ಯು ಟರ್ನ್ ವೇಳೆ ಯಡವಟ್ಟು- ಕಸದ ಗುಂಡಿಯಲ್ಲಿ ಸಿಲುಕಿಕೊಂಡ ಹೊಸ ಥಾರ್ ಕಾರು!

ಮಹೀಂದ್ರಾ ಕಂಪನಿಯು ತನ್ನ ಬಹುನೀರಿಕ್ಷಿತ ಥಾರ್ ಕಾರು ಮಾದರಿಯನ್ನು ಬಿಡುಗಡೆಗೊಳಿಸಿ ದೇಶಾದ್ಯಂತ ವಿತರಣೆಗೆ ಚಾಲನೆ ನೀಡಿದ್ದು, ಹೊಸ ಕಾರಿಗೆ ಬಿಡುಗಡೆಯಾದ ಆರಂಭದಲ್ಲಿ ಭಾರೀ ಪ್ರಮಾಣದ ಬುಕ್ಕಿಂಗ್ ದಾಖಲಾಗಿದೆ.

ಯು ಟರ್ನ್ ವೇಳೆ ಯಡವಟ್ಟು- ಕಸದ ಗುಂಡಿಯಲ್ಲಿ ಸಿಲುಕಿಕೊಂಡ ಹೊಸ ಥಾರ್ ಕಾರು!

ಹೊಸ ಥಾರ್ ವಿತರಣೆ ಪ್ರಕ್ರಿಯೆಯು ದೇಶದ ಪ್ರಮುಖ ನಗರಗಳಲ್ಲಿ ಜೋರಾಗಿದ್ದು, ಹೊಸ ಕಾರು ಖರೀದಿಗೆ ದಾಖಲೆ ಪ್ರಮಾಣದ ಬುಕ್ಕಿಂಗ್ ಹರಿದುಬಂದಿದೆ. ಇದುವರೆಗೆ ಸುಮಾರು ಹೊಸ ಕಾರು ಖರೀದಿಗೆ ಸುಮಾರು 18 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಸಲ್ಲಿಕೆಯಾಗಿದ್ದು, ಈ ಹಿಂದೆ ಆಫ್ ರೋಡ್ ಪ್ರಿಯರನ್ನು ಮಾತ್ರ ಸೆಳೆಯುತ್ತಿದ್ದ ಹೊಸ ಕಾರು ಈ ಬಾರಿ ಶೇ. 60ಕ್ಕಿಂತಲೂ ಹೆಚ್ಚು ಗ್ರಾಹಕರು ಹೊಸದಾಗಿ ಆಫ್ ರೋಡ್ ಆಸಕ್ತಿಯೊಂದಿಗೆ ಥಾರ್ ಮಾಲೀಕತ್ವ ಹೊಂದುತ್ತಿದ್ದಾರೆ.

ಯು ಟರ್ನ್ ವೇಳೆ ಯಡವಟ್ಟು- ಕಸದ ಗುಂಡಿಯಲ್ಲಿ ಸಿಲುಕಿಕೊಂಡ ಹೊಸ ಥಾರ್ ಕಾರು!

ಆಫ್ ರೋಡ್ ಜೊತೆಗೆ ಲೈಫ್ ಸ್ಟೈಲ್ ಮಾದರಿಯಾಗಿರುವ ಥಾರ್ ಕಾರು ಹಲವಾರು ಹೊಸ ವೈಶಿಷ್ಟ್ಯತೆಗಳೊಂದಿಗೆ ಮಾರಾಟದಲ್ಲಿ ಹೊಸ ದಾಖಲೆಯ ನೀರಿಕ್ಷೆಯಲ್ಲಿದ್ದು, ಇತ್ತೀಚೆಗೆ ಹೊಸ ಥಾರ್ ಕಾರಿನ ಟೆಸ್ಟ್ ಡ್ರೈವ್ ಮಾದರಿಯೊಂದು ಕಸದ ಗುಂಡಿ ಸಿಲುಕಿದ್ದ ವಿಡಿಯೋ ಒಂದು ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಯು ಟರ್ನ್ ವೇಳೆ ಯಡವಟ್ಟು- ಕಸದ ಗುಂಡಿಯಲ್ಲಿ ಸಿಲುಕಿಕೊಂಡ ಹೊಸ ಥಾರ್ ಕಾರು!

ಗ್ರಾಹಕರೊಬ್ಬರು ಥಾರ್ ಕಾರಿನ ಟೆಸ್ಟ್ ಡ್ರೈವ್ ಸಂದರ್ಭದಲ್ಲಿ ಯುಟರ್ನ್ ತೆಗೆದುಕೊಳ್ಳುವಾಗ ಮುಂಭಾಗದ ಚಕ್ರವು ಕಸದ ಗುಂಡಿಯಲ್ಲಿ ಸಿಲುಕಿದೆ. ಆದರೆ ಸತತ ಪ್ರಯತ್ನಗಳ ನಂತರ ಹೊರ ತೆಗೆಯಲು ಟೆಸ್ಟ್ ಡ್ರೈವ್‌ಗೆ ಬಂದ ಗ್ರಾಹಕನಿಗೆ ಸಾಧ್ಯವಾಗಿಲ್ಲ.

ಯು ಟರ್ನ್ ವೇಳೆ ಯಡವಟ್ಟು- ಕಸದ ಗುಂಡಿಯಲ್ಲಿ ಸಿಲುಕಿಕೊಂಡ ಹೊಸ ಥಾರ್ ಕಾರು!

ಕೊನೆಗೆ ಶೋರೂಂ ಸಿಬ್ಬಂದಿಯೇ ಮಹೀಂದ್ರಾದ ಮತ್ತೊಂದು ಕಾರು ಮಾದರಿಯಾದ ನೊವಾ ಸ್ಪೋರ್ಟ್ ಮೂಲಕ ಹಗ್ಗ ಕಟ್ಟಿ ಹೊರಗೆ ಎಳಿಸಿದ ಪ್ರಸಂಗವು ದೆಹಲಿಯಲ್ಲಿ ನಡೆದಿದ್ದು, ಮುಂಭಾಗದ ಚಕ್ರವು ಕಸದ ಗುಂಡಿಯಲ್ಲಿ ಆಳವಾಗಿ ಸಿಲುಕಿದ ಪರಿಣಾಮ ಹೊರಬರಲು ಸಾಧ್ಯವಾಗಿಲ್ಲ. ಕೊನೆಗೆ ನೊವಾ ಸ್ಪೋರ್ಟ್ ಸಹಾಯದೊಂದಿಗೆ ಹೊರಗೆ ತೆಗೆಯಲಾಗಿದ್ದು, ಘಟನೆಯಲ್ಲಿ ಯಾವುದೇ ರೀತಿಯಲ್ಲಿ ಹಾನಿಯಾಗಿಲ್ಲ.

ಯು ಟರ್ನ್ ವೇಳೆ ಯಡವಟ್ಟು- ಕಸದ ಗುಂಡಿಯಲ್ಲಿ ಸಿಲುಕಿಕೊಂಡ ಹೊಸ ಥಾರ್ ಕಾರು!

ಆದರೆ ಚಾಲಾನಾ ಕೌಶಲ್ಯತೆಯ ಕೊರತೆಯಿಂದಾಗಿ ಕಾರಿನ ಮುಂಭಾಗದ ಚಕ್ರವು ಕಸದ ರಾಶಿಯಲ್ಲಿ ಸಿಲುಕಿಕೊಂಡಿತ್ತು. 4x4 ಡ್ರೈವ್ ಸಿಸ್ಟಂ ಹೊಂದಿರುವ ಹೊಸ ಕಾರು ಆಫ್ ರೋಡ್‌ನಲ್ಲಿ ಹಲವಾರು ಮಾದರಿಯ ಕಠಿಣ ರಸ್ತೆಗಳಲ್ಲೂ ಸರಾಗವಾಗಿ ಚಲಿಸುವ ಶಕ್ತಿ ಹೊಂದಿದ್ದು, ಕಸದ ರಾಶಿಯ ಗುಂಡಿಯಲ್ಲಿ ಚಾಲಕನ ಚಾಲನಾ ಕೌಶಲ್ಯದ ಕೊರತೆಯಿಂದಾಗಿ ಸಮಸ್ಯೆಗೆ ಸಿಲುಕುವಂತಾಗಿತ್ತು.

ಸಾಮಾನ್ಯ ಕಾರುಗಳಿಂತಲೂ ವಿಭಿನ್ನ ಚಾಲನಾ ವೈಶಿಷ್ಟ್ಯತೆ ಹೊಂದಿರುವ ಆಫ್ ರೋಡ್ ಥಾರ್ ಎಸ್‌ಯುವಿ ಮಾದರಿಯು ಕಠಿಣ ಪ್ರದೇಶಗಳಲ್ಲೂ ಸರಾಗವಾಗಿ ಚಾಲನೆಗಾಗಿ ಹಲವಾರು ಫೀಚರ್ಸ್‌ಗಳನ್ನು ಹೊಂದಿದೆ.

ಯು ಟರ್ನ್ ವೇಳೆ ಯಡವಟ್ಟು- ಕಸದ ಗುಂಡಿಯಲ್ಲಿ ಸಿಲುಕಿಕೊಂಡ ಹೊಸ ಥಾರ್ ಕಾರು!

ಇನ್ನು ಹೊಸ ಥಾರ್ ಕಾರು ಮಾದರಿಯು ಈ ಬಾರಿ ಹಲವಾರು ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ನ್ಯೂ ಜನರೇಷನ್ ಥಾರ್ ಕಾರು ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಎಎಕ್ಸ್ ಮತ್ತು ಎಲ್ಎಕ್ಸ್ ಎನ್ನುವ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದೆ.

ಯು ಟರ್ನ್ ವೇಳೆ ಯಡವಟ್ಟು- ಕಸದ ಗುಂಡಿಯಲ್ಲಿ ಸಿಲುಕಿಕೊಂಡ ಹೊಸ ಥಾರ್ ಕಾರು!

ಥಾರ್ ಕಾರು ಆರಂಭಿಕ ಆವೃತ್ತಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 9.80 ಲಕ್ಷದಿಂದ ಟಾಪ್ ಮಾದರಿಯು ರೂ. 12.95 ಲಕ್ಷ ಬೆಲೆ ಪಡೆದುಕೊಂಡಿದ್ದು, ಅತ್ಯುತ್ತಮ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಯು ಟರ್ನ್ ವೇಳೆ ಯಡವಟ್ಟು- ಕಸದ ಗುಂಡಿಯಲ್ಲಿ ಸಿಲುಕಿಕೊಂಡ ಹೊಸ ಥಾರ್ ಕಾರು!

ಥಾರ್ ಕಾರು ಮಾದರಿಯಲ್ಲಿ ಮೊದಲ ಬಾರಿಗೆ ಡೀಸೆಲ್ ಎಂಜಿನ್ ಜೊತೆಗೆ ಪೆಟ್ರೋಲ್ ಕಾರಿನ ಆಯ್ಕೆಯನ್ನು ಸಹ ನೀಡಿರುವುದು ಆಫ್-ರೋಡ್ ಕಾರು ಮಾದರಿಯ ಮಾರಾಟದಲ್ಲಿ ಮತ್ತೊಂದು ಹಂತದ ಬದಲಾವಣೆಗೆ ಕಾರಣವಾಗಿದ್ದು, ಹೊಸ ಕಾರಿನ ಹೊರಭಾಗದ ವಿನ್ಯಾಸದಲ್ಲೂ ಸಾಕಷ್ಟು ಬದಲಾವಣೆಗಳನ್ನು ಪರಿಚಯಿಸಲಾಗಿದೆ. ಮರುವಿನ್ಯಾಸಗೊಳಿಸಲಾದ ಸೆವೆನ್ ಸ್ಲಾಟ್ ಗ್ರಿಲ್, ವೃತ್ತಾಕಾರವಾದ ಹೆಡ್‌ಲ್ಯಾಂಪ್, 18-ಇಂಚಿನ ಆಕರ್ಷಕ ಅಲಾಯ್ ವೀಲ್ಹ್, ಡ್ಯುಯಲ್ ಟೋನ್ ಬಂಪರ್, ಸ್ಕಫ್ ಪ್ಲೇಟ್, ಬಾಕ್ಸಿ ಮಾದರಿಯಲ್ಲಿರುವ ಟೈಲ್ ಲೈಟ್‌ನೊಂದಿಗೆ ಮಾರ್ಡನ್ ಶೈಲಿ ಪಡೆದುಕೊಂಡಿದೆ.

ಯು ಟರ್ನ್ ವೇಳೆ ಯಡವಟ್ಟು- ಕಸದ ಗುಂಡಿಯಲ್ಲಿ ಸಿಲುಕಿಕೊಂಡ ಹೊಸ ಥಾರ್ ಕಾರು!

ಲ್ಯಾಡರ್-ಫ್ರೇಮ್ ಚಾರ್ಸಿ ಜೊತೆಗೆ ಹೊಸ ಸಸ್ಪೆಂಷನ್‌ ಸೌಲಭ್ಯವು ಹೊಸ ಥಾರ್ ಕಾರಿನ ಗುಣಮಟ್ಟ ಮತ್ತು ಕಾರ್ಯಕ್ಷಮತೆ ಹೆಚ್ಚಿಸಿದ್ದು, ಗ್ರಾಹಕರು ತಮ್ಮ ಬೇಡಿಕೆ ಅನುಗುಣವಾಗಿ ಎಎಕ್ಸ್ ಮ್ಯಾನುವಲ್ ಸಾಫ್ಟ್ ಟಾಪ್ ಮತ್ತು ಎಲ್ಎಕ್ಸ್ ಮಾದರಿಯಲ್ಲಿ ಕನ್ವರ್ಟಿಬಲ್ ಹಾಗೂ ಹಾರ್ಡ್ ಟಾಪ್ ಆಯ್ಕೆ ಮಾಡಬಹುದಾಗಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಯು ಟರ್ನ್ ವೇಳೆ ಯಡವಟ್ಟು- ಕಸದ ಗುಂಡಿಯಲ್ಲಿ ಸಿಲುಕಿಕೊಂಡ ಹೊಸ ಥಾರ್ ಕಾರು!

ಹೊಸ ಥಾರ್ ಕಾರು ಮಾದರಿಯಲ್ಲಿ ಬಿಎಸ್-6 ಎಂಜಿನ್ ಪ್ರೇರಿತ 2.2-ಲೀಟರ್ ಡೀಸೆಲ್ ಎಂಜಿನ್ ಮತ್ತು ಹೊಸದಾಗಿ ಅಭಿವೃದ್ದಿಗೊಳಿಸಲಾದ 2.-ಲೀಟರ್ ಎಂ-ಸ್ಟಾಲಿನ್ ಪೆಟ್ರೋಲ್ ಎಂಜಿನ್ ನೀಡಲಾಗಿದ್ದು, ಎರಡು ಎಂಜಿನ್ ಮಾದರಿಗಳಲ್ಲೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದೆ.

ಯು ಟರ್ನ್ ವೇಳೆ ಯಡವಟ್ಟು- ಕಸದ ಗುಂಡಿಯಲ್ಲಿ ಸಿಲುಕಿಕೊಂಡ ಹೊಸ ಥಾರ್ ಕಾರು!

ಥಾರ್ ಡೀಸೆಲ್ ಮಾದರಿಯು 132-ಬಿಎಚ್‌ಪಿ, 300-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಪೆಟ್ರೋಲ್ ಮಾದರಿಯು 152-ಬಿಎಚ್‌ಪಿ, 320-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು. ಈ ಮೂಲಕ ಪ್ರಯಾಣಿಕರ ಸುರಕ್ಷತೆಯಲ್ಲೂ ಗಮನಸೆಳೆಯಲಿದೆ.

Most Read Articles

Kannada
English summary
2020 Mahindra Thar Test Drive Vehicle Stuck In Garbage. Read in Kannada.
Story first published: Wednesday, October 28, 2020, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X