ಆಕ್ಟಿವಾ ಗೆಳತಿ, ಹೀರೋ ಮ್ಯಾಸ್ಟ್ರೊ ಸ್ಕೂಟರ್ ರಸ್ತೆಗೆ

Posted By:
ಹೀರೊ ಮೋಟೊಕಾರ್ಪ್ ಕಂಪನಿಯ ಬಹುನಿರೀಕ್ಷಿತ 110 ಸಿಸಿಯ ಮ್ಯಾಸ್ಟ್ರೊ ಹೆಸರಿನ ಆಟೋಮ್ಯಾಟಿಕ್ ಸ್ಕೂಟರ್ ಗೋವಾ ರಸ್ತೆಗಿಳಿದೆ. ಶೀಘ್ರದಲ್ಲಿ ಬೆಂಗಳೂರು ಸೇರಿದಂತೆ ದೇಶದ ವಿವಿಧ ಭಾಗಗಳಿಗೆ ಮ್ಯಾಸ್ಟ್ರೊ ಸ್ಕೂಟರ್ ಆಗಮಿಸುವ ನಿರೀಕ್ಷೆಯಿದೆ.

ಹೋಂಡಾ ಆಕ್ಟಿವಾ ನಂತರದ ಕಂಪನಿಯ ಎರಡನೇ ಸ್ಕೂಟರ್ ಇದಾಗಿದೆ. ಇದು 109 ಸಿಸಿ, 4 ಸ್ಟ್ರೋಕ್ ಎಂಜಿನ್ ಆಗಿದ್ದು, 8 ಹಾರ್ಸ್ ಪವರ್ ಮತ್ತು 9.1 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಸ್ಟೈಲ್ ವಿಷ್ಯದಲ್ಲೂ ಆಕ್ಟಿವಾಕ್ಕಿಂತ ಕೊಂಚ ಭಿನ್ನವಾಗಿ ಗಮನಸೆಳೆಯುತ್ತದೆ.

ಈ ಸ್ಕೂಟರಲ್ಲಿ ಸೆಲ್ಫ್ ಸ್ಟಾರ್ಟ್ ಮತ್ತು ಕಾಂಬಿ ಬ್ರೇಕಿಂಗ್ ಸಿಸ್ಟಮ್ ಇದೆ. ಕಾಂಬಿ ಬ್ರೇಕಿಂಗ್ ಅಂದರೆ ಮುಂಭಾಗ ಮತ್ತು ಹಿಂಭಾಗದ ಬ್ರೇಕನ್ನು ಜೊತೆಯಾಗಿ ಹಾಕುವ ವ್ಯವಸ್ಥೆ. ಆಕ್ಟಿವಾಕ್ಕೆ ಹೋಲಿಸಿದರೆ ಡಿಜಿಟಲ್ ಅನಲಾಗ್ ಇನ್ಸಟ್ರುಮೆಂಟ್ ಕ್ಲಸ್ಟರ್ ಹೊಸ ಫೀಚರ್ ಆಗಿದೆ.

ಗೋವಾದಲ್ಲಿ ನೂತನ ಮ್ಯಾಸ್ಟ್ರೊ ಎಕ್ಸ್ ಶೋರೂಂ ದರ 48,280 ರುಪಾಯಿ ಆಗಿದೆ. ದೆಹಲಿ ವಾಹನ ಪ್ರದರ್ಶನದಲ್ಲಿ ಮ್ಯಾಸ್ಟ್ರೊ ಸ್ಕೂಟರನ್ನು ಕಂಪನಿ ಅನಾವರಣ ಮಾಡಿತ್ತು. ನೂತನ ಮ್ಯಾಸ್ಟ್ರೊ ನೀಲಿ, ಹಸಿರು, ಕೆಂಪು, ಬಿಳಿ, ಕಪ್ಪು ಮತ್ತು ಸಿಲ್ವರ್ ಎಂಬ ಆರು ಬಣ್ಣಗಳಲ್ಲಿ ದೊರಕುತ್ತದೆ.

ಪ್ರಮುಖ ಫೀಚರುಗಳು

* ಶಕ್ತಿಶಾಲಿ 109 ಸಿಸಿ ಎಂಜಿನ್

* ಕಂಬೈನ್ ಬ್ರೇಕಿಂಗ್ ಸಿಸ್ಟಮ್

* ಡಿಜಿಟಲ್ ಅನಲಾಗ್ ಕಾಂಬೊ ಮೀಟರ್ ಕನ್ಸೋಲ್

* ಮಲ್ಟಿ ಲೆವರ್ ಕೀ

* ಬೋಲ್ಡ್ ಆಗಿರುವ ಹಲವು ರಿಫ್ಲೆಕ್ಟರ್ ಹೆಡ್ ಲ್ಯಾಂಪ್

* ಆಕರ್ಷಕ ಟೇಲ್ ಲ್ಯಾಂಪ್, ಸ್ಪಷ್ಟ ಲೆನ್ಸ್ ಇರುವ ವಿಂಕರ್ಸ್

* ಆರಾಮದಾಯಕ ಸೀಟು

* ನಿರ್ವಹಣೆ ಅಗತ್ಯವಿಲ್ಲದ ಬ್ಯಾಟರಿ

* ಹೇರಳ ಸಂಗ್ರಹ ಸ್ಥಳಾವಕಾಶ

English summary
Hero motocorp launched Maestro scooter in Goa at Rs.48,280. The maestro is equipped with 109 cc engine and it churn out 8 bhp power. Maestro Scooter expected soon available in most parts of the country.
Story first published: Monday, April 2, 2012, 11:50 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark