ಎಮ್ಮೆಗೆ ಗುದ್ದಿದ ಡುಕಾಟಿ ಸೂಪರ್ ಬೈಕ್- ಸವಾರ ಸ್ಥಳದಲ್ಲೇ ಸಾವು

Written By:
Recommended Video - Watch Now!
Tata Nexon Faces Its First Recorded Crash

ಗಣರಾಜ್ಯೋತ್ಸವ ಸಂಭ್ರಮ ಹಿನ್ನೆಲೆ ಸೂಪರ್ ಬೈಕ್ ಸವಾರರು ಏರ್ಪಡಿಸಿದ್ದ ಆಪ್ ರೋಡ್ ರೈಡಿಂಗ್ ವೇಳೆ ಅವಘಡವೊಂದು ಸಂಭವಿಸಿದ್ದು, ವೇಗದಲ್ಲಿದ್ದ ಡುಕಾಟಿ 959 ಪಿನಿಗಾಲೆ ಸೂಪರ್ ಬೈಕ್ ಎಮ್ಮೆಗೆ ಗುದ್ದಿದ ಪರಿಣಾಮ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಎಮ್ಮೆಗೆ ಗುದ್ದಿದ ಡುಕಾಟಿ ಸೂಪರ್ ಬೈಕ್- ಸವಾರ ಸ್ಥಳದಲ್ಲೇ ಸಾವು

ಗುಜರಾತಿನ ಅಹಮದಾಬಾದ್‌ ಬಳಿಯ ಗ್ರಾಮವೊಂದರ ಬಳಿ ಈ ಅವಘಡ ನಡೆದಿದ್ದು, ವೇಗದ ಬೈಕ್ ಸವಾರಿ ವೇಳೆ ಎಮ್ಮೆಯೊಂದು ಅಡ್ಡ ಬಂದ ಪರಿಣಾಮ ಈ ದುರಂತ ನಡೆದಿದೆ. ಘಟನೆಯಲ್ಲಿ ಸೂಪರ್ ಬೈಕ್ ಸವಾರ ಮೊಯಿನ್ ಶೇಕ್ ಸ್ಥಳದಲ್ಲೇ ಸಾವನ್ನಪ್ಪಿದ್ದಲ್ಲದೇ ಎಮ್ಮೆ ಕೂಡಾ ಬಲಿಯಾಗಿದೆ.

ಎಮ್ಮೆಗೆ ಗುದ್ದಿದ ಡುಕಾಟಿ ಸೂಪರ್ ಬೈಕ್- ಸವಾರ ಸ್ಥಳದಲ್ಲೇ ಸಾವು

ವರದಿಗಳ ಪ್ರಕಾರ ದುರಂತದಲ್ಲಿ ಸಾವನ್ನಪ್ಪಿದ ಬೈಕ್ ಸವಾರ ಮೊಯಿನ್ ಶೇಕ್ ಡುಕಾಟಿ ಶೋರಂ ಒಂದರಲ್ಲಿ ಸೇಲ್ಸ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎಂಬ ಮಾಹಿತಿ ಇದ್ದು, ಗಣರಾಜ್ಯೋತ್ಸವ ಸಂಭ್ರಮ ಹಿನ್ನೆಲೆ ಡುಕಾಟಿ ಬೈಕ್ ಸವಾರರು ಏರ್ಪಡಿಸಿದ್ದ ಆಪ್ ರೋಡ್ ರೈಡಿಂಗ್‌ನಲ್ಲಿ ಭಾಗಿಯಾಗಿದ್ದನಂತೆ.

ಎಮ್ಮೆಗೆ ಗುದ್ದಿದ ಡುಕಾಟಿ ಸೂಪರ್ ಬೈಕ್- ಸವಾರ ಸ್ಥಳದಲ್ಲೇ ಸಾವು

ಆದ್ರೆ ಆಪ್ ರೋಡ್ ರೈಡಿಂಗ್ ಆರಂಭಗೊಂಡ ಕೆಲ ಗಂಟೆಗಳಲ್ಲೇ ಈ ಅವಘಡ ನಡೆದಿದ್ದು, ಅಹಮದಾಬಾದ್ ಬಳಿಯ ಗ್ರಾಮವೊಂದರ ಬಳಿ ಹಾಯ್ದುಹೋಗುವಾಗ ಏಕಾಏಕಿ ಎಮ್ಮೆ ಒಂದು ಬೈಕಿಗೆ ಅಡ್ಡ ಬಂದಿದೆ.

ಎಮ್ಮೆಗೆ ಗುದ್ದಿದ ಡುಕಾಟಿ ಸೂಪರ್ ಬೈಕ್- ಸವಾರ ಸ್ಥಳದಲ್ಲೇ ಸಾವು

ರಭಸವಾಗಿ ಗುದ್ದಿದ ಪರಿಣಾಮ ಬೈಕಿನ ಮುಂಭಾಗ ಸಂಪೂರ್ಣ ಜಖಂಗೊಂಡಿಲ್ಲದೇ ಮೊಹಿನ್ ಶೇಕ್ ತಲೆ ಭಾಗಕ್ಕೆ ತೀವ್ರ ಹೊಡೆದ ಬಿದ್ದಿದ್ದು, ಅತಿಯಾದ ರಕ್ತ ಸಾವ್ರ ಹಿನ್ನೆಲೆ ಸ್ಥಳದಲ್ಲೇ ಜೀವ ಬಿಟ್ಟಿದ್ದಾನೆ.

