ಸಂಕಷ್ಟಕ್ಕೆ ಸಿಲುಕಿದ ರೈಡರ್‍‍ಗಳ ನೆರವಿಗೆ ಧಾವಿಸಿದ ಭಾರತೀಯ ಸೈನಿಕರು

ಹಿಮಾಲಯ ಪ್ರದೇಶವು ಬೈಕ್ ಸಾಹಸಿಗಳ ಪಾಲಿನ ಮೆಚ್ಚಿನ ಪ್ರದೇಶವಾಗಿದೆ. ಪ್ರತಿ ವರ್ಷವು ಹಲವಾರು ಬೈಕ್‍ ಸವಾರರು ತಮ್ಮ ಬೈಕಿನಲ್ಲಿ ಹಿಮಾಲಯದ ಸಾಹಸಮಯ ರಸ್ತೆಗಳಲ್ಲಿ ಸಂಚರಿಸಲು ತೆರಳುತ್ತಾರೆ. ಇದೆ ರೀತಿ ಹಿಮಾಲಯಕ್ಕೆ ರೈಡಿಂಗ್ ತೆರಳಿದ ಬೈಕ್ ರೈಡರ್‍‍ಗಳು ರಸ್ತೆಯಲ್ಲಿ ಸಿಕ್ಕಿಬಿದ್ದಿದರು. ಇಂತಹ ಸಂದರ್ಭ ಭಾರತದ ಸೈನಿಕರು ಇವರಿಗೆ ಸಹಾಯ ಹಸ್ತ ನೀಡಿದ್ದಾರೆ.

ಸಂಕಷ್ಟಕ್ಕೆ ಸಿಲುಕಿದ ರೈಡರ್‍‍ಗಳ ನೆರವಿಗೆ ಧಾವಿಸಿದ ಭಾರತೀಯ ಸೈನಿಕರು

ಹಿಮಾಲಯದ ಸಾಹಸಮಯ ರಸ್ತೆಗಳಲ್ಲಿ ಬೈಕ್ ರೈಡಿಂಗ್ ಒಂದು ದೊಡ್ಡ ಸವಾಲು. ಪ್ರತಿ ಬೈಕ್‍ ರೈಡರ್‍‍ಗಳು ಹಿಮಾಲಯಕ್ಕೆ ಬೈಕ್ ರೈಡಿಂಗ್ ತೆರಳಬೇಕೆಂಬ ಕನಸನ್ನು ಹೊಂದಿರುತ್ತಾರೆ. ಇದೇ ರೀತಿ ಜಾವಾ 42 ಮತ್ತು ಬಜಾಜ್ ಪಲ್ಸರ್ ಆರ್‍ಎಸ್ 200 ಸವಾರನು ಹಿಮಾಲಯಕ್ಕೆ ರೈಡಿಂಗ್ ತೆರಳಿದ್ದಾರೆ. ಈ ಸಂದರ್ಭದಲ್ಲಿ ಪಲ್ಸರ್ ಆರ್‍ಎಸ್ 200 ಬೈಕಿ‍ನ ಸವಾರನ ಬೈಕ್ ಸಿಲುಕಿಕೊಂಡಿದೆ. ಇದೇ ಸಂದರ್ಭದಲ್ಲಿ ಅಲ್ಲಿಗೆ ಬಂದ ಭಾರತ ಸೈನ್ಯದ ಸೈನಿಕರು ಸಹಾಯ ಮಾಡಿದ್ದಾರೆ.

ಸಂಕಷ್ಟಕ್ಕೆ ಸಿಲುಕಿದ ರೈಡರ್‍‍ಗಳ ನೆರವಿಗೆ ಧಾವಿಸಿದ ಭಾರತೀಯ ಸೈನಿಕರು

ಹಿಮಾಲಯದಾದ್ಯಂತ ಸವಾರಿ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಲಡಾಖ್ ಮೂಲಕ ಪ್ರಯಾಣಿಸುತ್ತಿದ್ದರು. ಅವರು ದೆಹಲಿಯಿಂದ ಬೈಕ್ ರೈಡಿಂಗ್ ಪ್ರಾರಂಭಿಸಿ ಹಿಮಾಚಲ ಪ್ರದೇಶದ ಸಾಚ್ ಕಡೆಯಿಂದ ಹೋಗಿದ್ದರು. ಅವರು ಲಡಾಕ್ ಮತ್ತು ಹಿಮಾಲಯ ಸಾಹಸಮಯ ರಸ್ತೆಗಳಲ್ಲಿ ಸಂಚರಿಸುವುದು ಮುಖ್ಯ ಗುರಿಯಾಗಿದೆ.

