ಭಾರತದ 20 ಮೋಸ್ಟ್ ವಾಂಟೆಡ್ ಕಾರುಗಳು..!

By Nagaraja

ಕನ್ನಡ ಡ್ರೈವ್‌ಸ್ಪಾರ್ಕ್ ಸೋಮವಾರದ ಲೇಖನದಲ್ಲಿ 'ಭಾರತದತ್ತ ಹೆಜ್ಜೆಯನ್ನಿಟ್ಟ ಐದು ನೂತನ ಕಾರುಗಳ' ಬಗ್ಗೆ ಬರೆದಿದ್ದೆವು. ಇದು ಪ್ರಮುಖವಾಗಿಯೂ 65ನೇ ಫ್ರಾಂಕ್‌ಫರ್ಟ್ ಮೋಟಾರ್ ಶೋದಲ್ಲಿ ಪ್ರದರ್ಶನಗೊಂಡು ಮುಂದಿನ ದಿನಗಳಲ್ಲಿ ಭಾರತ ಪ್ರವೇಶಿಸುವ ಕಾರುಗಳ ಬಗ್ಗೆ ಮಾಹಿತಿಯಾಗಿತ್ತು.

ಇದರ ಮುಂದುವರಿದ ಭಾಗವೆಂಬಂತೆ ನಿಕಟ ಭವಿಷ್ಯದಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿರುವ ಕಾರುಗಳ ಬಗ್ಗೆ ಇಂದಿನ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ಕೊಡಲಿದ್ದೇವೆ. ಸದ್ಯ ಪ್ರಯಾಣಿಕ ಕಾರು ಮಾರುಕಟ್ಟೆ ಕುಸಿತದಲ್ಲಿರುವ ಈ ಹಂತದಲ್ಲಿ ವಾಹನೋದ್ಯಮವು ಆತಂಕದಲ್ಲಿದ್ದರೂ, ಮುಂಬರುವ ಹಬ್ಬದ ಆವೃತ್ತಿ ಸೇರಿದಂತೆ ನಿಕಟ ಭವಿಷ್ಯದಲ್ಲಿ ಉತ್ತಮ ಮಾರುಕಟ್ಟೆ ಪಡೆಯುವ ನಿರೀಕ್ಷೆಯನ್ನು ಹೊಂದಿದೆ. ಹಾಗದ್ದರೆ ಬನ್ನಿ ಭಾರತದ 20 ಮೋಸ್ಟ್ ವಾಂಟೆಡ್ ಬಗ್ಗೆ ಮಾಹಿತಿ ಪಡೆಯೋಣವೇ...

ಭಾರತದ 20 ಮೋಸ್ಟ್ ವಾಂಟೆಡ್ ಕಾರುಗಳು..!

ದೇಶದ 20 ಮೋಸ್ಟ್ ವಾಂಟೆಡ್ ಕಾರುಗಳಿಗಾಗಿ ಮುಂದಿನ ಸ್ಲೈಡರ್‌ ಕ್ಲಿಕ್ಕಿಸಿ. ಬಹುತೇಕ ಸ್ಲೈಡರ್‌ನಲ್ಲೂ ನಿರ್ದಿಷ್ಟ ಕಾರಿಗೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿಗಾಗಿ ಬ್ಯಾಕ್ ಲಿಂಕ್ ಕೊಡಲಾಗಿದೆ.

ದಟ್ಸನ್ ಗೊ

ದಟ್ಸನ್ ಗೊ

ನಿರೀಕ್ಷಿತ ಲಾಂಚ್: 2014 ವರ್ಷಾರಂಭ

ದರ ಮಾಹಿತಿ: 2.5 ಲಕ್ಷದಿಂದ 4 ಲಕ್ಷ ರು.

ಸಣ್ಣ ಕಾರು ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯ ಮೆರೆಯಲು ಹೊರಟಿರುವ ದಟ್ಸನ್, ಗೊ ಹ್ಯಾಚ್‌ಬ್ಯಾಕ್ ಮುಖಾಂತರ ರಿ ಎಂಟ್ರಿ ಕೊಡಲಿದೆ. ಇದರಲ್ಲಿ ನಿಸ್ಸಾನ್ ಮೈಕ್ರಾಗೆ ಸಮಾನವಾದ 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಹಾಗೆಯೇ 5 ಸ್ಪೀಡ್ ಟ್ರಾನ್ಸ್‌ಮಿಷನ್ ಲಗತ್ತಿಸಲಾಗಿದೆ.

ದಟ್ಸನ್ ಗೊ ಪ್ಲಸ್

ದಟ್ಸನ್ ಗೊ ಪ್ಲಸ್

ನಿರೀಕ್ಷಿತ ಲಾಂಚ್: 2014 ಮಧ್ಯಂತರ ಅವಧಿ

ದರ ಮಾಹಿತಿ: 5.5 ಲಕ್ಷ ರು. (ಇಂಡೋನೇಷ್ಯಾ)

ಗೊ ಹ್ಯಾಚ್‌ಬ್ಯಾಕ್ ತಲಹದಿಯಲ್ಲಿ ನಿರ್ಮಾಣಗೊಳ್ಳಲಿರುವ ದಟ್ಸನ್ ಗೊ ಪ್ಲಸ್, ಭಾರತೀಯ ಮಲ್ಟಿ ಪರ್ಪಸ್ ವೆಹಿಕಲ್ ಸೆಗ್ಮೆಂಟ್‌ಗೆ ಎಂಟ್ರಿ ಕೊಡಲಿರುವ ಇನ್ನೊಂದು ಮಹತ್ವಾಕಾಂಕ್ಷಿ ಕಾರಾಗಿದೆ. ಇದರಲ್ಲೂ ಗೊ ಹ್ಯಾಚ್‌ಬ್ಯಾಕ್‌ಗೆ ಸಮಾನವಾದ 1.2 ಲೀಟರ್ ಪೆಟ್ರೋಲ್ ಎಂಜಿನ್ ಆಳವಡಿಸುವ ಸಾಧ್ಯತೆಯಿದೆ.

ಸ್ಕೋಡಾ ಒಕ್ಟಾವಿಯಾ

ಸ್ಕೋಡಾ ಒಕ್ಟಾವಿಯಾ

ನಿರೀಕ್ಷಿತ ಲಾಂಚ್: ಅಕ್ಟೋಬರ್ 3

ದರ ಮಾಹಿತಿ: 15ರಿಂದ 18 ಲಕ್ಷ ರು.

ಎಂಕ್ಯೂಬಿ ಫ್ಲ್ಯಾಟ್‌ಫಾರ್ಮ್‌ನಲ್ಲಿ ನಿರ್ಮಾಣಗೊಂಡಿರುವ ಸ್ಕೋಡಾ ಒಕ್ಟಾವಿಯಾ, ಮುಂದಿನ ತಿಂಗಳಲ್ಲಿ ಲಾಂಚ್ ಆಗಲಿದೆ. ಇದು 177 ಅಶ್ವಶಕ್ತಿ ಉತ್ಪಾದಿಸುವ 1.8 ಲೀಟರ್ ಟಿಎಸ್‌ಐ ಪೆಟ್ರೋಲ್ ಎಂಜಿನ್ ಪಡೆಯಲಿದೆ. ಇದು ಸೆವೆನ್ ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ. ಹಾಗೆಯೇ ಆಟೋ ಹಾಗೂ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗಳುಳ್ಳ 141 ಅಶ್ವಶಕ್ತಿ ಉತ್ಪಾದಿಸುವ 2.0 ಲೀಟರ್ ಟಿಡಿಐ ಡೀಸೆಲ್ ಎಂಜಿನ್ ಹೊಂದಿರಲಿದೆ. ಇದರ ಹೊರತಾಗಿ 1.4 ಲೀಟರ್ ಟಿಎಸ್‌ಐ ಪೆಟ್ರೋಲ್ (138 ಅಶ್ವಶಕ್ತಿ) ಬೇಸ್ ವೆರಿಯಂಟ್ ಪಡೆದುಕೊಳ್ಳಲಿದೆ.

ನಿಸ್ಸಾನ್ ಟೆರನೊ

ನಿಸ್ಸಾನ್ ಟೆರನೊ

ನಿರೀಕ್ಷಿತ ಲಾಂಚ್: ಅಕ್ಟೋಬರ್

ದರ ಮಾಹಿತಿ: 10 ಲಕ್ಷ ರು.ಗಳ ಒಳಗಡೆ

ರೆನೊ ಡಸ್ಟರ್ ರಿ ಬ್ಯಾಡ್ಜ್ ಪಡೆದುಕೊಂಡಿರುವ ನಿಸ್ಸಾನ್ ಟೆರೆನೊ ಕಾಂಪಾಕ್ಟ್ ಎಸ್‌ಯುವಿ ಹೆಚ್ಚು ಪ್ರೀಮಿಯಂ ಲುಕ್ ಪಡೆದುಕೊಂಡಿದೆ. ಇದು ಡಸ್ಟರ್‌ಗೆ ಸಮಾನವಾದ ಎಂಜಿನ್ ಮಾನದಂಡಗಳನ್ನು ಪಡೆದಿದೆ. ಹಾಗೆಯೇ ಟೆರನೊ ಮೂಲಕ ಆಲ್ ಡ್ರೈವ್ ವೀಲ್ ಪರಿಚಯಿಸುವ ಇರಾದೆಯನ್ನು ನಿಸ್ಸಾನ್ ವ್ಯಕ್ತಪಡಿಸಿದೆ.

ಸುಜುಕಿ ಎಕ್ಸ್‌ಎ ಆಲ್ಫಾ/iV 4

ಸುಜುಕಿ ಎಕ್ಸ್‌ಎ ಆಲ್ಫಾ/iV 4

ನಿರೀಕ್ಷಿತ ಲಾಂಚ್: 2014 ವರ್ಷಾರಂಭದಲ್ಲಿ

ದರ ಮಾಹಿತಿ: ತಿಳಿದು ಬಂದಿಲ್ಲ

ಭಾರತೀಯ ಗ್ರಾಹಕರು ಎದುರು ನೋಡುತ್ತಿರುವ ಇನ್ನೊಂದು ಬಹುನಿರೀಕ್ಷಿತ ಕಾರೆಂದರೆ ಅದುವೇ ಸುಜುಕಿ ಎಕ್ಸ್‌ಎ ಆಲ್ಫಾ ಅಥವಾ iv 4. ಪ್ರಸಕ್ತ ಫ್ರಾಂಕ್‌ಫರ್ಟ್‌ನಲ್ಲಿ ಮೋಟಾರ್ ಶೋದಲ್ಲಿ ಅನಾವರಣಗೊಂಡಿರುವ ಸುಜುಕಿ ಎಸ್‌ಯುವಿ ಕಾರು ಮುಂದಿನ ವರ್ಷಾರಂಭದಲ್ಲಿ ದೇಶದ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ.

ಫೋಕ್ಸ್‌ವ್ಯಾಗನ್ ಟೈಗನ್

ಫೋಕ್ಸ್‌ವ್ಯಾಗನ್ ಟೈಗನ್

ನಿರೀಕ್ಷಿತ ಲಾಂಚ್: ತಿಳಿದು ಬಂದಿಲ್ಲ

ದರ ಮಾಹಿತಿ: 10ರಿಂದ 15 ಲಕ್ಷ ರು.

ಗುಣಮಟ್ಟದ ಕಾರುಗಳನ್ನು ಉತ್ಪಾದಿಸುವುದರಲ್ಲಿ ನಿಸ್ಸೀಮವಾಗಿರುವ ಫೋಕ್ಸ್‌ವ್ಯಾಗನ್, ನಿಕಟ ಭವಿಷ್ಯದಲ್ಲಿ ಭಾರತಕ್ಕೆ ಕಾಂಪಾಕ್ಟ್ ಎಸ್‌ಯುವಿ ಪರಿಚಯಿಸಲಿದೆ. ಸಮಕಾಲೀನ ಪರಿಸ್ಥಿತಿಯಲ್ಲಿ ಕಾಪಾಂಕ್ಟ್ ಎಸ್‌ಯುವಿ ಕಾರುಗಳು ದೇಶದಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದ್ದು, ಫೋಕ್ಸ್‌ವ್ಯಾಗನ್ ನಿರೀಕ್ಷೆಯನ್ನು ಹೆಚ್ಚಿಸಿದೆ. ಇದರಲ್ಲಿ 1.0 ಲೀಟರ್ ಟಿಎಸ್‌ಐ ಎಂಜಿನ್ ಆಳವಡಿಸುವ ಸಾಧ್ಯತೆಗಳಿವೆ.

ಹೋಂಡಾ ಜಾಝ್

ಹೋಂಡಾ ಜಾಝ್

ನಿರೀಕ್ಷಿತ ಲಾಂಚ್: 2014 ವರ್ಷಾರಂಭ

ದರ ಮಾಹಿತಿ: ತಿಳಿದು ಬಂದಿಲ್ಲ

ನಾವು ಈ ಹಿಂದೆಯೇ ಹಲವು ಬಾರಿ ತಿಳಿಸಿರುವಂತೆಯೇ 2014 ಹೋಂಡಾ ಜಾಝ್ ನೂತನ ಲುಕ್‌ನೊಂದಿಗೆ ಭಾರತಕ್ಕೆ ಎಂಟ್ರಿ ಕೊಡಲಿದೆ. ಈ ಹಿಂದೆ ಕಳಪೆ ಮಾರಾಟ ಹಿನ್ನಲೆಯಲ್ಲಿ ಜಾಝ್ ಕಾರನ್ನು ಹಿಂಪಡೆಯಲಾಗಿತ್ತು. ಆದರೆ ನೂತನ 2014 ಜಾಝ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿನ್ಯಾಸ ಪಡೆದುಕೊಂಡಿದ್ದು, ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಆಕರ್ಷಿಸುವ ಸಾಧ್ಯತೆಯಿದೆ.

ಹೋಂಡಾ ಮೊಬಿಲಿಯೊ

ಹೋಂಡಾ ಮೊಬಿಲಿಯೊ

ನಿರೀಕ್ಷಿತ ಲಾಂಚ್: 2014 ಮಧ್ಯಂತರ ಅವಧಿ

ದರ ಮಾಹಿತಿ: 10ರಿಂದ 15 ಲಕ್ಷ ರು.

ಇಂಡೋನೇಷ್ಯಾ ಆಟೋ ಶೋದಲ್ಲಿ ಭರ್ಜರಿ ಎಂಟ್ರಿ ಕೊಟ್ಟಿರುವ ಹೋಂಡಾ ಮೊಬಿಲಿಯೊ ಎಂಪಿವಿ ಈಗಾಗಲೇ ದೇಶದ ಗ್ರಾಹಕರನ್ನು ಕಣ್ಣು ಕುಕ್ಕುವಂತೆ ಮಾಡಿದೆ. ಬ್ರಿಯೊ ತಲಹದಿಯಲ್ಲಿ ರೂಪುಗೊಳ್ಳಲಿರುವ ಈ ಪ್ರೀಮಿಯಂ ಎಂಪಿವಿ ಪ್ರಮುಖವಾಗಿ ಟೊಯೊಟಾ ಇನ್ನೋವಾಗೆ ನೇರ ಪ್ರತಿಸ್ಪರ್ಧಿಯೆನಿಸಲಿದೆ.

ಜೀಪ್ ಗ್ರಾಂಡ್ ಕೆರೊಕಿ

ಜೀಪ್ ಗ್ರಾಂಡ್ ಕೆರೊಕಿ

ನಿರೀಕ್ಷಿತ ಲಾಂಚ್: 2014 ವರ್ಷಾರಂಭ

ದರ ಮಾಹಿತಿ: 30ರಿಂದ 40 ಲಕ್ಷ ರು.

ದೇಶಕ್ಕೆ ಜೀಪ್ ಬ್ರಾಂಡ್ ಗ್ರಾಂಡ್ ಎಂಟ್ರಿ ಕೊಡುವ ತವಕದಲ್ಲಿದೆ. ಪ್ರಸಕ್ತ ಸಾಲಿನಲ್ಲೇ ಜೀಪ್ ಭಾರತ ಪ್ರವೇಶ ನಿಗದಿಯಾಗಿತ್ತಾದರೂ ಆ ಬಳಿಕ ಕಾರಣಾಂತರಗಳಿಂದಾಗಿ ಮುಂದೂಡಲಾಗಿತ್ತು. ಪ್ರಸ್ತುತ 2014 ದೆಹಲಿ ಆಟೋ ಎಕ್ಸ್ ಪೋದಲ್ಲಿ ಜೀಪ್ ಬ್ರಾಂಡ್ ಪ್ರದರ್ಶನವಾಗುವ ಸಾಧ್ಯತೆಗಳಿವೆ. ಇದರಲ್ಲಿ 3.0 ಲೀಟರ್ ವಿ6 ಡೀಸೆಲ್ ಎಂಜಿನ್ (237 ಅಶ್ವಶಕ್ತಿ, 549 ಎನ್‌ಎಂ ಟಾರ್ಕ್) ಆಳವಡಿಸಲಾಗುವುದು.

ಜೀಪ್ ವ್ರಾಂಗ್ಲರ್

ಜೀಪ್ ವ್ರಾಂಗ್ಲರ್

ನಿರೀಕ್ಷಿತ ಲಾಂಚ್: 2014 ವರ್ಷಾರಂಭ

ದರ ಮಾಹಿತಿ: 35ರಿಂದ 50 ಲಕ್ಷ ರು.

ದೇಶದ ಆಫ್ ರೋಡ್ ಉತ್ಸಾಹಿಗಳನ್ನು ಹುರಿದುಂಬಿಸಲು ಹೊರಟಿರುವ ಜೀಪ್ ಇನ್ನೊಂದೂ ವ್ರಾಂಗ್ಲರ್ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ. ಇದು 2.8 ಲೀಟರ್ ಡೀಸೆಲ್ ಮಿಲ್ (200 ಅಶ್ವಶಕ್ತಿ ಮತ್ತು 460 ಟಾರ್ಕ್) ಎಂಜಿನ್ ಪಡೆದುಕೊಳ್ಳಲಿದೆ.

ಭಾರತದ 20 ಮೋಸ್ಟ್ ವಾಂಟೆಡ್ ಕಾರುಗಳು..!

ನಿರೀಕ್ಷಿತ ಲಾಂಚ್: 2014 ವರ್ಷಾರಂಭ

ದರ ಮಾಹಿತಿ: 6ರಿಂದ 7 ಲಕ್ಷ ರು.

ಈಗಾಗಲೇ ಫ್ರಾಂಕ್‌ಫರ್ಟ್ ಮೋಟಾರ್ ಶೋದಲ್ಲಿ ಭರ್ಜರಿ ಎಂಟ್ರಿ ಕಂಡಿರುವ ಮಾರುತಿ ಸುಜುಕಿ ಫೇಸ್‌ಲಿಫ್ಟ್ ವರ್ಷನ್ ಮುಂದಿನ ವರ್ಷಾರಂಭದಲ್ಲಿ ದೇಶದ ಮಾರುಕಟ್ಟೆ ಪ್ರವೇಶಸಲಿದೆ. ಇದರಲ್ಲಿ 1.2 ಲೀಟರ್ ಪೆಟ್ರೋಲ್ ಹಾಗೂ 1.3 ಲೀಟರ್ ಡೀಸೆಲ್ ಎಂಜಿನ್ ಆಳವಡಿಸಲಾಗುವುದು.

ರೆನೊ ಡಸ್ಟರ್ ಫೇಸ್‌ಲಿಫ್ಟ್

ರೆನೊ ಡಸ್ಟರ್ ಫೇಸ್‌ಲಿಫ್ಟ್

ನಿರೀಕ್ಷಿತ ಲಾಂಚ್: 2014 ವರ್ಷಾರಂಭ

ದರ ಮಾಹಿತಿ: 8ರಿಂದ 12 ಲಕ್ಷ ರು.

ಫ್ರಾಂಕ್‌ಫರ್ಟ್ ಮೋಟಾರ್ ಶೋದಲ್ಲಿ ಅನಾವರಣಗೊಂಡಿರುವ ಡಸ್ಟರ್ ಫೇಸ್‌ಲಿಫ್ಟ್ ವರ್ಷನ್ ಕೂಡಾ ಸದ್ಯದಲ್ಲೇ ಭಾರತ ಎಂಟ್ರಿ ಪಡೆಯಲಿದೆ. ಇದರ ಚೈನ್ ಲಿಂಕ್ ಹೊಂದಿರುವ ಫ್ರಂಟ್ ಗ್ರಿಲ್ ರೆನೊ ಡಸ್ಟರ್‌ಗೆ ಹೆಚ್ಚು ಆಕ್ರಮಣಕಾರಿ ಲುಕ್ ಪ್ರದಾನ ಮಾಡುತ್ತಿದೆ

ಫೇಸ್‌ಲಿಫ್ಟ್ ಸ್ಟೋಡಾ ಯೆಟಿ

ಫೇಸ್‌ಲಿಫ್ಟ್ ಸ್ಟೋಡಾ ಯೆಟಿ

ನಿರೀಕ್ಷಿತ ಲಾಂಚ್: 2014

ದರ ಮಾಹಿತಿ: ತಿಳಿದು ಬಂದಿಲ್ಲ

ಫ್ರಾಂಕ್‌ಫರ್ಟ್‌ಗೆ ಭರ್ಜರಿ ಎಂಟ್ರಿ ಕೊಂಡಿರುವ ಸ್ಕೋಡಾ ಯೆಟಿ ಪ್ರೀಮಿಯಂ ಕಾಂಪಾಕ್ಟ್ ಎಸ್‌ಯುವಿ ಕೂಡಾ ನಿಕಟ ಭವಿಷ್ಯದಲ್ಲೇ ಭಾರತ ಮಾರುಕಟ್ಟೆ ಪ್ರವೇಶಿಸಲಿದೆ. ಇದು ನೂತನ ಗ್ರಿಲ್ ಪೆಡೆದುಕೊಂಡಿದ್ದು ಹಾಗೆಯೇ ಟ್ವಿನ್ ಬೀಮ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಹೆಚ್ಚು ಆಕರ್ಷಕವಾಗಿದೆ.

ನಿಸ್ಸಾನ್ ಎಕ್ಸ್ ಟ್ರೇಲ್

ನಿಸ್ಸಾನ್ ಎಕ್ಸ್ ಟ್ರೇಲ್

ನಿರೀಕ್ಷಿತ ಲಾಂಚ್: 2014

ದರ ಮಾಹಿತಿ: ತಿಳಿದು ಬಂದಿಲ್ಲ

ಜಪಾನ್ ಮೂಲದ ದೈತ್ಯ ವಾಹನ ತಯಾರಕ ಸಂಸ್ಥೆಯಾಗಿರುವ ನಿಸ್ಸಾನ್, ಅತ್ಯಧಿಕ ನಿರ್ವಹಣೆ ನೀಡುವ ಪ್ರೀಮಿಯಂ ವಿನ್ಯಾಸದ ಎಕ್ಸ್-ಟ್ರೇಲ್ ಭಾರತದಲ್ಲಿ ಬಿಡುಗಡೆ ಮಾಡಲಿದೆ.

ರೆನೊ ಕೊಲಿಯೊಸ್

ರೆನೊ ಕೊಲಿಯೊಸ್

ನಿರೀಕ್ಷಿತ ಲಾಂಚ್: 2014

ದರ ಮಾಹಿತಿ: ತಿಳಿದು ಬಂದಿಲ್ಲ

ರೆನೊ ಕೊಲಿಯೊಸ್ ಕಾರನ್ನು ನಿಸ್ಸಾನ್ ಎಕ್ಸ್‌ಟ್ರೇಲ್‌ನ ಸೋದರ ಸಂಬಂಧಿ ಎಂದು ವ್ಯಾಖ್ಯಾನಿಸಬಹುದು. ಇದು ಕೂಡಾ ಭಾರತೀಯ ಮಾರುಕಟ್ಟೆ ಪ್ರವೇಶಿಸಲಿರುವ ಇನ್ನೊಂದು ಆಕರ್ಷಕ ಕಾರಾಗಿರಲಿದೆ.

ಷೆವರ್ಲೆ ಟ್ರಾಕ್ಸ್

ಷೆವರ್ಲೆ ಟ್ರಾಕ್ಸ್

ನಿರೀಕ್ಷಿತ ಲಾಂಚ್: 2014

ದರ ಮಾಹಿತಿ: 10ರಿಂದ 12 ಲಕ್ಷ ರು.

ಬ್ರೆಜಿಲ್ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿರುವ ಷೆವರ್ಲೆ ಟ್ರಾಕ್ಸ್ ಎಸ್‌ಯುವಿ ನಿಕಟ ಭವಿಷ್ಯದಲ್ಲಿ ಭಾರತಕ್ಕೆ ಪ್ರವೇಶಿಸುವ ಸಾಧ್ಯತೆಗಳಿವೆ. opel mocca ಫ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಿರುವ ಷೆವರ್ಲೆ ಟ್ರಾಕ್ಸ್ ಫೈವ್ ಸೀಟ್ ಸಿಟ್ಟಿಂಗ್ ವ್ಯವಸ್ಥೆ ಹೊಂದಿರಲಿದೆ. ಇನ್ನು ಭಾರತದಲ್ಲಿ 1.4, 1.6 ಪೆಟ್ರೋಲ್ ಹಾಗೂ 1.7 ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಸಾಧ್ಯತೆಗಳಿವೆ.

ಫೋರ್ಡ್ ಫಿಯೆಸ್ಟಾ ಹ್ಯಾಚ್‌ಬ್ಯಾಕ್

ಫೋರ್ಡ್ ಫಿಯೆಸ್ಟಾ ಹ್ಯಾಚ್‌ಬ್ಯಾಕ್

ನಿರೀಕ್ಷಿತ ಲಾಂಚ್: 2014 ವರ್ಷಾರಂಭ

ದರ ಮಾಹಿತಿ: ತಿಳಿದು ಬಂದಿಲ್ಲ

ಇಕೊಸ್ಪೋರ್ಟ್ ಕಾಂಪಾಕ್ಟ್ ಎಸ್‌ಯುವಿ ಯಶಸ್ಸಿನ ಬೆನ್ನಲ್ಲೇ ಅಮೆರಿಕದ ಮೂಲದ ಪ್ರಖ್ಯಾತ ವಾಹನ ತಯಾರಕ ಸಂಸ್ಥೆಯಾಗಿರುವ ಫೋರ್ಡ್, ಭಾರತಕ್ಕೆ ಇನ್ನೊಂದು ಮಾಡೆಲ್ ಪರಿಚಯಿಸಲು ಯೋಜನೆ ಹಾಕಿಕೊಂಡಿದೆ. ಮೂಲಗಳ ಪ್ರಕಾರ ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿರುವ ಫೋರ್ಡ್ ಫಿಯೆಸ್ಟಾ ಸೆಡಾನ್ ಕಾರಿನ ಫೇಸ್‌ಲಿಫ್ಟ್ ವರ್ಷನನ್ನು 2014ರ ವರ್ಷಾರಂಭದಲ್ಲಿ ದೇಶಕ್ಕೆ ಪರಿಚಯಿಸಲಿದೆ. ಹಾಗಿದ್ದರೂ ಇಕೊಸ್ಪೋರ್ಟ್‌ನಲ್ಲಿರುವ 1.0 ಇಕೊಬೂಸ್ಟ್ ಎಂಜಿನ್ ಆಳವಡಿಸುವ ಸಾಧ್ಯತೆ ಕಡಿಮೆಯಾಗಿದೆ.

ಮಿಟ್ಸುಬಿಸಿ ಔಟ್ಲೆಂಡರ್

ಮಿಟ್ಸುಬಿಸಿ ಔಟ್ಲೆಂಡರ್

ನಿರೀಕ್ಷಿತ ಲಾಂಚ್: 2014

ದರ ಮಾಹಿತಿ: ತಿಳಿದು ಬಂದಿಲ್ಲ

ಭಾರತ ಕಾರು ಮಾರುಕಟ್ಟೆಯ ಪ್ರೀಮಿಯಂ ಎಸ್‌ಯುವಿ ವಿಭಾಗದಲ್ಲಿ ಸ್ಥಾನ ಗಟ್ಟಿ ಮಾಡುವುದು ಜಪಾನ್ ಮೂಲದ ಕಾರು ತಯಾರಕ ಸಂಸ್ಥೆಯಾಗಿರುವ ಮಿಟ್ಸುಬಿಸಿ ಗುರಿಯಾಗಿದೆ. ಹಾಗಿದ್ದರೂ ಮಿಟ್ಸುಬಿಸಿ ಔಟ್ಲೆಂಡರ್ ಡೀಸೆಲ್ ಕಾರು ಭಾರತದ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗುವುದೇ ಎಂಬುದನ್ನು ಕಾದು ನೋಡಬೇಕಾಗಿದೆ. 2014 ಮಿಟ್ಸುಬಿಸಿ ಡೀಸೆಲ್ ಮಾದರಿಯಲ್ಲಿ 2.2 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಳವಡಿಸಲಿದ್ದು, 147 ಅಶ್ವಶಕ್ತಿ (380 ಟರ್ಕ್ಯೂ) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ 6 ಸ್ಪೀಡ್ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ.

ಟಾಟಾ ನ್ಯಾನೋ ಇಮ್ಯಾಕ್ಸ್, ಡೀಸೆಲ್

ಟಾಟಾ ನ್ಯಾನೋ ಇಮ್ಯಾಕ್ಸ್, ಡೀಸೆಲ್

ನಿರೀಕ್ಷಿತ ಲಾಂಚ್: 2013

ದರ ಮಾಹಿತಿ: 2ರಿಂದ 3 ಲಕ್ಷ ರು.ಗಳ ವರೆಗೆ

ಇತ್ತೀಚೆಗಷ್ಟೇ ದೇಶದ ಮುಂಚೂಣಿಯ ಕಾರು ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್, ಟಾಟಾ ನ್ಯಾನೋ ಸಿಎನ್‌ಜಿ ವರ್ಷನ್ 'ಇಮ್ಯಾಕ್ಸ್' ಕಾರನ್ನು ಅನಾವರಣಗೊಳಿಸಿತ್ತು. ಪ್ರಸ್ತುತ ಕಾರು ಮುಂಬರುವ ಹಬ್ಬದ ಆವೃತ್ತಿ ವೇಳೆ ಭಾರತ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ. ಹಾಗೆಯೇ ಡೀಸೆಲ್ ಕಾರು ಸಹ ನೀವು ನಿರೀಕ್ಷೆ ಮಾಡಿಕೊಳ್ಳಬಹುದಾಗಿದೆ.

ಫೋಕ್ಸ್‌ವ್ಯಾಗನ್ ಅಪ್

ಫೋಕ್ಸ್‌ವ್ಯಾಗನ್ ಅಪ್

ನಿರೀಕ್ಷಿತ ಲಾಂಚ್: 2014

ದರ ಮಾಹಿತಿ: ತಿಳಿದು ಬಂದಿಲ್ಲ

ಹಾಗೆಯೇ ಬಲ್ಲ ಮೂಲಗಳ ಪ್ರಕಾರ ಫೋಕ್ಸ್‌ವ್ಯಾಗನ್ ಅಪ್ ಹ್ಯಾಚ್‌ಬ್ಯಾಕ್ ಕಾರು ಭಾರತ ಮಾರುಕಟ್ಟೆಯನ್ನು ತಲುಪುವ ಸಾಧ್ಯತೆಗಳಿವೆ. ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

More from DriveSpark

Article Published On: Wednesday, September 25, 2013, 6:00 [IST]
English summary
Car manufacturers are searching for new avenues where none existed before. They have forged new partnerships to better cope with the problems at hand. And there are more new car launches scheduled than ever before. Lets us take a look at some of the upcoming cars that will likely hit Indian shores in the near future.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+