ಬಹುದಿನಗಳ ನಂತರ ಬಿಡುಗಡೆಯಾಗುತ್ತಿರುವ ಯಮಹಾ ಹೊಸ ಸ್ಕೂಟರ್ ಏರೊಕ್ಸ್ 155

Written By:
Recommended Video - Watch Now!
Bangalore Traffic Police Rides With Illegal Number Plate - DriveSpark

ಸದ್ಯಕ್ಕೆ ದೇಶಿಯ ಮಾರುಕಟ್ಟೆಯಲ್ಲಿ ಯಮಹಾ ನಿರ್ಮಾಣದ ರೇ ಝೆಡ್ ಮತ್ತು ಫಾಸಿನೋ ಸರಣಿಗಳನ್ನು ಹೊರತುಪಡಿಸಿ ಹೊಸ ಮಾದರಿಯ ಯಾವುದೇ ಸ್ಕೂಟರ್‌ಗಳು ಬಿಡುಗಡೆಗೊಂಡಿಲ್ಲ. ಇದೇ ಕಾರಣಕ್ಕೆ ಬಹುದಿನಗಳ ನಂತರ ಹೊಸ ಸ್ಕೂಟರ್ ಒಂದನ್ನು ಬಿಡುಗಡೆ ಮಾಡುತ್ತಿರುವ ಯಮಹಾ, ಸದ್ಯದಲ್ಲೇ ಏರೊಕ್ಸ್ 155 ಸ್ಕೂಟರ್ ಆವೃತ್ತಿಯನ್ನು ಪರಿಚಯಿಸಲಿದೆ.

ಬಹುದಿನಗಳ ನಂತರ ಬಿಡುಗಡೆಯಾಗುತ್ತಿರುವ ಯಮಹಾ ಹೊಸ ಸ್ಕೂಟರ್ ಏರೊಕ್ಸ್ 155

ಹೀಗಾಗಿ ಹೊಸ ಸ್ಕೂಟರ್ ಮಾದರಿಯನ್ನು ಸ್ಪಾಟ್ ಟೆಸ್ಟಿಂಗ್ ನಡೆಸಿರುವ ಯಮಹಾ ಸಂಸ್ಥೆಯು, ಸರ್ವೀಸ್ ಸ್ಟೇಷನ್ ಒಂದರಲ್ಲಿ ಏರೊಕ್ಸ್ 155 ಆವೃತ್ತಿಯನ್ನು ಸ್ಟಾಕ್ ಮಾಡುತ್ತಿರುವುದು ಪತ್ತೆಯಾಗಿದೆ. ವರದಿಗಳ ಪ್ರಕಾರ ಹೊಸ ಸ್ಕೂಟರ್ ಮುಂದಿನ ತಿಂಗಳ ಕೊನೆಗೆ ಗ್ರಾಹಕರ ಸೇರಲಿದ್ದು, ಅದಕ್ಕೂ ಮೊದಲು ಫೆ.7ರಿಂದ ಆರಂಭವಾಗುವ 2018ರ ಆಟೋ ಎಕ್ಸ್‌ಪೋದಲ್ಲಿ ಭಾಗಿಯಾಗಲಿದೆ ಎಂಬ ಮಾಹಿತಿ ದೊರೆತಿದೆ.

ಬಹುದಿನಗಳ ನಂತರ ಬಿಡುಗಡೆಯಾಗುತ್ತಿರುವ ಯಮಹಾ ಹೊಸ ಸ್ಕೂಟರ್ ಏರೊಕ್ಸ್ 155

ಏರೊಕ್ಸ್ 155 ವಿಶೇಷತೆ ಏನು?

ಯಮಹಾ ನಿರ್ಮಾಣ ಮಾಡಿರುವ ಏರೊಕ್ಸ್ 155 ಆವೃತ್ತಿಯು 150 ಸಿಸಿ ಸಾಮರ್ಥ್ಯದ ಪ್ರಮುಖ ಸ್ಕೂಟರ್‌ಗಳಿಗೆ ತೀವ್ರ ಸ್ಪರ್ಧಿ ನೀಡುವ ತವಕದಲ್ಲಿದ್ದು, ಸ್ಕೂಟರ್ ಮಾರಾಟದಲ್ಲಿ ಹೊಸ ದಾಖಲೆ ಸೃಷ್ಠಿಸುವ ತವಕದಲ್ಲಿದೆ ಎನ್ನಬಹುದು.

ಬಹುದಿನಗಳ ನಂತರ ಬಿಡುಗಡೆಯಾಗುತ್ತಿರುವ ಯಮಹಾ ಹೊಸ ಸ್ಕೂಟರ್ ಏರೊಕ್ಸ್ 155

ಎಂಜಿನ್ ಸಾಮರ್ಥ್ಯ

ಏರೊಕ್ಸ್ 155 ಮಾದರಿಯು 155.1 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದ್ದು, 14.6-ಬಿಎಚ್‌ಪಿ ಮತ್ತು 13.8ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು.

ಬಹುದಿನಗಳ ನಂತರ ಬಿಡುಗಡೆಯಾಗುತ್ತಿರುವ ಯಮಹಾ ಹೊಸ ಸ್ಕೂಟರ್ ಏರೊಕ್ಸ್ 155

ಇದರ ಜೊತೆಗೆ ಭಾರತದಲ್ಲೇ ಮೊದಲ ಬಾರಿಗೆ ಸ್ಕೂಟರ್ ಮಾದರಿಗಳಲ್ಲಿ ಲಿಕ್ವಿಡ್ ಕೂಲ್ಡ್ ಮತ್ತು ಫ್ಯೂಲ್ ಇಂಜೆಕ್ಷಡ್ ಎಂಜಿನ್ ಆಯ್ಕೆ ಮಾಡಬಹುದಾದ ಅವಕಾಶವನ್ನು ಏರೊಕ್ಸ್ 155 ಸ್ಕೂಟರ್‌ಗಳಲ್ಲಿ ಯಮಹಾ ಒದಗಿಸುತ್ತಿದೆ.

Trending On DriveSpark Kannada:

ಭಾರತದ ಟಾಪ್ 5 ಕೆಟ್ಟ ಬೈಕುಗಳ ಪಟ್ಟಿ ಇಲ್ಲಿದೆ !!

ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

ಭಾರತದಲ್ಲಿ ಇವು ಅಟ್ಟರ್ ಫ್ಲಾಪ್ ಕಾರುಗಳು

ಬಹುದಿನಗಳ ನಂತರ ಬಿಡುಗಡೆಯಾಗುತ್ತಿರುವ ಯಮಹಾ ಹೊಸ ಸ್ಕೂಟರ್ ಏರೊಕ್ಸ್ 155

ಇನ್ನು ಹೊಸ ಸ್ಕೂಟರ್‌ಗಳಲ್ಲಿ ಸ್ಪೋರ್ಟಿ ವಿನ್ಯಾಸ ಒದಗಿಸಿರುವ ಯಮಹಾ, ಸುರಕ್ಷಿತ ಸ್ಕೂಟರ್ ಚಾಲನೆಗೆ ನೇರವಾಗಬಲ್ಲ ದೊಡ್ಡದಾದ ಸೀಟುಗಳು, ಎಲ್ಇಡಿ ಹೆಡ್‌ಲ್ಯಾಂಪ್ ಮತ್ತು ಟೈಲ್ ಲೈಟ್, 5.8-ಇಂಚಿನ ಎಲ್‌ಸಿಡಿ, ಸ್ಮಾರ್ಟ್ ಕೀ ಸಿಸ್ಟಂ, ಮೊಬೈಲ್ ಚಾರ್ಜಿಂಗ್ ಪಾಯಿಂಟ್ ನೀಡಲಾಗಿದೆ.

ಬಹುದಿನಗಳ ನಂತರ ಬಿಡುಗಡೆಯಾಗುತ್ತಿರುವ ಯಮಹಾ ಹೊಸ ಸ್ಕೂಟರ್ ಏರೊಕ್ಸ್ 155

ಈ ಮೂಲಕ ಸ್ಕೂಟರ್ ಮಾದರಿಗಳಲ್ಲೇ ಅತಿ ಸುಧಾರಿತ ಎನ್ನುವ ಹೆಗ್ಗಳಿಕೆ ಪಾತ್ರವಾಗಲಿರುವ ಏರೊಕ್ಸ್ 155, ಎಬಿಎಸ್, ಟೊಲಿಸ್ಕೂಪಿಕ್ ಫೋರ್ಕ್ಸ್, ಸೀಟರ್ ಕೆಳಭಾಗದಲ್ಲಿ 25-ಲೀಟರ್ ಸಾಮರ್ಥ್ಯದ ಲಗೇಜ್ ಸ್ಪೆಸ್ ಸೇರಿದಂತೆ ಹಲವು ಮಾದರಿಯ ಸುಧಾರಿತ ತಂತ್ರಜ್ಞಾನಗಳನ್ನು ಹೊಂದಿದೆ.

ಬಹುದಿನಗಳ ನಂತರ ಬಿಡುಗಡೆಯಾಗುತ್ತಿರುವ ಯಮಹಾ ಹೊಸ ಸ್ಕೂಟರ್ ಏರೊಕ್ಸ್ 155

ಬಿಡುಗಡೆ ಯಾವಾಗ?

ಲಭ್ಯವಾಗಿರುವ ಕೆಲವು ಮಾಹಿತಿಗಳ ಪ್ರಕಾರ ಫೆ.7 ರಿಂದ ಆರಂಭವಾಗಿ ಫೆ.14 ಮುಕ್ತಾಯಗೊಳ್ಳಲಿರುವ 2018ರ ಆಟೋ ಎಕ್ಸ್‌ಪೋ ನಂತರ ಏರೊಕ್ಸ್ 155 ಬಿಡುಗಡೆಯಾಗಲಿದ್ದು, ಮಾರ್ಚ್ ಮೊದಲ ವಾರವೇ ಗ್ರಾಹಕರ ಕೈಸೇರುವ ನೀರಿಕ್ಷೆಯಿದೆ.

ಬಹುದಿನಗಳ ನಂತರ ಬಿಡುಗಡೆಯಾಗುತ್ತಿರುವ ಯಮಹಾ ಹೊಸ ಸ್ಕೂಟರ್ ಏರೊಕ್ಸ್ 155

ಬೆಲೆ (ಅಂದಾಜು)

ಪ್ರಿಮಿಯಂ ಸ್ಕೂಟರ್ ಮಾದರಿಯಾಗಿರುವ ಹಿನ್ನೆಲೆ ಏರೊಕ್ಸ್ 155 ಬೆಲೆಗಳು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.75 ಸಾವಿರದಿಂದ ರೂ.80 ಸಾವಿರ ಇರಬಹುದೆಂದು ಅಂದಾಜಿಸಲಾಗಿದೆ.

ಬಹುದಿನಗಳ ನಂತರ ಬಿಡುಗಡೆಯಾಗುತ್ತಿರುವ ಯಮಹಾ ಹೊಸ ಸ್ಕೂಟರ್ ಏರೊಕ್ಸ್ 155

ಒಟ್ಟಿನಲ್ಲಿ ಬರಲಿರುವ ಏರೊಕ್ಸ್ 155 ಸ್ಕೂಟರ್ ಏಪ್ರಿಲಿಯಾ 150 ಮತ್ತು ಇತರೆ ಸ್ಕೂಟರ್‌ಗಳಿಗೆ ಪ್ರತಿ ಸ್ಪರ್ಧಿಯಾಗಲಿದ್ದು, 2018ರ ಆಟೋ ಎಕ್ಸ್‌ಪೋದಲ್ಲಿ ಹೊಸ ಸ್ಕೂಟರ್ ಬಗೆಗೆ ಮತ್ತಷ್ಟು ಮಾಹಿತಿಗಳನ್ನು ಲಭ್ಯವಾಗಲಿವೆ.

Trending On DriveSpark Kannada:

20 ನಿಮಿಷದ ಪ್ರಯಾಣಕ್ಕೆ ಉಬರ್‌ ಚಾರ್ಜ್‌ ಮಾಡಿದ್ದು ಬರೋಬ್ಬರಿ 9.27 ಲಕ್ಷ..!

ಮೊದಲನೇ ಗೇರ್ ಹಾಕಿ ಕಾರನ್ನು ಪಾರ್ಕ್ ಮಾಡುವವರು ಈ ಲೇಖನವನ್ನು ತಪ್ಪದೆ ಓದಿ !!

ಡುಕಾಟಿ ಸೂಪರ್ ಸ್ಪೋರ್ಟ್ ಎಸ್ ಬೈಕ್ ಖರೀದಿಸಿದ ಕೊರಿಯೋಗ್ರಾಫರ್ ರಿಮೋ ಡಿಸೋಜ್

Trending DriveSpark YouTube Videos

Subscribe To DriveSpark Kannada YouTube Channel - Click Here

Read more on yamaha scooter
English summary
Yamaha Aerox 155 Scooter Spotted In India.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark