ಹೊಸ ಅಪ್ಡೇಟ್‍ನೊಂದಿಗೆ ಬಿಡುಗಡೆಯಾದ ಜನಪ್ರಿಯ ಟಿವಿಎಸ್ ವಿಕ್ಟರ್ 110 ಬೈಕ್

ಚೆನ್ನೈ ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಟಿವಿಎಸ್ ತಮ್ಮ ಜನಪ್ರಿಯ 110 ಸಿಸಿ ಬೈಕ್ ಆದ ವಿಕ್ಟರ್ ಬೈಕಿಗೆ ಸುರಕ್ಷತೆಯ ಅನುಸಾರ ಹೊಸ ಫೀಚರ್ ಅನ್ನು ನೀಡಿ ಬಿಡುಗಡೆ ಮಾಡಲಾಗಿದೆ. ಈ ಬಾರಿ ಈ ಬೈಕಿನಲ್ಲಿ ಸಿಂಕ್ರೊನೈಸ್ಡ್ ಬ್ರೇಕಿಂಗ್ ಸಿಸ್ಟಂ (ಎಸ್‍ಬಿಟಿ) ಅನ್ನು ಒದಗಿಸಲಾಗಿದ್ದು, ಎಸ್‍ಬಿಟಿ ಫೀಚರ್ ಅನ್ನು ಪಡೆದ ಟಿವಿಎಸ್ ವಿಕ್ಟರ್ 110 ಬೈಕ್ ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 54,682 ಸಾವಿರಕ್ಕೆ ಬೆಲೆಯನ್ನು ನಿಗದಿ ಮಾಡಲಾಗಿದೆ.

ಹೊಸ ಅಪ್ಡೇಟ್‍ನೊಂದಿಗೆ ಬಿಡುಗಡೆಯಾದ ಜನಪ್ರಿಯ ಟಿವಿಎಸ್ ವಿಕ್ಟರ್ 110 ಬೈಕ್

ಎಸ್‍ಬಿಟಿ ಹೊಂದಿರುವ 2019ರ ಟಿವಿಎಸ್ ಬೆಲೆ ವಿವರ

TVS Victor SBT (Drum) Rs 54,682
TVS Victor SBT (Disc) Rs 90,978
TVS Victor SBT (Disc) Premium Edition Rs 89,785
ಹೊಸ ಅಪ್ಡೇಟ್‍ನೊಂದಿಗೆ ಬಿಡುಗಡೆಯಾದ ಜನಪ್ರಿಯ ಟಿವಿಎಸ್ ವಿಕ್ಟರ್ 110 ಬೈಕ್

ಸಿಂಕ್ರೊನೈಸ್ಡ್ ಬ್ರೇಕಿಂಗ್ ಸಿಸ್ಟಂ ಬ್ರೇಕ್ ಅಂತರವನ್ನು ಕಡಿಮೆ ಮಾಡಲು ಮತ್ತು ಬೈಕುವನ್ನು ನಿಲ್ಲಿಸಲು ಸ್ಥಿರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಿಂದಿನ ಬ್ರೇಕ್ ಅನ್ನು ಅನ್ವಯಿಸಿದಾಗ ಸ್ವಯಂಚಾಲಿತವಾಗಿ ಮುಂಭಾಗದ ಬ್ರೇಕ್ ಅನ್ನು ಎಸ್‍ಬಿಟಿ ತೊಡಗಿಸುತ್ತದೆ ಎಂದು ಟಿವಿಎಸ್ ಹೇಳಿಕೊಂಡಿದೆ. ಟಿವಿಎಸ್ ಪ್ರಕಾರ ಸಿಂಕ್ರೊನೈಸ್ಡ್ ಬ್ರೇಕಿಂಗ್ ಟೆಕ್ನಾಲಜಿಯು ಬ್ರೇಕಿಂಗ್ ಅಂತರವನ್ನು ನಿಯಮಿತ ಬ್ರೇಕ್ ಸೆಟಪ್‍ಗಳಿಗೆ ಹೋಲಿಸಿದಾಗ ಸುಮಾರು 10 ಪ್ರತಿಶತದಷ್ಟು ಕಡಿಮೆಗೊಳಿಸುತ್ತದೆ.

ಹೊಸ ಅಪ್ಡೇಟ್‍ನೊಂದಿಗೆ ಬಿಡುಗಡೆಯಾದ ಜನಪ್ರಿಯ ಟಿವಿಎಸ್ ವಿಕ್ಟರ್ 110 ಬೈಕ್

ಎಂಜಿನ್ ಸಾಮರ್ಥ್ಯ

ಸಿಂಕ್ರಿನೈಸ್ಡ್ ಬೆಕಿಂಗ್ ಸಿಸ್ಟಂ ಅನ್ನು ಹೊರತು ಪಡಿಸಿ ಹೊಸ ಟಿವಿಎಸ್ ವಿಕ್ಟರ್ 110 ಬೈಕಿನಲ್ಲಿ ಬೇರಾವುದೇ ಮಾರ್ಪಾಡುಗಳನ್ನು ಮಾಡಲಿಲ್ಲ ಎನ್ನಲಾಗಿದೆ. ತಾಂತ್ರಿಕವಾಗಿ ಈ ಬೈಕ್ 110ಸಿಸಿ 3 ವೇಲ್ವ್ ಆಯಿಲ್ ಕೂಲ್ಡ್ ಎಂಜಿನ್ ಸಹಾಯದಿಂದ 9.37 ಬಿಹೆಚ್‍ಪಿ ಮತ್ತು 9.4ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿದೆ.

ಹೊಸ ಅಪ್ಡೇಟ್‍ನೊಂದಿಗೆ ಬಿಡುಗಡೆಯಾದ ಜನಪ್ರಿಯ ಟಿವಿಎಸ್ ವಿಕ್ಟರ್ 110 ಬೈಕ್

ಮೈಲೇಜ್

ಟಿವಿಎಸ್ ಬೈಕ್‍ಗಳು ಎಂದರೆಯೆ ನೆನಪಾಗುವುದು ಅವುಗಳು ನೀಡುವ ಮೈಲೇಜ್ 4 ಸ್ಪೀಡ್ ಗೇರ್‍‍ಬಾಕ್ಸ್ ಜೋಡಣೆ ಹೊಂದಿರುವ ಈ ಬೈಕಿನ ಎಂಜಿನ್ ಒಂದು ಲೀಟರ್ ಪೆಟ್ರೋಲ್‍ಗೆ ಸುಮಾರು 72 ಕಿಲೋಮೀಟರ್‍‍ನ ಮೈಲೇಜ್ ನೀಡಬಲ್ಲದು. ಇದೇ ಮೈಲೇಜ್ ಅನ್ನು ಸಂಸ್ಥೆಯು ಇತ್ತೀಚೆಗೆ ಬಿಡುಗಡೆ ಮಾಡಿರುವ ರೇಡಿಯಾನ್ ಬೈಕ್‍ಗಳಲ್ಲಿಯೂ ಸಹ ಕಾಣಬಹುದಾಗಿದೆ.

ಹೊಸ ಅಪ್ಡೇಟ್‍ನೊಂದಿಗೆ ಬಿಡುಗಡೆಯಾದ ಜನಪ್ರಿಯ ಟಿವಿಎಸ್ ವಿಕ್ಟರ್ 110 ಬೈಕ್

ಸಿಂಕ್ರೊನೈಸ್ಡ್ ಬೆಕಿಂಗ್ ಸಿಸ್ಟಂ ಹೊತ್ತು ಬಿಡುಗಡೆಗೊಂಡ ಟಿವಿಎಸ್ ವಿಕ್ಟರ್ 110 ಬೈಕ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಅಪ್‍ಫ್ರಂಟ್ ಮತ್ತು ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸಾರ್ಬರ್ ಅನ್ನು ಒದಗಿಸಲಾಗಿದೆ. ಇದರಲ್ಲಿ ನೀಡಿರುವ ಸಸ್ಪೆಂಷನ್ ಸೆಟಪ್ ಮತ್ತು ಸೀಟ್‍ಗಳು ರೈಡರ್ ಮತ್ತು ಪಿಲಿಯಾನ್ ರೈಡರ್‍‍ಗೆ ಪ್ರಯಾಣದ ವೇಳೆ ಆರಾಮದಾಯಕವಾದ ಅನುಭವವನ್ನು ನೀಡುತ್ತದೆ.

ಹೊಸ ಅಪ್ಡೇಟ್‍ನೊಂದಿಗೆ ಬಿಡುಗಡೆಯಾದ ಜನಪ್ರಿಯ ಟಿವಿಎಸ್ ವಿಕ್ಟರ್ 110 ಬೈಕ್

ಇದಲ್ಲದೇ ಹೊಸ ಟಿವಿಎಸ್ ವಿಕ್ಟರ್ 110 ಬೈಕ್‍ಗಳು ಟ್ಯೂಬ್‍ಲೆಸ್ ಟೈರ್ ಆಧಾರಿತ ಅಲಾಯ್ ವ್ಹೀಲ್ಸ್ ಅನ್ನು ಸಹ ಪಡೆದುಕೊಂಡಿದ್ದು, ಎರಡೂ ಬದಿಯಲ್ಲಿ ಡ್ರಂ ಬ್ರೇಕ್ ಮತ್ತು ಮುಂಭಾಗದಲ್ಲಿ ಅಥವಾ ಹಿಂಭಾಗದಲ್ಲಿ ಡಿಸ್ಕ್ ಬ್ರೆಕ್ ಹೊಂದಿರುವ ಆಯ್ಕೆಗಳಲ್ಲಿ ಕೂಡಾ ಖರೀದಿಗೆ ಲಭ್ಯವಿದೆ.

ಹೊಸ ಅಪ್ಡೇಟ್‍ನೊಂದಿಗೆ ಬಿಡುಗಡೆಯಾದ ಜನಪ್ರಿಯ ಟಿವಿಎಸ್ ವಿಕ್ಟರ್ 110 ಬೈಕ್

ಇವುಗಳಲ್ಲದೇಯೆ ಈ ಬೈಕಿನಲ್ಲಿ ಕ್ರೋಮ್ ಸೈಡ್ ಕವರ್ಸ್, ಕ್ರ್ಯಾಶ್ ಗಾರ್ಡ್, ಗೋಲ್ಡೆನ್ ಎಂಜಿನ್ ಕೇಸ್ ಕವರ್, ಶ್ತೈಲಿಷ್ ಗ್ರಾಫಿಕ್ಸ್ ಮತ್ತು ಡ್ಯುಯಲ್ ಟೋನ್ ಸೀಟ್ ಅನ್ನು ಪ್ರೀಮಿಯಂ ಎಡಿಷನ್‍ನಲ್ಲಿ ನೀಡಲಾಗಿದೆ. ಟಿವಿಎಸ್ ವಿಕ್ಟರ್ 110 ಬೈಕ್ ಮಾರುಕಟ್ಟೆಯಲ್ಲಿರುವ ಹೀರೋ ಪ್ಯಾಶನ್ ಎಕ್ಸ್ ಪ್ರೋ ಮತ್ತು ಹೋಂಡಾ ಲಿವೊ ಬೈಕ್‍ಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
2019 TVS Victor 110 SBT Launched In India — Prices Start At Rs 54,682. Read In Kannada
Story first published: Monday, April 1, 2019, 11:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X