ಸಂಘಟನೆಯ ಹೆಸರಿನಲ್ಲಿ ಕಾರಿಗೆ ಹಸಿರು ಬೋರ್ಡ್ ಹಾಕಿದ್ರೆ ಬೀಳುತ್ತೆ ದಂಡ...

ಸಂಘಟನೆಯ ಹೆಸರಿನಲ್ಲಿ ಕಾರಿಗೆ ಹಸಿರು ಬೋರ್ಡ್ ಹಾಕಿದ್ರೆ ಬೀಳುತ್ತೆ ದಂಡ...

By Praveen Sannamani

ಇತ್ತೀಚೆಗೆ ನಾವು ನೀವೆಲ್ಲಾ ನೋಡಿರುವ ಹಾಗೆ ಕಣ್ಣು ಹಾಯಿಸಿದ ಕಡೆಗೆಲ್ಲಾ ಸಂಘಟನೆಗಳ ಹೆಸರಿನಲ್ಲಿ ದೊಡ್ಡದಾಗಿ ಬೋರ್ಡ್ ಹಾಕಿಕೊಂಡಿರುವ ಕಾರುಗಳ ಓಡಾಟ ಒಂದು ರೀತಿ ಫ್ಯಾಶನ್ ಆಗಿ ಮಾರ್ಪಡುತ್ತಿದೆ. ಜನರಿಗೆ ಗೊತ್ತೆ ಇರದ ಅದೆಷ್ಟೋ ಸುಲಗೆ ಸಂಘಟನೆಗಳು ಸಾರಿಗೆ ನಿಯಮಗಳಿಗೆ ವಿರುದ್ಧವಾಗಿ ಹಸಿರು ಬೋರ್ಡ್ ಬಳಕೆ ಮಾಡುತ್ತಿದ್ದು, ಇದರ ವಿರುದ್ಧ ಟ್ರಾಫಿಕ್ ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ.

ಸಂಘಟನೆಯ ಹೆಸರಿನಲ್ಲಿ ಕಾರಿಗೆ ಹಸಿರು ಬೋರ್ಡ್ ಹಾಕಿದ್ರೆ ಬೀಳುತ್ತೆ ದಂಡ...

ನಮ್ಮಲ್ಲಿ ಕೆಲವರ ಮನಸ್ಥಿತಿ ಹೇಗಾಗಿದೆ ಅಂದ್ರೆ, ಕಾನೂನಿಗೆ ವಿರುದ್ಧವಾಗಿ ನಡೆಯುವುದೇ ಒಂದು ಫ್ಯಾಶನ್ ಎಂದುಕೊಂಡಿದ್ದಾರೆ. ಇದರ ಪರಿಣಾಮವೇ, ದಿನದಿಂದ ದಿನಕ್ಕೆ ಸಾರಿಗೆ ನಿಯಮ ಉಲ್ಲಂಘನೆಯ ಪ್ರಕರಣಗಳು ಹೆಚ್ಚುತ್ತಿದ್ದು, ಅದರಲ್ಲೂ ರಾಜಕೀಯ ಮತ್ತು ಸಂಘಟನೆಗಳ ಹೆಸರಿನಲ್ಲಿ ಹಸಿರು ಬೋರ್ಡ್ ಹಾಕಿಕೊಂಡು ಪೋಸ್ ಕೊಡುವವರ ಸಂಖ್ಯೆ ಮಾತ್ರ ಮಿತಿ ಮೀರಿದೆ.

ಸಂಘಟನೆಯ ಹೆಸರಿನಲ್ಲಿ ಕಾರಿಗೆ ಹಸಿರು ಬೋರ್ಡ್ ಹಾಕಿದ್ರೆ ಬೀಳುತ್ತೆ ದಂಡ...

ಹಸಿರು ಬಣ್ಣದ ಬೋರ್ಡ್ ಹಾಕಿಕೊಂಡು ಶೋಕಿ ಮಾಡ್ತಿದ್ದ ವಿವಿಧ ಸಂಘಟನೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು ಹೆಸರಿನ ಗ್ರಿನ್ ಬೋರ್ಡ್‌ಗೆ ಲಗಾಮು ಹಾಕಲು ಮುಂದಾಗಿರುವ ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ.

ಸಂಘಟನೆಯ ಹೆಸರಿನಲ್ಲಿ ಕಾರಿಗೆ ಹಸಿರು ಬೋರ್ಡ್ ಹಾಕಿದ್ರೆ ಬೀಳುತ್ತೆ ದಂಡ...

ವಾಹನಗಳ ನಂಬರ್ ಪ್ಲೇಟ್‌ಗಳ ಮೇಲೆ ಕೆಲವು ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿ, ಉಪಾಧ್ಯಕ್ಷರು ಎಂದು ಬೋರ್ಡ್ ಹಾಕಿಕೊಂಡಿದ್ದ ಕೆಲವು ಸಂಘಗಳ ಪದಾಧಿಕಾರಿಗಳ ವಾಹನಗಳ ಮೇಲಿನ ನಾಮ ಫಲಕಗಳನ್ನು ಬೆಂಗಳೂರು ನಗರ ಟ್ರಾಫಿಕ್ ಪೊಲೀಸರು ತೆಗೆದುಹಾಕಿದ್ದಾರೆ.

ಸಂಘಟನೆಯ ಹೆಸರಿನಲ್ಲಿ ಕಾರಿಗೆ ಹಸಿರು ಬೋರ್ಡ್ ಹಾಕಿದ್ರೆ ಬೀಳುತ್ತೆ ದಂಡ...

ಅಲ್ಲದೇ, ಈ ರೀತಿಯ ನಂಬರ್ ಪ್ಲೇಟ್ ಬೋರ್ಡ್‌ಗಳನ್ನು ಹಾಕುವುದನ್ನು ನಿಷೇಧ ಮಾಡಿರುವ ಬಗ್ಗೆ ಮನವರಿಕೆ ಮಾಡಿಕೊಡಲಾಗಿದ್ದು, ಪುನಃ ಸಿಕ್ಕಿಬಿದ್ದಲ್ಲಿ ಭಾರೀ ಪ್ರಮಾಣದಲ್ಲಿ ದಂಡ ವಿಧಿಸುವ ಬಗ್ಗೆ ಎಚ್ಚರಿಕೆ ನೀಡಲಾಗುತ್ತಿದೆ.

ಸಂಘಟನೆಯ ಹೆಸರಿನಲ್ಲಿ ಕಾರಿಗೆ ಹಸಿರು ಬೋರ್ಡ್ ಹಾಕಿದ್ರೆ ಬೀಳುತ್ತೆ ದಂಡ...

ಸಾರಿಗೆ ನಿಯಮದ ಪ್ರಕಾರ ಬಿಳಿ ಬಣ್ಣದ ಪ್ಲೇಟ್ ಮೇಲೆ ಕ್ರಮಬದ್ಧ ಆಕಾರದಲ್ಲಿ ಕಪ್ಪು ಬಣ್ಣದಿಂದಲೇ ಸಂಖ್ಯೆಗಳನ್ನು ಮುದ್ರಿಸಬೇಕು ಎಂದು ತಿಳಿಸಿಲಾಗಿದ್ದು, ಇದರ ಜೊತೆಗೆ ನಿಯಮ ಬಾಹಿರವಾಗಿ ಹಸಿರು ಬೋರ್ಡ್ ಅಳವಡಿಸುವವರ ವಿರುದ್ಧವೂ ಸೂಕ್ತ ಕ್ರಮ ಜರಗಿಸುವ ಎಚ್ಚರಿಕೆ ನೀಡಲಾಗಿದೆ.

ಸಂಘಟನೆಯ ಹೆಸರಿನಲ್ಲಿ ಕಾರಿಗೆ ಹಸಿರು ಬೋರ್ಡ್ ಹಾಕಿದ್ರೆ ಬೀಳುತ್ತೆ ದಂಡ...

ಇನ್ನು ಬೆಂಗಳೂರು ಪೊಲೀಸರ ಮಾದರಿಯಲ್ಲೇ ಉತ್ತರಾಖಂಡ್ ಪೊಲೀಸರು ಸಹ ನಿಯಮಬಾಹಿರ ಹಸಿರು ಬಣ್ಣದ ನಾಮಫಲಕಗಳ ವಿರುದ್ಧ ಹೊಸ ಅಭಿಯಾನ ಆರಂಭಿಸಿದ್ದು, ರಾಜಕೀಯ ಮುಖಂಡರು ಮತ್ತು ವಿವಿಧ ಸಂಘಟನೆಗಳಿಗೆ ಸೇರಿದ 5,640 ವಾಹನಗ ಹಸಿರು ಬಣ್ಣದ ಬೋರ್ಡ್‌ಗಳನ್ನು ತೆಗೆದುಹಾಕಲಾಗಿದೆ.

ಸಂಘಟನೆಯ ಹೆಸರಿನಲ್ಲಿ ಕಾರಿಗೆ ಹಸಿರು ಬೋರ್ಡ್ ಹಾಕಿದ್ರೆ ಬೀಳುತ್ತೆ ದಂಡ...

ಇದರಲ್ಲಿ ಕಾರುಗಳು ಅಷ್ಟೇ ಅಲ್ಲದೇ ಕೆಲವು ರಾಜಕೀಯ ಮುಖಂಡರ ಬೈಕ್‌ಗಳ ಸಹ ಸೇರಿದ್ದು, ಗಂಭೀರ ಪ್ರಕರಣಗಳಲ್ಲಿ ಅಂತಹ ವಾಹನಗಳನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ. ಇನ್ನು ಕೆಲವರಿಗೆ ದಂಡ ವಿಧಿಸಿದಲ್ಲದೇ ವಸೂಲಿ ಸಂಘಟನೆಯ ವಾಹನಗಳಿಗೆ ಖಡಕ್ ಎಚ್ಚರಿಕೆ ನೀಡಲಾಗಿದೆ.

ಸಂಘಟನೆಯ ಹೆಸರಿನಲ್ಲಿ ಕಾರಿಗೆ ಹಸಿರು ಬೋರ್ಡ್ ಹಾಕಿದ್ರೆ ಬೀಳುತ್ತೆ ದಂಡ...

ಇದರ ಜೊತೆಗೆ ಎಸ್‌ಯುವಿ ಕಾರುಗಳ ಖದರ್ ಹೆಚ್ಚಿಸುವ ಬುಲ್ ಬಾರ್ ಹಾಗೂ ಕ್ರ್ಯಾಶ್ ಗಾರ್ಡ್‌ಗಳನ್ನು ಕೇಂದ್ರ ಸರ್ಕಾರವು ಬ್ಯಾನ್ ಮಾಡಿದ್ದು, ಹೊಸ ಆದೇಶದಂತೆ ಎಲ್ಲಾ ರಾಜ್ಯಗಳ ಸಾರಿಗೆ ಸಂಸ್ಥೆಗಳು ಬುಲ್‌ ಬಾರ್ ಹಾಗೂ ಕ್ರ್ಯಾಶ್‌ ಗಾರ್ಡ್‌‌ಗಳನ್ನು ಹಾಕಿರುವ ವಾಹನಗಳ ವಿರುದ್ಧ ಕ್ರಮ ಜರಗಿಸಲು ಆರಂಭಿಸಲಾಗುತ್ತಿದೆ.

ಸಂಘಟನೆಯ ಹೆಸರಿನಲ್ಲಿ ಕಾರಿಗೆ ಹಸಿರು ಬೋರ್ಡ್ ಹಾಕಿದ್ರೆ ಬೀಳುತ್ತೆ ದಂಡ...

ಸಾರಿಗೆ ನಿಯಮ ಉಲ್ಲಂಘಿಸುವವರ ವಿರುದ್ಧ ಸೆಕ್ಷನ್‌ 190 ಹಾಗೂ 191 ಅಡಿ ಕ್ರಮ ಜರುಗಿಸಿ ದಂಡ ವಿಧಿಸಬೇಕೆಂದು ಕೇಂದ್ರ ಸಾರಿಗೆ ಸಚಿವಾಲಯವು ಸುತ್ತೋಲೆ ಹೊರಡಿಸಿದ್ದು, ಅದರಂತೆಯೇ ಕಾರು ಮಾಲೀಕರಿಗೆ 1 ಸಾವಿರ ದಂಡ ವಿಧಿಸುವುದಲ್ಲದೇ ಹೊಸ ನಿಯಮ ಪಾಲನೆಗೆ ಖಡಕ್ ಸೂಚನೆ ನೀಡಲಾಗುತ್ತಿದೆ.

ಸಂಘಟನೆಯ ಹೆಸರಿನಲ್ಲಿ ಕಾರಿಗೆ ಹಸಿರು ಬೋರ್ಡ್ ಹಾಕಿದ್ರೆ ಬೀಳುತ್ತೆ ದಂಡ...

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಮಾರಾಟಕ್ಕಿರುವ 132 ಕೋಟಿ ಮೌಲ್ಯದ ಈ ನಂಬರ್ ಪ್ಲೇಟ್‌ ವಿಶೇಷತೆ ಏನು?

ವಾಹನ ಪ್ರಿಯರಿಗೆ ಸಿಹಿ ಸುದ್ಧಿ ನೀಡಿದ ಸಾರಿಗೆ ಇಲಾಖೆ..

ಅಪಘಾತಕ್ಕೀಡಾದ ಕ್ಯಾಮ್ರಿ ಕಾರನ್ನೇ ಪ್ರದರ್ಶನಕ್ಕಿಟ್ಟ ಟೊಯೊಟಾ ಡೀಲರ್ಸ್

ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ

ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

ವಿಡಿಯೋ- ಟೊಯೊಟಾ ಇನೋವಾ ಗುದ್ದಿದ ರಭಸಕ್ಕೆ 30 ಅಡಿ ದೂರ ಹೋಗಿ ಬಿದ್ದ ಯುವಕ...

Most Read Articles

Kannada
English summary
Displaying Political And Government Position On Cars And Bikes Illegal — Police Seize Vehicles.
Story first published: Friday, May 25, 2018, 17:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X