ಸುಸ್ಥಿರ ಇಂಧನ ಅಭಿವೃದ್ಧಿಗಾಗಿ HIF ಗ್ಲೋಬಲ್‌ನಲ್ಲಿ 569 ಕೋಟಿ ರೂ. ಹೂಡಿಕೆ ಮಾಡಿದ ಪೋರ್ಷೆ

ಐಷಾರಾಮಿ ಕಾರು ತಯಾರಕ ಕಂಪನಿಯಾದ ಪೋರ್ಷೆ, ಸುಸ್ಥಿರ ಚಲನಶೀಲತೆಯ ಕಡೆಗೆ ತನ್ನ ಪ್ರಯತ್ನದ ಭಾಗವಾಗಿ HIF ಗ್ಲೋಬಲ್‌ನಲ್ಲಿ 75 ಮಿಲಿಯನ್ ಡಾಲರ್ (569 ಕೋಟಿ ರೂ.) ಹೂಡಿಕೆಯನ್ನು ಘೋಷಿಸಿದೆ. HIF ಗ್ಲೋಬಲ್ ಎಂಬುದು ಸುಸ್ಥಿರ ಇಂಧನ ಯೋಜನೆಗಳಿಗಾಗಿ ಅಂತರಾಷ್ಟ್ರೀಯವಾಗಿ ಗುರುತಿಸಿಕೊಂಡಿರುವ ಬೃಹತ್ ಸಂಸ್ಥೆಯಾಗಿದೆ.

ಸುಸ್ಥಿರ ಇಂಧನ ಅಭಿವೃದ್ಧಿಗಾಗಿ HIF ಗ್ಲೋಬಲ್‌ನಲ್ಲಿ 569 ಕೋಟಿ ರೂ. ಹೂಡಿಕೆ ಮಾಡಿದ ಪೋರ್ಷೆ

ಪೋರ್ಷೆ ಮತ್ತು ಎಚ್‌ಐಎಫ್ ಗ್ಲೋಬಲ್ ಒಟ್ಟಾಗಿ ಪೋರ್ಷೆ ಸ್ಪೋರ್ಟ್ಸ್ ಕಾರುಗಳಲ್ಲಿ ಮತ್ತು ಮೋಟಾರ್‌ಸ್ಪೋರ್ಟ್‌ನಲ್ಲಿ ಇ-ಫ್ಯುಯೆಲ್‌ ಅಭಿವೃದ್ಧಿ ಪಡಿಸುವ ನಿರೀಕ್ಷೆಯಿದೆ. ಪ್ರಪಂಚದಾದ್ಯಂತ ಸಾರ್ವಜನಿಕರಲ್ಲಿ ಹಸಿರು ಮತ್ತು ಹೆಚ್ಚು ಸಮರ್ಥನೀಯ ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ಪರಿಸರ ಸ್ನೇಹಿ ವಾಹನ ಬಳಕೆಯ ಪ್ರಜ್ಞೆಯು ಹುಟ್ಟಿಕೊಂಡಿದೆ.

ಸುಸ್ಥಿರ ಇಂಧನ ಅಭಿವೃದ್ಧಿಗಾಗಿ HIF ಗ್ಲೋಬಲ್‌ನಲ್ಲಿ 569 ಕೋಟಿ ರೂ. ಹೂಡಿಕೆ ಮಾಡಿದ ಪೋರ್ಷೆ

ಈ ನಿಟ್ಟಿನಲ್ಲಿ ಆಟೋಮೊಬೈಲ್ ಉದ್ಯಮದಲ್ಲಿ, ಬಹುತೇಕ ಎಲ್ಲಾ ಬ್ರ್ಯಾಂಡ್‌ಗಳು ಎಲೆಕ್ಟ್ರಿಕ್ ವಾಹನಗಳು ಮಾತ್ರ ನಮಗೆ ಮುಂದಿನ ದಾರಿ ಎಂದು ಭಾವಿಸುತ್ತಿವೆ. ಈ ನಡುವೆ ಕೆಲವು ಬ್ರಾಂಡ್‌ಗಳು ವಿದ್ಯುತ್‌ ಚಾಲಿತ ವಾಹನಗಳು ಮಾತ್ರ ನಮಗೆ ಆಯ್ಕೆಯಾಗಿಲ್ಲ, ಬದಲಾಗಿ ಸಮರ್ಥನೀಯ ಇಂಧನಗಳೂ ನಮಗೆ ಮತ್ತೊಂದು ಆಯ್ಕೆಯಾಗಲಿವೆ ಎಂದು ಹೇಳುತ್ತಿರುವ ಕಂಪನಿಗಳಲ್ಲಿ ಪೋರ್ಷೆ ಕೂಡ ಒಂದಾಗಿದೆ.

ಸುಸ್ಥಿರ ಇಂಧನ ಅಭಿವೃದ್ಧಿಗಾಗಿ HIF ಗ್ಲೋಬಲ್‌ನಲ್ಲಿ 569 ಕೋಟಿ ರೂ. ಹೂಡಿಕೆ ಮಾಡಿದ ಪೋರ್ಷೆ

ಕಳೆದ ಹಲವು ವರ್ಷಗಳಿಂದಲೂ ಪೋರ್ಷೆ ಭವಿಷ್ಯದ ಕಾರುಗಳಿಗೆ ಶಕ್ತಿ ತುಂಬುವ ಸುಸ್ಥಿರ ಇಂಧನ ಆಂತರಿಕ ದಹನಕಾರಿ ಎಂಜಿನ್‌ಗಳ ಕುರಿತು ಹೇಳುತ್ತಲೇ ಬಂದಿದೆ. ಇಲ್ಲಿ ಹಲವರಿಗೆ ಎಲೆಕ್ಟ್ರಿಕ್ ವಾಹನಗಳ ತಯಾರಿ ಕುರಿತು ಪೋರ್ಷೆ ಕಂಪನಿಗೆ ತಪ್ಪು ಕಲ್ಪನೆ ಇದೆ ಎಂದು ಭಾವಿಸಿದ್ದಾರೆ. ಆದರೆ ಇದು ಶುದ್ಧ ಸುಳ್ಳು. ಪೋರ್ಷೆ ಕೂಡ EV ಶಕ್ತಿಯನ್ನು ನಂಬುತ್ತದೆ.

ಸುಸ್ಥಿರ ಇಂಧನ ಅಭಿವೃದ್ಧಿಗಾಗಿ HIF ಗ್ಲೋಬಲ್‌ನಲ್ಲಿ 569 ಕೋಟಿ ರೂ. ಹೂಡಿಕೆ ಮಾಡಿದ ಪೋರ್ಷೆ

ವಾಸ್ತವವಾಗಿ, ಪೋರ್ಷೆ ಟೇಕಾನ್ ಮಾದರಿಯೊಂದಿಗೆ ಶುದ್ಧ ಎಲೆಕ್ಟ್ರಿಕ್ ಕಾರನ್ನು ನಿರ್ಮಿಸಿ ಅದರ ಎಂಜಿನಿಯರಿಂಗ್ ಸಾಮರ್ಥ್ಯವನ್ನು ಸಾಬೀತುಪಡಿಸಿತ್ತು. ಆದರೂ, ಬ್ರ್ಯಾಂಡ್ ಹೆಚ್ಚು ಇವಿ ವಾಹನಗಳತ್ತ ಗಮನಹರಿಸದೆ ಇಂಗಾಲದ ತಟಸ್ಥ ಆಂತರಿಕ ದಹನಕಾರಿ ಎಂಜಿನ್‌ಗಳ ಬಳಕೆಗೆ ಶ್ರಮಿಸುತ್ತಿದೆ. ಪೋರ್ಷೆ ಒಂದು ಉತ್ಸಾಹಿಗಳ ಬ್ರ್ಯಾಂಡ್ ಆಗಿದ್ದು, ಅದು ಹಾಗೆಯೇ ಉಳಿಯಲು ಬಯಸುತ್ತಿದೆ. ಬ್ರ್ಯಾಂಡ್‌ನ ಹೆಚ್ಚಿನ ಮಾದರಿಗಳು ಶಾಶ್ವತ ಉತ್ಸಾಹಿಗಳ ಮೆಚ್ಚಿನವುಗಳಾಗಿವೆ.

ಸುಸ್ಥಿರ ಇಂಧನ ಅಭಿವೃದ್ಧಿಗಾಗಿ HIF ಗ್ಲೋಬಲ್‌ನಲ್ಲಿ 569 ಕೋಟಿ ರೂ. ಹೂಡಿಕೆ ಮಾಡಿದ ಪೋರ್ಷೆ

911 ಶ್ರೇಣಿಯ ಮಾಡೆಲ್‌ಗಳು ಎಂದಿಗೂ ವೋಗ್‌ನಿಂದ ಹೊರಗುಳಿಯುವುದಿಲ್ಲ, ಕಾರಣ ಕ್ಯಾರೆರಾ GT ನಂತಹ ಕಾರುಗಳು ವೇಗವಾಗಿ ಓಡಿಸಲು ಮತ್ತು ಹೆಚ್ಚು ತೊಡಗಿಸಿಕೊಳ್ಳುವ ಅನುಭವ ನೀಡುತ್ತವೆ. Porsche Cayenne ವಿಶ್ವದ ಅತ್ಯಂತ ವೇಗವಾಗಿ ಮತ್ತು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ SUV ಗಳಲ್ಲಿ ಒಂದಾಗಿದೆ. Boxster ಮತ್ತು Cayman ನಂತಹ ಸಣ್ಣ ಪೋರ್ಷೆಗಳು ಹೆಚ್ಚು ಜನಪ್ರಿಯ ಮಾದರಿಗಳಾಗಿವೆ.

ಸುಸ್ಥಿರ ಇಂಧನ ಅಭಿವೃದ್ಧಿಗಾಗಿ HIF ಗ್ಲೋಬಲ್‌ನಲ್ಲಿ 569 ಕೋಟಿ ರೂ. ಹೂಡಿಕೆ ಮಾಡಿದ ಪೋರ್ಷೆ

ಮಾರಾಟದಲ್ಲಿರುವ ಉತ್ಸಾಹಿ ಕಾರುಗಳ ಶ್ರೇಣಿಯೊಂದಿಗೆ, ಪೋರ್ಷೆ ಈ ಉತ್ಸಾಹಿಗಳನ್ನು ಭವಿಷ್ಯದಲ್ಲಿಯೂ ಸಹ ಇರಿಸಿಕೊಳ್ಳಲು ಬಯಸುತ್ತಿದ್ದು ಇದಕ್ಕಾಗಿಯೇ ಸುಸ್ಥಿರ ಇಂಧನಗಳ ಅಭಿವೃದ್ಧಿಗೆ ಈ ಸಮಯವನ್ನು ಬಳಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಸುಸ್ಥಿರ ಇಂಧನಗಳು ಮತ್ತು eFuels ಅಭಿವೃದ್ಧಿಯಲ್ಲಿ HIF ಗ್ಲೋಬಲ್ ವ್ಯವಹಾರದಲ್ಲಿ ಅತ್ಯುತ್ತಮವಾಗಿರುವ ಕಾರಣ ಪೋರ್ಷೆ ಕೂಡ ಹೂಡಿಕೆಯನ್ನು ಮಾಡುತ್ತಿದೆ.

ಸುಸ್ಥಿರ ಇಂಧನ ಅಭಿವೃದ್ಧಿಗಾಗಿ HIF ಗ್ಲೋಬಲ್‌ನಲ್ಲಿ 569 ಕೋಟಿ ರೂ. ಹೂಡಿಕೆ ಮಾಡಿದ ಪೋರ್ಷೆ

ಈ 75 ಮಿಲಿಯನ್ ಡಾಲರ್ ಹೂಡಿಕೆಯನ್ನು ಇನ್ನಷ್ಟು ಆಸಕ್ತಿದಾಯಕವಾಗಿಸಲು ಪೋರ್ಷೆ ಪಾಲುದಾರರಾದ ಸೀಮೆನ್ಸ್ ಎನರ್ಜಿ ಮತ್ತು ಎಕ್ಸಾನ್ಮೊಬಿಲ್ ಕೂಡ ಇದರಲ್ಲಿ ತೊಡಗಿಸಿಕೊಂಡಿವೆ. ಈ ಕಂಪನಿಗಳು ವಿಶ್ವದ ಅತಿದೊಡ್ಡ ಇಂಧನ ಮತ್ತು ತೈಲ ಉತ್ಪಾದಕರಲ್ಲಿ ಒಂದಾಗಿದ್ದು, ಈ ಬ್ರ್ಯಾಂಡ್‌ಗಳು ಕೆಲವು ಇಫ್ಯುಯೆಲ್‌ಗಳನ್ನು ಅಭಿವೃದ್ಧಿಪಡಿಸಲು ಒಟ್ಟಾಗಿ ಶ್ರಮಿಸುತ್ತಿವೆ.

ಸುಸ್ಥಿರ ಇಂಧನ ಅಭಿವೃದ್ಧಿಗಾಗಿ HIF ಗ್ಲೋಬಲ್‌ನಲ್ಲಿ 569 ಕೋಟಿ ರೂ. ಹೂಡಿಕೆ ಮಾಡಿದ ಪೋರ್ಷೆ

ಈ ಸಂಶ್ಲೇಷಿತ ಇಂಧನಗಳು ದಹನಕಾರಿ ಎಂಜಿನ್‌ಗಳನ್ನು ಇಂಗಾಲದ ತಟಸ್ಥ ರೀತಿಯಲ್ಲಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತವೆ. ಈ ಇಂಧನಗಳ ಉತ್ಪಾದನೆಯು ಸಹ ಪವನ ಶಕ್ತಿಯಿಂದ ನಡೆಸಲ್ಪಡುತ್ತದೆ. ಈ ಮೂಲಕ ಮಾಲಿನ್ಯವನ್ನು ಉಂಟುಮಾಡುವುದಿಲ್ಲ. ಈ ಇಂಧನಗಳ ಉತ್ಪಾದನೆಯು 2022ರ ಹೊತ್ತಿಗೆ ಪ್ರಾರಂಭವಾಗುವ ನಿರೀಕ್ಷೆಯಿದೆ.

ಸುಸ್ಥಿರ ಇಂಧನ ಅಭಿವೃದ್ಧಿಗಾಗಿ HIF ಗ್ಲೋಬಲ್‌ನಲ್ಲಿ 569 ಕೋಟಿ ರೂ. ಹೂಡಿಕೆ ಮಾಡಿದ ಪೋರ್ಷೆ

ಪೋರ್ಷೆ ತನ್ನ ಪ್ರಮುಖ ಮೋಟಾರ್‌ಸ್ಪೋರ್ಟ್ ಯೋಜನೆಗಳಲ್ಲಿ ಈ ಇಂಧನಗಳನ್ನು ಬಳಸಲು ಯೋಜಿಸಿದೆ. ಪೋರ್ಷೆ ಅನುಭವ ಕೇಂದ್ರಗಳಲ್ಲಿ ಮತ್ತು ಪೋರ್ಷೆ ಕಾರ್ಖಾನೆಯನ್ನು ತೊರೆಯುವಾಗ ಆಂತರಿಕ ದಹನಕಾರಿ ಕಾರುಗಳನ್ನು ಇಂಧನಗೊಳಿಸಲು ಸಹ ಬಳಸಲಾಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಸುಸ್ಥಿರ ಇಂಧನ ಅಭಿವೃದ್ಧಿಗಾಗಿ HIF ಗ್ಲೋಬಲ್‌ನಲ್ಲಿ 569 ಕೋಟಿ ರೂ. ಹೂಡಿಕೆ ಮಾಡಿದ ಪೋರ್ಷೆ

ಮೇಲೆ ತಿಳಿಸಿದಂತೆ, ಪೋರ್ಷೆ ಉತ್ಸಾಹಿಗಳ ಬ್ರಾಂಡ್ ಆಗಿದ್ದು, ಉತ್ಸಾಹಿಗಳಿಗಾಗಿ ಮಾಲಿನ್ಯ ನಿಯಂತ್ರಣ ಮಾಡಲು ಸುಸ್ಥಿರ ಇಂಧನ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಕೆಲವು ವೇಗದ ಎಲೆಕ್ಟ್ರಿಕ್ ಕಾರು ಇದ್ದರೂ ಸಹ, ಆಂತರಿಕ ದಹನಕಾರಿ ಎಂಜಿನ್‌ಗಳನ್ನು ಬಯಸುವ ಉತ್ಸಾಹಿಗಳು ಬಹಳಷ್ಟು ಮಂದಿ ಇದ್ದಾರೆ. ಪೋರ್ಷೆ ಈ ಆಂತರಿಕ ದಹನಕಾರಿ ಎಂಜಿನ್‌ಗಳನ್ನು ಚಾಲಿತಗೊಳಿಸಲು ಸಮರ್ಥನೀಯ ಇಂಧನಗಳನ್ನು ಬಳಸುವ ಆಸಕ್ತಿ ತೋರುತ್ತಿದೆ.

Most Read Articles

Kannada
English summary
Porsche invests rs 569 crore in sustainable fuels porsche hif global to develop efuels
Story first published: Saturday, April 9, 2022, 16:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X