ಭಾರತಕ್ಕೆ ಆಗಮನವಾಗಲಿದೆ ಮತ್ತೊಂದು ಬೈಕ್

Written By:
To Follow DriveSpark On Facebook, Click The Like Button
ಜಪಾನ್‌ ಟೊಕಿಯೊ ತಲಹದಿಯ ವಾಹನ ತಯಾರಕ ಕಂಪನಿಯಾದ ಓಶಿರೊ (Oshiro) ಭಾರತ ಮಾರುಕಟ್ಟೆಗೆ ನೂತನ ಬೈಕ್‌ವೊಂದನ್ನು ಪರಿಚಯಿಸಲಿದೆ.

ಗ್ರಾಹಕರ ಸಂತೃಪ್ತಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಿರುವ ಪ್ರಸ್ತುತ ಕಂಪನಿಯು ದೇಶದಲ್ಲಿ ನೂತನ ಅಲೆಯೆಬ್ಬಿಸುವ ನಿರೀಕ್ಷೆ ಹೊಂದಿದೆ.

ಗುಣಮಟ್ಟದ ದ್ವಿಚಕ್ರ ವಾಹನ ನೀಡುವುದು ಓಶಿರೊ ಗುರಿಯಾಗಿದೆ. ಈ ಮುಖಾಂತರ ದೇಶದ ರಸ್ತೆಗಳಲ್ಲಿ 100ಸಿಸಿಯಿಂದ ಆರಂಭವಾಗಿ 150ಸಿಸಿ ವರೆಗೆ ಸದ್ದು ಮಾಡಲಿದೆ.

ಮಹಾರಾಷ್ಟ್ರದ ಸತರಾ ಎಂಬಲ್ಲಿ ಓಶಿರೊ ಬೈಕ್‌ಗಳು ಸ್ಥಳೀಯವಾಗಿ ಉತ್ಪಾದನೆಯಾಗಲಿದೆ. ಇದು ಸ್ಪರ್ಧಾತ್ಮಕ ದರಗಳಲ್ಲಿ ಮಾರಾಟ ಮಾಡಲು ಕಂಪನಿಗೆ ನೆರವಾಗಲಿದೆ.

ಮೂಲಗಳ ಪ್ರಕಾರ ಆಗಸ್ಟ್ ವೇಳೆಗೆ ಓಶಿರೊ ಭಾರತ ಘಟಕದ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದ್ದು, ಬೆನ್ನಲ್ಲೇ ಬೈಕ್ ಉತ್ಪಾದನೆ ಕಾರ್ಯ ಆರಂಭವಾಗಲಿದೆ. ಇದೇ ಸಂದರ್ಭದಲ್ಲಿ ದೇಶದಲ್ಲಿ ಡೀಲರ್‌ಶಿಪ್ ವೃದ್ಧಿಸುವತ್ತ ಕಂಪನಿ ಗಮನ ಹರಿಸಿದೆ.

English summary
Oshiro, a Tokyo, Japan based motorcycle and scooter manufacturer is preparing to launch its products in India soon.
Story first published: Tuesday, March 26, 2013, 16:49 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark