ಮತ್ತೊಮ್ಮೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಹೋಂಡಾ ಡ್ಯಾಕ್ಸ್ ಮಿನಿ ಬೈಕ್

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ತನ್ನ ಡ್ಯಾಕ್ಸ್ ಮಿನಿ ಬೈಕನ್ನು ಮತ್ತೊಮ್ಮೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಹೋಂಡಾ ಡ್ಯಾಕ್ಸ್ ಮಿನಿ ಬೈಕಿನ ಹಳೆಯ ಹೆಸರು ಎಸ್‌ಟಿ ಎಂದಾಗಿದೆ.

ಮತ್ತೊಮ್ಮೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಹೋಂಡಾ ಡ್ಯಾಕ್ಸ್ ಮಿನಿ ಬೈಕ್

ಹೋಂಡಾ ಇಂದು ಗ್ರೋಮ್ ಮಿನಿಬೈಕ್‌ಗೆ ಸಾಕಷ್ಟು ಹೆಸರುವಾಸಿಯಾಗಿದ್ದರೂ, ಇದು 60 ಮತ್ತು 70 ರ ದಶಕಗಳಲ್ಲಿ ಮಿನಿ ಬೈಕ್ ಅನ್ನು ಹೊಂದಿತ್ತು. ಆಗ ಮಿನಿಬೈಕ್ ಅನ್ನು ಎಸ್‌ಟಿ ಎಂಬ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದರು. ಎಸ್‌ಟಿ ಮಿನಿಬೈಕ್ ಅಮೆರಿಕಾ ಮತ್ತು ಜಪಾನ್, ಯುರೋಪ್ ಸೇರಿದಂತೆ ಹಲವು ಕಡೆಗಳಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿತ್ತು.

ಮತ್ತೊಮ್ಮೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಹೋಂಡಾ ಡ್ಯಾಕ್ಸ್ ಮಿನಿ ಬೈಕ್

ಇದೀಗ ಹೋಂಡಾ ಕಂಪನಿಯು ಮಿನಿ ಬೈಕ್ ಗಾಗಿ ಯುರೋಪಿನಲ್ಲಿ ‘ಹೋಂಡಾ ಎಸ್‌ಟಿ 125' ಹೆಸರನ್ನು ಟ್ರೇಡ್‌ಮಾರ್ಕ್ ಮಾಡಿದೆ. ಮತ್ತೊಮ್ಮೆ ಯುರೋಪಿನ ಮಾರುಕಟ್ಟೆಗಳಲ್ಲಿ ಹಳೆಯ ಐಕಾನಿಕ್ ಹೆಸರಿನಲ್ಲಿ ಮಿನಿ ಬೈಕ್ ಅನ್ನು ಬಿಡುಗಡೆಗೊಳಿಸಲು ಹೋಂಡಾ ಮುಂದಾಗಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಮತ್ತೊಮ್ಮೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಹೋಂಡಾ ಡ್ಯಾಕ್ಸ್ ಮಿನಿ ಬೈಕ್

ಎಸ್‌ಟಿ ಮಿನಿ ಬೈಕ್ 50 ಸಿಸಿ, 70 ಸಿಸಿ ಮತ್ತು 90 ಸಿಸಿ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿತ್ತು. ಈ ಹೋಂಡಾ ಮಿನಿ ಬೈಕ್ ವಿಶಿಷ್ಟವಾದ ಒತ್ತಿದ ಸ್ಟೀಲ್ ಟಿ-ಬೋನ್ ಫ್ರೇಮ್ ಅನ್ನು ಒಳಗೊಂಡಿತ್ತು. ಈ ಮಿನಿ ಬೈಕ್‌ಗಳು ತಮ್ಮ ಮೋಟರ್ ಅನ್ನು ಹೋಂಡಾ ಕಬ್ ಸ್ಕೂಟರ್‌ಗಳೊಂದಿಗೆ ಹಂಚಿಕೊಂಡಿವೆ.

