ಹೊಸ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದ ಪಿಯಾಜಿಯೊ

ಪಿಯಾಜಿಯೊ ಇಂಡಿಯಾ ಇಂದು ಎರಡು ಹೊಸ ಸ್ಕೂಟರ್‌ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಕಂಪನಿಯು ವೆಸ್ಪಾ ವಿಎಕ್ಸ್ಎಲ್, ಎಸ್‌ಎಕ್ಸ್‌ಎಲ್‌ ಫೇಸ್‌ಲಿಫ್ಟ್ ಹಾಗೂ ಹೊಸ ಸ್ಪೋರ್ಟಿ ಏಪ್ರಿಲಿಯಾ ಸ್ಟಾರ್ಮ್ ಸ್ಕೂಟರ್ ಗಳನ್ನು ಬಿಡುಗಡೆಗೊಳಿಸಿದೆ.

ಹೊಸ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದ ಪಿಯಾಜಿಯೊ

ಈ ಎಲ್ಲಾ ಸ್ಕೂಟರ್‌ಗಳನ್ನು ಪ್ರೀಮಿಯಂ ಸ್ಕೂಟರ್‌ ಸೆಗ್ ಮೆಂಟಿನಲ್ಲಿ ಬಿಡುಗಡೆಗೊಳಿಸಲಾಗಿದೆ. ಗ್ರೇಟರ್ ನೋಯ್ಡಾದಲ್ಲಿ ನಡೆದಿದ್ದ 2020ರ ಆಟೋ ಎಕ್ಸ್‌ಪೋದಲ್ಲಿ ಕಂಪನಿಯು ಈ ಎಲ್ಲಾ ಸ್ಕೂಟರ್ ಗಳನ್ನು ಪ್ರದರ್ಶಿಸಿತ್ತು. ಕಂಪನಿಯು ಈ ಸ್ಕೂಟರ್‌ಗಳ ಆನ್‌ಲೈನ್‌ ಬುಕ್ಕಿಂಗ್ ಗಳನ್ನು ಆರಂಭಿಸಿದೆ. ರೂ.1,000 ಪಾವತಿಸಿ ಈ ಸ್ಕೂಟರ್‌ಗಳನ್ನು ಆನ್‌ಲೈನ್ ನಲ್ಲಿ ಬುಕ್ಕಿಂಗ್ ಮಾಡಬಹುದು. ವೆಸ್ಪಾ ವಿಎಕ್ಸ್ಎಲ್ ಮತ್ತು ಎಸ್ಎಕ್ಸ್ಎಲ್ ಸ್ಕೂಟರ್ ಗಳನ್ನು ಕ್ರಮವಾಗಿ ಹೊಸ 125 ಸಿಸಿ ಹಾಗೂ 150 ಸಿಸಿ ಎಂಜಿನ್ ಗಳೊಂದಿಗೆ ಬಿಡುಗಡೆಗೊಳಿಸಲಾಗಿದೆ.

ಹೊಸ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದ ಪಿಯಾಜಿಯೊ

ಹೊಸ ಶ್ರೇಣಿಯ ವೆಸ್ಪಾ ಸ್ಕೂಟರ್‌ಗಳಲ್ಲಿ ಅನೇಕ ರೀತಿಯ ಟೆಕ್ನಿಕಲ್ ಬದಲಾವಣೆಗಳನ್ನು ಮಾಡಲಾಗಿದೆ. ಮೊನೊಕೊಕ್ ಸ್ಟೀಲ್ ಫ್ರೇಮ್ ಗಳನ್ನು ಸ್ಕೂಟರ್‌ಗಳಲ್ಲಿ ಮೊದಲ ಬಾರಿಗೆ ಬಳಸಲಾಗಿದೆ. ಇದಲ್ಲದೆ ಯಾಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಹಾಗೂ ಟ್ವಿನ್ ಪಾಟ್ ಕ್ಯಾಲಿಪರ್ ಡಿಸ್ಕ್ ಬ್ರೇಕ್‌ಗಳನ್ನು ಸಹ ನೀಡಲಾಗಿದೆ.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಹೊಸ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದ ಪಿಯಾಜಿಯೊ

ವೆಸ್ಪಾ ಸ್ಕೂಟರ್‌ಗಳಲ್ಲಿ ಹೊಸ ಫ್ಯೂಯಲ್ ಇಂಜೆಕ್ಟೆಡ್ 3 ವಾಲ್ವ್ ಬಿಎಸ್ 6 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ ಸ್ಕೂಟರ್ ಗಳ ಪರ್ಫಾಮೆನ್ಸ್ ಹಾಗೂ ಮೈಲೇಜ್ ಹೆಚ್ಚಿಸುತ್ತದೆ. ಉತ್ತಮ ಗ್ರಿಪ್ ಗಾಗಿ ಸ್ಕೂಟರ್‌ಗಳಲ್ಲಿ ಪೆಟಲ್ ಅಲಾಯ್ ವ್ಹೀಲ್ ಹೊಂದಿರುವ ಅಗಲವಾದ ಟಯರ್‌ಗಳನ್ನು ಅಳವಡಿಸಲಾಗಿದೆ.

ಹೊಸ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದ ಪಿಯಾಜಿಯೊ

ಈ ಸ್ಕೂಟರ್‌ಗಳು ಹೊಸ ಎಲ್‌ಇಡಿ ಸ್ಪ್ಲಿಟ್ ಹೆಡ್‌ಲೈಟ್, ಹೆಡ್‌ಲೈಟ್ ಮಧ್ಯೆ ಡೇ ರನ್ನಿಂಗ್ ಲೈಟ್, ಯುಎಸ್‌ಬಿ ಚಾರ್ಜಿಂಗ್ ಬೂಟ್ ಲೈಟ್ ಗಳನ್ನು ಹೊಂದಿವೆ. ವೆಸ್ಪಾ ವಿಎಕ್ಸ್‌ಎಲ್ ಫೇಸ್‌ಲಿಫ್ಟ್ ಸರ್ಕ್ಯುಲರ್ ಹೆಡ್‌ಲ್ಯಾಂಪ್ ಹೊಂದಿದ್ದರೆ, ಎಸ್‌ಎಕ್ಸ್‌ಎಲ್ ಮಾದರಿಯು ಸ್ಕ್ವೇರ್ ಹೆಡ್‌ಲ್ಯಾಂಪ್ ಹೊಂದಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಹೊಸ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದ ಪಿಯಾಜಿಯೊ

ಏಪ್ರಿಲಿಯಾ ಸ್ಟಾರ್ಮ್, ಪ್ರೀಮಿಯಂ ಸ್ಪೋರ್ಟಿ ಸ್ಕೂಟರ್ ಆಗಿದೆ. ಈ ಸ್ಕೂಟರ್ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್, ಡಿಸ್ಕ್ ಬ್ರೇಕ್, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, 12 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ. ಈ ಸ್ಕೂಟರಿನಲ್ಲಿ 125 ಸಿಸಿಯ ಬಿಎಸ್ 6 ಎಂಜಿನ್ ಅಳವಡಿಸಲಾಗಿದೆ. ಈ ಸ್ಕೂಟರ್ ಅನ್ನು ಭಾರತದ ಯುವಜನರನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ.

ಹೊಸ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದ ಪಿಯಾಜಿಯೊ

ವೆಸ್ಪಾ ವಿಎಕ್ಸ್‌ಎಲ್, ಎಸ್‌ಎಕ್ಸ್‌ಎಲ್‌ನ ಹೊಸ ಫೇಸ್‌ಲಿಫ್ಟ್ ಹಾಗೂ ಏಪ್ರಿಲಿಯಾ ಸ್ಟಾರ್ಮ್ ಸ್ಕೂಟರ್‌ಗಳನ್ನು ಭಾರತದಲ್ಲಿರುವ ಎಲ್ಲಾ ವೆಸ್ಪಾ ಹಾಗೂ ಏಪ್ರಿಲಿಯಾ ಶೋರೂಂಗಳಲ್ಲಿ ಮಾರಾಟ ಮಾಡಲಾಗುವುದು.

Most Read Articles

Kannada
English summary
Aprilia launches new scooters in India features specifications and other details. Read in Kannada.
Story first published: Monday, July 20, 2020, 18:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X