7ನೇ ಎಫ್-1 ವಿಶ್ವ ಚಾಂಪಿಯನ್ ರೇಸ್ ಗೆದ್ದು ಮೈಕಲ್ ಶೂಮಾಕರ್ ದಾಖಲೆ ಮುರಿದ ಹ್ಯಾಮಿಲ್ಟನ್

ಟರ್ಕಿಷ್ ಗ್ರ್ಯಾಂಡ್ ಪ್ರಿಕ್ಸ್ 2020ರ ಎಫ್1 ರೇಸ್ ಅತ್ಯಂತ ರೋಮಾಂಚಕಾರಿಯಾಗಿತ್ತು. ಈ ರೇಸ್ ನಲ್ಲಿ ರೋಚಕವಾಗಿ ಖ್ಯಾತ ಮತ್ತು ಅನುಭವಿ ಫಾರ್ಮುಲಾ ಒನ್ ರೇಸರ್ ಲೂಯಿಸ್ ಹ್ಯಾಮಿಲ್ಟನ್ ಅವರು ಮತ್ತೊಮ್ಮೆ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

7ನೇ ಎಫ್-1 ವಿಶ್ವ ಚಾಂಪಿಯನ್ ರೇಸ್ ಗೆದ್ದು ಮೈಕಲ್ ಶೂಮಾಕರ್ ದಾಖಲೆ ಮುರಿದ ಲೂಯಿಸ್ ಹ್ಯಾಮಿಲ್ಟನ್

ಖ್ಯಾತ ಫಾರ್ಮುಲಾ ಒನ್ ರೇಸರ್ ಲೂಯಿಸ್ ಹ್ಯಾಮಿಲ್ಟನ್ 7ನೇ ಫಾರ್ಮುಲಾ ಒನ್ ವಿಶ್ವ ಚಾಂಪಿಯನ್ ರೇಸ್ ಗೆಲ್ಲುವ ಮೂಲಕ ರೇಸಿಂಗ್ ದಂತಕಥೆ ಮೈಕಲ್ ಶೂಮಾಕರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. 2008, 2014, 2015, 2017, 2018 ಮತ್ತು 2019ರಲ್ಲಿ ಹ್ಯಾಮಿಲ್ಟನ್ ಅವರು ಫಾರ್ಮುಲಾ ಒನ್ ರೇಸ್ ನಲ್ಲಿ ಚಾಂಪಿಯನ್ ಆಗಿದ್ದಾರೆ. ಫಾರ್ಮುಲಾ ಒನ್ ರೇಸ್ ನಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸಿ ಹ್ಯಾಮಿಲ್ಟನ್ ಮುನ್ನುಗುತ್ತಿದ್ದಾರೆ.

7ನೇ ಎಫ್-1 ವಿಶ್ವ ಚಾಂಪಿಯನ್ ರೇಸ್ ಗೆದ್ದು ಮೈಕಲ್ ಶೂಮಾಕರ್ ದಾಖಲೆ ಮುರಿದ ಲೂಯಿಸ್ ಹ್ಯಾಮಿಲ್ಟನ್

ಈ ಹಿಂದೆ ಪೋರ್ಚುಗೀಸ್ ಗ್ರ್ಯಾಂಡ್ ಪ್ರಿಕ್ಸ್ ಚಾಂಪಿಯನ್ ಷೂಮೇಕರ್ ಅವರ 91 ರೇಸ್ ಗೆದ್ದಿದ ದಾಖಲೆಯನ್ನು ಇವರು ಬ್ರೇಕ್ ಮಾಡಿದ್ದಾರೆ. ಈ ಮೂಲಕ ಫಾರ್ಮುಲಾ ಒನ್ ರೇಸ್ ನಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

7ನೇ ಎಫ್-1 ವಿಶ್ವ ಚಾಂಪಿಯನ್ ರೇಸ್ ಗೆದ್ದು ಮೈಕಲ್ ಶೂಮಾಕರ್ ದಾಖಲೆ ಮುರಿದ ಲೂಯಿಸ್ ಹ್ಯಾಮಿಲ್ಟನ್

ಟರ್ಕಿಯ ಇಸ್ತಾನ್ ಬುಲ್ ಪಾರ್ಕ್ ನಲ್ಲಿ ನಡೆದ ಟರ್ಕಿಷ್ ಗ್ರ್ಯಾಂಡ್ ಪ್ರಿಕ್ಸ್ ನಲ್ಲಿ ಬ್ರಿಟನ್‌ನ 35 ವರ್ಷದ ಅನುಭವಿ ಹಾಗೂ ಮರ್ಸಿಡೀಸ್ ತಂಡದ ಚಾಲಕ ಹ್ಯಾಮಿಲ್ಟನ್ 1:42:19.313 ಅವಧಿಯಲ್ಲಿ ಗುರಿ ಮುಟ್ಟುವ ಮೂಲಕ 25 ಅಂಕಗಳಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರು.

7ನೇ ಎಫ್-1 ವಿಶ್ವ ಚಾಂಪಿಯನ್ ರೇಸ್ ಗೆದ್ದು ಮೈಕಲ್ ಶೂಮಾಕರ್ ದಾಖಲೆ ಮುರಿದ ಲೂಯಿಸ್ ಹ್ಯಾಮಿಲ್ಟನ್

ಇವರಿಗೆ ತೀವ್ರ ಪೈಪೋಟಿ ನೀಡಿದ ಸೆರ್ಜಿಯೋ ಪೆರೇಜ್ 18 ಅಂಕಗಳಿಸಿ 2ನೇಸ್ಥಾನ ಪಡೆದರೆ, ಮಾಜಿ ಚಾಂಪಿಯನ್ ಸೆಬಾಸ್ಟಿಯನ್ ವೆಟ್ಟಲ್ 15 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಯಿತು.

MOST READ: ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಪಡೆದ ಜನಪ್ರಿಯ ಮಾರುತಿ ಎಸ್-ಪ್ರೆಸ್ಸೊ ಕಾರು

7ನೇ ಎಫ್-1 ವಿಶ್ವ ಚಾಂಪಿಯನ್ ರೇಸ್ ಗೆದ್ದು ಮೈಕಲ್ ಶೂಮಾಕರ್ ದಾಖಲೆ ಮುರಿದ ಲೂಯಿಸ್ ಹ್ಯಾಮಿಲ್ಟನ್

ಇನ್ನು ಮೆಕ್ಲಾರೆನ್‌ನ ಕಾರ್ಲೋಸ್ ಸೈಂಜ್ ಜೂನಿಯರ್ ಪಿ5 ಗಾಗಿ ರೆಡ್ ಬುಲ್ಸ್ ಎರಡನ್ನೂ ಹಿಂದಿಕ್ಕುವಲ್ಲಿ ಯಶಸ್ವಿಯಾದರು, ಅವರ ತಂಡದ ಆಟಗಾರ ಲ್ಯಾಂಡೊ ನಾರ್ರಿಸ್ ಸಹ ಪಿ8 ಅಂಕಗಳನ್ನು ಗಳಿಸಿದ್ದಾರೆ.

7ನೇ ಎಫ್-1 ವಿಶ್ವ ಚಾಂಪಿಯನ್ ರೇಸ್ ಗೆದ್ದು ಮೈಕಲ್ ಶೂಮಾಕರ್ ದಾಖಲೆ ಮುರಿದ ಲೂಯಿಸ್ ಹ್ಯಾಮಿಲ್ಟನ್

2008ರಲ್ಲಿ ಮೊದಲ ಫಾರ್ಮುಲಾ ಒನ್ ವೃತ್ತಿಪರ ರೇಸ್ ಪ್ರಶಸ್ತಿ ಗಳಿಸಿದ್ದ ಲೂಯಿಸ್ ಹ್ಯಾಮಿಲ್ಟನ್, ಬಳಿಕ ತಮ್ಮ ವೃತ್ತಿ ಜೀವನದಲ್ಲಿ ಈವರೆಗೂ 94 ರೇಸ್ ಗಳನ್ನು ಜಯಿಸಿದ್ದಾರೆ. ಅಂತೆಯೇ 97 ಪೋಲ್ ಪೊಸಿಷನ್ ಸಾಧಿಸಿದ್ದಾರೆ.

7ನೇ ಎಫ್-1 ವಿಶ್ವ ಚಾಂಪಿಯನ್ ರೇಸ್ ಗೆದ್ದು ಮೈಕಲ್ ಶೂಮಾಕರ್ ದಾಖಲೆ ಮುರಿದ ಲೂಯಿಸ್ ಹ್ಯಾಮಿಲ್ಟನ್

ಖ್ಯಾತ ಫಾರ್ಮುಲಾ ಒನ್ ರೇಸರ್ ಲೂಯಿಸ್ ಹ್ಯಾಮಿಲ್ಟನ್ 7ನೇ ಫಾರ್ಮುಲಾ ಒನ್ ವಿಶ್ವ ಚಾಂಪಿಯನ್ ಆಗುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ. ಆದರೆ ಈ ಬ್ರಿಟೀಷ್ ಮೂಲದ ರೇಸರ್ ಮುಂದೆ ಮರ್ಸಿಡಿಸ್ ಬೆಂಝ್ ಜೊತೆ ಇರುತಾರೆಯೇ ಎಂಬುದು ಹಲವರ ಪ್ರಶ್ನೆಯಾಗಿದೆ.

Most Read Articles

Kannada
English summary
Lewis Hamilton Forged Ahead With Yet Another Win. Read In Kannada.
Story first published: Monday, November 16, 2020, 17:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X