ಟಿವಿಎಸ್ ಎನ್‍ಟಾರ್ಕ್ 125 ಸ್ಕೂಟರ್ ಬಗ್ಗೆ ನಿಮಗೆಷ್ಟು ಗೊತ್ತು.?

ಭಾರತೀಯ ಮಾರುಕಟ್ಟೆಯಲ್ಲಿ ದಶಕಗಳಿಂದ ತನ್ನ ದ್ವಿಚಕ್ರ ವಾಹನಗಳಿಂದ ಸದ್ದು ಮಾಡುತ್ತಿರುವ ಟಿವಿಎಸ್ ಸಂಸ್ಥೆಯು ಕೆಳೆದ ಕೆಲದಿನಗಳ ಹಿಂದಷ್ಟೆ ಮಾರುಕಟ್ಟೆಗೆ ತನ್ನ ಬಹುನೀರಿಕ್ಷಿತ ಎನ್‍ಟಾರ್ಕ್ 125 ಬೈಕ್ ಮಾದರಿಯನ್ನು ಪರಿಚಯಿಸಿದೆ.

By Rahul Ts

ಭಾರತೀಯ ಮಾರುಕಟ್ಟೆಯಲ್ಲಿ ದಶಕಗಳಿಂದ ತನ್ನ ದ್ವಿಚಕ್ರ ವಾಹನಗಳಿಂದ ಸದ್ದು ಮಾಡುತ್ತಿರುವ ಟಿವಿಎಸ್ ಸಂಸ್ಥೆಯು ಕೆಳೆದ ಕೆಲದಿನಗಳ ಹಿಂದಷ್ಟೆ ಮಾರುಕಟ್ಟೆಗೆ ತನ್ನ ಬಹುನೀರಿಕ್ಷಿತ ಎನ್‍ಟಾರ್ಕ್ 125 ಬೈಕ್ ಮಾದರಿಯನ್ನು ಪರಿಚಯಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 58,750 ಸಾವಿರಕ್ಕೆ ಮಾರಾಟಗೊಳ್ಳುತ್ತಿದೆ.

ಟಿವಿಎಸ್ ಎನ್‍ಟಾರ್ಕ್ 125 ಸ್ಕೂಟರ್ ಬಗ್ಗೆ ನಿಮಗೆಷ್ಟು ಗೊತ್ತು.?

ಹತ್ತು ಹಲವು ಹೊಸ ವೈಶಿಷ್ಟ್ಯತೆಗಳಿಂದಾಗಿ ಯುವ ಗ್ರಾಹಕರ ನೆಚ್ಚಿನ ಆಯ್ಕೆಯಾಗುತ್ತಿರುವ ಎನ್‌ಟಾರ್ಕ್ 125 ಸ್ಕೂಟರ್ ಕಮ್ಯುಟರ್ ಸ್ಕೂಟರ್ ಮಾದರಿ ಕೂಡಾ ಆಗಿದೆ. ಈ ಹಿನ್ನೆಲೆ ಎನ್‍ಟಾರ್ಕ್ 125 ಸ್ಕೂಟರ್ ಖರೀದಿಗೆ ಎದುರು ನೋಡುತ್ತಿರುವ ಗ್ರಾಹಕರಿಗಾಗಿ ಇಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿದೆ.

ಟಿವಿಎಸ್ ಎನ್‍ಟಾರ್ಕ್ 125 ಸ್ಕೂಟರ್ ಬಗ್ಗೆ ನಿಮಗೆಷ್ಟು ಗೊತ್ತು.?

ಟಿವಿಎಸ್ ಎನ್‌ಟಾರ್ಕ್ 125 ಮಾದರಿಯು ಗ್ರಾಫೈಟ್ ಪರಿಕಲ್ಪನೆಯ ಉತ್ಪಾದನಾ ಆವೃತ್ತಿಯಾಗಿದ್ದು, 2014 ರ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಂಡಿತ್ತು. ಆದರೇ ಕೊನೆಯ ಹಂತದಲ್ಲಿ ಗ್ರಾಫೈಟ್ ಬದಲಾಗಿ ಎನ್‌ಟಾರ್ಕ್ 125 ಆಗಿ ಪರಿಚಯಿಸಲಾಗಿದೆ.

