ಸ್ಕೂಟರ್‌ಗಳನ್ನು ಗುತ್ತಿಗೆಗೆ ನೀಡಲಿದೆ ಈ ಜನಪ್ರಿಯ ದ್ವಿಚಕ್ರ ವಾಹನ ಕಂಪನಿ

ಇಟಲಿ ಮೂಲದ ಪಿಯಾಜಿಯೊ ಕಂಪನಿಯು ತನ್ನ ದ್ವಿಚಕ್ರ ವಾಹನಗಳನ್ನು ಗುತ್ತಿಗೆಗೆ ನೀಡುವ ಯೋಜನೆಯನ್ನು ಆರಂಭಿಸಿದೆ. ಕರೋನಾ ವೈರಸ್ ಹರಡುವುದಕ್ಕೆ ಮುನ್ನವೇ ಭಾರತದ ಆಟೋ ಮೊಬೈಲ್ ಉದ್ಯಮವು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿತ್ತು. ಕರೋನಾ ವೈರಸ್ ಕಾರಣದಿಂದಾಗಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು.

ಸ್ಕೂಟರ್‌ಗಳನ್ನು ಗುತ್ತಿಗೆಗೆ ನೀಡಲಿದೆ ಈ ಜನಪ್ರಿಯ ದ್ವಿಚಕ್ರ ವಾಹನ ಕಂಪನಿ

ಮಾರ್ಚ್ ತಿಂಗಳಲ್ಲಿ ಜಾರಿಗೊಳಿಸಲಾದ ಲಾಕ್ ಡೌನ್ ಕಾರಣದಿಂದಾಗಿ ಹಲವಾರು ಕಂಪನಿಗಳು ಒಂದೇ ಒಂದು ಯುನಿಟ್ ವಾಹನವನ್ನು ಸಹ ಮಾರಾಟ ಮಾಡಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಭಾರತದ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬಾಗಿರುವ ಆಟೋ ಮೊಬೈಲ್ ಉದ್ಯಮವು ತೀವ್ರ ಸಂಕಷ್ಟಕ್ಕೀಡಾಯಿತು. ಈ ಪರಿಸ್ಥಿತಿಯಿಂದ ಚೇತರಿಸಿಕೊಳ್ಳಲು ವಾಹನ ತಯಾರಕ ಕಂಪನಿಗಳು ಹಲವಾರು ಕೊಡುಗೆಗಳನ್ನು ನೀಡುತ್ತಿವೆ.

ಸ್ಕೂಟರ್‌ಗಳನ್ನು ಗುತ್ತಿಗೆಗೆ ನೀಡಲಿದೆ ಈ ಜನಪ್ರಿಯ ದ್ವಿಚಕ್ರ ವಾಹನ ಕಂಪನಿ

ಪಿಯಾಜಿಯೊ ಕಂಪನಿಯು ಸಹ ಹೊಸ ವಾಹನಗಳ ಮಾರಾಟದ ಜೊತೆಗೆ ಲೀಸ್ ಯೋಜನೆಯನ್ನೂ ಆರಂಭಿಸಿದೆ. ಈ ಯೋಜನೆಯಡಿ ವೆಸ್ಪಾ ಅಥವಾ ಏಪ್ರಿಲಿಯಾಸ್ಕೂಟರ್‌ಗಳನ್ನು ಲೀಸ್ ಗೆ ನೀಡಲು ಕಂಪನಿಯು ಮುಂದಾಗಿದೆ.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಸ್ಕೂಟರ್‌ಗಳನ್ನು ಗುತ್ತಿಗೆಗೆ ನೀಡಲಿದೆ ಈ ಜನಪ್ರಿಯ ದ್ವಿಚಕ್ರ ವಾಹನ ಕಂಪನಿ

ಕಡಿಮೆ ಡೌನ್ ಪೇಮೆಂಟ್ ಹಾಗೂ 30%ನಷ್ಟು ರಿಯಾಯಿತಿ ಸೇರಿದಂತೆ ಹಲವು ಕೊಡುಗೆಗಳನ್ನು ನೀಡುವುದಾಗಿ ಕಂಪನಿ ತಿಳಿಸಿದೆ. ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಪಿಯಾಜಿಯೊ ಕಂಪನಿಯು ಈ ಕೊಡುಗೆಗಳನ್ನು ಘೋಷಿಸಿದೆ.

ಸ್ಕೂಟರ್‌ಗಳನ್ನು ಗುತ್ತಿಗೆಗೆ ನೀಡಲಿದೆ ಈ ಜನಪ್ರಿಯ ದ್ವಿಚಕ್ರ ವಾಹನ ಕಂಪನಿ

ಇದರ ಜೊತೆಗೆ ಹೆಚ್ಚುವರಿ ವಿಶೇಷ ಕೊಡುಗೆಯಾಗಿ ಪಿಯಾಜಿಯೊ ಕಂಪನಿಯು ರೂ.2,500ವರೆಗಿನ ರಿಯಾಯಿತಿಯನ್ನು ಸಹ ಘೋಷಿಸಿದೆ. ಈ ಸೇವೆ ದೇಶದ ಕೆಲವು ನಗರಗಳಲ್ಲಿ ಮಾತ್ರ ಲಭ್ಯವಿರಲಿದೆ. ಈ ಸೇವೆಯನ್ನು ಈಗಾಗಲೇ ಪ್ರಾಯೋಗಿಕ ಆಧಾರದ ಮೇಲೆ ಆರಂಭಿಸಲಾಗಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಸ್ಕೂಟರ್‌ಗಳನ್ನು ಗುತ್ತಿಗೆಗೆ ನೀಡಲಿದೆ ಈ ಜನಪ್ರಿಯ ದ್ವಿಚಕ್ರ ವಾಹನ ಕಂಪನಿ

