ಜಾವಾ ಪೆರಾಕ್ ಬೈಕ್ ಖರೀದಿಗೆ ಅಧಿಕೃತ ಬುಕ್ಕಿಂಗ್ ಶುರು

ಕಳೆದ ನವೆಂಬರ್ 15ರಂದು ಬಿಡುಗಡೆಯಾಗಿದ್ದ ಪೆರಾಕ್ ಬೈಕ್ ಮಾದರಿಯ ವಿತರಣೆಗೆ ಭರ್ಜರಿ ಸಿದ್ದತೆ ನಡೆಸಿರುವ ಜಾವಾ ಮೋಟಾರ್‌ಸೈಕಲ್ ಸಂಸ್ಥೆಯು ಇಂದಿನಿಂದ ಅಧಿಕೃತ ಬುಕ್ಕಿಂಗ್ ಆರಂಭಿಸಲಿದ್ದು, ಏಪ್ರಿಲ್ 2ರಿಂದ ಬೈಕ್ ವಿತರಣೆಗೆ ಚಾಲನೆ ನೀಡುವುದಾಗಿ ಹೇಳಿಕೊಂಡಿದೆ.

ಜಾವಾ ಪೆರಾಕ್ ಬೈಕ್ ಖರೀದಿಗೆ ಅಧಿಕೃತ ಬುಕ್ಕಿಂಗ್ ಶುರು

ಬಿಡುಗಡೆಗೂ ಮುನ್ನ ಕ್ಲಾಸಿಕ್ ಬೈಕ್ ಪ್ರಿಯರಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಜಾವಾ ಪೆರಾಕ್ ಬೈಕ್ ಮಾದರಿಯು ಇದೀಗ ಅಂತಿಮವಾಗಿ ಗ್ರಾಹಕರ ಕೈಸೇರಲು ಸಿದ್ದವಾಗಿದ್ದು, ರೂ.10 ಸಾವಿರ ಮುಂಗಡದೊಂದಿಗೆ ಇಂದಿನಿಂದಲೇ ಆನ್‌ಲೈನ್ ಬುಕ್ಕಿಂಗ್ ಮಾಡಬಹುದಾಗಿದೆ. ಹೊಸ ಬೈಕ್ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1,95,500 ಬೆಲೆ ಪಡೆದುಕೊಂಡಿದ್ದು, ಸಾಮಾನ್ಯ ಬೈಕ್ ಮಾದರಿಗಳಾದ ಜಾವಾ ಮತ್ತು ಜಾವಾ 42 ಬೈಕ್‌ಗಳಿಂತಲೂ ವಿಶೇಷ ವಿನ್ಯಾಸ ಹೊಂದಿದೆ.

ಜಾವಾ ಪೆರಾಕ್ ಬೈಕ್ ಖರೀದಿಗೆ ಅಧಿಕೃತ ಬುಕ್ಕಿಂಗ್ ಶುರು

1940ರ ಅವಧಿಯಲ್ಲಿನ ಬಾಬರ್ ಸ್ಟೈಲ್ ಬೈಕ್ ವಿನ್ಯಾಸವನ್ನು ಹೊತ್ತುಬಂದಿರುವ ಪೆರಾಕ್ ಬೈಕ್ ಮಾದರಿಯು ವಿಶೇಷ ಬಾಡಿ ಶೈಲಿಯೊಂದಿಗೆ ಭಾರತದಲ್ಲಿರುವ ಇತರೆ ಎಲ್ಲಾ ಬೈಕ್ ಮಾದರಿಗಳಿಂತಲೂ ಉದ್ದವಾದ ವೀಲ್ಹ್ ಬೆಸ್ ಹೊಂದಿರುವ ಮೊದಲ ಬೈಕ್ ಇದಾಗಿದೆ.

ಜಾವಾ ಪೆರಾಕ್ ಬೈಕ್ ಖರೀದಿಗೆ ಅಧಿಕೃತ ಬುಕ್ಕಿಂಗ್ ಶುರು

ಪೆರಾಕ್ ಬೈಕ್ ಮಾದರಿಯು 2020ರ ಎಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರಲಿರುವ ಬಿಎಸ್-6 ನಿಯಮ ಅನುಸಾರ ಅಭಿವೃದ್ದಿ ಹೊಂದಿದ್ದು, 334-ಸಿಸಿ ಎಂಜಿನ್ ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ 30-ಬಿಎಚ್‌ಪಿ ಮತ್ತು 31-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಜಾವಾ ಪೆರಾಕ್ ಬೈಕ್ ಖರೀದಿಗೆ ಅಧಿಕೃತ ಬುಕ್ಕಿಂಗ್ ಶುರು

ಪೆರಾಕ್ ಬೈಕ್ ಮಾದರಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಪಡೆದುಕೊಂಡಿದ್ದು, ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಮಾದರಿಗೆ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ. ಮತ್ತೊಂದು ವಿಶೇಷ ಅಂದ್ರೆ, ಪೆರಾಕ್ ಮಾದರಿಯು ಕ್ಲಾಸಿಕ್ ಲೆಜೆಂಡ್ ಕಂಪನಿಯಿಂದಲೇ ಮಾಡಿಫೈಗೊಂಡ ಬೈಕ್ ಆವೃತ್ತಿಯಾಗಲಿದ್ದು, ಡ್ಯುಯಲ್ ಚಾನೆಲ್ ಎಬಿಎಸ್, ಎರಡು ಬದಿಯ ಚಕ್ರಗಳಲ್ಲೂ ಡಿಸ್ಕ್ ಬ್ರೇಕ್, ರೌಂಡ್ ಹೆಡ್‌ಲ್ಯಾಂಪ್, ಡ್ಯಯಲ್ ಎಕ್ಸಾಸ್ಟ್ ಫೀಚರ್ಸ್‌ಗಳು ಹೊಸ ಬೈಕಿನ ಪ್ರಮುಖ ಆಕರ್ಷಣೆಯಾಗಿವೆ.

ಜಾವಾ ಪೆರಾಕ್ ಬೈಕ್ ಖರೀದಿಗೆ ಅಧಿಕೃತ ಬುಕ್ಕಿಂಗ್ ಶುರು

ಈ ಮೂಲಕ ದುಬಾರಿ ಬೆಲೆಯ ಹಾರ್ಲೆ ಡೇವಿಡ್ಸನ್ ಬೈಕ್ ರೈಡಿಂಗ್ ಅನುಭವ ನೀಡುವ ಪೆರಾಕ್ ಬೈಕ್‌ಗಳು ಯುವ ಸಮುದಾಯದ ನೆಚ್ಚಿನ ಬೈಕ್ ಮಾದರಿಯಾಗುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ಕ್ಲಾಸಿಕ್ 350 ಮಾತ್ರವಲ್ಲದೇ ಇತ್ತೀಚೆಗೆ ಬಿಡುಗಡೆಯಾಗಲಿರುವ ಬೆನೆಲ್ಲಿ ಇಂಪೀರಿಯಲ್ 400 ಬೈಕಿಗೂ ಇದು ಪೈಪೋಟಿ ನೀಡಲಿದೆ.

ಜಾವಾ ಪೆರಾಕ್ ಬೈಕ್ ಖರೀದಿಗೆ ಅಧಿಕೃತ ಬುಕ್ಕಿಂಗ್ ಶುರು

ಇನ್ನು ಜಾವಾ ಬೈಕ್‌ಗಳು ದಶಕಗಳ ಹಿಂದೆ ಭಾರತದಲ್ಲಿ ಅಬ್ಬರಿಸಿ ಮರೆಯಾಗಿದ್ದಲ್ಲದೆ ಇದೀಗ ನವ ವಿನ್ಯಾಸ ಹಾಗೂ ನೂತನ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಜಾವಾ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಬೈಕ್ ನಿರ್ಮಿಸುವಲ್ಲಿ ಮಹೀಂದ್ರಾ ಅಂಗಸಂಸ್ಥೆಯಾದ ಕ್ಲಾಸಿಕ್ ಲೆಜೆಂಡ್ ಯಶಸ್ವಿಯಾಗಿದೆ.

MOST READ: ಮಾಲಿನ್ಯ ತಗ್ಗಿಸಲು ಬೆಂಗಳೂರು ದಂಪತಿಯ ಕಾರ್ಯವನ್ನು ಮೆಚ್ಚಲೇಬೇಕು..!

ಜಾವಾ ಪೆರಾಕ್ ಬೈಕ್ ಖರೀದಿಗೆ ಅಧಿಕೃತ ಬುಕ್ಕಿಂಗ್ ಶುರು

ಕ್ಲಾಸಿಕ್ ಲೆಜೆಂಡ್ ಸಂಸ್ಥೆಯು ಸದ್ಯಕ್ಕೆ ಮೂರು ಹೊಸ ಬೈಕ್‌ಗಳನ್ನು ಹೊರತಂದಿದ್ದು, ಇದರಲ್ಲಿ ಜಾವಾ, ಜಾವಾ 42 ಬೈಕ್‌ಗಳು ಈಗಾಗಲೇ ಮಾರಾಟವಾಗುತ್ತಿದೆ. ಇದೀಗ ಬಿಡುಗಡೆಯಾಗಿರುವ ಪೆರಾಕ್ ಕಸ್ಟಮ್ ಬೈಕ್ ಮಾದರಿಯು ಕೂಡಾ ಮುಂದಿನ ಏಪ್ರಿಲ್‌ನಲ್ಲಿ ರಸ್ತೆಗಿಳಿಯಲಿದೆ.

MOST READ: ಪ್ರಿಯಾಂಕಾ ಗಾಂಧಿಗೆ ಡ್ರಾಪ್ ಕೊಟ್ಟ ಸ್ಕೂಟರ್‌ ಮಾಲೀಕನಿಗೆ ಬಿತ್ತು ದುಬಾರಿ ದಂಡ

ಜಾವಾ ಪೆರಾಕ್ ಬೈಕ್ ಖರೀದಿಗೆ ಅಧಿಕೃತ ಬುಕ್ಕಿಂಗ್ ಶುರು

ಜಾವಾ ಕ್ಲಾಸಿಕ್ ಬೈಕ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.64 ಲಕ್ಷಕ್ಕೆ ಮತ್ತು ಜಾವಾ 42 ಮಾದರಿಯು ರೂ. 1.55 ಲಕ್ಷಕ್ಕೆ ಖರೀದಿಗೆ ಲಭ್ಯವಿದ್ದು, ಎರಡು ಬೈಕ್‌ಗಳಲ್ಲೂ 293-ಸಿಸಿ ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದೊಂದಿಗೆ 27-ಬಿಹೆಚ್‍ಪಿ ಮತ್ತು 28-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿವೆ.

MOST READ: ಆಟೋದಲ್ಲೇ ಐಷಾರಾಮಿ ಮನೆ ಕಟ್ಟಿದ ಭೂಪ..!

ಜಾವಾ ಪೆರಾಕ್ ಬೈಕ್ ಖರೀದಿಗೆ ಅಧಿಕೃತ ಬುಕ್ಕಿಂಗ್ ಶುರು

ಆದರೆ ಜಾವಾ ಹೊಸ ಬೈಕ್‌ಗಳಿಗೆ ಭಾರೀ ಬೇಡಿಕೆಯಿದ್ದರೂ ಸಹ ಬೇಡಿಕೆಗೆ ತಕ್ಕಂತೆ ನಿಗದಿತ ಅವಧಿಯಲ್ಲಿ ಬೈಕ್ ಉತ್ಪಾದನೆ ಮತ್ತು ವಿತರಣೆಯನ್ನು ವಿಳಂಬ ಮಾಡುತ್ತಿರುವ ಕ್ಲಾಸಿಕ್ ಲೆಜೆಂಡ್ ಸಂಸ್ಥೆಯು ಹಲವಾರು ಭಾರೀ ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದೆ. ಇದರಿಂದ ಸದ್ಯ ಗ್ರಾಹಕರ ಕೈಸೇರಲು ಸಿದ್ದವಾಗಿರುವ ಪೆರಾಕ್ ಬೈಕಿನ ಬೇಡಿಕೆಯನ್ನು ಯಾವ ರೀತಿ ಪೂರೈಕೆ ಮಾಡಲಿದೆ ಎನ್ನುವುದೇ ಕುತೂಹಲಕ್ಕೆ ಕಾರಣವಾಗಿದೆ.

Most Read Articles

Kannada
English summary
Jawa has started pre bookings for the Perak bobber style motorcycle in India.
Story first published: Thursday, January 2, 2020, 16:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X