ಅತ್ಯುತ್ತಮ Hyundai ಸೆಕೆಂಡ್ ಹ್ಯಾಂಡ್ ಕಾರುಗಳಿವು

ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕಂಫನಿಯು ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾಗಿದೆ. ಹ್ಯುಂಡೈ ಕಾರುಗಳು ದಶಕಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟದಲ್ಲಿದೆ. ಇದರಿಂದ ಭಾರತೀಯ ಗ್ರಾಹಕರ ಕಾರಿನ ಬಗ್ಗೆ ಇರುವ ಅಭಿರುಚಿಗಳನ್ನು ಅರ್ಥಮಾಡಿಕೊಂಡಿದ್ದಾರೆ.

ಅತ್ಯುತ್ತಮ Hyundai ಸೆಕೆಂಡ್ ಹ್ಯಾಂಡ್ ಕಾರುಗಳಿವು

ಹ್ಯುಂಡೈ ಬ್ರ್ಯಾಂಡ್ ಸರಣಿಯಲ್ಲಿ ಅತ್ಯುತ್ತಮ ಕಾರುಗಳನ್ನು ಒಳಗೊಂಡಿವೆ. ಹ್ಯುಂಡೈ ಕಾರುಗಳು ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಏಕೆಂದರೆ ಹ್ಯುಂಡೈ ಕಾರುಗಳು ವಿಶ್ವಾಸಾರ್ಹವಾಗಿವೆ ಮತ್ತು ಸರ್ವಿಸ್ ಸೆಂಟರ್ ಗಳು ಭಾರತದಾದ್ಯಂತ ಬಹಳ ಪ್ರಬಲವಾಗಿದೆ. ಅಲ್ಲದೇ ಹ್ಯುಂಡೈ ಕಾರುಗಳ ವಿಶೇಷವೆಂದರೆ, ಆಕರ್ಷಕ ವಿನ್ತ್ಯಾಸ, ಕೈಗೆಟುಕುವ ದರ ಮತ್ತು ಅತ್ಯಾಧುನಿಕ ಫೀಚರ್ಸ್ ಗಳಿಂದ ಕೂಡಿರುತ್ತದೆ. ಇನ್ನು ಸೆಕೆಂಡ್ ಹ್ಯಾಂಡ್ ಹ್ಯುಂಡೈ ಕಾರುಗಳನ್ನು ಖರೀದಿಸಲು ಬಯಸುವವರಿಗೆ ಅತ್ಯುತ್ತಮ ಆಯ್ಕೆಗಳು ಇಲ್ಲಿವೆ.

ಅತ್ಯುತ್ತಮ Hyundai ಸೆಕೆಂಡ್ ಹ್ಯಾಂಡ್ ಕಾರುಗಳಿವು

ಹ್ಯುಂಡೈ ಐ10 (2012-2018)

ಈ ಹ್ಯುಂಡೈ ಐ10 ಅತ್ಯುತ್ತಮ ಸಿಟಿ ಕಾರುಗಳಲ್ಲಿ ಒಂದಾಗಿದೆ. ಇದು ಸಾಕಷ್ಟು ಪವರ್ ಫುಲ್ ಮಾದರಿಯಾಗಿದೆ. ಅದ್ಭುತ ವೈಶಿಷ್ಟ್ಯಗಳನ್ನು ನೀಡುತ್ತದೆ ಮತ್ತು ಉತ್ತಮ ಮೈಲೇಜ್ ಅನ್ನು ಒದಗಿಸುತ್ತದೆ. ಸಣ್ಣ ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಲು ಬಯಸುವವರಿಗೆ ಅತ್ಯುತ್ತಮ ಆಯ್ಕೆಯಾಗಿದೆ.

ಅತ್ಯುತ್ತಮ Hyundai ಸೆಕೆಂಡ್ ಹ್ಯಾಂಡ್ ಕಾರುಗಳಿವು

ಈ ಹ್ಯುಂಡೈ ಐ10 ಕಾರಿನಲ್ಲಿ 1.2 ಲೀಟರ್ ಪೆಟ್ರೋಲ್ ಇಂಜಿನ್ ಮತ್ತು 1.2 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇವೆರಡೂ ಎಂಜಿನ್ ಗಳು ಅತ್ಯಂತ ಪರಿಷ್ಕೃತ ಇಂಜಿನ್‌ಗಳಾಗಿವೆ. ಈ ಹ್ಯುಂಡೈ ಐ10 ಮಾದರಿಯನ್ನು ರೂ.2.5-3.5 ಲಕ್ಷಗಳಲ್ಲಿ ಖರೀದಿಸಬಹುದು.

ಅತ್ಯುತ್ತಮ Hyundai ಸೆಕೆಂಡ್ ಹ್ಯಾಂಡ್ ಕಾರುಗಳಿವು

ಹ್ಯುಂಡೈ ಎಲಾಂಟ್ರಾ (2014-2019)

ಈ ಹ್ಯುಂಡೈ ಎಲಾಂಟ್ರಾ ಜನಪ್ರಿಯ ಪ್ರೀಮಿಯಂ ಸೆಡಾನ್ ಆಗಿದೆ. ಇದು ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಸಿವಿಕ್, ಟೊಯೊಟಾ ಕೊರೊಲ್ಲಾ ಮತ್ತು ಸ್ಕೋಡಾ ಆಕ್ಟೇವಿಯಾದಂತಹ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಇದು ಅತ್ಯಂತ ಆರಾಮದಾಯಕವಾದ ಸವಾರಿ ಮತ್ತು ಸುಲಭವಾಗಿ ಓಡಿಸುವುದಕ್ಕೆ ಹೆಸರುವಾಸಿಯಾಗಿದೆ.

ಅತ್ಯುತ್ತಮ Hyundai ಸೆಕೆಂಡ್ ಹ್ಯಾಂಡ್ ಕಾರುಗಳಿವು

2 ಲೀಟರ್ ಪೆಟ್ರೋಲ್ ಯೋಗ್ಯವಾದ ಎಂಜಿನ್ ಅನ್ನು ಒಳಗೊಂಡಿದೆ. ಇದರ ಹೊಸ ರೂಪಾಂತರಗಳು ಆಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ವೆಂಟಿಲೇಟೆಡ್ ಸೀಟ್‌ಗಳಂತಹ ಇನ್ನೂ ಒಂದೆರಡು ವೈಶಿಷ್ಟ್ಯಗಳನ್ನು ಪಡೆದುಕೊಂಡಿವೆ. ಇನ್ನು ಸೆಕೆಂಡ್ ಹ್ಯಾಂಡ್ ಹ್ಯುಂಡೈ ಎಲಾಂಟ್ರಾ (2014-2019) ಮಾದರಿಗಳಿಗೆ ರೂ.6-15 ಲಕ್ಷಗಳ ನಡುವಿನ ಬೆಲೆಯಲ್ಲಿ ಖರೀದಿಸಬಹುದು.

ಅತ್ಯುತ್ತಮ Hyundai ಸೆಕೆಂಡ್ ಹ್ಯಾಂಡ್ ಕಾರುಗಳಿವು

ಹ್ಯುಂಡೈ ವೆರ್ನಾ (2014-2020)

ಹ್ಯುಂಡೈ ವೆರ್ನಾ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ, ವಿಶೇಷವಾಗಿ 1.5 ಲೀಟರ್ ಡೀಸೆಲ್ ಅತ್ಯುನ್ನತ ಪರಿಷ್ಕರಣೆ ಮತ್ತು ವಿಶ್ವಾಸಾರ್ಹತೆಯನ್ನು ನೀಡುತ್ತದೆ. ಹೆಚ್ಚಿನ ಗ್ರಾಹಕರು 1 ಲಕ್ಷಕ್ಕೂ ಹೆಚ್ಚು ಕಿಲೋಮೀಟರ್‌ಗಳವರೆಗೆ ಯಾವುದೇ ಅಡಚಣೆಯಿಲ್ಲದೆ ಓಡಿಸಿದ್ದಾರೆ.

ಅತ್ಯುತ್ತಮ Hyundai ಸೆಕೆಂಡ್ ಹ್ಯಾಂಡ್ ಕಾರುಗಳಿವು

ಈ ಹ್ಯುಂಡೈ ವೆರ್ನಾ ಸೆಡಾನ್ ಕಾರು ಅದರ ಫ್ಯೂಚರಿಸ್ಟಿಕ್ ಮತ್ತು ನಯವಾದ ನೋಟವು ಅದರ ಕಾರಣಕ್ಕೆ ಸಹಾಯ ಮಾಡುತ್ತದೆ ಮತ್ತು ಸಹಜವಾಗಿ ಫೀಚರ್ಸ್ ಕೂಡ. ಇನ್ನು ಹ್ಯುಂಡೈ ವೆರ್ನಾ (2014-2020) ಸೆಕೆಂಡ್ ಹ್ಯಾಂಡ್ ಮಾದರಿಯನ್ನು ಖರೀದಿಸಲು ಬಯಸುವ ಗ್ರಾಹಕರಿಗೆ ಎಷ್ಟು ವರ್ಷ ಮತ್ತು ಅದರ ಸ್ಥಿತಿಗೆ ಅನುಗುಣವಾಗಿ ರೂ.4-10 ಲಕ್ಷಗಳ ನಡುವಿನ ವೆಚ್ಚದಲ್ಲಿ ಖರೀದಿಸಬಹುದು.

ಅತ್ಯುತ್ತಮ Hyundai ಸೆಕೆಂಡ್ ಹ್ಯಾಂಡ್ ಕಾರುಗಳಿವು

ಹ್ಯುಂಡೈ ಐ20 (2012-2020)

ಈ ಹ್ಯುಂಡೈ ಐ20 ಕಾರು ಅತ್ಯುತ್ತಮ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಗಳಲ್ಲಿ ಒಂದಾಗಿದೆ. ಇದು 10 ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿದೆ ಮತ್ತು ಇದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇದರಲ್ಲಿ ನೀಡುತ್ತಿರುವ ವೈಶಿಷ್ಟ್ಯಗಳ ಸಂಪೂರ್ಣ ಪ್ರಮಾಣವು ಶ್ಲಾಘನೀಯವಾಗಿದೆ. ಅದರ ಅಲ್ಟ್ರಾ-ಲೈಟ್ ಸ್ಟೀರಿಂಗ್ ಮತ್ತು ಆಯ್ಕೆಯ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನಿಂದ ಸಿಟಿ ಡ್ರೈವ್ ಮಾಡಲು ಬಹಳ ಜನಪ್ರಿಯವಾಗಿದೆ. ಹ್ಯುಂಡೈ ಐ20 (2012-2020) ಸೆಕೆಂಡ್ ಹ್ಯಾಂಡ್ ಮಾದರಿಯನ್ನು ರೂ.3-8 ಲಕ್ಷಗಳ ನಡುವಿನ ವೆಚ್ಚದಲ್ಲಿ ಖರೀದಿಸಬಹುದು.

ಅತ್ಯುತ್ತಮ Hyundai ಸೆಕೆಂಡ್ ಹ್ಯಾಂಡ್ ಕಾರುಗಳಿವು

ನ್ಯೂ ಜನರೇಷನ್ ಹ್ಯುಂಡೈ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಆರಂಭದಲ್ಲಿ ಹೊಸ ಸಂಚಲವನ್ನು ಮೂಡಿಸಿತು. ಈ ನ್ಯೂ ಜನರೇಷನ್ ಹ್ಯುಂಡೈ ಐ20 ಕಾರು ಅತ್ಯಾಧುನಿಕ ಫೀಚರ್, ಆಕರ್ಷಕ ವಿನ್ಯಾಸ ಮತ್ತು ಪವರ್ ಫುಲ್ ಎಂಜಿನ್ ಅನ್ನು ಹೊಂದಿದೆ. ಈ ಹೊಸ ಕಾರಿನಲ್ಲಿ ಮೂರು ಎಂಜಿನ್ ಆಯ್ಕೆಗಳನ್ನು ಒಳಗೊಂಡಿವೆ. ಈ ಎಲ್ಲಾ ಕಾರಣದಿಂದ ಈ ಹೊಸ ಹ್ಯುಂಡೈ ಕಾರು ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಗ್ರಾಹಕರನ್ನು ಸೆಳೆದಿದೆ. ಇದು ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಬಲೆನೊ, ಟಾಟಾ ಆಲ್ಟ್ರೋಜ್, ಫೋಕ್ಸ್‌ವ್ಯಾಗನ್ ಪೊಲೊ ಮತ್ತು ಹೋಂಡಾ ಜಾಝ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

ಅತ್ಯುತ್ತಮ Hyundai ಸೆಕೆಂಡ್ ಹ್ಯಾಂಡ್ ಕಾರುಗಳಿವು

ಹ್ಯುಂಡೈ ಸೊನಾಟಾ (2004-2015)

ಹ್ಯುಂಡೈ ಸೊನಾಟಾ ಬಹುಶಃ ಆ ಕಾಲದ ಅತ್ಯಂತ ಪ್ರೀಮಿಯಂ ಸೆಡಾನ್ ಆಗಿತ್ತು. ಮರ್ಸಿಡಿಸ್ ಶೈಲಿಯ ಹೆಡ್‌ಲೈಟ್‌ಗಳು ಮತ್ತು ಗೋಲ್ಡ್ ಬಣ್ಣವು ಹೆಚ್ಚು ಎತ್ತರದ ವಿಭಾಗದ ಕಾರಿನಂತೆ ಕಾಣುವಂತೆ ಮಾಡಿದೆ. ಜನರು ಅಂದು ಖರ್ಚು ಮಾಡಲು ಸಿದ್ಧರಿದ್ದಕ್ಕಿಂತ ಹೆಚ್ಚಿನ ಬೆಲೆಯನ್ನು ಹೊಂದಿರುವುದರಿಂದ ಇದು ಭಾರತದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿಲ್ಲ.

ಅತ್ಯುತ್ತಮ Hyundai ಸೆಕೆಂಡ್ ಹ್ಯಾಂಡ್ ಕಾರುಗಳಿವು

ಆದರೆ ಹುಂಡೈ ಸೊನಾಟಾ ಕಾರು ಪ್ರೀಮಿಯಂ ಫೀಚರ್ಸ್ ಗಳನ್ನು ಒಳಗೊಂಡಿತ್ತು. ಅಲ್ಲದೇ ಇದರ ಇಂಟಿರಿಯರ್ ಬಹುಐಷಾರಾಮಿ ಕಾರಿನಂತೆ ಕಾಣುತ್ತಿತ್ತು. ಅಲ್ಲದೇ ಈ ಕಾರಿನ ಐಷಾರಾಮಿ ಲುಕ್ ಅನ್ನು ಹೊಂದಿದೆ, ಹುಂಡೈ ಸೊನಾಟಾ (2004-2015)ಸೆಕೆಂಡ್ ಹ್ಯಾಂಡ್ ಮಾದರಿಯನ್ನು ರೂ.5-7 ಲಕ್ಷಗಳ ನಡುವಿನ ವೆಚ್ಚದಲ್ಲಿ ಖರೀದಿಸಬಹುದು. ಅತ್ಯುತ್ತಮ ಸೆಕೆಂಡ್ ಹ್ಯಾಂಡ್ ಹುಂಡೈ ಕಾರುಗಳಲ್ಲಿ ಈ ಸೊನಾಟಾ ಒಂದಾಗಿದೆ.

Most Read Articles

Kannada
English summary
Top best used hyundai cars i10 i20 elantra verna sonata details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X