ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ ಎಂಜಿ ಒನ್ ಎಸ್‍ಯುವಿ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಎಂಜಿ ಮೋಟಾರ್ ಹೊಸ ಎಸ್‍ಯುವಿಯನ್ನು ಪರಿಚಯಿಸಲು ಸಜ್ಜಾಗಿದೆ. ಎಂಜಿ ಮೋಟಾರ್ ಕಂಪನಿಯು ಒನ್ ಎಂಬ ಹೆಸರಿನ ಎಸ್‍ಯುವಿಯ ಟೀಸರ್ ಚಿತ್ರಗಳನ್ನು ಬಿಡುಗಡೆಗೊಳಿಸಿದೆ. ಚಿತ್ರಗಳಲ್ಲಿ ಹೊಸ ಎಂಜಿನ್ ಒನ್ ಎಸ್‍ಯುವಿಯು ಆಕರ್ಷಕ ಲುಕ್ ಅನ್ನು ಹೊಂದಿದೆ.

ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ ಎಂಜಿ ಒನ್ ಎಸ್‍ಯುವಿ

ಹೊಸ ಎಂಜಿ ಕಂಪನಿಯು ಒನ್ ಎಸ್‍ಯುವಿಯನ್ನು ಇದೇ ತಿಂಗಳ 30ರಂದು ಜಾಗತಿಕ ಮಟ್ಟದಲ್ಲಿ ಪರಿಚಯಿಸಲಿದೆ. ಎಂಜಿ ಒನ್ ಎಸ್‌ಯುವಿಯ ಮಾಹಿತಿಗಳು ಈಗಾಗಲೇ ಚೀನಾದಲ್ಲಿ ಸೋರಿಕೆಯಾಗಿದೆ. ಹೊಸ ಎಂಜಿ ಒನ್ ಎಸ್‍ಯುವಿಯು ಆಲ್-ಇನ್-ಒನ್ ಮಾಡ್ಯುಲರ್ ಪ್ಲಾಟ್‌ಫಾರ್ಮ್‌ನ ಬ್ರ್ಯಾಂಡ್‌ನ ಹೊಸ ಸಿಗ್ಮಾ ಆರ್ಕಿಟೆಕ್ಚರ್ ಅನ್ನು ಆಧರಿಸಿದೆ. ಪ್ರಬಲವಾದ ಚಿಪ್ ಟೆಕ್, ಆಕ್ಟಿವ್ ಡಿಜಿಟಲ್ ಇಕೋ ಸಿಸ್ಟಮ್, ಸುಧಾರಿತ ಎಲೆಕ್ಟ್ರಿಕ್ ಆರ್ಕಿಟೆಕ್ಚರ್ ಮತ್ತು ಹಾರ್ಡ್-ಕೋರ್ ಸಾಫ್ಟ್‌ವೇರ್ ತಂತ್ರಜ್ಞಾನದಂತಹ ಸುಧಾರಿತ ತಂತ್ರಜ್ಞಾನವನ್ನು ಈ ಪ್ಲಾಟ್‌ಫಾರ್ಮ್ ಹೊಂದಿಕೊಳ್ಳುತ್ತದೆ.

ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ ಎಂಜಿ ಒನ್ ಎಸ್‍ಯುವಿ

ಹೊಸ ಎಂಜಿ ಒನ್ ಎಸ್‍ಯುವಿಯು ಅಗ್ರೇಸಿವ್ ಸ್ಟೈಲಿಂಗ್ ಮತ್ತು ಸ್ಪೋರ್ಟಿ ವಿನ್ಯಾಸವನ್ನು ಹೊಂದಿದೆ. ಈ ಎಸ್‍ಯುವಿಯು ಬಲವಾದ ಯುರೋಪಿಯನ್ ಶೈಲಿಯ ಪ್ರೀಮಿಯಂ ಸ್ಪೋರ್ಟಿ ಸ್ಪರ್ಶವನ್ನು ಹೊಂದಿದೆ.

ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ ಎಂಜಿ ಒನ್ ಎಸ್‍ಯುವಿ

ಇನ್ನು ಈ ಎಂಜಿ ಎಸ್‍ಯುವಿಯ ಒಳಬಾಗವು ಹೆಚ್ಚು ಪ್ರೀಮಿಯಂ ಆಗಿದೆ. ಎಂಜಿ ಒನ್‌ನ ಚಿತ್ರಗಳು ಕೂಪೆ-ಎಸ್‌ಯುವಿ ವಿನ್ಯಾಸವನ್ನು ಬಹಿರಂಗಪಡಿಸುತ್ತವೆ. ಇದನ್ನು ಡ್ಯುಯಲ್ ಟೋನ್ ಆರೆಂಜ್ ಮತ್ತು ಬ್ಲ್ಯಾಕ್ ಬಣ್ಣಗಳಿಂದ ಕೂಡಿದೆ.

ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ ಎಂಜಿ ಒನ್ ಎಸ್‍ಯುವಿ

ಈ ಎಂಜಿ ಒನ್ ಎಸ್‍ಯುವಿಯ ಮುಂಭಾಗವು ವಿಶಾಲವಾದ ಗ್ರಿಲ್, ಕೋನೀಯ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ತೀಕ್ಷ್ಣವಾದ ಬಂಪರ್ ಹೊಂದಿದೆ. ಪ್ರಮುಖ ಕ್ರೀಸ್‌ಗಳು ಬಾನೆಟ್‌ನಲ್ಲಿ ಮತ್ತು ಸೈಡ್ ಪ್ರೊಫೈಲ್‌ನಲ್ಲಿ ಸಹ ಗೋಚರಿಸುತ್ತವೆ.

ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ ಎಂಜಿ ಒನ್ ಎಸ್‍ಯುವಿ

ಈ ಹೊಸ ಎಸ್‍ಯುವಿಯು ವ್ಯತಿರಿಕ್ತ ರೂಫ್ ರೈಲ್ ಗಳನ್ನು ಹೊಂದಿದೆ. ಬ್ಲ್ಯಾಕ್ ಪ್ಲಾಸ್ಟಿಕ್ ಕ್ಲಾಡಿಂಗ್ ಅನ್ನು ಬಾಡಿಯ ಸುತ್ತಲೂ ಕಾಣಬಹುದು, ಇದರ ವ್ಹೀಲ್ ಕಮಾನುಗಳು ಸ್ಪೋರ್ಟಿ ಪ್ರೊಫೈಲ್ ನೀಡುತ್ತದೆ. ಈ ಎಸ್‍ಯುವಿ ಐದು-ಸ್ಪೋಕ್ ಅಲಾಯ್ ವ್ಹೀಲ್ ಗಳನ್ನು ಸಹ ಪಡೆಯುತ್ತದೆ

ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ ಎಂಜಿ ಒನ್ ಎಸ್‍ಯುವಿ

ಕೂಪ್ ತರಹದ ಸ್ಟೈಲಿಂಗ್ ಅನ್ನು ಒಳಗೊಂಡಿರುವ ಕಾರಣ ಹಿಂಭಾಗದ ಪ್ರೊಫೈಲ್ ಪ್ರಮುಖವಾಗಿ ಕಾಣುತ್ತದೆ. ಈ ಎಸ್‍ಯುವಿಯು ಮ್ ಎಲ್ಇಡಿ ಟೈಲ್-ಲ್ಯಾಂಪ್ ಗಳು, ಬೂಟ್ ಲಿಡ್ ಬಲವಾದ ಕ್ರೀಸ್‌ಗಳು ಮತ್ತು ಹೈ-ಮೌಂಟೆಡ್ ಸ್ಟಾಪ್ ಲ್ಯಾಂಪ್ ಅನ್ನು ಪಡೆಯುತ್ತದೆ. ಇನ್ನು ಎಕ್ಸಾಟ್ ಪೈಪ್ ಗಳೊಂದಿಗೆ ಡ್ಯುಯಲ್-ಟೋನ್ ಬಂಪರ್ ಪಡೆಯುತ್ತದೆ.

ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ ಎಂಜಿ ಒನ್ ಎಸ್‍ಯುವಿ

ಎಂಜಿ ಒನ್ ಎಸ್‍ಯುವಿಯು 4,579 ಎಂಎಂ ಉದ್ದ, 1,866 ಎಂಎಂ ಅಗಲ ಮತ್ತು 1,609 ಎಂಎಂ ಎತ್ತರವನ್ನು ಹೊಂದಿದೆ. ಇನ್ನು ಈ ಎಸ್‍ಯುವಿಯು 2,670 ಎಂಎಂ ವ್ಹೀಲ್‌ಬೇಸ್ ಹೊಂದಿದೆ ಎಂದು ವರದಿಗಳಾಗಿದೆ.

ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ ಎಂಜಿ ಒನ್ ಎಸ್‍ಯುವಿ

ಈ ಎಸ್‍ಯುವಿಯಲ್ಲಿ 1.5 ಎಲ್ 4-ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಬಹುದು. ಈ ಎಂಜಿನ್ 178 ಬಿಹೆಚ್‌ಪಿ ಪವರ್ ಮತ್ತು 250-260 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಎಂಟಿ ಮತ್ತು ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಅನ್ನು ಒಳಗೊಂಡಿರಬಹುದು.

Most Read Articles

Kannada
English summary
MG ONE SUV Global Debut On July 30, 2021. Read In Kannada.
Story first published: Friday, July 23, 2021, 20:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X