ಮತ್ತೊಮ್ಮೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಹೋಂಡಾ ಡ್ಯಾಕ್ಸ್ ಮಿನಿ ಬೈಕ್

ಹೋಂಡಾ ಎಸ್‌ಟಿ ಮಿನಿ ಬೈಕ್ ಸಿಂಗಲ್-ಪೀಸ್ ಸೀಟ್ ಅನ್ನು ಹೊಂದಿತ್ತು. ಹಿಂದಿನ ಹೋಂಡಾ ಎಸ್‌ಟಿ ಮಿನಿಬೈಕ್ ಎಂಜಿನ್ ಅನ್ನು ಫುಟ್ ಪೆಗ್ ಹತ್ತಿರ ಇರಿಸಲಾಗಿತ್ತು. ಎಂಜಿನ್ ಕವರಿಂಗ್ ಅನ್ನು ಹೊಂದಿರಲಿಲ್ಲ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಮತ್ತೊಮ್ಮೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಹೋಂಡಾ ಡ್ಯಾಕ್ಸ್ ಮಿನಿ ಬೈಕ್

ಮಿನಿ ಬೈಕ್‌ಗಳು ಹೆಚ್ಚಾಗಿ ಜನಪ್ರಿಯವಾಗಿರುವ ಅಮೆರಿಕಾದಲ್ಲಿ ಹೋಂಡಾ ‘ಟ್ರೇಲ್‌ಸ್ಪೋರ್ಟ್' ಹೆಸರಿಗೆ ಟ್ರೇಡ್‌ಮಾರ್ಕ್ ಸಲ್ಲಿಸಿದೆ. ಹೋಂಡಾ ಎಂಎಸ್ಎಕ್ಸ್ ಗ್ರೋಮ್ ಮಾದರಿಗಳಲ್ಲಿ ಕಂಡುಬರುವಂತೆ 125 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಮತ್ತೊಮ್ಮೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಹೋಂಡಾ ಡ್ಯಾಕ್ಸ್ ಮಿನಿ ಬೈಕ್

ಇದರೊಂದಿಗೆ ಹೋಂಡಾ ಮೋಟಾರ್‌ಸೈಕಲ್ ತನ್ನ ಹೊಸ ಸಿಬಿ1300 ಸೀರಿಸ್ ಬೈಕನ್ನು ತಮ್ಮ ತವರುನಾಡು ಜಪಾನ್‌ನಲ್ಲಿ ಬೈಕನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಹೋಂಡಾ ಸರಣಿಯಲ್ಲಿ ಸಿಬಿ1300 ಸೀರಿಸ್ ಮಾದರಿ ಅತಿ ದುಬಾರಿ ಬೈಕುಗಳಲ್ಲಿ ಒಂದಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಮತ್ತೊಮ್ಮೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಹೋಂಡಾ ಡ್ಯಾಕ್ಸ್ ಮಿನಿ ಬೈಕ್

ಹೊಸ ಹೋಂಡಾ ಸಿಬಿ1300 ಸೀರಿಸ್ ಬೈಕ್ ಸಿಬಿ1300 ಸೂಪರ್ ಫೋರ್, ಸಿಬಿ1300 ಸೂಪರ್ ಫೋರ್ ಎಸ್‌ಪಿ, ಸಿಬಿ1300 ಸೂಪರ್ ಬೋಲ್ಡ್ ಮತ್ತು ಸಿಬಿ1300 ಸೂಪರ್ ಬೋಲ್ಡ್ ಎಸ್ಪಿ ಎಂಬ ನಾಲ್ಕು ರೂಪಾಂತರಗಳನ್ನು ಒಳಗೊಂಡಿದೆ. ಇನ್ನು ಹೊಸ ಹೋಂಡಾ ಸಿಬಿ1300 ಸೀರಿಸ್ ಬೈಕಿನ ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಮತ್ತೊಮ್ಮೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಹೋಂಡಾ ಡ್ಯಾಕ್ಸ್ ಮಿನಿ ಬೈಕ್

ಇನ್ನು ಹೋಂಡಾ ಮಿನಿ ಬೈಕ್‌ಗಳು ಭಾರತದಲ್ಲಿ ಎಂದಿಗೂ ಜನಪ್ರಿಯತೆಯನ್ನು ಗಳಿಸಲಿಲ್ಲ. ಇಲ್ಲಿಗೆ ಬಂದ ಕೊನೆಯ ಮಿನಿಬೈಕ್ ಹೋಂಡಾ ನವೀ ಸ್ಕೂಟರ್ ಅನ್ನು ಸ್ಥಗಿತಗೊಳಿಸಲಾಗಿದೆ. ಹೊಸ ಹೋಂಡಾ ಎಸ್‌ಟಿ 125 ಭಾರತಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿಲ್ಲ.

Most Read Articles

Kannada
English summary
Honda Dax Minibike To Make A Comeback. Read In Kannada.
Story first published: Saturday, December 26, 2020, 19:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X