ಹೈ ಸ್ಪೀಡ್‌ನಲ್ಲಿದ್ದ ಫೆರಾರಿ ಕಾರಿನಿಂದ ನಡೆಯಿತು ಅವಾಂತರ

By Praveen Sannamani

ದಿನಂಪ್ರತಿ ಹತ್ತಾರು ಅಪಘಾತ ಪ್ರಕರಣಗಳು ಸಂಭವಿಸುತ್ತಲೇ ಇರುತ್ತವೆ. ಆದರೂ ವಾಹನ ಚಾಲನೆ ವೇಳೆ ಕೆಲವರು ಮುಂಜಾಗ್ರತೆ ವಹಿಸುವುದೇ ಇಲ್ಲಾ. ಪರಿಣಾಮ ಸಣ್ಣಪುಟ್ಟ ತಪ್ಪುಗಳೇ ದೊಡ್ಡ ದುರಂತಗಳಿಗೆ ಎಡೆಮಾಡಿಕೊಡುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದಕ್ಕೆ ಈ ಘಟನೆಯೇ ಸಾಕ್ಷಿ.

ಹೈ ಸ್ಪೀಡ್‌ನಲ್ಲಿದ್ದ ಫೆರಾರಿ ಕಾರಿನಿಂದ ನಡೆಯಿತು ಅವಾಂತರ

ಅತಿಯಾದ ವೇಗ ಜೀವಕ್ಕೆ ಅಪಾಯ ಅಂತಾ ಗೊತ್ತಿದ್ರು ಬಹುತೇಕ ವಾಹನ ಸವಾರರಿಗೆ ಸ್ಪೀಡ್​ನ ಹುಚ್ಚು ಕಡಿಮೆಯಾಗುವುದೇ ಇಲ್ಲ. ಕೆಲವರಂತೂ ಶೋಕಿಗಾಗಿ ಹೆಚ್ಚು ಜನ ಸಂದಣಿ ಇರುವ ಪ್ರದೇಶಗಳಲ್ಲೇ ಮಿತಿ ಮೀರಿದ ವೇಗದಲ್ಲಿ ವಾಹನಗಳನ್ನು ಚಾಲನೆ ಮಾಡುದನ್ನು ದಿನನಿತ್ಯ ನೋಡುತ್ತಲೇ ಇರುತ್ತವೆ.

ಹೈ ಸ್ಪೀಡ್‌ನಲ್ಲಿದ್ದ ಫೆರಾರಿ ಕಾರಿನಿಂದ ನಡೆಯಿತು ಅವಾಂತರ

ಹೀಗೆ ಅತಿಯಾದ ವೇಗದಲ್ಲಿದ್ದ ಫೆರಾರಿ 458 ಸೂಪರ್ ಕಾರೊಂದು ಭೀಕರ ಅಪಘಾತದಲ್ಲಿ ಸಿಲುಕಿ ಸಂಪೂರ್ಣ ಜಖಂಗೊಂಡಿದ್ದು, ಕಾರು ಚಾಲನೆ ಮಾಡುತ್ತಿದ್ದ ಯುವತಿಯು ಅದೃಷ್ಟವಶಾತ್ ದುರಂತದಲ್ಲಿ ಪ್ರಾಣಪಾಯದಿಂದ ಪಾರಾಗಿರುವ ಘಟನೆ ಚೀನಾದ ವೆನ್ಲಿಂಗ್ ಎಂಬಲ್ಲಿ ನಡೆದಿದೆ.

ಹೈ ಸ್ಪೀಡ್‌ನಲ್ಲಿದ್ದ ಫೆರಾರಿ ಕಾರಿನಿಂದ ನಡೆಯಿತು ಅವಾಂತರ

ಬಾಡಿಗೆಗೆ ತಂದಿದ್ದ ಕಾರು

ಅಂದಹಾಗೆ ಅಪಘಾತದಲ್ಲಿ ಜಖಂಗೊಂಡ ಕಾರು ಸ್ವಂತದ್ದು ಅಲ್ಲವೇ ಅಲ್ಲ. ಸೂಪರ್ ಕಾರು ಚಾಲನೆ ಮಾಡುವ ಕ್ರೇಜ್‌ನಿಂದಾಗಿ ಯುವತಿಯೊಬ್ಬಳು ಬಾಡಿಗೆಗೆ ಅಂತಾ ತಂದಿದ್ದಳು. ಈ ವೇಳೆ ಕಾರು ಚಾಲನೆ ಆರಂಭಿಸಿದ 1 ನಿಮಿಷದಲ್ಲಿ ಈ ಘಟನೆ ನಡೆದಿದೆ.

ಹೈ ಸ್ಪೀಡ್‌ನಲ್ಲಿದ್ದ ಫೆರಾರಿ ಕಾರಿನಿಂದ ನಡೆಯಿತು ಅವಾಂತರ

ಹೈ ಸ್ಪೀಡ್‌ನಲ್ಲಿದ್ದ ಯುವತಿ

ಕಾರು ಚಾಲನೆ ಆರಂಭ ಮಾಡಿದ 5 ಸೇಕೆಂಡುಗಳಲ್ಲೇ 100 ಕಿ.ಮಿ ವೇಗದ ತಲುಪಿದ ಯುವತಿಗೆ ಕಾರು ನಿಯಂತ್ರಣಕ್ಕೆ ಸಿಕ್ಕಿಲ್ಲ. ಈ ವೇಳೆ ಎದುರು ಮಾರ್ಗದಲ್ಲಿ ಬರುತ್ತಿದ್ದ ಬಿಎಂಡಬ್ಲ್ಯು 3 ಸೀರಿಸ್ ಕಾರಿಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿ ರಭಸಕ್ಕೆ ರಸ್ತೆ ಮಧ್ಯದಲ್ಲಿ ಹಾಕಿದ್ದ ಬ್ಯಾರಿಕೆಡ್‌ಗಳು ಸಂಪೂರ್ಣ ಕಿತ್ತು ಹೋಗಿವೆ.

ಹೈ ಸ್ಪೀಡ್‌ನಲ್ಲಿದ್ದ ಫೆರಾರಿ ಕಾರಿನಿಂದ ನಡೆಯಿತು ಅವಾಂತರ

ಸಮಾಧಾನಕರ ಸಂಗತಿ ಎಂದ್ರೆ, ಘಟನೆಯಲ್ಲಿ ಕಾರುಗಳು ಸಂಪೂರ್ಣ ಜಖಂಗೊಂಡರು ಸಣ್ಣಪುಟ್ಟ ಗಾಯಗಳನ್ನು ಹೊರತುಪಡಿಸಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನುವುದೇ ಗಮನಿಸಬೇಕಾದ ಅಂಶ. ಇದಕ್ಕೆ ಕಾರಣ ಕಾರುಗಳಲ್ಲಿ ಅಳವಡಿಸಲಾಗಿರುವ ಸುರಕ್ಷಾ ಸೌಲಭ್ಯಗಳು ಕಾರು ಪ್ರಯಾಣಿಕರನ್ನು ಪ್ರಾಣಪಾಯದಿಂದ ಪಾರುಮಾಡಿವೆ ಎನ್ನಬಹುದು.

ಹೈ ಸ್ಪೀಡ್‌ನಲ್ಲಿದ್ದ ಫೆರಾರಿ ಕಾರಿನಿಂದ ನಡೆಯಿತು ಅವಾಂತರ

ಇನ್ನು ಘಟನೆ ವೇಳೆ ಫೆರಾರಿ ಕಾರು ಬಿಎಂಡಬ್ಲ್ಯು ಕಾರಿಗೆ ಡಿಕ್ಕಿ ಹೊಡೆದಾಗ ಬಿಎಂಡಬ್ಲ್ಯು ಕಾರಿನ ಹಿಂದೆಯೇ ಇದ್ದ ನಿಸ್ಸಾನ್ ಸಲೂನ್ ಸೂಪರ್ ಕಾರೊಂದು ಸಹ ಅಪಘಾತದಿಂದ ತಪ್ಪಿಸಿಕೊಳ್ಳಲು ಬ್ಯಾರಿಕೆಡ್‌ಗೆ ನುಗ್ಗಿದ್ದು, ಈ ಕಾರಿನಲ್ಲಿದ್ದವರ ಸ್ಥಿತಿಗತಿ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಹೈ ಸ್ಪೀಡ್‌ನಲ್ಲಿದ್ದ ಫೆರಾರಿ ಕಾರಿನಿಂದ ನಡೆಯಿತು ಅವಾಂತರ

ಮಾಡಿದ ತಪ್ಪಿಗೆ ದಂಡ ತೆತ್ತ ಯುವತಿ

ಜಾಲಿ ರೈಡ್ ಮಾಡಲು ತರಲಾಗಿದ್ದ ರೆಂಟಲ್ ಫೆರಾರಿ ಕಾರು ಅಪಘಾತ ಹಿನ್ನೆಲೆ ಯುವತಿ ಭಾರೀ ಪ್ರಮಾಣದ ದಂಡ ತೆತ್ತಿದ್ದು, ಸಾರ್ವಜನಿಕ ಆಸ್ತಿಯನ್ನು ಹಾನಿ ಮಾಡಿದ್ದಕ್ಕೂ ಅಲ್ಲಿನ ಸ್ಥಳೀಯ ಸರ್ಕಾರವು ದಂಡ ವಸೂಲಿ ಮಾಡಿದೆ. ಆದರೂ ಭೀಕರ ಅಪಘಾತದಲ್ಲೂ ಯಾರಿಗೂ ಯಾವುದೇ ರೀತಿಯ ತೊಂದರೆ ಆಗಿಲ್ಲ ಎನ್ನುವುದು ಮುಖ್ಯ ವಿಚಾರ.

ಫೆರಾರಿ 458 ಮತ್ತು ಬಿಎಂಡಬ್ಲ್ಯು ಕಾರಿನ ನಡುವೆ ನಡೆದ ಅಪಘಾತದ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅಪಘಾತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹೈ ಸ್ಪೀಡ್‌ನಲ್ಲಿದ್ದ ಫೆರಾರಿ ಕಾರಿನಿಂದ ನಡೆಯಿತು ಅವಾಂತರ

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಲಿಫ್ಟ್ ಕೊಟ್ಟ ತಪ್ಪಿಗೆ ಕೋರ್ಟ್‌ನಲ್ಲಿ ದಂಡ ಕಟ್ಟಿದ ಕಾರು ಮಾಲೀಕ..

ಸಿಗ್ನಲ್ ಜಂಪ್ ವೇಳೆ ಎಡವಟ್ಟು- ಲಾರಿ ಗುದ್ದಿದ ರಭಸಕ್ಕೆ ಜಖಂಗೊಂಡ ರೇಂಜ್ ರೋವರ್..

ಇನೋವಾ ಕ್ರಿಸ್ಟಾ ಹಿಂದಿಕ್ಕಲು ಬರಲಿದೆ 11 ಸೀಟರ್ ಕಿಯಾ ಗ್ರ್ಯಾಂಡ್ ಕಾರ್ನಿವಾಲ್

ಸಚಿವ ಜಮೀರ್‌ ಅಹ್ಮದ್ ಫಾರ್ಚೂನರ್ ಕಾರಿಗಾಗಿ ಪಟ್ಟು ಹಿಡಿದಿದ್ದು ಯಾಕೆ?

ಐಷಾರಾಮಿ ಕಾರುಗಳನ್ನೆ ಟ್ರ್ಯಾಕ್ಟರ್‍‍ಗಳನ್ನಾಗಿ ಪರಿವರ್ತಿಸಿದ ರೈತರು..!!

Kannada
Read more on accident ferrari
English summary
Chinese woman destroys a Ferrari 458 only minutes after renting it when she loses control and smashes through a barrier into oncoming traffic.
Story first published: Wednesday, June 27, 2018, 17:07 [IST]

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more