ನೆಕ್ಸಾ ಶೋರೂಂಗಳ ಮೂಲಕ ಭಾರೀ ಪ್ರಮಾಣದ ಕಾರು ಮಾರಾಟ ಮಾಡಿದ ಮಾರುತಿ ಸುಜುಕಿ

ಬಜೆಟ್ ಮತ್ತು ಪ್ರೀಮಿಯಂ ಕಾರುಗಳ ಮೂಲಕ ವಾಹನ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಮಾರುತಿ ಸುಜುಕಿ ಕಂಪನಿಯು ಎಂಟ್ರಿ ಲೆವಲ್ ಕಾರುಗಳ ಜೊತೆಯಲ್ಲಿ ಪ್ರೀಮಿಯಂ ಕಾರು ಮಾರಾಟದಲ್ಲೂ ಮುನ್ನಡೆ ಸಾಧಿಸುತ್ತಿದೆ.

ನೆಕ್ಸಾ ಶೋರೂಂಗಳ ಮೂಲಕ ಭಾರೀ ಪ್ರಮಾಣದ ಕಾರು ಮಾರಾಟ ಮಾಡಿದ ಮಾರುತಿ ಸುಜುಕಿ

ಮಾರುತಿ ಸುಜುಕಿಯು ಕಾರು ಮಾರಾಟದಲ್ಲಿ ಎರಡು ಹಂತದ ಮಾರಾಟ ಮಳಿಗೆಗಳನ್ನು ಹೊಂದಿದ್ದು, ಅರೆನಾ ಕಾರು ಮಾರಾಟ ಮಳಿಗೆಗಳಲ್ಲಿ ಎಸ್-ಪ್ರೆಸ್ಸೊ, ಸ್ವಿಫ್ಟ್, ವಿಟಾರಾ ಬ್ರೆಝಾ, ಆಲ್ಟೊ, ವ್ಯಾಗನ್ಆರ್, ಡಿಸೈರ್, ಇಕೋ, ಸೆಲೆರಿಯೊ, ಎರ್ಟಿಗಾ ಕಾರುಗಳನ್ನು ಮಾರಾಟ ಮಾಡಿದ್ದಲ್ಲಿ ನೆಕ್ಸಾ ಶೋರೂಂನಲ್ಲಿ ಪ್ರೀಮಿಯಂ ಕಾರು ಮಾದರಿಗಳಾದ ಇಗ್ನಿಸ್, ಬಲೆನೊ, ಸಿಯಾಜ್, ಎಕ್ಸ್6 ಮತ್ತು ಎಸ್-ಕ್ರಾಸ್ ಕಾರು ಮಾರಾಟ ಸೌಲಭ್ಯ ಹೊಂದಿದೆ.

ನೆಕ್ಸಾ ಶೋರೂಂಗಳ ಮೂಲಕ ಭಾರೀ ಪ್ರಮಾಣದ ಕಾರು ಮಾರಾಟ ಮಾಡಿದ ಮಾರುತಿ ಸುಜುಕಿ

ದೇಶಾದ್ಯಂತ ಮಾರುತಿ ಸುಜುಕಿ ಸದ್ಯ 2,600ಕ್ಕೂ ಹೆಚ್ಚು ಅರೆನಾ ಕಾರು ಮಾರಾಟ ಮಳಿಗೆಗಳನ್ನು ಹೊಂದಿದ್ದರೆ 370 ನೆಕ್ಸಾ ಶೋರೂಂಗಳನ್ನು ತೆರೆದಿದ್ದು, ನೆಕ್ಸಾ ಶೋರೂಂಗಳು ಸದ್ಯಕ್ಕೆ ಮೆಟ್ರೋ ನಗರಗಳು ಮತ್ತು ಟೈರ್ 1 ನಗರಗಳಲ್ಲಿ ಮಾತ್ರ ಕಾರ್ಯನಿರ್ವಹಣೆಯಲ್ಲಿವೆ.

ನೆಕ್ಸಾ ಶೋರೂಂಗಳ ಮೂಲಕ ಭಾರೀ ಪ್ರಮಾಣದ ಕಾರು ಮಾರಾಟ ಮಾಡಿದ ಮಾರುತಿ ಸುಜುಕಿ

ಬಜೆಟ್ ಕಾರುಗಳ ಮೂಲಕ ಅರೆನಾ ಕಾರು ಮಾರಾಟ ಮಳಿಗೆಗಳು ಮಧ್ಯಮ ವರ್ಗದ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾದರೆ ನೆಕ್ಸಾ ಶೋರೂಂಗಳು ತುಸು ಪ್ರೀಮಿಯಂ ಬಯಸುವ ಗ್ರಾಹಕರಿಗೆ ಅನುಕೂಲಕರವಾಗಿದ್ದು, ಇಗ್ನಿಸ್, ಬಲೆನೊ, ಸಿಯಾಜ್, ಎಕ್ಸ್6 ಮತ್ತು ಎಸ್-ಕ್ರಾಸ್ ಕಾರುಗಳು ಉತ್ತಮ ಬೇಡಿಕೆ ಪಡೆದುಕೊಂಡಿವೆ.

ನೆಕ್ಸಾ ಶೋರೂಂಗಳ ಮೂಲಕ ಭಾರೀ ಪ್ರಮಾಣದ ಕಾರು ಮಾರಾಟ ಮಾಡಿದ ಮಾರುತಿ ಸುಜುಕಿ

2015ರ ಮೊದಲ ಬಜೆಟ್ ಮತ್ತು ಪ್ರೀಮಿಯಂ ಕಾರುಗಳ ಮಾರಾಟವನ್ನು ಒಂದೇ ಪ್ಲ್ಯಾಟ್‌ಫಾರ್ಮ್‌ನಲ್ಲಿ ಮಾರಾಟ ಮಾಡುತ್ತಿದ್ದ ಮಾರುತಿ ಸುಜುಕಿಯು ಮೊದಲ ಬಾರಿಗೆ ಎರಡು ಮಾದರಿಯ ಮಾರಾಟ ಮಳಿಗೆಗಳನ್ನು ತೆರೆಯಲು ಆರಂಭಿಸಿತು.

ನೆಕ್ಸಾ ಶೋರೂಂಗಳ ಮೂಲಕ ಭಾರೀ ಪ್ರಮಾಣದ ಕಾರು ಮಾರಾಟ ಮಾಡಿದ ಮಾರುತಿ ಸುಜುಕಿ

ನೆಕ್ಸಾ ಶೋರೂಂ ಆರಂಭವಾಗಿ ಭಾರತದಲ್ಲಿ 6 ವರ್ಷ ಪೂರೈಸಿದ್ದು, ನೆಕ್ಸಾ ಮಾರಾಟ ಮಳಿಗೆಗಳ ಮೂಲಕ ಮಾರುತಿ ಸುಜುಕಿ ಕಂಪನಿಯು ಇದುವರೆಗೆ ಬರೋಬ್ಬರಿ 14 ಲಕ್ಷ ಕಾರುಗಳನ್ನು ಮಾರಾಟ ಮಾಡಿದೆ.

ನೆಕ್ಸಾ ಶೋರೂಂಗಳ ಮೂಲಕ ಭಾರೀ ಪ್ರಮಾಣದ ಕಾರು ಮಾರಾಟ ಮಾಡಿದ ಮಾರುತಿ ಸುಜುಕಿ

ಇದು ಕೇವಲ ಪ್ರೀಮಿಯಂ ಕಾರು ಮಾದರಿಗಳ ಮಾರಾಟವಾಗಿದ್ದು, ಇಗ್ನಿಸ್, ಬಲೆನೊ, ಸಿಯಾಜ್, ಎಕ್ಸ್6 ಮತ್ತು ಎಸ್-ಕ್ರಾಸ್ ಕಾರುಗಳ ಮೂಲಕ ಕಂಪನಿಯು ಕಾರು ಮಾರಾಟದಲ್ಲಿ ಹೊಸ ಸಂಚಲನ ಮೂಡಿಸಿತು.

ನೆಕ್ಸಾ ಶೋರೂಂಗಳ ಮೂಲಕ ಭಾರೀ ಪ್ರಮಾಣದ ಕಾರು ಮಾರಾಟ ಮಾಡಿದ ಮಾರುತಿ ಸುಜುಕಿ

ಈ ಮೂಲಕ ಮಾರುತಿ ಸುಜುಕಿ ಕಾರು ಮಾರಾಟದ ಶೇ.20 ರಷ್ಟು ಪಾಲನ್ನು ತನ್ನದಾಗಿಸಿಕೊಂಡಿರುವ ನೆಕ್ಸಾ ಶೋರೂಂಗಳು ಮುಂಬರುವ ದಿನಗಳಲ್ಲಿ ಮತ್ತಷ್ಟು ಗ್ರಾಹಕರ ಸೆಳೆಯುವ ನೀರಿಕ್ಷೆಯಲ್ಲಿದ್ದು, ಹೊಸ ಮಾರಾಟ ಮಳಿಗೆಗಳು ಕಾರು ಬೇಡಿಕೆ ಹೆಚ್ಚಿಸುವುದರ ಜೊತೆಗೆ ಗ್ರಾಹಕರ ಸೇವೆಗಳನ್ನು ಸುಲಭವಾಗಿಸಲು ಯೋಜನೆ ರೂಪಿಸಲಾಗಿದೆ.

ನೆಕ್ಸಾ ಶೋರೂಂಗಳ ಮೂಲಕ ಭಾರೀ ಪ್ರಮಾಣದ ಕಾರು ಮಾರಾಟ ಮಾಡಿದ ಮಾರುತಿ ಸುಜುಕಿ

ಇನ್ನು ಬಿಎಸ್-6 ಎಮಿಷನ್ ನಿಯಮ ಜಾರಿ ನಂತರ ಹೊಸ ಕಾರುಗಳ ಮಾರಾಟದಲ್ಲಿ ಭಾರೀ ಬದಲಾವಣೆ ತಂದಿರುವ ಮಾರುತಿ ಸುಜುಕಿಯು ಡೀಸೆಲ್ ಎಂಜಿನ್ ಆಯ್ಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದು, ಸದ್ಯಕ್ಕೆ ಪೆಟ್ರೋಲ್, ಸ್ಮಾರ್ಟ್ ಹೈಬ್ರಿಡ್ ಪ್ರೇರಿತ ಪೆಟ್ರೋಲ್ ಮತ್ತು ಸಿಎನ್‌ಜಿ ಕಾರುಗಳನ್ನು ಮಾತ್ರ ಮಾರಾಟ ಮಾಡುತ್ತಿದೆ.

ನೆಕ್ಸಾ ಶೋರೂಂಗಳ ಮೂಲಕ ಭಾರೀ ಪ್ರಮಾಣದ ಕಾರು ಮಾರಾಟ ಮಾಡಿದ ಮಾರುತಿ ಸುಜುಕಿ

ಮಾರುತಿ ಸುಜುಕಿಯು ಸದ್ಯಕ್ಕೆ 800ಸಿಸಿ, 1.0-ಲೀಟರ್, 1.2-ಲೀಟರ್ ಮತ್ತು 1.5-ಲೀಟರ್ ಪೆಟ್ರೋಲ್ ಕಾರು ಮಾದರಿಗಳನ್ನು ಮಾತ್ರವೇ ಮಾರಾಟ ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ ಹ್ಯಾಚ್‌ಬ್ಯಾಕ್ ಕಾರುಗಳನ್ನು ಹೊರತುಪಡಿಸಿ ಸೆಡಾನ್, ಎಸ್‌ಯುವಿ ಮತ್ತು ಎಂಪಿವಿ ಕಾರು ಮಾದರಿಗಳಿಗಾಗಿ ಹೊಸ ತಂತ್ರಜ್ಞಾನ ಪ್ರೇರಿತ 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಬಿಡುಗಡೆಗೊಳಿಸಬಹುದಾದ ಸಾಧ್ಯತೆಗಳಿವೆ ಎನ್ನಲಾಗಿದೆ.

Most Read Articles

Kannada
English summary
Maruti Suzuki Premium Retail Nexa Sold Over 14 Lakh Cars. Read in Kannada.
Story first published: Saturday, July 24, 2021, 15:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X