'ಡ್ಯೂಟಿ ಅವರ್ಸ್ ಮುಗಿತು' ಎಂದು ವಿಮಾನ ಇಳಿದು ಹೊರ ನಡೆದ ಪೈಲೆಟ್..!!

Written By:

ಇನ್ನೇನು ಆ ವಿಮಾನವು ಜೈಪುರದಿಂದ ದಿಲ್ಲಿಗೆ ಹೊರಡಬೇಕಾಗಿತ್ತು. ಹೀಗಾಗಿ ಪ್ರಯಾಣಿಕರೆಲ್ಲರು ಸಿದ್ಧರಾಗಿ ಕೂತಿದ್ದರು. ಆದ್ರೆ ವಿಮಾನ ಟೇಕ್‌ ಆಫ್ ಆಗುತ್ತೆ ಎಂದು ಕಾಯುತ್ತಿದ್ದ ಪ್ರಯಾಣಿಕರಿಗೊಂದು ಅಚ್ಚರಿ ಕಾದಿತ್ತು. ಜೊತೆಗೆ ಪೈಲೆಟ್ ನಡೆಯಿಂದ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಬಂದೊದಗಿತ್ತು.

ರನ್‌ ವೇನಲ್ಲಿಯೇ ವಿಮಾನ ಬಿಟ್ಟು ಹೋದ ಪೈಲಟ್- ಪರದಾಟಿದ ಪ್ರಯಾಣಿಕರು

ಡ್ಯೂಟಿ ಅವಧಿ ಮುಗಿಯಿತೆಂದು ಏರ್ ಇಂಡಿಯಾ ಪೈಲಟ್ ಒಬ್ಬ ವಿಮಾನವನ್ನು ರನ್‌ವೇನಲ್ಲಿಯೇ ಬಿಟ್ಟು ಹೊರಟು ಹೋಗಿರುವ ಪ್ರಸಂಗವು ಜೈಪುರನಲ್ಲಿ ನಡೆದಿದ್ದು, ಪೈಲಟ್ ವಿಮಾನ ಹಾರಿಸಲು ನಿರಾಕರಿಸಿದ ಕಾರಣ ವಿಮಾನದಲ್ಲಿ ಪ್ರಯಾಣಿಸಬೇಕಿದ್ದ 40 ಪ್ರಯಾಣಿಕರು ಪರಡಾಡಿದ ಘಟನೆ ನಡೆದಿದೆ.

ರನ್‌ ವೇನಲ್ಲಿಯೇ ವಿಮಾನ ಬಿಟ್ಟು ಹೋದ ಪೈಲಟ್- ಪರದಾಟಿದ ಪ್ರಯಾಣಿಕರು

ಹೀಗಾಗಿ ಜೈಪುರದಿಂದ ದೆಹಲಿಗೆ ಹೋಗಬೇಕಿದ್ದ ಪ್ರಯಾಣಿಕರನ್ನು ಬಸ್ ಮೂಲಕ ದೆಹಲಿಗೆ ಕಳುಹಿಸಲಾಗಿದ್ದು, ಇನ್ನೂ ಕೆಲವರಿಗೆ ಹೋಟೆಲ್‍ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಉಳಿದವರನ್ನು ಇಂದು ಬೆಳಗಿನ ವಿಮಾನದಲ್ಲಿ ಕಳುಹಿಸಲಾಗಿದೆ.

ರನ್‌ ವೇನಲ್ಲಿಯೇ ವಿಮಾನ ಬಿಟ್ಟು ಹೋದ ಪೈಲಟ್- ಪರದಾಟಿದ ಪ್ರಯಾಣಿಕರು

ಘಟನೆಗೆ ಕಾರಣ?

ಘಟನೆಗೂ ಮುನ್ನ ಅದೇ ವಿಮಾನದಲ್ಲಿ ಕರ್ತವ್ಯದಲ್ಲಿದ್ದ ಪೈಲೆಟ್ ತನ್ನ ನಿಗದಿತ ಅವಧಿಯ ಸೇವೆಯನ್ನು ಪೂರೈಸಿದ್ದ. ನಿಯಮ ಅನುಸಾರ ನಿಗದಿತ ಅವಧಿ ಹೊರತುಪಡಿಸಿ ವಿಮಾನ ಚಾಲನೆ ಮಾಡಲು ಸಾಧ್ಯವಿಲ್ಲ ಎಂದಿದ್ದಾನೆ.

Recommended Video - Watch Now!
[Kannada] Bajaj Pulsar NS200 ABS Launched In India - DriveSpark
ರನ್‌ ವೇನಲ್ಲಿಯೇ ವಿಮಾನ ಬಿಟ್ಟು ಹೋದ ಪೈಲಟ್- ಪರದಾಟಿದ ಪ್ರಯಾಣಿಕರು

ಈ ಹಿನ್ನೆಲೆ 'ಪೈಲಟ್‌ ಕರ್ತವ್ಯದ ಅವಧಿ ಮುಗಿದಿದ್ದರಿಂದ ವಿಮಾನ ಹಾರಿಸಲಿಲ್ಲ,' ಎಂಬುದನ್ನು ಸ್ಪಷ್ಟಪಡಿಸಿರುವ ಸಂಗಾನೇರ ವಿಮಾನ ನಿಲ್ದಾಣದ ನಿರ್ದೇಶಕ ಜೆ.ಎಸ್.ಬಲ್ಹಾರಾ, ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿತ್ತು ಎಂದಿದ್ದಾರೆ.

ತಪ್ಪದೇ ಓದಿ-ನಂಬಿದರೆ ನಂಬಿ ಬಿಟ್ಟರೆ ಬಿಡಿ... 10ನೇ ತರಗತಿ ಹುಡುಗ ಕಂಡು ಹಿಡಿದ ಈ ಬೈಕ್ ನೀರಿನಿಂದ ಚಲಿಸುತ್ತೆ !!

ರನ್‌ ವೇನಲ್ಲಿಯೇ ವಿಮಾನ ಬಿಟ್ಟು ಹೋದ ಪೈಲಟ್- ಪರದಾಟಿದ ಪ್ರಯಾಣಿಕರು

ಇನ್ನು ವಿಮಾನಯಾನ ನಿರ್ದೇಶನಾಲಯದ ಮಾರ್ಗಸೂಚಿಯಂತೆ ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ಪೈಲಟ್ ಅವಧಿ ಮುಗಿದ ನಂತರ ಕಾರ್ಯ ನಿರ್ವಹಿಸಬಾರದು ಎಂದಿದೆ.

ರನ್‌ ವೇನಲ್ಲಿಯೇ ವಿಮಾನ ಬಿಟ್ಟು ಹೋದ ಪೈಲಟ್- ಪರದಾಟಿದ ಪ್ರಯಾಣಿಕರು

ಇದೇ ಕಾರಣಕ್ಕೆ ದಿಲ್ಲಿಯಿಂದ ಜೈಪುರ‌ಕ್ಕೆ ಬಂದ ವಿಮಾನವು ನಿಗದಿತ ಸಮಯದಲ್ಲಿ ಮತ್ತೆ ಟೇಕ್ ಆಫ್ ಆಗಬೇಕಿತ್ತು. ಆದ್ರೆ ಅದೇ ವೇಳೆಗೆ ಪೈಲಟ್ ಕರ್ತವ್ಯ ಅವಧಿ ಕೂಡಾ ಮುಗಿದಿತ್ತು. ಇದರಿಂದ ಮಾರ್ಗಸೂಚಿಯಂತೆ ವಿಮಾನ ಚಲಾಯಿಸಲು ಪೈಲಟ್ ನಿರಾಕರಿಸಿದ್ದಾನೆ.

Trending on DriveSpark Kannada:

ತಮ್ಮ ಹುಟ್ಟುಹಬ್ಬದಂದು ಕಾರ್ ಡ್ರೈವರ್ ಗೆ ದುಬಾರಿ ಗಿಫ್ಟ್ ಕೊಟ್ಟ ಅನುಷ್ಕಾ ಶೆಟ್ಟಿ..!!

ಜೈಲು ಸೇರಿದ ಐಷಾರಾಮಿ ಕಾರುಗಳ ಒಡೆಯ ಸೌದಿ ಅರೇಬಿಯ ದೊರೆ ಸಲ್ಮಾನ್

Read more on plane ವಿಮಾನ
English summary
Read in Kannada: Duty hours up, says Air India pilot; passengers driven to Delhi from Jaipur.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark