ಹೆಲ್ಮೆಟ್ ಧರಿಸದೇ ಬೈಕಲ್ಲಿ ರೈಡ್ ಹೊಡೆದ ಬಿಜೆಪಿ ಶಾಸಕರು

Written By:
To Follow DriveSpark On Facebook, Click The Like Button
ವಿಧಾನಸಭೆಗೆ ತೆರಳುವ ಸಂದರ್ಭದಲ್ಲಿ ಗೋವಾ ಬಿಜೆಪಿ ಶಾಸಕರು ಹೆಲ್ಮೆಟ್ ಧರಿಸದೇ ಬೈಕ್‌ನಲ್ಲಿ ಸಂಚರಿಸಿರುವುದು ಭಾರಿ ವಿವಾದಕ್ಕೆಡೆ ಮಾಡಿದೆ. ಈ ನಡುವೆ ಘಟನೆಗೆ ಬಿಜೆಪಿ ಶಾಸಕ ಮೈಕಲ್ ಲೊಬೊ ವಿಷಾದ ವ್ಯಕ್ತಪಡಿಸಿದ್ದಾರೆ.

ಸಂಚಾರ ನಿಯಮ ಪ್ರಕಾರ ಹೆಲ್ಮೆಟ್ ಧರಿಸದೇ ಬೈಕ್‌ನಲ್ಲಿ ಪಯಣಿಸುವುದು ಶಿಕ್ಷಾರ್ಹವಾಗಿದೆ. ಇನ್ನು ಸಾಮಾನ್ಯ ಜನತೆಗೆ ಮಾದರಿಯಾಗಬೇಕಿದ್ದ ಶಾಸಕರೇ ನಿಯಮ ಉಲ್ಲಂಘಿಸಿರುವುದು ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಏತನ್ಮಧ್ಯೆ ಘಟನೆ ಬಗ್ಗೆ ತನಿಖೆ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವರು ಭರವಸೆ ನೀಡಿದ್ದಾರೆ.

ಖಂಡಿತವಾಗಿವೂ ಘಟನೆಗೆ ನಾವು ವಿಷಾದಿಸುತ್ತಿದ್ದೇವೆ. ತಾನು ಹಾಗೂ ತಮ್ಮ ಸಹಚರರು ಈ ರೀತಿ ನಿಯಮ ಉಲ್ಲಂಘಿಸಬಾರದಿತ್ತು ಎಂದು ಲೊಬೊ ಮಾಧ್ಯಮ ಮಿತ್ರರಿಗೆ ತಿಳಿಸಿದ್ದಾರೆ.

ಶಾಸಕರ ತಂಡವೊಂದು ಗೋವಾ ವಿಧಾನಸಭಾ ಸಮೀಪದ ಹೈವೇನಲ್ಲಿ 'ಬೈಕ್ ಟೂರ್' ಹಮ್ಮಿಕೊಂಡಿತ್ತು. ಈ ಪೈಕಿ ಬಿಜೆಪಿ ಶಾಸಕ ಕಾರ್ಲೋಸ್ ಅಲ್ಮೆಡಾ ನಂಬರ್ ಪ್ಲೇಟ್ ಇಲ್ಲದೆಯೇ ಬೈಕ್ ಓಡಿಸಿರುವುದು ಮತ್ತಷ್ಟು ವಿವಾದಕ್ಕೆಡೆ ಮಾಡಿತ್ತು.

English summary
A day after his colleagues rode their motorcycles to the Goa Legislative Assembly Complex without wearing helmet, BJP MLA Michael Lobo, a member of the bikers team, tendered apology on Saturday for their "conduct" even as the transport minister promised inquiry into the incident.
Story first published: Monday, April 8, 2013, 14:29 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark