Just In
Don't Miss!
- News
ತೊಂದರೆಗೊಳಗಾಗಿರುವ ರಾಜ್ಯಗಳಿಗೆ ಮುಂದಿನ ವಾರದೊಳಗೆ ಮತ್ತಷ್ಟು ಲಸಿಕೆ: ಕೇಂದ್ರ
- Finance
UMANG APP: ಇಪಿಎಫ್ಗೆ ಸಂಬಂಧಿಸಿದ ಆ್ಯಪ್, ವೈಶಿಷ್ಟ್ಯಗಳೇನು ತಿಳಿಯಿರಿ
- Movies
ಜಾಕಿ ಚಾನ್ ತಮ್ಮ ಮಗನಿಗೆ ಸಾವಿರಾರು ಕೋಟಿ ಆಸ್ತಿಯನ್ನು ಕೊಡುತ್ತಿಲ್ಲವೇಕೆ?
- Lifestyle
ಭಾನುವಾರದ ಭವಿಷ್ಯ: ಈ ದಿನ ಯಾವ ರಾಶಿಯವರಿಗೆ ಅದೃಷ್ಟದ ದಿನ
- Sports
ಹೈದರಾಬಾದ್ ಸೋಲಿಸಿ ಅಗ್ರ ಸ್ಥಾನಕ್ಕೇರಿದ ಮುಂಬೈ ಇಂಡಿಯನ್ಸ್
- Education
Ninasam Diploma Admission 2020-21: ಮೇ ತಿಂಗಳಲ್ಲಿ ನೀನಾಸಂ ಡಿಪ್ಲೋಮಾ ಪ್ರವೇಶಾತಿ ಆರಂಭ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾದ ಹೊಸ ಹ್ಯುಂಡೈ ಬಯೋನ್ ಎಸ್‍ಯುವಿ
ಹ್ಯುಂಡೈ ಕಂಪನಿಯು ತನ್ನ ಹೊಸ ಬಿ-ವಿಭಾಗದ ಎಂಟ್ರಿ ಲೆವೆಲ್ ಬಯೋನ್ ಎಸ್‍ಯುವಿಯನ್ನು ಯುರೋಪಿಯನ್ ಮಾರುಕಟ್ಟೆಗಳಲ್ಲಿ ಪರಿಚಯಿಸಲು ಸಜ್ಜಾಗುತ್ತಿದೆ. ಹ್ಯುಂಡೈ ಐ20 ಕಾರನ್ನು ಆಧರಿಸಿ ಹೊಸ ಬಯೋನ್ ಮಾದರಿಯನ್ನು ಅಭಿವೃದ್ದಿಪಡಿಸಲಿದೆ.

ಫ್ರಾನ್ಸ್‌ನ ಬಯೋನ್ ನಗರದ ಹೆಸರನ್ನು ಹೊಸ ಹ್ಯುಂಡೈ ಎಸ್‍ಯುವಿಗೆ ನೀಡಲಾಗಿದೆ. ಈ ಹೊಸ ಹ್ಯುಂಡೈ ಬಯಾನ್ ಸುಮಾರು 4 ಮೀಟರ್ ಉದ್ದವನ್ನು ಹೊಂದಿರುವ ಮಾದರಿಯಾಗಿದೆ. ಈ ಹೊಸ ಎಸ್‍ಯುವಿಯು ಸ್ಪೋರ್ಟಿ ವಿನ್ಯಾಸವನ್ನು ಒಳಗೊಂಡಿದೆ. ಈ ಹೊಸ ಹ್ಯುಂಡೈ ಬಯೋನ್ ಕೋನಾ ಮಾದರಿಯ ವಿನ್ಯಾಸವನ್ನು ಹಂಚಿಕೊಳ್ಳುತ್ತದೆ. ಬಯೋನ್ ಎಸ್‍ಯುವಿಯು ಒಟ್ಟಾರೆಯಾಗಿ ಸ್ಪೋರ್ಟಿ ಮತ್ತು ಆಕರ್ಷಕವಾಗಿದೆ. ಇನ್ನು ಹೊಸ ಹ್ಯುಂಡೈ ಬಯೋನ್ ಎಸ್‍ಯುವಿಯು ಮಾರ್ಚ್ 2ರಂದು ಯುರೋಪಿಯನ್ ಮಾರುಕಟ್ಟೆಗಳಲ್ಲಿ ಅನಾವರಣವಾಗಲಿದೆ.

ಇನ್ನು ಹ್ಯುಂಡೈ ಬಯೋನ್ ಎಸ್‍ಯುವಿ ಗ್ನೇಚರ್ ಕ್ಯಾಸ್ಕೇಡಿಂಗ್ ಗ್ರಿಲ್ ಮತ್ತು ಸ್ಪ್ಲಿಟ್ ಹೆಡ್‌ಲ್ಯಾಂಪ್ ಸೆಟಪ್ ಅನ್ನು ಪಡೆಯುತ್ತದೆ, ಇದು ಹೊಸ ಹ್ಯುಂಡೈ ಎಸ್‌ಯುವಿಗಳಲ್ಲಿ ಸಾಮಾನ್ಯವಾಗಿದೆ. ಇನ್ನು ಈ ಎಸ್‍ಯುವಿಯು ದೊಡ್ಡ ಗ್ರಿಲ್ ಅನ್ನು ಪಡೆಯುತ್ತದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಈ ಹೊಸ ಎಸ್‍ಯುವಿಯು ಎಲ್ಇಡಿ ಡಿಆರ್ಎಲ್ ಗಳ ನಡುವೆ ಸ್ಲ್ಯಾಟ್ ನಿಂದ ಪೂರಕವಾಗಿದೆ. ಹಿಂಭಾಗದಲ್ಲಿ ಬಾರ್ ವಿನ್ಯಾಸದಲ್ಲಿ ಹೊಸ ಎಲ್ಇಡಿ ಟೈಲ್-ಲ್ಯಾಂಪ್‌ಗಳನ್ನು ಹೊಂದಿವೆ.

ಹ್ಯುಂಡೈ ಬಯೋನ್ ಎಸ್‍ಯುವಿಯ ಕ್ಯಾಬಿನ್ ಹೊಸ ಐ20 ಯಿಂದ ಸ್ಫೂರ್ತಿ ಪಡೆಯುವ ಸಾಧ್ಯತೆಯಿದೆ. ಇದು ಐ20 ಕಾರಿನಿಂದ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಹಂಚಿಕೊಳ್ಳಬಹುದು.
MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಇನ್ನು ಈ ಹೊಸ ಎಸ್‍ಯುವಿ ಬ್ಲೂಲಿಂಕ್ ಕನೆಕ್ಟಿವಿಟಿ ಕಾರ್ ಟೆಕ್, ವೈರ್ಲೆಸ್ ಚಾರ್ಜಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಫಾಲೋ ಅಸಿಸ್ಟ್, ಫ್ರಂಟ್ ಡಿಕ್ಕಿ ತಪ್ಪಿಸುವಿಕೆ, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಮತ್ತು ಇತರವುಗಳನ್ನು ಪಡೆಯುವ ಸಾಧ್ಯತೆಯಿದೆ.

ಹೊಸ ಐ 20 ಹ್ಯಾಚ್‌ಬ್ಯಾಕ್ ಆಧರಿಸಿರುವ ಹೊಸ ಹ್ಯುಂಡೈ ಬಯೋನ್ ಎಸ್‍ಯುವಿಯು ಯುರೋಪಿನಲ್ಲಿ ಫೋರ್ಡ್ ಇಕೋಸ್ಪೋರ್ಟ್ ಮತ್ತು ವಿಡಬ್ಲ್ಯೂ ಟಿ-ಕ್ರಾಸ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಇನ್ನು ಈ ಹೊಸ ಹ್ಯುಂಡೈ ಬಯೋನ್ ಎಸ್‍ಯುವಿಯಲ್ಲಿ 1.0-ಲೀಟರ್ 3-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಬಹುದು. ಈ ಎಂಜಿನ್ ಅನ್ನು ಎರಡು ರೀತಿಯಲ್ಲಿ ಟ್ಯೂನ್ ಮಾಡಲಾಗುತ್ತದೆ. ಇದು 100 ಬಿಹೆಚ್‌ಪಿ ಪವರ್ 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಇನ್ನೊಂದು 120 ಬಿಹೆಚ್‌ಪಿ ಪವರ್ 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಆಟೋಮ್ಯಾಟಿಕ್ ಮತ್ತು 7-ಸ್ಪೀಡ್ ಡಿಸಿಟಿ ಗೇರ್ ಬಾಕ್ಸ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ. ಇನ್ನು ಇದರೊಂದಿಗೆ ಐ20 ಕಾರಿನಲ್ಲಿರುವ 1.2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಕೂಡ ಅಳವಡಿಸಬಹುದು. ಈ ಎಂಜಿನ್ 82 ಬಿಹೆಚ್‍ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.