ಹೊಸ ಸೂಪರ್ ಬೈಕನ್ನು ಅನಾವರಣಗೊಳಿಸಿದ ಎಂವಿ ಅಗಸ್ಟಾ

ಇಟಲಿಯ ಸೂಪರ್‌ಬೈಕ್ ತಯಾರಕ ಕಂಪನಿಯಾದ ಎಂವಿ ಅಗಸ್ಟಾ ತನ್ನ ಹೊಸ ಬ್ರೂಟೇಲ್ 1000 ಆರ್‌ಆರ್ ಎಂಎಲ್ ಬೈಕನ್ನು ಅನಾವರಣಗೊಳಿಸಿದೆ. ಇದು ಅಗಸ್ಟಾ ಬ್ರ್ಯಾಂಡ್‌ನ ಅಲ್ಟ್ರಾ ಸೀಮಿತ ಆವೃತ್ತಿಯಾಗಿದೆ.

ಹೊಸ ಸೂಪರ್ ಬೈಕನ್ನು ಅನಾವರಣಗೊಳಿಸಿದ ಎಂವಿ ಅಗಸ್ಟಾ

ವಿಶೇಷವೆಂದರೆ ಹೊಸ ಎಂವಿ ಅಗಸ್ಟಾ ಬ್ರೂಟೇಲ್ 1000 ಆರ್‌ಆರ್ ಎಂಎಲ್ ಬೈಕ್ ವಿಶ್ವಾದ್ಯಂತ ಕೇವಲ ಒಂದು ಯುನಿಟ್ ಗೆ ಸೀಮಿತವಾಗಿರುತ್ತದೆ. ಈ ಬೈಕ್ ವಿಶಿಷ್ಟವಾದ ನೀಲಿ ಮತ್ತು ಬಿಳಿ ಬಣ್ಣದ ಆಯ್ಕೆಗಳನ್ನು ಹೊಂದಿರುತ್ತದೆ. ಈ ಹೊಸ ಬ್ರೂಟೇಲ್ 1000 ಆರ್‌ಆರ್ ಎಂಎಲ್‌ನ ವಿಶಿಷ್ಟ ಬಣ್ಣದ ಆಯ್ಕೆಯು ಎಂವಿ ಅಗಸ್ಟಾ ಅವರ ಹಿಂದಿನ ಮಾದರಿಗಳಿಂದ ಪ್ರೇರಣೆಯನ್ನು ಪಡೆದುಕೊಂಡಿದೆ.

ಹೊಸ ಸೂಪರ್ ಬೈಕನ್ನು ಅನಾವರಣಗೊಳಿಸಿದ ಎಂವಿ ಅಗಸ್ಟಾ

ಈ ಹೊಸ ಬೈಕ್ ಪ್ರಮುಖವಾಗಿ ಬ್ರೂಟೇಲ್ 910 ಆರ್ ಮಾದರಿಯಿಂದ ಸ್ಪೂರ್ತಿ ಪಡೆದಿದೆ. ಇದು 2006ರಲ್ಲಿ ಇಟಲಿ ತಂಡವು ವಿಶ್ವಕಪ್ ತಂಡವು ವಿಶ್ವಕಪ್ ಗೆದ್ದಾಗ ಸ್ಮರಣಾರ್ಥವಾಗಿ ಈ ಮಾದರಿಯನ್ನು ನಿರ್ಮಿಸಲಾಗಿದೆ.

MOST READ: ಹೊಸ ಸೂಪರ್ ಬೈಕನ್ನು ಬಿಡುಗಡೆಗೊಳಿಸಲಿದೆ ಎಂವಿ ಅಗಸ್ಟಾ

ಹೊಸ ಸೂಪರ್ ಬೈಕನ್ನು ಅನಾವರಣಗೊಳಿಸಿದ ಎಂವಿ ಅಗಸ್ಟಾ

ವಿಶಿಷ್ಟವಾದ ಬಣ್ಣದ ಆಯ್ಕೆಯು ಹೊರತಾಗಿಯು ಸೀಮಿತ ಆವೃತ್ತಿಯ ಮಾದರಿಯು ಪ್ಲೇಕ್ ಅನ್ನು ಸಹ ಹೊಂದಿದೆ, ಸೀಮಿತ ಆವೃತ್ತಿಯ ಮಾದರಿಯ ಹೆಸರೂ ಆಗಿರುವ ಎಂಎಲ್ ಎಂಬ ಮೊದಲಕ್ಷರಗಳನ್ನು ಹೊಂದಿರುವ ವ್ಯಕ್ತಿಯಿಂದ ಬೈಕು ನಿಯೋಜಿಸಲ್ಪಟ್ಟಿದೆ. ಆದರೆ ಎಂವಿ ಅಗಾಸ್ಟ ಕಂಪನಿಯು ಎಂಎಲ್ ಎಂದರೇನು ಎಂಬುದನ್ನು ಇನ್ನು ಬಹಿರಂಗಪಡಿಸಿಲ್ಲ.

ಹೊಸ ಸೂಪರ್ ಬೈಕನ್ನು ಅನಾವರಣಗೊಳಿಸಿದ ಎಂವಿ ಅಗಸ್ಟಾ

ಅಲ್ಟ್ರಾ ಸೀಮಿತ ಆವೃತ್ತಿಯು ಅದರ ಫ್ರೇಮ್ ಮತ್ತು ಸ್ವಿಂಗಾರ್ಮ್‌ನಲ್ಲಿ ಮ್ಯಾಟ್ ಗೋಲ್ಡನ್ ಲೇಪನವನ್ನು ಹೊಂದಿದೆ. ಅಲ್ಯೂಮಿನಿಯಮ್ ರಿಮ್ ನಲ್ಲಿ ಬ್ಲ್ಯಾಕ್ ಇನ್ಸಾರ್ಟ್ ಗಳನ್ನು ಹೊಂದಿದೆ. ಒಂದೇ ಸೀಮಿತ ಆವೃತ್ತಿಯಾಗಿರುವುದರಿಂದ ಗ್ರಾಹಕರು 001/001 ಸೀರಿಯಲ್ ನಂಬರ್ ನೊಂದಿಗೆ ಪ್ರಮಾಣ ಪತ್ರವನ್ನು ಕೂಡ ಪಡೆಯುತ್ತಾರೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಹೊಸ ಸೂಪರ್ ಬೈಕನ್ನು ಅನಾವರಣಗೊಳಿಸಿದ ಎಂವಿ ಅಗಸ್ಟಾ

ಮೇಲೆ ತಿಳಿಸಿದ ನವೀಕರಣಗಳ ಹೊರತಾಗಿ ಈ ಬೈಕಿನ ತಾಂತ್ರಿಕ ಅಂಶಗಳು ಸ್ಟ್ಯಾಂಡರ್ಡ್ ಬ್ರೂಟೇಲ್ 1000 ಆರ್‌ಆರ್ ಬೈಕಿಗೆ ಹೋಲುತ್ತದೆ. ಇದರಲ್ಲಿ 998 ಸಿಸಿ ಇನ್-ಲೈನ್ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 205 ಬಿಹೆಚ್‍ಪಿ ಪವರ್ ಮತ್ತು 115 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಸೂಪರ್ ಬೈಕನ್ನು ಅನಾವರಣಗೊಳಿಸಿದ ಎಂವಿ ಅಗಸ್ಟಾ

ಈ ಹೊಸ ಬೈಕಿನಲ್ಲಿ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವ ಎಲ್ಲಾ ಫೀಚರ್ ಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಇದರಲ್ಲಿ ಅಂಡಾಕಾರದ ಆಕಾರದ ಎಲ್‌ಇಡಿ ಹೆಡ್‌ಲೈಟ್, ಎಲ್‌ಇಡಿ ಟೈಲ್‌ಲೈಟ್ ಮತ್ತು 5 ಇಂಚಿನ ಬಣ್ಣ ಟಿಎಫ್‌ಟಿ ಡಿಸ್ ಪ್ಲೇ ಅನ್ನು ಅಳವಡಿಸಲಾಗಿದೆ.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಹೊಸ ಸೂಪರ್ ಬೈಕನ್ನು ಅನಾವರಣಗೊಳಿಸಿದ ಎಂವಿ ಅಗಸ್ಟಾ

ಈ ಬೈಕಿನಲ್ಲಿ 8-ಹಂತದ ಟ್ರಾಕ್ಷನ್ ಕಂಟ್ರೋಲ್ ಜೊತೆಯಲ್ಲಿ ರೇಸ್, ಸ್ಪೋರ್ಟ್, ರೈನ್ ಮತ್ತು ಕಸ್ಟಮ್ ಮಲ್ಟಿಪಲ್ ರೈಡಿಂಗ್ ಮೋಡ್ ಗಳನ್ನು ಹೊಂದಿದೆ. ಇನ್ನು ವ್ಹೀಲಿ ಕಂಟ್ರೋಲ್, ಕಾರ್ನರಿಂಗ್ ಎಬಿಎಸ್, ಲಾಂಚ್ ಕಂಟ್ರೋಲ್ ಮತ್ತು ಇತರ ಫೀಚರ್ ಗಳನ್ನು ಹೊಂದಿದೆ.

ಹೊಸ ಸೂಪರ್ ಬೈಕನ್ನು ಅನಾವರಣಗೊಳಿಸಿದ ಎಂವಿ ಅಗಸ್ಟಾ

ಈ ಬೈಕಿನ ಎರಡೂ ತುದಿಗಳಲ್ಲಿ ಓಹ್ಲಿನ್ಸ್ ಸಂಸ್ಪೆಕ್ಷನ್ ಅನ್ನು ಸಹ ಹೊಂದಿದೆ, ಹೊಸ ಬ್ರೂಟೇಲ್ 1000 ಆರ್‌ಆರ್ ಎಂಎಲ್ ಬೈಕನ್ನು ಎಂವಿ ಅಗಸ್ಟಾ ಕಂಪನಿಯ ನೀಡುವ ಇತರ ಸೀಮಿತ ಆವೃತ್ತಿಯ ಮಾದರಿಗಳೊಂದಿಗೆ ಸೇರಿಕೊಳ್ಳುತ್ತದೆ. ಈ ಸೀಮಿತ ಪಟ್ಟಿಯಲ್ಲಿ ಸೂಪರ್‌ವೆಲೋಸ್ 800 ಸೀರಿ ಓರೊ ಮತ್ತು ಬ್ರೂಟೇಲ್ 800 ಆರ್ಆರ್ ಎಲ್ಹೆಚ್ 44 ಅನ್ನು ಒಳಗೊಂಡಿದೆ,

Most Read Articles

Kannada
English summary
MV Agusta Brutale 1000RR ML Unveiled. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X