ಟಿವಿಎಸ್ ಎನ್‍ಟಾರ್ಕ್ 125 ಸ್ಕೂಟರ್ ಬಗ್ಗೆ ನಿಮಗೆಷ್ಟು ಗೊತ್ತು.?

ಟಿವಿಎಸ್ ಎನ್‌ಟಾರ್ಕ್ 125 ದೇಶದಲ್ಲಿ ಯುವ ಜನತೆಯನ್ನು ಗುರಿಯಾಗಿಸಿ ಅಭಿವೃದ್ಧಿಗೊಳಿಸಲಾಗಿದ್ದು, ಆರಾಮದಾಯಕ ಸ್ಕೂಟರ್ ಚಾಲನೆಗಾಗಿ ಸುಲಭ ಮತ್ತು ಸುರಕ್ಷಾ ಸಾಧಾನಗಳನ್ನು ನೀಡಲಾಗಿದೆ.

ಟಿವಿಎಸ್ ಎನ್‍ಟಾರ್ಕ್ 125 ಸ್ಕೂಟರ್ ಬಗ್ಗೆ ನಿಮಗೆಷ್ಟು ಗೊತ್ತು.?

ಎನ್‌ಟಾರ್ಕ್ 125 ವಿನ್ಯಾಸ

ಹೆಸರಲ್ಲೇ ಸೂಚಿಸಿರುವಂತೆ ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್‌ಗಳು ಆಕ್ರಮಣಕಾರಿ ಕ್ರೀಡಾ ವಿನ್ಯಾಸ ಪಡೆದುಕೊಂಡಿದ್ದು, ಇದರ ವಿನ್ಯಾಸವನ್ನು ಯುದ್ಧ ವಿಮಾನಗಳಿಂದ ಸ್ಫೂರ್ತಿ ಪಡೆದು ಹಾಗೂ ಟಿವಿಎಸ್ ರೇಸಿಂಗ್ ತಂಡದ ನೆರವಿನೊಂದಿಗೆ ರಚಿಸಲಾಗಿದೆ.

ಟಿವಿಎಸ್ ಎನ್‍ಟಾರ್ಕ್ 125 ಸ್ಕೂಟರ್ ಬಗ್ಗೆ ನಿಮಗೆಷ್ಟು ಗೊತ್ತು.?

ಒಟ್ಟಾರೆ ಸ್ಕೂಟರ್‌ನ ಆಯಾಮಗಳು ಮತ್ತು ಬೇಸಿಕ್ ಡಿಸೈನ್ ಟಿವಿಎಸ್ ಗ್ರಾಫೈಟ್ ಕಾನ್ಸೆಪ್ಟ್ ಆಗಿದ್ದು, ವಿಭಿನ್ನವಾದ ಎಲ್ಇಡಿ ಡೇ ಲೈಟ್, ಎಲ್ಇಡಿ ಟೈಲ್ ಲ್ಯಾಂಪ್ ಡಿಸೈನ್, ಸ್ಟಬ್ಬಿ ಮಫ್ಲರ್ನಿಂದ ಎದ್ದು ಕಾಣುತ್ತದೆ.

ಟಿವಿಎಸ್ ಎನ್‍ಟಾರ್ಕ್ 125 ಸ್ಕೂಟರ್ ಬಗ್ಗೆ ನಿಮಗೆಷ್ಟು ಗೊತ್ತು.?

ಎಂಜಿನ್ ಸಾಮರ್ಥ್ಯ

ಟಿವಿಎಸ್ ಎನ್‌ಟಾರ್ಕ್ 125ಸಿಸಿ ಸಿವಿಟಿಐ ಯುನಿಟ್ ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಹೊಂದಿದ್ದು, 9.27 ಬಿಹೆಚ್ ಪಿ ಮತ್ತು 10.4ಎನ್ಎಂ ಟಾರ್ಕ್ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ. ಅಲ್ಲದೆ ಇದು ಗಂಟೆಗೆ 95 ಕಿಲೋಮೀಟರ್ ಚಲಿಸುವ ಟಾಪ್ ಸ್ಪೀಡ್‌ನ್ನು ಹೊಂದಿದೆ.

ಟಿವಿಎಸ್ ಎನ್‍ಟಾರ್ಕ್ 125 ಸ್ಕೂಟರ್ ಬಗ್ಗೆ ನಿಮಗೆಷ್ಟು ಗೊತ್ತು.?

ಜೊತೆಗೆ ಆಟೋ ಚೋಕ್, ಇಂಟೆಲಿಜೆಂಟ್ ಇಗ್ನಿಷನ್ ಸಿಸ್ಟಂ, ಸ್ಪ್ಲಿಟ್ ಟೈಪ್ ಇಂಟೇಕ್ ಡಿಸೈನ್, ಫೋಮ್ ಆನ್ ಪೇಪರ್ ಏರ್ ಫಿಲ್ಟರ್ ಮತ್ತು ವಿಶೇಷವಾದ ಆಯಿಲ್ ಕೂಲಿಂಗ್ ಸಿಸ್ಟಂ, ಕಂಬಿಶನ್ ಚೆಂಬರ್ ಸಿಸ್ಟಂ ಅನ್ನು ಸೇರಿಸಲಾಗಿದೆ.

ಟಿವಿಎಸ್ ಎನ್‍ಟಾರ್ಕ್ 125 ಸ್ಕೂಟರ್ ಬಗ್ಗೆ ನಿಮಗೆಷ್ಟು ಗೊತ್ತು.?

ಟಿವಿಎಸ್ ಎನ್‌ಟಾರ್ಕ್ 125 ಭಾರತದ ಮೊದಲ ಸ್ಮಾರ್ಟ್ ಕನೆಕ್ಟಿವಿಟಿ ಹೊಂದಿರುವ ಸ್ಕೂಟರಾಗಿದ್ದು, ಫೋನಿನೊಂದಿಗೆ ಬ್ಲೂಟೂಥ್ ಕನೆಕ್ಟ್ ಮಾಡಬಹುದಾಗಿದ್ದು, ಹಾಗೆಯೇ ನ್ಯಾವಿಗೇಶನ್ ಅಸಿಸ್ಟ್ ಅನ್ನು ಕೂಡಾ ಹೊಂದಿದೆ.

ಟಿವಿಎಸ್ ಎನ್‍ಟಾರ್ಕ್ 125 ಸ್ಕೂಟರ್ ಬಗ್ಗೆ ನಿಮಗೆಷ್ಟು ಗೊತ್ತು.?

ಇದುವರೆಗೂ ಯಾವುದೇ ಸ್ಕೂಟರ್‌ನಲ್ಲಿಯು ಕಾಣದಂತಹ ಎಲ್ಇಡಿ ಸ್ಕ್ರೀನ್‌ಗಳು ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್‌ನಲ್ಲಿ ಸೇರಿಸಲಾಗಿದ್ದು, 55 ವಿವಿಧ ರೀತಿಯ ಫೀಚರ್ಸ್‌ಗಳನ್ನು ನೀಡಲಾಗಿದೆ.

ಟಿವಿಎಸ್ ಎನ್‍ಟಾರ್ಕ್ 125 ಸ್ಕೂಟರ್ ಬಗ್ಗೆ ನಿಮಗೆಷ್ಟು ಗೊತ್ತು.?

ಸ್ಪೀಡ್ ರೆಕಾರ್ಡರ್, ಲ್ಯಾಪ್ ಟೈಮರ್, ಫೋನ್ ಬ್ಯಾಟರಿ ಶಕ್ತಿ ಸೂಚಕ, ಹಿಂದೆ ಪಾರ್ಕ್ ಮಾಡಿರುವ ಜಾಗ, ಆವೆರೇಜ್ ಸ್ಪೀಡ್ ಹಾಗೆಯೇ ಕ್ರೀಡೆ ಮತ್ತು ಬೀದಿಗಳಂತಹ ಅನೇಕ ಸವಾರಿ ಅಂಕಿ ಅಂಶಗಳ ವಿಧಾನಗಳನ್ನು ಒಳಗೊಂಡಿದೆ.

ಟಿವಿಎಸ್ ಎನ್‍ಟಾರ್ಕ್ 125 ಸ್ಕೂಟರ್ ಬಗ್ಗೆ ನಿಮಗೆಷ್ಟು ಗೊತ್ತು.?

ಅದಾಗ್ಯೂ ಈ ಸ್ಕೂಟರ್ ಬ್ಲೂಟೂಥ್ ನೊಂದಿಗೆ ಕನೆಕ್ಟ್ ಆಗಿರುವುದರಿಂದ Incoming ಕರೆಗಳು ಮತ್ತು ಸಂದೇಶಗಳು ಕೂಡ ಇನ್ಪೋಟೈನ್‌ಮೆಂಟ್ ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳುವುದಲ್ಲದೇ, Incoming ಕರೆಗಳಿಗೆ ನೀವು ವಾಹನ ಚಾಲನೆಯಲ್ಲಿದ್ದಿರಿ ಎಂಬ ಆಟೋ ರಿಪ್ಲೆ ಸಂದೇಶವನ್ನು ಕೂಡ ಕಳುಹಿಸುತ್ತದೆ.

ಟಿವಿಎಸ್ ಎನ್‍ಟಾರ್ಕ್ 125 ಸ್ಕೂಟರ್ ಬಗ್ಗೆ ನಿಮಗೆಷ್ಟು ಗೊತ್ತು.?

ಹೊರಗಡೆ ಪ್ಯುಯಲ್ ಟ್ಯಾಂಕ್, ಎಂಜಿನ್ ಕಿಲ್ ಸ್ವಿಚ್, ಪಾಸ್ ಬೈ ಸ್ವಿಚ್, ಪಾರ್ಕಿಂಗ್ ಬ್ರೇಕ್ಸ್, ಡ್ಯುಯಲ್ ಸೈಡ್ ಹ್ಯಾಂಡಲ್ ಲಾಕ್, ಯುಎಸ್ ಬಿ ಫೋನ್ ಚಾರ್ಜರ್ ಮತ್ತು 22 ಲೀಟರ್ ಅಂಡರ್ ಸೀಟ್ ಸ್ಪೆಸ್ ಹೊಂದಿದೆ.

ಟಿವಿಎಸ್ ಎನ್‍ಟಾರ್ಕ್ 125 ಸ್ಕೂಟರ್ ಬಗ್ಗೆ ನಿಮಗೆಷ್ಟು ಗೊತ್ತು.?

ಟಿವಿಎಸ್ ಎನ್‌ಟಾರ್ಕ್ 125 ಗ್ರಿಪ್ಪಿ 110/80-12 ಗಾತ್ರದ ಟ್ಯೂಬ್ ಲೆಸ್ ಟೈರ್ 12 ಇಂಚಿನ ಅಲಾಯ್ ಚಕ್ರಗಳನ್ನು ಹೊಂದಿದ್ದು, ಸೆಗ್ಮೆಂಟ್ ಫರ್ಸ್ಟ್ ಪೆಟಲ್ ಡಿಸ್ಕ್ ಬ್ರೇಕ್ ಅನ್ನು ಪಡೆದುಕೊಂಡಿದೆ.

ಟಿವಿಎಸ್ ಎನ್‍ಟಾರ್ಕ್ 125 ಸ್ಕೂಟರ್ ಬಗ್ಗೆ ನಿಮಗೆಷ್ಟು ಗೊತ್ತು.?

ಲಭ್ಯವಿರುವ ಬಣ್ಣಗಳು

ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್‌ಗಳು ಹಳದಿ, ಹಸಿರು ಮತ್ತು ಬಿಳಿ ಬಣ್ಣಗಳ ಜೊತೆ ಮ್ಯಾಟ್ ಫಿನಿಶ್ ನೊಂದಿಗೆ ಲಭ್ಯವಿರಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

1. ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

2. ಇನೋವಾ ಮತ್ತು ಲಾರಿ ನಡುವೆ ಭೀಕರ ಅಪಘಾತ- 7 ಮಂದಿ ದುರ್ಮರಣ

3. ಪ್ರಯಾಣಿಕರನ್ನು ಸೆಳೆಯಲು ಹೊಸ ಆಫರ್ ಪ್ರಕಟಿಸಿದ ಓಲಾ..!!

4. ರಾತ್ರಿ ವೇಳೆ ಡ್ರೈವಿಂಗ್ ಮಾಡುವ ಮುನ್ನ ಈ ಅಮೂಲ್ಯ ಟಿಪ್ಸ್‌ಗಳನ್ನು ತಪ್ಪದೇ ಪಾಲಿಸಿ...

5. ಮೋದಿ ಹೆಸರಿನಲ್ಲಿ ಭಾರೀ ಜನಪ್ರಿಯತೆ ಪಡೆಯುತ್ತಿರುವ ಈ ಬೈಕಿನ ಅಸಲಿಯತ್ತು ಏನು?

Most Read Articles

Kannada
Read more on scooter
English summary
TVS NTorq 125: All You Need To Know About India’s Feature-Rich Scooter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X