ಕಾರ್ ಕನೆಕ್ಟ್ ತಂತ್ರಜ್ಞಾನವನ್ನು UVO ಬದಲಾಗಿ Kia Connect ಆಗಿ ಮರುನಾಮಕರಣ

ಜಾಗತಿಕ ಮಾರುಕಟ್ಟೆಯಲ್ಲಿ ತನ್ನದೆ ಹೊಸ ವೈಶಿಷ್ಟ್ಯತೆಗಳೊಂದಿಗೆ ಕಾರು ಉತ್ಪಾದನೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ಕಿಯಾ ಕಂಪನಿಯು ಕಳೆದ ಒಂದು ವರ್ಷದಿಂದ ಕಂಪನಿಯ ಕಾರ್ಯತಂತ್ರದಲ್ಲಿ ಸಾಕಷ್ಟು ಹೊಸ ಬದಲಾವಣೆಗಳನ್ನು ಪರಿಚಯಿಸಿದೆ.

ಭಾರತದಲ್ಲಿ ಕಾರ್ ಕನೆಕ್ಟ್ ತಂತ್ರ ಜ್ಞಾನವನ್ನು UVO ಬದಲಾಗಿ Kia Connect ಆಗಿ ಮರು ನಾಮಕರಣ

ಕಿಯಾ ಮೋಟಾರ್ಸ್ ಹೆಸರಿನಿಂದ ಕೇವಲ ಕಿಯಾ ಅಥವಾ ಆಯಾ ರಾಷ್ಟ್ರಗಳಿಗೆ ಅನುಗುಣವಾಗಿ ಕಿಯಾ ಇಂಡಿಯಾ ಮಾದರಿಯಲ್ಲಿ ಕಾರ್ಯನಿರ್ವಹಣೆ ಬದಲಿಸಿದ್ದು, ಕಳೆದ ಕೆಳ ತಿಂಗಳ ಹಿಂದಷ್ಟೇ ಕಂಪನಿಯ ಲೊಗೊ ವಿನ್ಯಾಸವನ್ನು ಸಹ ಬದಲಾವಣೆಗೊಳಿಸಿದೆ. ಇದೀಗ ಹೊಸ ಕಾರುಗಳಲ್ಲಿ ಕನೆಕ್ಟೆಡ್ ಸೌಲಭ್ಯವನ್ನು ಸಹ ಯುವಿಒ(ಯುವರ್ ವಾಯ್ಸ್) ಬದಲಾಗಿ ಕಿಯಾ ಕನೆಕ್ಟ್ ಹೆಸರಿನಲ್ಲಿ ಮರುನಾಮಕರಣ ಮಾಡಿದೆ.

ಭಾರತದಲ್ಲಿ ಕಾರ್ ಕನೆಕ್ಟ್ ತಂತ್ರ ಜ್ಞಾನವನ್ನು UVO ಬದಲಾಗಿ Kia Connect ಆಗಿ ಮರು ನಾಮಕರಣ

ಕಿಯಾ ಕನೆಕ್ಟ್ ಪ್ಲಾಟ್‌ಫಾರ್ಮ್ ಸಂಪರ್ಕಿತ ವೈಶಿಷ್ಟ್ಯತೆಗಳನ್ನು ಒಳಗೊಂಡಿದ್ದು, ಒಂದೇ ಸೂರಿನಡಿ ಹಲವಾರು ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ಕನೆಕ್ಟ್ ಫೀಚರ್ಸ್‌ನಲ್ಲಿ ನ್ಯಾವಿಗೇಷನ್, ಟ್ರಾಫಿಕ್ ನಿರ್ದೇಶನಗಳು, ಟೆಲಿಮ್ಯಾಟಿಕ್ಸ್ ಮತ್ತು ವಿಶ್ಲೇಷಣೆಗಳಂತಹ ಉನ್ನತ ಮಟ್ಟದ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ.

ಭಾರತದಲ್ಲಿ ಕಾರ್ ಕನೆಕ್ಟ್ ತಂತ್ರ ಜ್ಞಾನವನ್ನು UVO ಬದಲಾಗಿ Kia Connect ಆಗಿ ಮರು ನಾಮಕರಣ

ಕಿಯಾ ಕಂಪನಿಯು ಹೊಸ ಬದಲಾವಣೆಯನ್ನು ಮೊದಲ ಯುರೋಪಿಯನ್ ಕಾರುಗಳಿಗೆ ವಿಸ್ತರಿಸುವುವಾಗಿ ಹೇಳಿಕೊಂಡಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಭಾರತದಲ್ಲೂ ಉನ್ನತೀಕರಿಸಿದ ಕಾರ್ ಕನೆಕ್ಟ್ ಆ್ಯಪ್ ಜೋಡಣೆ ಮಾಡಲಿದೆ.

ಭಾರತದಲ್ಲಿ ಕಾರ್ ಕನೆಕ್ಟ್ ತಂತ್ರ ಜ್ಞಾನವನ್ನು UVO ಬದಲಾಗಿ Kia Connect ಆಗಿ ಮರು ನಾಮಕರಣ

ಐಷಾರಾಮಿ ಕಾರುಗಳಲ್ಲಿ ಮಾತ್ರವೇ ಜೋಡಣೆ ಮಾಡಲಾಗುತ್ತಿದ್ದ ಕನೆಕ್ಟೆಡ್ ಕಾರ್ ಫೀಚರ್ಸ್‌ಗಳು ಇದೀಗ ಮಧ್ಯಮ ಗಾತ್ರದ ಕಾರುಗಳಲ್ಲೂ ಜನಪ್ರಿಯವಾಗುತ್ತಿದ್ದು, ಕಿಯಾ ಕಂಪನಿಯು ಇದುವರೆಗೆ ಭಾರತದಲ್ಲಿ ಬರೋಬ್ಬರಿ 1.50 ಲಕ್ಷಕ್ಕೂ ಕನೆಕ್ಟೆಡ್ ಫೀಚರ್ಸ್ ಹೊಂದಿರುವ ಕಾರುಗಳನ್ನು ಮಾರಾಟ ಮಾಡಿದೆ.

ಭಾರತದಲ್ಲಿ ಕಾರ್ ಕನೆಕ್ಟ್ ತಂತ್ರ ಜ್ಞಾನವನ್ನು UVO ಬದಲಾಗಿ Kia Connect ಆಗಿ ಮರು ನಾಮಕರಣ

37 ಫೀಚರ್ಸ್‌ಗಳನ್ನು ಒಳಗೊಂಡಿರುವ ಬ್ಲ್ಯೂ ಲಿಂಕ್ ಸೂಟ್ಸ್‌ ಹೊಂದಿರುವ ಕಿಯಾ ಕನೆಕ್ಟ್ ಟೆಕ್ನಾಲಜಿಯು ಕಾರು ಚಾಲನೆಯನ್ನು ಸುಲಭವಾಗಿಸಿರುವುದಲ್ಲದೆ ಹೊಸ ಕಾರುಗಳಿಗೆ ಗರಿಷ್ಠ ಭದ್ರತೆ ನೀಡುತ್ತದೆ.

ಭಾರತದಲ್ಲಿ ಕಾರ್ ಕನೆಕ್ಟ್ ತಂತ್ರ ಜ್ಞಾನವನ್ನು UVO ಬದಲಾಗಿ Kia Connect ಆಗಿ ಮರು ನಾಮಕರಣ

ಇದು ಕಿಯಾ ಹೊಸ ಕಾರುಗಳ ಖರೀದಿದಾರರ ಪ್ರಮುಖ ಆಕರ್ಷಣೆಯಾಗಿದ್ದು, ಸ್ಮಾರ್ಟ್ ಫೋನ್ ಅಥವಾ ಸ್ಮಾರ್ಟ್ ವಾಚ್ ಮೂಲಕವೇ ಕಾರಿನ ಬಹುತೇಕ ತಾಂತ್ರಿಕ ಅಂಶಗಳನ್ನು ನಿಯಂತ್ರಣ ಮಾಡಬಹುದಾಗಿದೆ.

ಭಾರತದಲ್ಲಿ ಕಾರ್ ಕನೆಕ್ಟ್ ತಂತ್ರ ಜ್ಞಾನವನ್ನು UVO ಬದಲಾಗಿ Kia Connect ಆಗಿ ಮರು ನಾಮಕರಣ

ಕಾರ್ ಕನೆಕ್ಟ್ ಟೆಕ್ನಾಲಜಿ ಮೂಲಕವೇ ವಾಹನ ಕಳ್ಳತನದಂತಹ ಸಮಸ್ಯೆಗಳಿಗೂ ಪರಿಣಾಮಕಾರಿಯಾಗಿ ಕಡಿವಾಣ ಹಾಕಬಹುದಾಗಿದ್ದು, ವಾಯ್ಸ್ ಕಮಾಂಡ್ ಮೂಲಕ ಕ್ಯಾಬಿನ್ ಫೀಚರ್ಸ್‌ಗಳನ್ನು ಸುಲಭವಾಗಿ ನಿಯಂತ್ರಿಸಬಹುದಾಗಿದೆ.

ಭಾರತದಲ್ಲಿ ಕಾರ್ ಕನೆಕ್ಟ್ ತಂತ್ರ ಜ್ಞಾನವನ್ನು UVO ಬದಲಾಗಿ Kia Connect ಆಗಿ ಮರು ನಾಮಕರಣ

ಸದ್ಯ ಕಿಯಾ ಕಂಪನಿಯು ಹೊಸ ಕನೆಕ್ಟೆಡ್ ಫೀಚರ್ಸ್‌ಗಳನ್ನು ಕಾರ್ನಿವಾಲ್‌ ಎಂಪಿವಿ ಕಾರಿನಲ್ಲಿ ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದ್ದು, ಸೆಲ್ಟೊಸ್‌ ಮತ್ತು ಸೊನೆಟ್ ಕಾರಿನ ಹೈ ಎಂಡ್ ಮಾದರಿಗಳಲ್ಲಿ ಮಾತ್ರವೇ ಜೋಡಣೆ ಮಾಡಲಾಗಿದೆ.

ಭಾರತದಲ್ಲಿ ಕಾರ್ ಕನೆಕ್ಟ್ ತಂತ್ರ ಜ್ಞಾನವನ್ನು UVO ಬದಲಾಗಿ Kia Connect ಆಗಿ ಮರು ನಾಮಕರಣ

ಸಾಮಾನ್ಯ ಮಾದರಿಗಿಂತಲೂ ದುಬಾರಿ ಬೆಲೆ ನಡುವೆಯೂ ಕನೆಕ್ಟೆಡ್ ಫೀಚರ್ಸ್ ಹೊಂದಿರುವ ಕಾರುಗಳೇ ಹೆಚ್ಚು ಮಾರಾಟವಾಗಿದ್ದು, ಕಂಪನಿಯು ಇದುವರೆಗೆ ಬರೋಬ್ಬರಿ 1.50 ಲಕ್ಷ ಯುನಿಟ್ ಕಾರುಗಳನ್ನು ಕನೆಕ್ಟೆಡ್ ಫೀಚರ್ಸ್‌ನೊಂದಿಗೆ ಮಾರಾಟಗೊಳಿಸಿದೆ.

ಭಾರತದಲ್ಲಿ ಕಾರ್ ಕನೆಕ್ಟ್ ತಂತ್ರ ಜ್ಞಾನವನ್ನು UVO ಬದಲಾಗಿ Kia Connect ಆಗಿ ಮರು ನಾಮಕರಣ

37 ಫೀಚರ್ಸ್ ಒಳಗೊಂಡಿರುವ ಬ್ಲ್ಯೂ ಲಿಂಕ್ ಸೂಟ್ಸ್‌ ಹೊಂದಿರುವ ಕಾರ್ ಕನೆಕ್ಟ್ ಟೆಕ್ನಾಲಜಿಯನ್ನು ಕಿಯಾ ಕಂಪನಿಯೇ ಅಭಿವೃದ್ದಿಗೊಳಿಸಿದ್ದು, ನ್ಯಾವಿಗೆಷನ್, ವೆಹಿಕಲ್ ಟ್ರ್ಯಾಕಿಂಗ್, ಥೆಪ್ಟ್ ಅಲರ್ಟ್, ಜಿಯೋ ಫೆನ್ಸಿಂಗ್ ಸೇರಿದಂತೆ ವಿವಿಧ ಮಾದರಿಯ ಸುಧಾರಿತ ಮಾಹಿತಿ ತಂತ್ರಜ್ಞಾನವು ಈ ಪ್ಯಾಕೇಜ್‌ನಲ್ಲಿದೆ.

ಭಾರತದಲ್ಲಿ ಕಾರ್ ಕನೆಕ್ಟ್ ತಂತ್ರ ಜ್ಞಾನವನ್ನು UVO ಬದಲಾಗಿ Kia Connect ಆಗಿ ಮರು ನಾಮಕರಣ

ಈ ಮೂಲಕ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಕಿಯಾ ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಕನೆಕ್ವೆಡ್ ಕಾರುಗಳ ಮಾರಾಟವನ್ನು ತನ್ನದಾಗಿಸಿಕೊಳ್ಳಲಿದೆ.

ಭಾರತದಲ್ಲಿ ಕಾರ್ ಕನೆಕ್ಟ್ ತಂತ್ರ ಜ್ಞಾನವನ್ನು UVO ಬದಲಾಗಿ Kia Connect ಆಗಿ ಮರು ನಾಮಕರಣ

ಇನ್ನು ಕಾರು ಮಾರಾಟದಲ್ಲಿ ಸದ್ಯ ಮಾರುತಿ ಸುಜುಕಿ, ಹ್ಯುಂಡೈ, ಟಾಟಾ ಮೋಟಾರ್ಸ್ ನಂತರ ನಾಲ್ಕನೇ ಸ್ಥಾನದಲ್ಲಿರುವ ಕಿಯಾ ಕಂಪನಿಯು ಮಹೀಂದ್ರಾ, ಹೋಂಡಾ, ಟೊಯೊಟಾ ಕಂಪನಿಗಳನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ. ಮುಂಬರುವ ದಿನಗಳಲ್ಲಿ ಹೊಸ ಮಾರಾಟ ಮಳಿಗೆಗಳೊಂದಿಗೆ ಪ್ರಮುಖ ನಗರಗಳಲ್ಲಿ ಮತ್ತಷ್ಟು ಮಾರಾಟ ಸಂಖ್ಯೆ ಹೆಚ್ಚಿಸುವ ಯೋಜನೆಯಲ್ಲಿದೆ.

ಭಾರತದಲ್ಲಿ ಕಾರ್ ಕನೆಕ್ಟ್ ತಂತ್ರ ಜ್ಞಾನವನ್ನು UVO ಬದಲಾಗಿ Kia Connect ಆಗಿ ಮರು ನಾಮಕರಣ

ಕಿಯಾ ಕಂಪನಿಯು ಸದ್ಯ ದೇಶದ ಪ್ರಮುಖ 170 ನಗರಗಳಲ್ಲಿ 250 ಮಾರಾಟ ಮಳಿಗೆಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಮುಂಬರುವ ಕೆಲವೇ ದಿನಗಳಲ್ಲಿ ಮಾರಾಟ ಮಳಿಗೆಗಳ ಸಂಖ್ಯೆಯನ್ನು 300ಕ್ಕೆ ಏರಿಕೆ ಮಾಡವ ಸಿದ್ದತೆಯಲ್ಲಿದೆ.

ರೂ.6.5 ಕೋಟಿ ಮೌಲ್ಯದ ಬೆಂಟ್ಲಿ ಬೆಂಟಾಯ್ಗಾ ಕಾರನ್ನು ಖರೀದಿಸಿದ ಕರ್ನಾಟಕದ ಉದ್ಯಮಿ

ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಇಂಡಿಯಾ ಒಟ್ಟು 3 ಲಕ್ಷ ಕಾರುಗಳ ಮಾರಾಟ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದ್ದು, ಅತಿ ವೇಗದ ಕಾರು ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ಭಾರತೀಯ ಮಾರುಕಟ್ಟೆಯಲ್ಲಿ ಬ್ಲಾಕ್‌ಬಸ್ಟರ್‌ ಆಗಿರುವ ಕಿಯಾ ಸೆಲ್ಟೊಸ್, ಸೊನೆಟ್ ಮತ್ತು ಕಾರ್ನಿವಾಲ್ ಕಾರು ಮಾದರಿಗಳಿಗೆ ಬೇಡಿಕೆ ಹೆಚ್ಚುತ್ತಿದೆ.

Most Read Articles

Kannada
English summary
Kia renames uvo connect to kia connect details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X