ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಿವಿಎಸ್ ಅಪಾಚಿ ಆರ್‌ಆರ್ 310ಎಸ್
ಬಿಡುಗಡೆಗೆ ಸಿದ್ಧಗೊಳ್ಳುತ್ತಿರುವ ಟಿವಿಎಸ್ ಹೊಸ ಮಾದರಿಯ ಅಪಾಚಿ ಆರ್‌ಆರ್ 310ಎಸ್ ಬೈಕ್ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸಿದ್ದು, ಅಪಾಚಿ ಆರ್‌ಆರ್ 310ಎಸ್ ಮಾದರಿಯ ಹೆಚ್ಚಿನ ಮಾಹಿತಿ ಇಲ್ಲಿದೆ.
ಬಿಡುಗಡೆಗೆ ಸಿದ್ಧಗೊಳ್ಳುತ್ತಿರುವ ಟಿವಿಎಸ್ ಹೊಸ ಮಾದರಿಯ ಅಪಾಚಿ ಆರ್‌ಆರ್ 310ಎಸ್ ಬೈಕ್ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸಿದ್ದು, ಅಪಾಚಿ ಆರ್‌ಆರ್ 310ಎಸ್ ಮಾದರಿಯ ಹೆಚ್ಚಿನ ಮಾಹಿತಿ ಇಲ್ಲಿದೆ.

ಸದ್ಯ ಭಾರತೀಯ ಆಟೋ ಉದ್ಯಮ ವಲಯದಲ್ಲಿ ಅಪಾಚಿ ಆರ್‌ಟಿಆರ್ ಬೈಕ್ ಸರಣಿಗಳ ಮೂಲಕ ಭಾರೀ ಸದ್ದು ಮಾಡಿದ್ದ ಟಿವಿಎಸ್, ಇದೀಗ ಮತ್ತೊಂದು ಹೊಸ ಮಾದರಿಯ ಬೈಕ್ ಪರಿಚಯಿಸುತ್ತಿದೆ.

ಆಕರ್ಷಕ ಹೊರ ವಿನ್ಯಾಸದೊಂದಿಗೆ ಸಿದ್ಧಗೊಂಡಿರುವ ಅಪಾಚಿ ಆರ್‌ಆರ್ 310ಎಸ್ ಬಿಡುಗಡೆಗೆ ಸಜ್ಜುಗೊಳ್ಳುತ್ತಿದ್ದು, ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸಿದೆ.

313 ಸಿಸಿ ಸಿಂಗಲ್ ಸಿಲಿಂಡರ್ ಹಾಗೂ ಲಿಕ್ವಿಟ್ ಕೂಲ್ಡ್ ಎಂಜಿನ್ ಹೊಂದಿರುವ ಟಿವಿಎಸ್ ಅಪಾಚಿ ಆರ್‌ಆರ್ 310ಎಸ್ ಬೈಕ್, 34ಬಿಎಚ್‌ಪಿ ಮತ್ತು 28 ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದೆ.

ಇದರ ಜೊತೆಗೆ 6 ಸ್ಪೀಡ್ ಗೇರ್‌ಬಾಕ್ಸ್ ಹೊಂದಿದ್ದು, ರೇಸ್ ಬೈಕ್ ಮಾದರಿಯಲ್ಲಿ ಹೊರ ವಿನ್ಯಾಸವನ್ನು ಅಭಿವೃದ್ಧಿಗೊಳಿಸಲಾಗಿದೆ.

ಕೆಲವು ಮೂಲಗಳ ಪ್ರಕಾರ ಟಿವಿಎಸ್ ಹೊಸ ಬೈಕ್ ಅಪಾಚಿ ಆರ್‌ಆರ್ 310ಎಸ್ ಶೀಘ್ರದಲ್ಲೇ ಬಿಡುಗಡೆಗೊಳ್ಳಲಿದ್ದು, ಪ್ರಮುಖ ಬೈಕ್ ಮಾದರಿಗಳಿಗೆ ತೀವ್ರ ಸ್ಪರ್ಧೆ ಒಡ್ಡುವ ಸಾಧ್ಯತೆಗಳಿವೆ.

ಟಿವಿಎಸ್ ಅಪಾಚಿ ಆರ್‌ಆರ್ 310ಎಸ್ ಬೈಕ್ ಮಾದರಿಯೂ ಕೆಟಿಎಂ ಆರ್‌ಸಿ 390, ಯಮಹಾ ಆರ್3 ಮತ್ತು ಹೋಂಡಾ ಸಿಬಿಆರ್ 250ಆರ್ ಬೈಕ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.


Click it and Unblock the Notifications