Trending On DriveSpark Kannada:

ISI ಗುರುತು ಇಲ್ಲದ ಹೆಲ್ಮೆಟ್ ನಿಷೇಧ ಸದ್ಯಕ್ಕಿಲ್ಲ- ಹಾಗಾದ್ರೆ ಬೆಂಗಳೂರು ಪೊಲೀಸರ ಮುಂದಿನ ಕ್ರಮ ಏನು?

ಕಾನೂನು ಬಾಹಿರವಾಗಿ ಹ್ಯಾಂಡ್‌ಲಿಂಗ್ ಚಾರ್ಜ್- ಟಾಟಾ ಡೀಲರ್ಸ್‌ಗೆ ಕಾದಿತ್ತು ಶಾಕ್..!!

ಟರ್ಬನ್ ಬಣ್ಣಕ್ಕೆ ತಕ್ಕಂತೆ ಬದಲಾಗುತ್ತೆ ಈ ಉದ್ಯಮಿಯ ರೋಲ್ಸ್ ರಾಯ್ಸ್ ಕಾರುಗಳ ಗಮ್ಮತ್ತು...

ಎಮ್ಮೆಗೆ ಗುದ್ದಿದ ಡುಕಾಟಿ ಸೂಪರ್ ಬೈಕ್- ಸವಾರ ಸ್ಥಳದಲ್ಲೇ ಸಾವು

ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಮೊಹಿನ್ ಶೇಕ್ ಉಳಿಸಲು ಸೂಪರ್ ಬೈಕ್ ರೈಡರ್‌ಗಳು ಮತ್ತು ಸ್ಥಳೀಯ ಪೊಲೀಸರು ಪ್ರಯತ್ನಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಕಾರಣ ಅತಿ ವೇಗದಲ್ಲಿದ್ದ ಮೊಹಿನ್ ಶೇಕ್ ಬೈಕ್ 120 ಕಿಮಿಗಿಂತಲೂ ವೇಗದಲ್ಲಿತ್ತು ಎನ್ನಲಾಗಿದೆ.

ಎಮ್ಮೆಗೆ ಗುದ್ದಿದ ಡುಕಾಟಿ ಸೂಪರ್ ಬೈಕ್- ಸವಾರ ಸ್ಥಳದಲ್ಲೇ ಸಾವು

ಸದ್ಯ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ನಡೆದ ದುರಂತದ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದು, ಘಟನೆಗೆ ನಿಖರ ಕಾರಣ ಏನು ಎನ್ನುವ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಎಮ್ಮೆಗೆ ಗುದ್ದಿದ ಡುಕಾಟಿ ಸೂಪರ್ ಬೈಕ್- ಸವಾರ ಸ್ಥಳದಲ್ಲೇ ಸಾವು

ಹೀಗಾಗಿ ಸೂಪರ್ ಬೈಕ್ ಸವಾರರು ಅಗತ್ಯ ಪರಿಕರಗಳೊಂದಿಗೆ ಆಪ್ ರೋಡ್ ರೈಡಿಂಗ್ ಮಾಡಬೇಕಾದ ಅವಶ್ಯಕತೆಯಿದ್ದು, ಗ್ರಾಮೀಣ ಪ್ರದೇಶಗಳ ಬಳಿ ಹಾಯ್ದು ಹೋಗುವ ಮುನ್ನ ಸಾಕಷ್ಟು ಎಚ್ಚರಿಕೆ ವಹಿಸುವುದು ಒಳಿತು.

Trending On DriveSpark Kannada:

ಬಿಡುಗಡೆಗೆ ಸಜ್ಜುಗೊಂಡ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಹೀಗಿದೆ ನೋಡಿ...

ವೇಗದ ಚಾಲನೆಯಲ್ಲಿದ್ದಾಗ ಪಂಚರ್- ಮೂರು ಬಾರಿ ಪಲ್ಟಿ ಹೊಡೆದ ಟಾಟಾ ನೆಕ್ಸಾನ್

ನಟ ದರ್ಶನ್ ದುಬಾರಿ ಬೆಲೆಯ ಸೂಪರ್ ಕಾರಿನ ನಂಬರ್ ಪ್ಲೇಟ್ ಅಸಲಿಯತ್ತು ಏನು?

Trending DriveSpark YouTube Videos

Subscribe To DriveSpark Kannada YouTube Channel - Click Here

English summary
Ducati Crash On Republic Day Ride Kills Rider And A Buffalo.
Story first published: Monday, January 29, 2018, 18:13 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark