ನು ಘೋಷಿಸಲಾಗಿದೆ.

ಜನಪ್ರಿಯ ಹ್ಯುಂಡೈ ಕಾರುಗಳ ಮೇಲೆ ರೂ.1 ಲಕ್ಷದವರೆಗೆ ಭರ್ಜರಿ ಇಯರ್ ಎಂಡ್ ಆಫರ್

ಹ್ಯುಂಡೈ ಗ್ರ್ಯಾಂಡ್ ಐ10

ಜನಪ್ರಿಯ ಹ್ಯುಂಡೈ ಗ್ರ್ಯಾಂಡ್ ಐ10 ಕಾರಿನ ಮೇಲೆ ಒಟ್ಟು ರೂ.60,000 ಗಳವರೆಗೆ ರಿಯಾಯಿತಿಯನ್ನು ನೀಡಲಾಗಿದೆ. ಇದರಲ್ಲಿ ರೂ.40,000 ಗಳವರೆಗೆ ನಗದು ರಿಯಾಯಿತಿ ಜೊತೆಗೆ ರೂ.15,000 ಸಾವಿರಗಳ ಎಕ್ಸ್‌ಚೆಂಜ್ ಬೋನಸ್ ಮತ್ತು ರೂ.5,000 ಗಳವರೆಗೆ ಕಾರ್ಪೊರೇಟ್ ರಿಯಾಯಿತಿಯನ್ನು ಘೋಷಿಸಲಾಗಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಜನಪ್ರಿಯ ಹ್ಯುಂಡೈ ಕಾರುಗಳ ಮೇಲೆ ರೂ.1 ಲಕ್ಷದವರೆಗೆ ಭರ್ಜರಿ ಇಯರ್ ಎಂಡ್ ಆಫರ್

ಹ್ಯುಂಡೈ ಗ್ರ್ಯಾಂಡ್ ಐ10 ನಿಯೊಸ್

ಪ್ರಸ್ತುತ ಮಾರಾಟವಾಗುತ್ತಿರುವ ಗ್ರ್ಯಾಂಡ್ ಐ10 ನಿಯೊಸ್ ಹ್ಯಾಚ್‌ಬ್ಯಾಕ್‌ನ ಮೂರನೇ ತಲೆಮಾರಿನ ಮಾದರಿಯಾಗಿದೆ. ಈ ಹೊಸ ಗ್ರ್ಯಾಂಡ್ ಐ10 ನಿಯೊಸ್ ಒಟ್ಟು ರೂ.60 ಸಾವಿರಗಳವರೆಗೆ ರಿಯಾಯಿತಿಯನ್ನು ಘೋಷಿಸಲಾಗಿದೆ. ಇದರಲ್ಲಿ ರೂ.40,000 ನಗದು ರಿಯಾಯಿತಿ ಮತ್ತು ರೂ.15,000 ಎಕ್ಸ್‌ಚೆಂಜ್ ಬೋನಸ್ ಮತ್ತು ರೂ.5,000 ಕಾರ್ಪೊರೇಟ್ ರಿಯಾಯಿತಿಯನ್ನು ನೀಡಲಾಗಿದೆ.

ಜನಪ್ರಿಯ ಹ್ಯುಂಡೈ ಕಾರುಗಳ ಮೇಲೆ ರೂ.1 ಲಕ್ಷದವರೆಗೆ ಭರ್ಜರಿ ಇಯರ್ ಎಂಡ್ ಆಫರ್

ಹ್ಯುಂಡೈ ಒರಾ

ಬ್ರ್ಯಾಂಡ್‌ನ ಕಾಂಪ್ಯಾಕ್ಟ್-ಸೆಡಾನ್ ಆಗಿದೆ.ಹ್ಯುಂಡೈ ಕಂಪನಿಯು ಎಕ್ಸೆಟ್ ಸೆಡಾನ್ ಬದಲಾಯಿಸಿ ಒರಾ ಮಾದರಿಯನ್ನು ಬಿಡುಗಡೆಗೊಳಿಸಿತು. ಹ್ಯುಂಡೈ ಒರಾ ಕಾರಿನ ಮೇಲೆ ಒಟ್ಟು ರೂ.70,000 ಗಳವರೆಗೆ ರಿಯಾಯಿತಿಯನ್ನು ನೀಡಲಾಗಿದೆ. ಇದರಲ್ಲಿ ರೂ.50,000 ನಗದು ರಿಯಾಯಿತಿ ಮತ್ತು ರೂ.15,000 ಎಕ್ಸ್‌ಚೆಂಜ್ ಬೋನಸ್ ಮತ್ತು ರೂ.5,000 ಕಾರ್ಪೊರೇಟ್ ರಿಯಾಯಿತಿಯನ್ನು ನೀಡಲಾಗಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಜನಪ್ರಿಯ ಹ್ಯುಂಡೈ ಕಾರುಗಳ ಮೇಲೆ ರೂ.1 ಲಕ್ಷದವರೆಗೆ ಭರ್ಜರಿ ಇಯರ್ ಎಂಡ್ ಆಫರ್

ಹ್ಯುಂಡೈ ಎಲಾಂಟ್ರ

ಹ್ಯುಂಡೈ ಎಲಾಂಟ್ರ ದೇಶದಲ್ಲಿ ಮಾರಾಟವಾಗುವ ಬ್ರ್ಯಾಂಡ್‌ನ ಪ್ರಮುಖ ಸೆಡಾನ್ ಮಾದರಿಯಾಗಿದೆ. ಹ್ಯುಂಡೈ ಎಲಾಂಟ್ರ ಕಾರಿನ ಮೇಲೆ ರೂ.1 ಲಕ್ಷ ಗಳವರೆಗೆ ಭರ್ಜರಿ ರಿಯಾಯಿತಿಯನ್ನು ನೀಡಿದೆ. ಇದರಲ್ಲಿ ರೂ.70,000 ಗಳವರೆಗೆ ನಗದು ರಿಯಾಯಿತಿ ಮತ್ತು ರೂ.30,000 ಗಳವರೆಗೆ ಎಕ್ಸ್‌ಚೆಂಜ್ ಬೋನಸ್ ಅನ್ನು ನೀಡಿದೆ.

ಜನಪ್ರಿಯ ಹ್ಯುಂಡೈ ಕಾರುಗಳ ಮೇಲೆ ರೂ.1 ಲಕ್ಷದವರೆಗೆ ಭರ್ಜರಿ ಇಯರ್ ಎಂಡ್ ಆಫರ್

ವರ್ಷಾಂತ್ಯ ಜನಪ್ರಿಯ ಮಾದರಿಗಳಿಗೆ ಹ್ಯುಂಡೈ ಭರ್ಜರಿ ರಿಯಾಯಿತಿಯನ್ನು ಘೋಷಿಸಲಾಗಿದೆ. ಹ್ಯುಂಡೈ ಕಾರುಗಳನ್ನು ಖರೀದಿಸಲು ಬಯಸುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಎಯರ್ ಎಂಡ್ ಆಫರ್ ರಿಯಾಯಿತಿಯಿಂದಾಗಿ ಹ್ಯುಂಡೈ ಕಾರುಗಳ ಮಾರಾಟಕ್ಕೆ ಸಹಕಾರಿಯಾಗಬಹುದು.

Most Read Articles

Kannada
English summary
Hyundai Cars Year-End Offers For December 2020. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X