ಭಾರತದಲ್ಲಿ ಬಿಡುಗಡೆಗೊಂಡ ಅಪಾಚೆ ಆರ್‍‍‍ಟಿಆರ್ 160 ರೇಸ್ ಎಡಿಶನ್..

Written By: Rahul TS

ದೇಶಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಟಿವಿಎಸ್ ಕೆಲ ದಿನಗಳ ಹಿಂದಷ್ಟೆ ತಮ್ಮ ಅಪಾಚೆ ಆರ್‍‍‍ಟಿಆರ್ 160 4ವಿ ಬೈಕ್‍‍ಗಳನ್ನು ಬಿಡುಗಡೆಗೊಳಿಸಿತ್ತು. ಇದೀಗ ಸಂಸ್ಥೆಯು ಹೊಸದಾಗಿ ಅಪಾಚೆ ಆರ್‍‍‍ಟಿಆರ್ 160 ಬೈಕಿನ ರೇಸ್ ಎಡಿಶನ್ ಅನ್ನು ಬಿಡುಗಡೆಗೊಳಿಸಿದ್ದು, ರೆಗ್ಯುಲರ್ ಮಾದರಿಗಿಂತ ವಿನ್ಯಾಸದಲ್ಲಿ ಗುರುತರ ಬದಲಾವಣೆಗಳನ್ನು ಪಡೆದುಕೊಂಡಿವೆ.

ಭಾರತದಲ್ಲಿ ಬಿಡುಗಡೆಗೊಂಡ ಅಪಾಚೆ ಆರ್‍‍‍ಟಿಆರ್ 160 ರೇಸ್ ಎಡಿಶನ್..

ಟಿವಿಎಸ್ ಅಪಾಚೆ ಆರ್‍‍‍ಟಿಆರ್ 160 ರೇಸ್ ಎಡಿಶನ್‍ನ ಫ್ರಂಟ್ ಡಿಸ್ಕ್ ವೇರಿಯಂಟ್ ಬೈಕ್‍‍ಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 79,715 ಸಾವಿರಕ್ಕೆ ನಿಗದಿಪಡಿಸಲಾಗಿದ್ದು, ಮತ್ತು ರೀರ್ ಡಿಸ್ಕ್ ಬ್ರೇಕ್ ಆವೃತ್ತಿಯ ಬೈಕ್‍‍ಗಳನ್ನು ರೂ 82,044 ಸಾವಿರಕ್ಕೆ ನಿಗದಿಪಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಗೊಂಡ ಅಪಾಚೆ ಆರ್‍‍‍ಟಿಆರ್ 160 ರೇಸ್ ಎಡಿಶನ್..

ಹೊಸದಾಗಿ ಬಿಡುಗಡೆಗೊಂಡ ಅಪಾಚೆ ಆರ್‍‍‍ಟಿಆರ್ 160 ರೇಸ್ ಎಡಿಶನ್ ಬೈಕ್‍‍ಗಳು ಬಿಳಿ ಬಣ್ಣದೊಂದಿಗೆ ಮುಂಭಾಗದ ಮಡ್‍ಗಾರ್ಡ್, ಫ್ಯುಯಲ್ ಟ್ಯಾಂಕ್ ಮತ್ತು ಹಿಂಭಾಗದ ಕೌಲ್‍‍ನಲ್ಲಿ ಬಳಸಲಾದ ಕೆಂಪು ಗ್ರಾಪಿಕ್ಸ್ ಹೊಂದಿರುವ ಬೈಕ್‍‍ಗಳು ಮಾತ್ರ ಲಭ್ಯವಿರಲಿದ್ದು, 3ಡಿ ಟಿವಿಎಸ್ ಲೋಗೊವನ್ನು ಫ್ಯುಯಲ್ ಟ್ಯಾಂಕ್ ಮೇಲೆ ಅಳವಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಗೊಂಡ ಅಪಾಚೆ ಆರ್‍‍‍ಟಿಆರ್ 160 ರೇಸ್ ಎಡಿಶನ್..

ಎಂಜಿನ್ ಸಾಮರ್ಥ್ಯ

ಅಪಾಚೆ ಆರ್‍‍‍ಟಿಆರ್ 160 ರೇಸ್ ಎಡಿಶನ್ ಬೈಕ್‍‍ಗಳು 159.7ಸಿಸಿ ಸಿಂಗಲ್ ಸಿಲೆಂಡರ್, ಏರ್ ಕೂಲ್ಡ್ ಎಂಜಿನ್ ಸಹಾಯದಿಂದ 14.9ಬಿಹೆಚ್‍ಪಿ ಹಾಗು 13.03 ಎನ್ಎಂ ಟಾರ್ಕ್‍ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಗೊಂಡ ಅಪಾಚೆ ಆರ್‍‍‍ಟಿಆರ್ 160 ರೇಸ್ ಎಡಿಶನ್..

