Just In
Don't Miss!
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Movies
ಡಬ್ಬಿಂಗ್ ಸಿನಿಮಾಗಳ ಬಗ್ಗೆ ಹಿರಿಯ ನಟ ದೊಡ್ಡಣ್ಣ ಅಸಮಾಧಾನ
- News
ಕೊರೊನಾ ನಿಯಂತ್ರಣದಲ್ಲಿ ವಿಫಲ: ಇಟಲಿ ಪ್ರಧಾನಿ ಗಿಸೆಪ್ಪೆ ಕಾಂಟೆ ರಾಜೀನಾಮೆ
- Sports
ಐಎಸ್ಎಲ್: ಜೆಮ್ಷೆಡ್ಪುರ ವಿರುದ್ಧ ಕ್ಲೀನ್ ಶೀಟ್ ಗುರಿಯಲ್ಲಿ ಕೇರಳ ಬ್ಲಾಸ್ಟರ್ಸ್
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
2021ಕ್ಕೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಹ್ಯುಂಡೈ ಎಲಾಂಟ್ರಾ ಕಾರು
ಹ್ಯುಂಡೈ ಕಂಪನಿಯು ತನ್ನ ನ್ಯೂ ಜನರೇಷನ್ ಎಲಾಂಟ್ರಾ ಕಾರನ್ನು ಅಮೇರಿಕಾದಲ್ಲಿ ಈಗಾಗಲೇ ಪರಿಚಯಿಸಲಾಗಿದೆ. ಇನ್ನು ಹ್ಯುಂಡೈ ಕಂಪನಿಯು ಈ ಹೊಸ ಎಲಾಂಟ್ರಾ ಕಾರನ್ನು ಭಾರತದಲ್ಲಿ ಮುಂದಿನ ವರ್ಷ ಬಿಡುಗಡೆಗೊಳಿಸಲಿದೆ.

ಹೊಸ ತಲೆಮಾರಿನ ಹೊಸ ಹ್ಯುಂಡೈ ಎಲಾಂಟ್ರಾ ಕಾರನ್ನು ಹೊಸ ಕೆ3 ಪ್ಲಾಟ್ಫಾರಂನಲ್ಲಿ ತಯಾರಿಸಲಾಗುತ್ತದೆ. ಈ ಹೊಸ ಕಾರು ಹಳೆಯ ಕಾರಿಗಿಂತ 56 ಎಂಎಂ ಹೆಚ್ಚು ಅಗಲ ಹಾಗೂ 26 ಎಂಎಂ ಹೆಚ್ಚು ಎತ್ತರವನ್ನು ಹೊಂದಿದೆ. ಕಡಿಮೆ ತೂಕದ ಬಿಡಿ ಭಾಗಗಳನ್ನು ಅಳವಡಿಸಿರುವುದರಿಂದ ತೂಕವೂ ಸಹ ಕಡಿಮೆಯಾಗಿದೆ. ಎಕ್ಸಿಕ್ಯೂಟಿವ್ ಸೆಡಾನ್ ಕಾರು ಸೆಗ್ ಮೆಂಟಿನಲ್ಲಿ ಹ್ಯುಂಡೈ ಕಂಪನಿಯ ಎಲಾಂಟ್ರಾ ಕಾರು ಪ್ರಪಂಚದಾದ್ಯಂತ ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ.

ಬಾನೆಟ್, ಗ್ರಿಲ್ ಸಿಸ್ಟಂ, ಬಂಪರ್ ಸಿಸ್ಟಂ, ಹಿಂಭಾಗದ ವಿನ್ಯಾಸಗಳಿಂದ ಈ ಕಾರು ಸಂಪೂರ್ಣವಾಗಿ ಹೊಸ ಮಾದರಿಯ ವಿನ್ಯಾಸವನ್ನು ಹೊಂದಿದೆ. ಈ ಕಾರಿನಲ್ಲಿ ಎಲ್ಇಡಿ ಹೆಡ್ಲೈಟ್, ದೊಡ್ಡ ಗಾತ್ರದ ಗ್ರಿಲ್ ಸಿಸ್ಟಂ, 17 ಇಂಚಿನ ಡ್ಯುಯಲ್ ಟೋನ್ ಅಲಾಯ್ ವ್ಹೀಲ್ ಹಾಗೂ ಎಲ್ಇಡಿ ಲೈಟ್ ಬಾರ್ ಗಳನ್ನು ಅಳವಡಿಸಲಾಗಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೊಸ ಹ್ಯುಂಡೈ ಎಲಾಂಟ್ರಾ ಕಾರಿನ ಇಂಟಿರಿಯರ್ ಅನ್ನು ಹೆಚ್ಚಿಸಲಾಗಿದೆ. ಈ ಕಾರು ಡ್ಯಾಶ್ಬೋರ್ಡ್ನಲ್ಲಿ ಎರಡು 10.25 ಇಂಚಿನ ಸ್ಕ್ರೀನ್ ಗಳನ್ನು ಹೊಂದಿದೆ. ಅವುಗಳಲ್ಲಿ ಒಂದು ಟಚ್-ಸ್ಕ್ರೀನ್ ಇನ್ಫೋಟೈನ್ಮೆಂಟ್, ಆದರೆ ಮತ್ತೊಂದು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಆಗಿದೆ.

ಈ ಕಾರಿನ ಪ್ರಮುಖವಾದ ಫೀಚರ್ ಗಳೆಂದರೆ 4-ಸ್ಪೋಕ್ ಸ್ಟೀಯರಿಂಗ್ ವ್ಹೀಲ್, ನಾಲ್ಕು ಎಸಿ ವೆಂಟ್ಸ್, ಡ್ರೈವರ್ ಸೀಟ್ ಹಾಗೂ ಫ್ರಂಟ್ ಸೀಟ್ ಪ್ಯಾಸೆಂಜರ್. ಈ ಕಾರಿನಲ್ಲಿ ಅಳವಡಿಸಿರುವ ಬಿಡಿಭಾಗಗಳು ಅತ್ಯುತ್ತಮ ಗುಣಮಟ್ಟವನ್ನು ಹೊಂದಿವೆ. ಈ ಹೊಸ ಹ್ಯುಂಡೈ ಕಾರಿನಲ್ಲಿ ಹಲವಾರು ಫೀಚರ್ ಗಳಿದ್ದು, ಇವುಗಳನ್ನು ಬ್ಲೂಲಿಂಕ್ ಪ್ರೊಸೆಸರ್ ಮೂಲಕ ಆಕ್ಸೆಸ್ ಮಾಡಬಹುದು.
MOST READ: ಕ್ರ್ಯಾಶ್ ಟೆಸ್ಟ್ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಪಡೆದ ಜನಪ್ರಿಯ ಮಾರುತಿ ಎಸ್-ಪ್ರೆಸ್ಸೊ ಕಾರು

ಇನ್ನು ಈ ಸಿಸ್ಟಂ, ವಾಯ್ಸ್ ಕಮಾಂಡ್ ಫೀಚರ್ ಅನ್ನು ಹೊಂದಿದೆ. ಇದರಲ್ಲಿರುವ ಇನ್ಫೋಟೇನ್ ಮೆಂಟ್ ಸಿಸ್ಟಂ ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋಗಳನ್ನು ಬೆಂಬಲಿಸುತ್ತದೆ. ಹೊಸ ಕಾರಿನಲ್ಲಿ ವೈರ್ಲೆಸ್ ಫೋನ್ ಚಾರ್ಜರ್, ಆಂಬಿಯೆಂಟ್ ಲೈಟ್ ಸಿಸ್ಟಂ, ಡಿಜಿಟಲ್ ಕೀ ಸ್ಮಾರ್ಟ್ಫೋನ್ ಪ್ರೊಸೆಸರ್, 8 ಸ್ಪೀಕರ್ಗಳ ಸೌಂಡ್ ಸಿಸ್ಟಂ, ಎಲೆಕ್ಟ್ರಿಕ್ ಸನ್ರೂಫ್ ಗಳಿವೆ.

ಹೊಸ ಹ್ಯುಂಡೈ ಎಲಾಂಟ್ರಾದಲ್ಲಿ ಮೊದಲ ಬಾರಿಗೆ ಹೈಬ್ರಿಡ್ ಟೆಕ್ನಾಲಜಿಯನ್ನು ನೀಡಲಾಗುತ್ತಿದೆ. 1.6-ಲೀಟರ್ ಜಿಟಿಐ ಪೆಟ್ರೋಲ್ ಎಂಜಿನ್ ಅನ್ನು 32 ಕಿ.ವ್ಯಾಟ್ ಎಲೆಕ್ಟ್ರಿಕ್ ಮೋಟರ್ ನೊಂದಿಗೆ ಜೋಡಿಸಲಾಗಿದೆ. ಎಲೆಕ್ಟ್ರಿಕ್ ಮೋಟರ್ 1.32 ಕಿ.ವ್ಯಾನ ಲಿಥಿಯಂ-ಐಯಾನ್ ಬ್ಯಾಟರಿಯಲ್ಲಿ ಚಲಿಸುತ್ತದೆ.
MOST READ: ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್ಲಿಫ್ಟ್

ಈ ಹೈಬ್ರಿಡ್ ಮಾದರಿಯು 139 ಬಿಹೆಚ್ಪಿ ಪವರ್ ಹಾಗೂ 264 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 6-ಸ್ಪೀಡಿನ ಡ್ಯುಯಲ್-ಕ್ಲಚ್ ಗೇರ್ ಬಾಕ್ಸ್ ಅನ್ನು ನೀಡಲಾಗಿದೆ. ಈ ಕಾರು ಎಲೆಕ್ಟ್ರಿಕ್ ಮೋಟರ್ ನಲ್ಲಿ ಕೆಲ ದೂರದವರೆಗೆ ಮಾತ್ರ ಚಲಿಸುತ್ತದೆ. ಭಾರತದಲ್ಲಿ ಬಿಡುಗಡೆಯಾಗುವಾಗ, ಕಿಯಾ ಸೆಲ್ಟೋಸ್ ಕಾರಿನಲ್ಲಿರುವ 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಬಹುದು.

ಈ ಹೊಸ ಹ್ಯುಂಡೈ ಹ್ಯುಂಡೈ ಎಲಾಂಟ್ರಾ ಕಾರು ಮುಂದಿನ ವರ್ಷದ ಭಾರತದಲ್ಲಿ ಬಿಡುಗಡೆಯಾಗಲಿದೆ. ಹೊಸ ಹ್ಯುಂಡೈ ಎಲಾಂಟ್ರಾ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡಗಡೆಯಾದ ಬಳಿಕ ಹೊಂಡಾ ಸಿವಿಕ್, ಟೊಯೊಟಾ ಕೊರೊಲಾ ಹಾಗೂ ಅಟ್ಲೆಸ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.