ಭಾರತದಲ್ಲಿ ಆರ್15 ವಿ2 ಬೈಕ್ ಮಾರಾಟ ನಿಲ್ಲಿಸಿದ ಯಮಹಾ

By Praveen Sannamani

ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಯಮಹಾ ಸಂಸ್ಥೆಯು ಆರ್15 ವಿ2 ಬೈಕ್ ಮಾರಾಟದಲ್ಲಿ ಹೊಸ ದಾಖಲೆ ಮೂಲಕ ಭಾರೀ ಜನಪ್ರಿಯತೆಗಳಿಸಿದ್ದಲ್ಲದೇ ಇದೀಗ ಆರ್15 ವಿ3 ಬೈಕ್‌ಗಳ ಮಾರಾಟಕ್ಕೆ ಚಾಲನೆ ನೀಡಿದೆ. ಹೀಗಾಗಿ ಸಹಜವಾಗಿಯೇ ಹಳೆಯ ವರ್ಷನ್‌ಗಳಿಗೆ ಬದಲಾಗಿ ಗ್ರಾಹಕರು ಹೊಸ ವರ್ಷನ್ ಖರೀದಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಈ ಹಿನ್ನೆಲೆ ಆರ್15 ವಿ2 ಬೈಕ್‌ಗಳ ಮಾರಾಟಕ್ಕೆ ಬ್ರೇಕ್ ಹಾಕಲಾಗಿದೆ.

ಭಾರತದಲ್ಲಿ ಆರ್15 ವಿ2 ಬೈಕ್ ಮಾರಾಟ ನಿಲ್ಲಿಸಿದ ಯಮಹಾ

ಎಂಟ್ರಿ ಲೆವಲ್ ಪರ್ಫಾಮೆನ್ಸ್ ಬೈಕ್‌ಗಳಲ್ಲಿ ಆರ್15 ಬೈಕ್‌ಗಳಿಗೆ ಸದ್ಯ ಭಾರೀ ಬೇಡಿಕೆ ಬರುತ್ತಿದ್ದು, ದುಬಾರಿ ಬೆಲೆಯ ಆರ್1 ಬೈಕಿನ ವಿನ್ಯಾಸಗಳ ಪ್ರೇರಣೆಯೊಂದಿಗೆ ಆ15 ಬೈಕ್‌ಗಳನ್ನ ಸಿದ್ದಗೊಳಿಸಲಾಗಿದೆ. ಹೀಗಾಗಿ ಕಡಿಮೆ ಬೆಲೆಗಳಲ್ಲಿ ಬೆಸ್ಟ್ ಪರ್ಫಾಮೆನ್ಸ್ ಬೈಕ್‌ಗಳಲ್ಲಿ ಈ ಬೈಕ್‌ಗಳಿಗೆ ವಿಶೇಷ ಬೇಡಿಕೆಯಿದ್ದು, ಕಳೆದ 2 ತಿಂಗಳ ಹಿಂದಷ್ಟೇ ಆರ್15 ವಿ3 ಬೈಕ್‌ಗಳನ್ನ ಪರಿಚಯಿಸಲಾಗಿತ್ತು. ಆದ್ರೆ ಹೊಸ ಬೈಕ್ ಬಿಡುಗಡೆಯ ನಂತರ ಆರ್15 ವಿ2 ಬೈಕ್‌ಗಳ ಬೇಡಿಕೆ ಸಂಪೂರ್ಣ ಕುಸಿತ ಕಂಡಿತ್ತು.

ಭಾರತದಲ್ಲಿ ಆರ್15 ವಿ2 ಬೈಕ್ ಮಾರಾಟ ನಿಲ್ಲಿಸಿದ ಯಮಹಾ

ಹೀಗಾಗಿ ಯಮಹಾ ಸಂಸ್ಥೆಯು ಆರ್15 ವಿ2 ಬೈಕ್‌ಗಳ ಮಾರಾಟಕ್ಕೆ ಗುಡ್‌ಬೈ ಹೇಳಿದ್ದು, ಆರ್15 ವಿ3 ಬೈಕ್‌ಗಳತ್ತ ಹೆಚ್ಚಿನ ಗಮನಹರಿಸುತ್ತಿರುವುದು ಉತ್ತಮ ನಡೆ ಎನ್ನಬಹುದು. ಕಾರಣ, ಸುರಕ್ಷಾ ದೃಷ್ಠಿಯಿಂದ ಆರ್15 ವಿ2 ಬೈಕ್‌ಗಳು ಆರ್15 ವಿ3 ಬೈಕ್‌ಗಳಿಂತ ಕೆಳ ದರ್ಜೆಯ ಸುರಕ್ಷಾ ಸೌಲಭ್ಯ ಹೊಂದಿದ್ದವು.

ಭಾರತದಲ್ಲಿ ಆರ್15 ವಿ2 ಬೈಕ್ ಮಾರಾಟ ನಿಲ್ಲಿಸಿದ ಯಮಹಾ

ಸದ್ಯ ಆರ್15 ವಿ3 ಬೈಕ್‌ಗಳು ಹಳೆಯ ಬೈಕ್‌ಗಳಂತೆಯೇ ವಿನ್ಯಾಸ ಮತ್ತು ಕೆಲವು ತಾಂತ್ರಿಕ ಅಂಶಗಳನ್ನು ಹೊಂದಿದ್ದರು, ಹಿಂದಿನ ಆವೃತ್ತಿಗಿಂತ ಸುರಕ್ಷಾ ವಿಚಾರವಾಗಿ ಬಲಿಷ್ಠವಾಗಿದೆ. 149ಸಿಸಿ ಎಂಜಿನ್ ಹೊಂದಿದ್ದ ಆರ್15 ವಿ2 ಬೈಕ್‌ಗಳಲ್ಲಿ ಸ್ಲಿಪ್ಲರ್ ಕ್ಲಚ್ ಕೂಡಾ ಇರಲಿಲ್ಲಾ.

ಭಾರತದಲ್ಲಿ ಆರ್15 ವಿ2 ಬೈಕ್ ಮಾರಾಟ ನಿಲ್ಲಿಸಿದ ಯಮಹಾ

ಅದೇ ಹೊಸದಾಗಿ ಬಿಡುಗಡೆಗೊಂಡಿರುವ ಆರ್15 ವಿ3 ಬೈಕ್‌ಗಳು 155ಸಿಸಿ ಎಂಜಿನ್‌ಗೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಹಾಗೂ ಸ್ಲಿಪ್ಲರ್ ಕ್ಲಚ್ ಸೌಲಭ್ಯ ಹೊಂದಿದ್ದು, ಮೊಟೊ ವಿನ್ಯಾಸದೊಂದಿಗೆ ಅಭಿವೃದ್ಧಿ ಹೊಂದಿರುವ ಆರ್15 ವಿ3 ಬೈಕ್‌ಗಳು ಸಹ ಖರೀದಿಗೆ ಲಭ್ಯವಿವೆ.

ಭಾರತದಲ್ಲಿ ಆರ್15 ವಿ2 ಬೈಕ್ ಮಾರಾಟ ನಿಲ್ಲಿಸಿದ ಯಮಹಾ

ದೆಹಲಿ ಎಕ್ಸ್‌ಶೋರಂ ಪ್ರಕಾರ ಮೊಟೊ ಜಿಪಿ ವಿನ್ಯಾಸದ ಆರ್15 ವಿ3 ಬೈಕ್‌ಗಳ ಬೆಲೆಯನ್ನ ರೂ.1.30 ಲಕ್ಷಕ್ಕೆ ನಿಗದಿಗೊಳಿಸಲಾಗಿದ್ದು, ವಿಶೇಷವಾಗಿ ಡಿಸೈನ್ ಮಾಡಲಾದ ಮೊಟೊ ಜಿಪಿ ಬ್ರ್ಯಾಂಡಿಂಗ್ ಫ್ಯೂಲ್ ಟ್ಯಾಂಕ್, ಸೈಡ್ ಪ್ಯಾನೆಲ್ ಹೊಂದಿರಲಿದೆ.

ಭಾರತದಲ್ಲಿ ಆರ್15 ವಿ2 ಬೈಕ್ ಮಾರಾಟ ನಿಲ್ಲಿಸಿದ ಯಮಹಾ

ಯಮಹಾ ಆರ್15 ಬೈಕ್‍‍ಗಳಲ್ಲಿ ಎಲ್ಇಡಿ ಹೆಡ್‍‍ಲ್ಯಾಂಪ್ಸ್, ಎಲ್ಇಡಿ ಟೈಲ್ ಲ್ಯಾಂಪ್ಸ್, ಫುಲ್ಲಿ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್, 17 ಇಂಚಿನ ಎಮ್‍ಆರ್‍‍ಎಫ್ ಟೈರ್‍‍ಗಳು ಮತ್ತು ಸ್ಲಿಪ್ಪರ್ ಕ್ಲಚ್ ಅನ್ನು ಒದಗಿಸಲಾಗಿದೆ.

ಭಾರತದಲ್ಲಿ ಆರ್15 ವಿ2 ಬೈಕ್ ಮಾರಾಟ ನಿಲ್ಲಿಸಿದ ಯಮಹಾ

ಇನ್ನು ಬೈಕಿನ ಸಸ್ಷೆನ್ ವಿಚಾರಕ್ಕೆ ಬಂದಲ್ಲಿ ಆರ್15 ವಿ3 ಬೈಕ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಅನ್ನು ಪಡೆದುಕೊಂಡಿರಲಿದೆ. ಪ್ರಯಾಣಿಕರ ಸುರಕ್ಷತೆಗಾಗಿ ಈ ಬೈಕ್‍‍ನ ಮುಂಭಾಗದಲ್ಲಿ 282-ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 220-ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

ಭಾರತದಲ್ಲಿ ಆರ್15 ವಿ2 ಬೈಕ್ ಮಾರಾಟ ನಿಲ್ಲಿಸಿದ ಯಮಹಾ

ಒಟ್ಟಿನಲ್ಲಿ ಸುರಕ್ಷೆ ದೃಷ್ಠಿಯಿಂದ ಆರ್15 ವಿ2 ಬೈಕ್‌ಗಳನ್ನ ಮಾರಾಟದಿಂದ ಸ್ಥಗಿತಗೊಳಿಸಿರುವ ಯಮಹಾ ಸಂಸ್ಥೆಯು ಮುಂಬರುವ ದಿನಗಳಲ್ಲಿ ಎಂಟ್ರಿ ಲೆವಲ್ ಪರ್ಫಾಮೆನ್ಸ್ ಬೈಕ್ ವಿಭಾಗದಲ್ಲಿ ಹೊಸ ದಾಖಲೆ ಮಾಡುವ ತವಕದಲ್ಲಿದ್ದು, ಸುಜುಕಿ ಜಿಕ್ಸರ್ ಎಸ್‍ಎಫ್, ಹೋಂಡಾ ಸಿಬಿಆರ್ 150 ಮತ್ತು ಬಜಾಜ್ ಪಲ್ಸರ್ ಆರ್‍ಎಸ್200 ಬೈಕ್‍‍ಗಳಿಗೆ ಪೈಪೋಟಿ ನೀಡುವ ತವಕದಲ್ಲಿದೆ.

ಯಮಹಾ ವೈಝಡ್ಎಫ್-ಆರ್15 ವರ್ಷನ್

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಬೈಕ್ ತಪಾಸಣೆ ವೇಳೆ ಟ್ರಾಫಿಕ್ ಪೊಲೀಸರು ಮಾಡಿದ್ದೇನು ಗೊತ್ತಾ?

ಅಟಲ್ ಜೀ ಅವರು ಅಂಬಾಸಿಡರ್ ಬಿಟ್ಟು ಬಿಎಂಡಬ್ಲ್ಯು 7 ಸೀರಿಸ್ ಕಾರು ಏರಿದ್ದೇಕೆ ಗೊತ್ತಾ?

ಶುರುವಾಗಿದೆ ವಿಶೇಷ ಕಾರ್ಯಾಚರಣೆ- ಬೈಕ್‌ ವೀಲಿಂಗ್‌ ಮಾಡುವವರಿಗೆ ಕಾದಿದೆ ಗ್ರಹಚಾರ

ಬಿಎಂಡಬ್ಲ್ಯು ಹೊಸ ಬೈಕ್‌ಗಳನ್ನು ಟ್ರೋಲ್ ಮಾಡಿದ ಕವಾಸಕಿ ಡೀಲರ್ಸ್‌ಗಳು

ಈ ಕಾರಿನಲ್ಲಿ ಇನ್ನೊವಾ ಕ್ರಿಸ್ಟಾಗಿಂತಾ ಹೆಚ್ಚು ಐಷಾರಾಮಿ ಸೌಲತ್ತುಗಳಿವೆಯಂತೆ.!

Most Read Articles

Kannada
Read more on yamaha r15
English summary
Yamaha YZF-R15 V2.0 Discontinued In India.
Story first published: Saturday, August 18, 2018, 19:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X