ಸಂಕಷ್ಟಕ್ಕೆ ಸಿಲುಕಿದ ರೈಡರ್‍‍ಗಳ ನೆರವಿಗೆ ಧಾವಿಸಿದ ಭಾರತೀಯ ಸೈನಿಕರು

ಹಿಮಾಲಯ ಮತ್ತು ಲಡಾಖ್‍‍ನ ಸಾಹಸಮಯ ರಸ್ತೆಗಳಲ್ಲಿ ಸಂಚರಿಸುವಾಗ ಹಲವು ಸವಾಲುಗಳನ್ನು ಎದುರಿಸುತ್ತಿದ್ದರು. ಆದರೆ ಒಂದು ಕಡೆ ಕಠಿಣವಾದ ರಸ್ತೆಯಲ್ಲಿ ಪಲ್ಸರ್ ಆರ್‍ಎಸ್ 200 ಸಿಲುಕಿ ಹಾಕಿಕೊಂಡಿತ್ತು. ಎಷ್ಟೇ ಹರಸಾಹಸ ಮಾಡಿದರು ಬೈಕ್ ಒಂದು ಮುಂದೆ ಸಾಗುವುದಿಲ್ಲ. ಕೊನೆಗೆ ಜಾವಾ ಸವಾರನು ಇಳಿದು ಬಂದು ಸಹಾಯ ಮಾಡಲು ಬಂದು ಎಷ್ಟೇ ಪ್ರಯತ್ನಿಸಿದರು ಬೈಕ್ ಮುಂದೆ ಚಲಿಸುವುದಿಲ್ಲ.

ಸಂಕಷ್ಟಕ್ಕೆ ಸಿಲುಕಿದ ರೈಡರ್‍‍ಗಳ ನೆರವಿಗೆ ಧಾವಿಸಿದ ಭಾರತೀಯ ಸೈನಿಕರು

ಇವರು ಸಿಲುಕಿಹಾಕಿ ಮುಂದೆ ಸಾಗಲು ಸಾಹಸ ಮಾಡುವುದು ಕಂಡ ಸೈನಿಕರು ಅವರ ನೆರವಿಗೆ ಧಾವಿಸುತ್ತಾರೆ. ಸೈನಿಕರ ಸಹಾಯದಿಂದ ಸಿಲುಕಿಕೊಂಡಿದ್ದ ಬೈಕ್ ಮುಂದಕ್ಕೆ ಸಾಗುತ್ತದೆ. ಸೈನಿಕರ ಸಹಾಯಕ್ಕೆ ಅವರಿಗೆ ತಮ್ಮ ಅಪಾರವಾದ ಧನ್ಯವಾದಗಳನ್ನು ಅರ್ಪಿಸುತ್ತಾರೆ.

ಸಂಕಷ್ಟಕ್ಕೆ ಸಿಲುಕಿದ ರೈಡರ್‍‍ಗಳ ನೆರವಿಗೆ ಧಾವಿಸಿದ ಭಾರತೀಯ ಸೈನಿಕರು

ಸೈನಿಕರೊಂದಿಗೆ ಕೆಲಕಾಲ ತಮ್ಮ ಮುಂದಿನ ದಾರಿ ಮತ್ತು ಗುರಿಯ ಬಗ್ಗೆ ಮಾತುಕಥೆಗಳನ್ನು ನಡೆಸುತ್ತಾರೆ. ಸೈನಿಕರು ತಮ್ಮ ಕಷ್ಟವನ್ನು ಕಂಡು ಸಹಾಯಕ್ಕೆ ಬಂದಿರುವುದಕ್ಕೆ ಭಾರತೀಯ ಸೈನಿಕರ ಬಗ್ಗೆ ಮೆಚ್ಚುಗೆ ವೈಕ್ತಪಡಿಸಿ ಮತ್ತೊಮ್ಮೆ ಧನ್ಯವಾದಗಳನ್ನು ತಿಳಿಸಿ ತಮ್ಮ ಪ್ರಯಾಣವನ್ನು ಮುಂದುವರೆಸಿದ್ದಾರೆ.

ಅಂತಹ ಎತ್ತರದ ಪ್ರದೇಶದಲ್ಲಿ ವಾಹನವನ್ನು ಚಾಲನೆ ಮಾಡುವಾಗ ಒಂದು ಪ್ರಮುಖ ಸವಾಲು ಎಂದರೆ ಮನುಷ್ಯ ಮತ್ತು ಯಂತ್ರ ಎರಡರ ಮೇಲೂ ಪರಿಣಾಮ ಬೀರುವ ಕಡಿಮೆ ಪ್ರಮಾಣದ ಆಮ್ಲಜನಕ. ಕಡಿಮೆ ಆಮ್ಲಜನಕವು ಮತ್ತು ಗಾಳಿ ತೀರಾ ಕಡಿಮೆಯಾದಾಗ ಎಂಜಿನ್ ಕಡಿಮೆ ಪ್ರಮಾಣದ ಶಕ್ತಿಯನ್ನು ಉತ್ಪಾದಿಸುತ್ತದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಸಂಕಷ್ಟಕ್ಕೆ ಸಿಲುಕಿದ ರೈಡರ್‍‍ಗಳ ನೆರವಿಗೆ ಧಾವಿಸಿದ ಭಾರತೀಯ ಸೈನಿಕರು

ಪಲ್ಸರ್ ಆರ್‌ಎಸ್ 200 ಬೈಕ್‌ಗಳು 199.5 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದ್ದು, 24.1 ಬಿಎಚ್‌ಪಿ ಮತ್ತು 18.6 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕ್ 141 ಕಿ.ಮಿ ಟಾಪ್ ಸ್ಪೀಡ್ ಹೊಂದಿರುವ ಪಲ್ಸರ್ ಆರ್‌ಎಸ್ 200 ಬೈಕ್‌ಗಳು 6-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಹೊಂದಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಸಂಕಷ್ಟಕ್ಕೆ ಸಿಲುಕಿದ ರೈಡರ್‍‍ಗಳ ನೆರವಿಗೆ ಧಾವಿಸಿದ ಭಾರತೀಯ ಸೈನಿಕರು

ಇಂತಹ ಸಂದರ್ಭದಲ್ಲಿ ಬಜಾಜ್ ಪಲ್ಸರ್ ಆರ್‍ಎಸ್ 200 ನಂತಹ ಬೈಕ್‍‍ಗಳು ಸೂಕ್ತವಲ್ಲ, ಏಕೆಂದರೆ ಇದು ಸ್ಫೋರ್ಟ್ಸ್ ಆಧಾರಿತ ಬೈಕ್‍‍ಗಳಾಗಿದೆ. ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಮತ್ತು ಹೀರೋ ಎಕ್ಸ್-ಪಲ್ಸ್ ನಂತಹ ಆಫ್‍‍ರೋಡ್ ಬೈಕ್‍‍ಗಳು ಅಂತಹ ಕಠಿಣ ಪ್ರದೇಶಗಳಲ್ಲಿ ಚಲಿಸಲು ಸೂಕ್ತವಾಗಿವೆ. ಅಲ್ಲದೇ ಭಾರತೀಯ ಸೈನಿಕರು ಸಹಾಯಕ್ಕೆ ಧಾವಿಸಿರುವುದು ಮೆಚ್ಚುವಂತಹ ವಿಷಯವಾಗಿದೆ.

Most Read Articles

Kannada
English summary
Bajaj Pulsar RS200 gets STUCK in Ladakh: Indian Army man pushes it out - Read in Kannada
Story first published: Friday, October 18, 2019, 19:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X