ಅಕ್ಟೋಬರ್ ತಿಂಗಳಿನಲ್ಲಿ 12,440 ಕಾರುಗಳನ್ನು ಮಾರಾಟಗೊಳಿಸಿದ Toyota

ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (TKM) 2021ರ ಅಕ್ಟೋಬರ್ ತಿಂಗಳಿನ ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ವರದಿಗಳ ಪ್ರಕಾರ, ಕಳೆದ ತಿಂಗಳು ಟೊಯೊಟಾ ಕಂಪನಿಯು 12,440 ಯುನಿಟ್‌ಗಳನ್ನು ಮಾರಾಟಗೊಳಿಸಿವೆ.

ಅಕ್ಟೋಬರ್ ತಿಂಗಳಿನಲ್ಲಿ 12,440 ಕಾರುಗಳನ್ನು ಮಾರಾಟಗೊಳಿಸಿದ Toyota

ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಟೊಯೊಟಾ ಕಂಪನಿಯು 12,373 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.1 ರಷ್ಟು ಹೆಚ್ಚಳವಾಗಿದೆ. ಇನ್ನು ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಒಟ್ಟು 9,284 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.34 ರಷ್ಟು ಮಾಸಿಕ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದೆ. ಮಾಸಿಕ ಕಾರು ಮಾರಾಟದಲ್ಲಿ ಟೊಯೊಟಾ ಕಂಪನಿಯು ಭರ್ಜರಿ ಯಶಸ್ವಿಯನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.

ಅಕ್ಟೋಬರ್ ತಿಂಗಳಿನಲ್ಲಿ 12,440 ಕಾರುಗಳನ್ನು ಮಾರಾಟಗೊಳಿಸಿದ Toyota

2021ರ ಕ್ಯಾಲೆಂಡರ್ ವರ್ಷದಲ್ಲಿ, ಟೊಯೊಟಾ ಒಟ್ಟು 1,06,993 ಯುನಿಟ್‌ಗಳನ್ನು (ಜನವರಿಯಿಂದ ಅಕ್ಟೋಬರ್ 2021 ರ ಅವಧಿ) ಮಾರಾಟ ಗಳಿಸುವಲ್ಲಿ ಯಶಸ್ವಿಯಾಗಿದೆ, ಕಳೆದ ವರ್ಷ ಇದೇ ಅವಧಿಯಲ್ಲಿ 60,116 ಯುನಿಟ್‌ಗಗಳಿಗೆ ಹೋಲಿಸಿದರೆ ಟೊಯೊಟಾ ಕಂಪನಿಯು ಶೇಕಡಾ 78 ರಷ್ಟು. ಬೆಳವಣಿಗೆಯನ್ನು ಗಳಿಸಿದೆ.

ಅಕ್ಟೋಬರ್ ತಿಂಗಳಿನಲ್ಲಿ 12,440 ಕಾರುಗಳನ್ನು ಮಾರಾಟಗೊಳಿಸಿದ Toyota

ಟಿಕೆಎಂ ಅಸೋಸಿಯೇಟ್ ಜನರಲ್ ಮ್ಯಾನೇಜರ್ ವಿ.ವೈಸ್‌ಲೈನ್ ಸಿಗಮಣಿ ಅವರು ಮಾತನಾಡಿ, ನಮ್ಮ ಪ್ರಮುಖ ಮಾದರಿಗಳಾದ ಇನೋವಾ ಕ್ರಿಸ್ಟಾ ಮತ್ತು ಫಾರ್ಚುನರ್, ತಮ್ಮ ವಿಭಾಗಗಳಲ್ಲಿ ಪ್ರಾಬಲ್ಯ ಸಾಧಿಸುವುದನ್ನು ಮುಂದುವರಿಸುತ್ತವೆ. ಟೊಯೊಟಾ ವೆಲ್‌ಫೈರ್ ಕೂಡ ಅಸಾಧಾರಣವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ, ಬ್ರ್ಯಾಂಡ್‌ನಲ್ಲಿ ಗ್ರಾಹಕರ ವಿಶ್ವಾಸವನ್ನು ಪುನರುಚ್ಚರಿಸುತ್ತದೆ. ಗ್ಲಾಂಝಾ ಮತ್ತು ಅರ್ಬನ್ ಕ್ರೂಸರ್ ಉತ್ತಮ ಬುಕ್ಕಿಂಗ್ ಆರ್ಡರ್‌ಗಳನ್ನು ಗಳಿಸುತ್ತಿವೆ ಮತ್ತು ಈ ವಿಭಾಗಗಳಲ್ಲಿ ಬಾಕಿ ಇರುವ ಆರ್ಡರ್‌ಗಳನ್ನು ತಕ್ಷಣವೇ ಪೂರೈಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಅಕ್ಟೋಬರ್ ತಿಂಗಳಿನಲ್ಲಿ 12,440 ಕಾರುಗಳನ್ನು ಮಾರಾಟಗೊಳಿಸಿದ Toyota

ಟೊಯೊಟಾ ಪ್ರಸ್ತುತ ಇನ್ನೋವಾ ಕ್ರಿಸ್ಟಾ ಮತ್ತು ಫಾರ್ಚುನರ್ ಅನ್ನು ದೇಶೀಯ ಮಾರುಕಟ್ಟೆಯಲ್ಲಿ ತನ್ನ ಅತ್ಯುತ್ತಮ-ಮಾರಾಟದ ಮಾದರಿಗಳಾಗಿ ಹೊಂದಿದೆ. ಫಾರ್ಚುನರ್ ಪೂರ್ಣ-ಗಾತ್ರದ ಎಸ್‍ಯುವಿ ವಿಭಾಗವನ್ನು ಸುಲಭವಾಗಿ ಮುನ್ನಡೆಸುತ್ತದೆ ಮತ್ತು ಫೋರ್ಡ್‌ನ ಎಂಡೀವರ್‌ನ ನಿರ್ಗಮನವು ಖಂಡಿತವಾಗಿಯೂ ನೆರವಾಗಿದೆ.

ಅಕ್ಟೋಬರ್ ತಿಂಗಳಿನಲ್ಲಿ 12,440 ಕಾರುಗಳನ್ನು ಮಾರಾಟಗೊಳಿಸಿದ Toyota

ಇನ್ನು ಟೊಯೊಟಾ ಕಂಪನಿಯು ತನ್ನ ಜನಪ್ರಿಯ ಎಂಪಿವಿ ಮಾದರಿಯಾದ ಇನೋವಾ ಕ್ರಿಸ್ಟಾ ಮಾದರಿಯಲ್ಲಿ ಸೀಮಿತ ಅವಧಿಗಾಗಿ ಲಿಮಿಟೆಡ್ ಎಡಿಷನ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಇನೋವಾ ಕ್ರಿಸ್ಟಾ ಕಾರು ಮಾದರಿಯ ಮೂಲಕ ಹಲವಾರು ಹೊಸ ದಾಖಲೆಗಳನ್ನು ತನ್ನದಾಗಿಸಿಕೊಂಡಿರುವ ಟೊಯೊಟಾ ಕಂಪನಿಯು ಮುಂಬರುವ ದೀಪಾವಳಿ ವಿಶೇಷವಾಗಿ ಸೀಮಿತ ಅವಧಿಗಾಗಿ ಲಿಮಿಟೆಡ್ ಎಡಿಷನ್ ಪರಿಚಯಿಸಿದೆ.

ಅಕ್ಟೋಬರ್ ತಿಂಗಳಿನಲ್ಲಿ 12,440 ಕಾರುಗಳನ್ನು ಮಾರಾಟಗೊಳಿಸಿದ Toyota

ಈ ಹೊಸ ಕಾರು ಸ್ಟ್ಯಾಂಡರ್ಡ್ ಮಾದರಿಯಲ್ಲೇ ಎಂಜಿನ್ ಆಯ್ಕೆ ಹೊಂದಿದ್ದರೂ ಕೆಲವು ಹೆಚ್ಚುವರಿ ಪ್ರೀಮಿಯಂ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಈ ಹೊಸ ಕಾರಿನಲ್ಲಿ ಕಂಪನಿಯು ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋ, ಹೊಸ ಮಾದರಿಯ ಡಿಸ್‌ಪ್ಲೇ ಮತ್ತು ಅಡ್ವಾನ್ಸ್ ಕನೆಕ್ಟಿವಿಟಿ ಸೌಲಭ್ಯದ ಜೊತೆಗೆ ಮಲ್ಟಿ ಟೆರೇನ್ ಮಾನಿಟರ್ ಸಿಸ್ಟಂ(360 ಡಿಗ್ರಿ ಕ್ಯಾಮೆರಾ), ವರ್ಚುವಲ್ ಬರ್ಡ್ ಐ ವ್ಯೂ, ಹೆಡ್ಸ್ ಅಪ್ ಡಿಸ್‌ಪ್ಲೇ, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ವೈರ್‌ಲೆಸ್ ಚಾರ್ಜರ್, ಡೋರ್ ಎಡ್ಜ್ ಲೈಟಿಂಗ್ ನೀಡಲಾಗಿದೆ.

ಅಕ್ಟೋಬರ್ ತಿಂಗಳಿನಲ್ಲಿ 12,440 ಕಾರುಗಳನ್ನು ಮಾರಾಟಗೊಳಿಸಿದ Toyota

2005ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡಿದ್ದ ಇನೋವಾ ಕಾರು ಮಾದರಿಯು ಈ ತನಕವು ಎಂಪಿವಿ ಮಾರಾಟದಲ್ಲಿ ಮುಂಚೂಣಿಯಲ್ಲಿದೆ. ಹೊಸ ಕಾರಿನಲ್ಲಿ ಟೊಯೊಟಾ ಕಂಪನಿಯು ಕಾಲ ಕಾಲಕ್ಕೆ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸುತ್ತಾ ಬೇಡಿಕೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.

ಅಕ್ಟೋಬರ್ ತಿಂಗಳಿನಲ್ಲಿ 12,440 ಕಾರುಗಳನ್ನು ಮಾರಾಟಗೊಳಿಸಿದ Toyota

ಹೊಸ ತಲೆಮಾರಿನೊಂದಿಗೆ ಮಾರಾಟವಾಗುತ್ತಿರುವ ಇನೋವಾ ಕ್ರಿಸ್ಟಾ ಕಾರು 2016ರಲ್ಲಿ ನ್ಯೂ ಜನರೇಷನ್ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೊಂಡಿತ್ತು. ಇದೀಗ 2021ರ ಮಾದರಿಯಾಗಿ ಫೇಸ್‌ಲಿಫ್ಟ್ ಮಾದರಿಯನ್ನು ಬಿಡಗಡೆ ಮಾಡಲಾಗಿದ್ದು, ಹಳೆಯ ಆವೃತ್ತಿಗಿಂತಲೂ ಫೇಸ್‌ಲಿಫ್ಟ್ ಮಾದರಿಯು ಸಾಕಷ್ಟು ಬದಲಾವಣೆಗಳೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಿದೆ.

ಅಕ್ಟೋಬರ್ ತಿಂಗಳಿನಲ್ಲಿ 12,440 ಕಾರುಗಳನ್ನು ಮಾರಾಟಗೊಳಿಸಿದ Toyota

ಟೊಯೊಟಾ ತನ್ನ ಫಾರ್ಚುನರ್ ಲೆಜೆಂಡರ್ 4X4 ವೆರಿಯೆಂಟ್ ಮಾದರಿಯು ಕೊನೆಗೂ ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಟೊಯೊಟಾ ಫಾರ್ಚುನರ್ ಲೆಜೆಂಡರ್ 4X4 ವೆರಿಯೆಂಟ್ ಮಾದರಿಯನ್ನು ಖರೀದಿಸಲು ಬಯಸುವ ಗ್ರಾಹಕರು ಆನ್‌ಲೈನ್‌ನಲ್ಲಿ ಅಥವಾ ಹತ್ತಿರದ ಅಧಿಕೃತ ಟೊಯೊಟಾ ಡೀಲರ್‌ಶಿಪ್‌ಗೆ ತೆರಳಿ ಬುಕ್ಕಿಂಗ್ ಮಾಡಿಕೊಳ್ಳಬಹುದು. 2021ರ ಆರಂಭದಲ್ಲಿ ಬಿಡುಗಡೆಗೊಂಡ ಟೊಯೊಟಾ ಫಾರ್ಚುನರ್ ಲೆಜೆಂಡರ್ 4X2 ವೆರಿಯಂಟ್ 2,700ಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ ಎಂದು ಕಂಪನಿಯು ಬಹಿರಂಗಪಡಿಸಿದೆ.

ಅಕ್ಟೋಬರ್ ತಿಂಗಳಿನಲ್ಲಿ 12,440 ಕಾರುಗಳನ್ನು ಮಾರಾಟಗೊಳಿಸಿದ Toyota

ಟೊಯೊಟಾ ಫಾರ್ಚುನರ್ ಲೆಜೆಂಡರ್ 4X4 ವೆರಿಯೆಂಟ್ ಮಾದರಿಯು ಡ್ಯುಯಲ್ ಟೋನ್ ಪರ್ಲ್ ವೈಟ್ ಜೊತೆಗೆ ಬ್ಲಾಕ್ ರೂಫ್ ಕಲರ್ ಸ್ಕೀಮ್ ನಲ್ಲಿ ನೀಡಲಾಗುತ್ತಿದೆ. ಇದು ಪ್ರೀಮಿಯಂ 11 ಸ್ಪೀಕರ್‌ಗಳಾದ ಜೆಬಿಎಲ್ ಆಡಿಯೋ ಸಿಸ್ಟಂ, ಬ್ಯಾಕ್ ಡೋರ್ ಕಿಕ್ ಸೆನ್ಸರ್ ಮತ್ತು ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜಿಂಗ್‌ನಂತಹ ವೈಶಿಷ್ಟ್ಯಗಳನ್ನು ಪಡೆಯುತ್ತದೆ. ಆದರೆ 4X2 ಕೌಂಟರ್‌ಪಾರ್ಟ್‌ನಂತೆಯೇ, ಲೆಂಜೆಂಡರ್ 4X4 ವೆರಿಯೆಂಟ್ ಡ್ಯುಯಲ್-ಟೋನ್ (ಕಪ್ಪು ಮತ್ತು ಮರೂನ್) ಇಂಟಿರಿಯರ್ ಥೀಮ್‌ನೊಂದಿಗೆ ಬರುತ್ತದೆ ಮತ್ತು ಸ್ಟೀರಿಂಗ್ ವೀಲ್ ಮತ್ತು ಕನ್ಸೋಲ್ ಬಾಕ್ಸ್‌ಗಾಗಿ ಕಾಂಟ್ರಾಸ್ಟ್ ಸ್ಟಿಚಿಂಗ್ ಹೊಂದಿದೆ.

ಅಕ್ಟೋಬರ್ ತಿಂಗಳಿನಲ್ಲಿ 12,440 ಕಾರುಗಳನ್ನು ಮಾರಾಟಗೊಳಿಸಿದ Toyota

ಈ ಟೊಯೊಟಾ ಫಾರ್ಚುನರ್ ಲೆಜೆಂಡರ್ 4X4 ವೆರಿಯೆಂಟ್ ನಲ್ಲಿ 2.8 ಲೀಟರ್ ಡೀಸೆಲ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 204 ಬಿಹೆಚ್‍ಪಿ ಪವರ್ ಮತ್ತು 500 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು ಆರು ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ. ಹೊಸ ಟೊಯೊಟಾ ಫಾರ್ಚುನರ್ ಲೆಜೆಂಡರ್ 4X2 ಮಾದರಿಗೆ ಹೋಲಿಸಿದರೆ 4X4 ವೆರಿಯೆಂಟ್ ಯಾವುದೇ ವಿಶೇಷ ಬಾಹ್ಯ ಬಿಟ್‌ಗಳನ್ನು ಪಡೆಯುವುದಿಲ್ಲ. ಈ ಹೊಸ ಲೆಜೆಂಡರ್ ಎಸ್‍ಯುವಿಯು ಹೆಚ್ಚು ಅಗ್ರೇಸಿವ್ ಮತ್ತು ಸ್ಪೋರ್ಟಿಯರ್ ವಿನ್ಯಾಸವನ್ನು ಹೊಂದಿದೆ.

Most Read Articles

Kannada
Read more on ಟೊಯೊಟಾ toyota
English summary
Toyota kirloskar sold 12440 units in october 2021 details
Story first published: Monday, November 1, 2021, 17:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X