ಪಿಯಾಜಿಯೊ ಲೀಸಿಂಗ್ ಯೋಜನೆಯನ್ನು ಬೆಂಗಳೂರು, ಪುಣೆ ನಗರಗಳಲ್ಲಿ ಆರಂಭಿಸಲಾಗಿದೆ. ಈ ನಗರಗಳಲ್ಲಿ ವಾಸಿಸುವವರು ವೆಸ್ಪಾ ಹಾಗೂ ಏಪ್ರಿಲಿಯಾ ಸ್ಕೂಟರ್‌ಗಳನ್ನು ಲೀಸ್ ಗೆ ಪಡೆಯಬಹುದು. ಈ ಸೇವೆಯನ್ನು ಶೀಘ್ರದಲ್ಲೇ ದೇಶದ ಇತರ ನಗರಗಳಿಗೂ ವಿಸ್ತರಿಸುವ ನಿರೀಕ್ಷೆಗಳಿವೆ.

ಸ್ಕೂಟರ್‌ಗಳನ್ನು ಗುತ್ತಿಗೆಗೆ ನೀಡಲಿದೆ ಈ ಜನಪ್ರಿಯ ದ್ವಿಚಕ್ರ ವಾಹನ ಕಂಪನಿ

ಈ ಯೋಜನೆಯ ಅಂತ್ಯದ ವೇಳೆಗೆ ಗ್ರಾಹಕರು ಬಯಸಿದಲ್ಲಿ ಆ ಸ್ಕೂಟರ್ ಅನ್ನು ಹೊಂದಬಹುದು. ಇದು ಮಾತ್ರವಲ್ಲದೇ ಪಿಯಾಜಿಯೊ ಕಂಪನಿಯು ಗ್ರಾಹಕರು ಬಯಸುವ ಮತ್ತೊಂದು ಹೊಸ ಸ್ಕೂಟರ್‌ಗೆ ಬದಲಿಸಿ ಕೊಳ್ಳುವ ಆಯ್ಕೆಯನ್ನು ಸಹ ನೀಡುತ್ತದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಸ್ಕೂಟರ್‌ಗಳನ್ನು ಗುತ್ತಿಗೆಗೆ ನೀಡಲಿದೆ ಈ ಜನಪ್ರಿಯ ದ್ವಿಚಕ್ರ ವಾಹನ ಕಂಪನಿ

ಈ ವಿಶೇಷ ಯೋಜನೆಯನ್ನು ವೆಸ್ಪಾ ಹಾಗೂ ಏಪ್ರಿಲಿಯಾದ ಅಧಿಕೃತ ಡೀಲರ್ ಗಳ ಬಳಿ ಪಡೆಯಬಹುದು. ಇದಕ್ಕಾಗಿ ಪಿಯಾಜಿಯೊ ಕಂಪನಿಯು ಒಟಿಒ ಜೊತೆ ಪಾಲುದಾರಿಕೆಯನ್ನು ಮಾಡಿಕೊಂಡಿದೆ.

ಸ್ಕೂಟರ್‌ಗಳನ್ನು ಗುತ್ತಿಗೆಗೆ ನೀಡಲಿದೆ ಈ ಜನಪ್ರಿಯ ದ್ವಿಚಕ್ರ ವಾಹನ ಕಂಪನಿ

ಈ ಸೇವೆಯು ಸಂಪೂರ್ಣವಾಗಿ ಪೇಪರ್ ಲೆಸ್ ಆಗಿರುತ್ತದೆ ಎಂದು ವರದಿಯಾಗಿದೆ. ಒಟಿಒ ಹಾಗೂ ಪಿಯಾಜಿಯೊ ಕಂಪನಿಗಳು ಪೇಪರ್ ಬಳಕೆಯನ್ನು ತಪ್ಪಿಸಲು, ಮರಗಳನ್ನು ಸಂರಕ್ಷಿಸಲು ಹಾಗೂ ಡಿಜಿಟಲ್ ಬಳಕೆಯನ್ನು ಉತ್ತೇಜಿಸಲು ಈ ಕ್ರಮಕ್ಕೆ ಮುಂದಾಗಿವೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಸ್ಕೂಟರ್‌ಗಳನ್ನು ಗುತ್ತಿಗೆಗೆ ನೀಡಲಿದೆ ಈ ಜನಪ್ರಿಯ ದ್ವಿಚಕ್ರ ವಾಹನ ಕಂಪನಿ

ಪಿಯಾಜಿಯೊ ಕಂಪನಿಯಂತೆ ಇನ್ನೂ ಹಲವಾರು ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳನ್ನು ಗುತ್ತಿಗೆಗೆ ನೀಡಲು ಆರಂಭಿಸಿವೆ. ಈ ಕಂಪನಿಗಳಲ್ಲಿ ಟಾಟಾ ಮೋಟಾರ್ಸ್, ಮಾರುತಿ ಸುಜುಕಿ ಕಂಪನಿಗಳು ಸಹ ಸೇರಿವೆ. ಮಾರಾಟದಲ್ಲಿ ಉಂಟಾಗಿರುವ ಕುಸಿತವನ್ನು ಸರಿದೂಗಿಸಲು ಆಟೋ ಮೊಬೈಲ್ ಕಂಪನಿಗಳು ಈ ಯೋಜನೆಯನ್ನು ಕೈಗೆತ್ತಿಕೊಂಡಿವೆ.

Most Read Articles

Kannada
English summary
Piaggio to offer scooter lease service. Read in Kannada.
Story first published: Wednesday, September 9, 2020, 16:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X