ಅಪಾಚೆ ಆರ್‍‍‍ಟಿಆರ್ 160 ರೇಸ್ ಎಡಿಶನ್ ಬೈಕ್‍‍ಗಳು ಅಪ್‍ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್ಸ್, ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್‍ಸಾರ್ಬರ್ಸ್ ಅನ್ನು ಪಡೆದಿದ್ದು, ಪ್ರಯಾಣಿಕರ ಸೇಫ್ಟಿಗಾಗಿ ಮುಂಭಾಗದಲ್ಲಿ 270ಎಂಎಂ ಪೆಟಲ್ ಡಿಸ್ಕ್ ಬ್ರೇಕ್ ಹಾಗು ಹಿಂಭಾಗದಲ್ಲಿ 200ಎಂಎಂ ಅಥವ 130ಎಂಎಂ ಡ್ರಮ್ ಬ್ರೇಕಿಂಗ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಗೊಂಡ ಅಪಾಚೆ ಆರ್‍‍‍ಟಿಆರ್ 160 ರೇಸ್ ಎಡಿಶನ್..

ಅಪಾಚೆ ಆರ್‍‍‍ಟಿಆರ್ 160 ರೇಸ್ ಎಡಿಶನ್ ಬೈಕ್‍‍ಗಳು ತಮ್ಮ ರೆಗ್ಯುಲರ್ ಮಾದರಿಗಳಂತೆಯೆ ವಿನ್ಯಾಸವನ್ನು ಹೊಂದಿದ್ದು ಹೊಸ ಗ್ರಾಫಿಕ್ಸ್ ಅನ್ನು ಮಾತ್ರ ಪಡೆದಿದೆ. ಸರ್ಕಾರದ ಆದೇಶದ ಪ್ರಕಾರ ಏಪ್ರಿಲ್ 1 ರಿಂದ 125ಸಿಸಿ ಮೇಲ್ಪಟ್ಟ ದ್ವಿಚಕ್ರ ವಾಹನಗಳಿಗೆ ತಪ್ಪದೆ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಅನ್ನು ಅಳವಡಿಸಬೇಕಾಗಿದ್ದು ಅಪಾಚೆ ಆರ್‍‍‍ಟಿಆರ್ 160 ರೇಸ್ ಎಡಿಶನ್ ಬೈಕ್‍‍ಗಳು ಆಯ್ಕೆಯಾಗಿಯು ಕೂಡ ಎಬಿಎಸ್ ಸಿಸ್ಟಂ ಅನ್ನು ಪಡೆದಿಲ್ಲ.

ಭಾರತದಲ್ಲಿ ಬಿಡುಗಡೆಗೊಂಡ ಅಪಾಚೆ ಆರ್‍‍‍ಟಿಆರ್ 160 ರೇಸ್ ಎಡಿಶನ್..

ಈಗಾಗಲೆ ಟಿವಿಎಸ್ ಸಂಸ್ಥೆಯು ಅಪಾಚೆ ಆರ್‍‍ಟಿಆರ್ 200 4ವಿ ಬೈಕಿನ ರೇಸ್ ಎಡಿಶನ್ ಅನ್ನು ಬಿಡುಗಡೆಗೊಳಿಸಿತ್ತು. ಇದೀಗ ಅಪಾಚೆ ಆರ್‍‍ಟಿಆರ್ 160 ಬೈಕಿನ ರೇಸ್ ಎಡಿಶನ್ ಅನ್ನು ಬಿಡುಗಡೆಗೊಳಿಸಿದ್ದು, ಮಾರುಕಟ್ಟೆಯಲ್ಲಿ ಬಜಾಜ್ ಪಲ್ಸರ್ ಎನ್ಎಸ್ 160, ಹೋಂಡಾ ಸಿಬಿ ಹಾರ್ನೆಟ್ 160ಆರ್, ಸುಜುಕಿ ಜಿಕ್ಸರ್ ಹಾಗು ಯಮಹಾ ಎಫ್‍‍ಜೆಡ್ ವಿ2 ಬೈಕುಗಳಿಗೆ ತೀವ್ರ ಪೈಪೋಟಿಯನ್ನು ನೀಡಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ನಟ ಹೃತಿಕ್ ರೋಷನ್‍ ಖರೀದಿ ಮಾಡಿದ ಹೊಸ ಐಷಾರಾಮಿ ಕಾರು ಯಾವುದು ಗೊತ್ತಾ?

ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ ಸ್ಕೊಮಾಡಿ ಹೊಸ ಸ್ಕೂಟರ್

ಭಾರತೀಯ ಕ್ರಿಕೆಟ್ ಆಟಗಾರರ ಐಷಾರಾಮಿ ಕಾರುಗಳ ಭರ್ಜರಿ ಕಲೆಕ್ಷನ್ ಹೇಗಿದೆ ಗೊತ್ತಾ?

ಪ್ರಪಂಚದಲ್ಲಿ ಅತಿ ಹೆಚ್ಚು ದೂರ ಪ್ರಯಾಣಿಸುವ ವಿಮಾನಗಳು ಯಾವವು?

ಇಲ್ಲಿ ಇದ್ದವರಿಗೆ ಒಂದು ಕಾನೂನು.. ಇಲ್ಲದವರಿಗೆ ಇನ್ನೊಂದು ಕಾನೂನು..

Read more on tvs apache
English summary
TVS Apache RTR 160 Race Edition Launched In India.
Story first published: Friday, April 13, 2018, 9:54 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark