ಆಲ್ಟೊ ಚಕ್ರವ್ಯೂಹ ಭೇದಿಸಿತೇ ಡಟ್ಸನ್ ಸಣ್ಣ ಕಾರು?

Written By:

ಕಳೆದ ಹಲವಾರು ವರ್ಷಗಳಿಂದ ಭಾರತದ ಮಧ್ಯದ ವರ್ಗದ ಪ್ರಯಾಣಿಕ ಸೆಗ್ಮೆಂಟ್‌ನ ನೆಚ್ಚಿನ ಕಾರೆನಿಸಿಕೊಂಡಿರುವ ಮಾರುತಿ ಆಲ್ಟೊಗೆ ಪ್ರತಿಸ್ಪರ್ಧಿಯೊಂದನ್ನು ನಿಸ್ಸಾನ್‌ನ ಸಣ್ಣ ಕಾರು ಬ್ರಾಂಡ್ ಆಗಿರುವ ದಟ್ಸನ್ ಸಿದ್ಧಗೊಳಿಸುತ್ತಿದೆ.

ದಟ್ಸನ್ ಗೊ ಸಣ್ಣ ಕಾರು ಕಣ್ತುಂಬ ನೋಡಿಕೊಳ್ಳಿರಿ

ಇದು ಜಪಾನ್ ಮೂಲದ ದಟ್ಸನ್‌ನಿಂದ ಆಗಮನವಾಗಲಿರುವ ಮೂರನೇ ಕಾರು ಬ್ರಾಂಡ್ ಆಗಿರಲಿದೆ. ಈಗಾಗಲೇ ದಟ್ಸನ್ ಗೊ ಹ್ಯಾಚ್‌ಬ್ಯಾಕ್ ಹಾಗೂ ಗೊ ಪ್ಲಸ್ ಮಲ್ಟಿ ಪರ್ಪಸ್ ವೆಹಿಕಲ್ ಆಗಮನವನ್ನು ಕಂಪನಿ ಈಗಾಗಲೇ ಖಚಿತಪಡಿಸಿದೆ. ಇದೀಗ ಮಗದೊಂದು ಬಜೆಟ್ ಕಾರು ಲಾಂಚ್ ಬಿಡುಗಡೆ ಮಾಡಲು ದಟ್ಸನ್ ಸಿದ್ಧವಾಗುತ್ತಿದೆ. ಮುಖ್ಯವಾಗಿಯೂ ಬೆಳೆದು ಬರುತ್ತಿರುವ ಭಾರತೀಯ ಮಾರುಕಟ್ಟೆಯನ್ನು ಇದು ಗುರಿ ಮಾಡಲಿದೆ.

ಆಲ್ಟೊ ಚಕ್ರವ್ಯೂಹ ಭೇದಿಸಿತೇ ಡಟ್ಸನ್ ಸಣ್ಣ ಕಾರು?

ನಿಮ್ಮ ಮಾಹಿತಿಗಾಗಿ ದಟ್ಸನ್ ಗೊ ಹ್ಯಾಚ್‌ಬ್ಯಾಕ್ 2014 ಇಂಡಿಯಾ ಆಟೋ ಎಕ್ಸ್ ಪೋದಲ್ಲಿ ಲಾಂಚ್ ಆಗಲಿದೆ. ಇದರ ಬೆನ್ನಲ್ಲೇ ದಟ್ಸನ್ ಗೊ ಎಂಪಿವಿ ಕಾರು ಮಾರುಕಟ್ಟೆ ಪ್ರವೇಶ ಪಡೆಯಲಿದೆ. ಇದೀಗ ಈ ಪಟ್ಟಿಗೆ ಇನ್ನೊಂದು ಕಾರು ಸಿದ್ಧಗೊಂಡಿದೆ.

ಆಲ್ಟೊ ಚಕ್ರವ್ಯೂಹ ಭೇದಿಸಿತೇ ಡಟ್ಸನ್ ಸಣ್ಣ ಕಾರು?

ಈ ಎರಡು ಜನಪ್ರಿಯ ಮಾದರಿಗಳ ಬಳಿಕ ದಟ್ಸನ್ ಕಾಂಪಾಕ್ಟ್ ಸೆಡಾನ್ ಲಾಂಚ್ ಮಾಡುವ ಬಗ್ಗೆ ಕಂಪನಿ ಯೋಜನೆ ಹೊಂದಿತ್ತು. ಆದರೆ ಇದೀಗ ಮಾರಾಟ ನೀತಿಬದಲಾಯಿಸಿಕೊಂಡಿರುವ ದಟ್ಸನ್ ಮಗದೊಂದು ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಕಾರು ಲಾಂಚ್ ಮಾಡುವ ಯೋಜನೆ ಹೊಂದಿದೆ.

ಆಲ್ಟೊ ಚಕ್ರವ್ಯೂಹ ಭೇದಿಸಿತೇ ಡಟ್ಸನ್ ಸಣ್ಣ ಕಾರು?

ಈ ಬಗ್ಗೆ ಸ್ಪಷ್ಟ ಪಡಿಸಿರುವ ನಿಸ್ಸಾನ್, ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್‌ನಲ್ಲಿ ಗುರುತಿಸಿಕೊಳ್ಳಲಿರುವ ನೂತನ ಕಾರು ಎರಡರಿಂದ ಮೂರು ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ ಎಂದಿದೆ.

ಆಲ್ಟೊ ಚಕ್ರವ್ಯೂಹ ಭೇದಿಸಿತೇ ಡಟ್ಸನ್ ಸಣ್ಣ ಕಾರು?

ಐ2 ಕೋಡ್ ಪಡದುಕೊಂಡಿರುವ ದಟ್ಸನ್ ಸಣ್ಣ ಕಾರು, ಪ್ರಮುಖವಾಗಿಯೂ ದೇಶದ ನಂ.1 ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿಯ ಜನಪ್ರಿಯ ಆಲ್ಟೊ 800ಆವೃತ್ತಿಗೆ ಪೈಪೋಟಿ ಒಡ್ಡಲಿದೆ. ಇನ್ನೊಂದೆಡೆ ಫೆಬ್ರವರಿಯಲ್ಲಿ ಲಾಂಚ್ ಆಗಲಿರುವ ಗೊ, ಆಲ್ಟೊ ಕೆ10 ಆವೃತ್ತಿಗೆ ಸವಾಲೊಡ್ಡಲಿದೆ.

ಆಲ್ಟೊ ಚಕ್ರವ್ಯೂಹ ಭೇದಿಸಿತೇ ಡಟ್ಸನ್ ಸಣ್ಣ ಕಾರು?

ಈ ಮೂಲಕ ಎಂಟ್ರಿ ಲೆವೆಲ್ ಸೆಗ್ಮೆಂಟ್‌ ಮಾರುಕಟ್ಟೆಯನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವ ಇರಾದೆ ಹೊಂದಿದೆ. ದಟ್ಸನ್ ಈ ಕಾರು 2015-16ರ ವೇಳೆಯಲ್ಲಿ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ.

ಆಲ್ಟೊ ಚಕ್ರವ್ಯೂಹ ಭೇದಿಸಿತೇ ಡಟ್ಸನ್ ಸಣ್ಣ ಕಾರು?

ಇದೇ ಸಂದರ್ಭದಲ್ಲಿ ಪ್ರತಿ ತಿಂಗಳಲ್ಲಿ 8ರಿಂದ 9,000ದಷ್ಟು ಐ2 ಮಾಡೆಲ್‌ಗಳನ್ನು ಲಾಂಚ್ ಮಾಡುವ ಇರಾದೆಯನ್ನು ಕಂಪನಿ ಹೊಂದಿದೆ. ಇದು ಹ್ಯುಂಡೈ ಇಯಾನ್ ಮಾರಾಟಕ್ಕೆ ಸಮಾನವಾಗಿದೆ. ಬಳಿಕ ಇದು ಮಾರುತಿ ಸುಜುಕಿ ಆಲ್ಟೊ ಮಾರಾಟವನ್ನು (20000) ಗುರಿ ಮಾಡಲಿದೆ.

ಆಲ್ಟೊ ಚಕ್ರವ್ಯೂಹ ಭೇದಿಸಿತೇ ಡಟ್ಸನ್ ಸಣ್ಣ ಕಾರು?

ಪ್ರಸ್ತುತ ಸ್ಥಿತಗೊಂಡಿರುವ 117 ನಿಸ್ಸಾನ್ ಡೀಲರುಶಿಪ್‌ಗಳಲ್ಲಿ ದಟ್ಸನ್ ಕಾರುಗಳು ಮಾರಾಟವಾಗಲಿದೆ. ಈ ಸಂಖ್ಯೆಯು ಮಾರ್ಚ್ ವೇಳೆಗೆ 145ಕ್ಕೆ ಏರಿಕೆಯಾಗಲಿದೆ. ಅಷ್ಟೇ ಅಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ಎಕ್ಸ್‌ಕ್ಲೂಸಿವ್ ದಟ್ಸನ್ ಶೋ ರೂಂಗಳು ನಿರ್ಮಾಣವಾಗಲಿದೆ.

ಆಲ್ಟೊ ಚಕ್ರವ್ಯೂಹ ಭೇದಿಸಿತೇ ಡಟ್ಸನ್ ಸಣ್ಣ ಕಾರು?

ಇನ್ನು ದಟ್ಸನ್ ಗೊ ಕಾರು ಖರೀದಿಯನ್ನು ಇನ್ನು ಸುಲಭಗೊಳಿಸುವುದರ ನಿಟ್ಟಿನಲ್ಲಿ ಎನ್‌ಬಿಎಫ್‌ಸಿ ಹಣಕಾಸು ಸೇವೆಯನ್ನು ಒದಗಿಸಲಿದೆ. ಈ ಸೇವೆ ಸದ್ಯದಲ್ಲೇ ಆರಂಭವಾಗಲಿದೆ. ಈ ಮೂಖಾಂತರ ದಟ್ಸನ್, ನಿಸ್ಸಾನ್ ಹಾಗೂ ರೆನೊ ವಾಹನಗಳನ್ನು ಖರೀದಿಸುವುದು ಇನ್ನಷ್ಟು ಸುಲಭವಾಗಲಿದೆ.

English summary
Nissan India vice president, Ajay Raghuvanshi has revealed to FT that the third Datsun model will be an entry level hatchback, placed below Go
Story first published: Friday, December 20, 2013, 10:55 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark