ಭಾರತದಲ್ಲಿ ಮತ್ತೆರಡು ಹೊಸ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಬಿಗೌಸ್

ಇಂಧನಗಳ ಬೆಲೆ ಹೆಚ್ಚಳ ಪರಿಣಾಮ ಹೊಸ ವಾಹನಗಳ ಮಾರಾಟವು ಸಾಕಷ್ಟು ಬೇಡಿಕೆ ಪಡೆದುಕೊಳ್ಳುತ್ತಿದ್ದು, ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಗೆ ಚಾಲನೆ ನೀಡಿರುವ ಬಿಗೌಸ್ ಕಂಪನಿಯು ಶೀಘ್ರದಲ್ಲೇ ಮತ್ತಷ್ಟು ಹೊಸ ಸ್ಕೂಟರ್‌ಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಭಾರತದಲ್ಲಿ ಮತ್ತೆರಡು ಹೊಸ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಬಿಗೌಸ್

ಪುಣೆ ಮೂಲದ ಬಿಗೌಸ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಕಳೆದ ಕೆಲ ತಿಂಗಳ ಹಿಂದಷ್ಟೇ ಎ2 ಮತ್ತು ಬಿ8 ಎನ್ನುವ ಇವಿ ಸ್ಕೂಟರ್‌ಗಳನ್ನು ಸೀಮಿತ ಸಂಖ್ಯೆಯ ಮಾರಾಟ ಮಳಿಗೆಗಳಲ್ಲಿ ಮಾರಾಟ ಮಾಡುತ್ತಿದ್ದು, ಅತ್ಯುತ್ತಮ ಫೀಚರ್ಸ್ ಹೊಂದಿರುವ ಬಿ8 ಸ್ಕೂಟರ್ ಖರೀದಿಗೆ ಹೆಚ್ಚಿನ ಬೇಡಿಕೆ ಹರಿದುಬರುತ್ತಿದೆ.

ಭಾರತದಲ್ಲಿ ಮತ್ತೆರಡು ಹೊಸ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಬಿಗೌಸ್

ಸದ್ಯ ಮಾರುಕಟ್ಟೆಯಲ್ಲಿ ವಿವಿಧ ಇವಿ ವಾಹನಗಳು ಮಾರಾಟಕ್ಕೆ ಲಭ್ಯವಿದ್ದರೂ ಮೈಲೇಜ್ ವಿಚಾರವಾಗಿ ತುಸು ಹಿನ್ನಡೆ ಅನುಭವಿಸುತ್ತಿದ್ದು, ಗ್ರಾಹಕರ ಬೇಡಿಕೆ ಆಧರಿಸಿ ಬಿಗೌಸ್ ಕಂಪನಿ ಮತ್ತೆರಡು ಹೊಸ ಇವಿ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ.

ಭಾರತದಲ್ಲಿ ಮತ್ತೆರಡು ಹೊಸ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಬಿಗೌಸ್

ಸದ್ಯ ಪುಣೆ ಮತ್ತು ಮುಂಬೈನಲ್ಲಿ ಮಾತ್ರ ಮಾರಾಟ ವ್ಯಾಪ್ತಿ ಹೊಂದಿರುವ ಬಿಗೌಸ್ ಕಂಪನಿಯು 13 ಶೋರೂಂಗಳನ್ನು ಹೊಂದಿದ್ದು, 2021ರ ಅಂತ್ಯಕ್ಕೆ ಪ್ರಮುಖ ಮೆಟ್ರೋ ನಗರಗಳಲ್ಲಿ 100 ಹೊಸ ಡೀಲರ್‌ಶಿಪ್ ತೆರೆಯಲು ಮುಂದಾಗಿದೆ.

ಭಾರತದಲ್ಲಿ ಮತ್ತೆರಡು ಹೊಸ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಬಿಗೌಸ್

ಹೀಗಾಗಿ ಬಜೆಟ್, ಮಿಡ್ ರೇಂಜ್, ಹೈ ರೇಂಜ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಲು ನಿರ್ಧರಿಸಿರುವ ಬಿಗೌಸ್ ಕಂಪನಿಯು ಬಿ8 ಆಧರಿಸಿ ಹೆಚ್ಚಿನ ಮಟ್ಟದ ಮೈಲೇಜ್ ಮತ್ತು ಪ್ರೀಮಿಯಂ ಸೌಲಭ್ಯ ಹೊಂದಿರುವ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.

ಭಾರತದಲ್ಲಿ ಮತ್ತೆರಡು ಹೊಸ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಬಿಗೌಸ್

ಮತ್ತೊಂದು ಮಹತ್ವದ ನಿರ್ಧಾರವೆಂದರೆ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಸಂಪೂರ್ಣವಾಗಿ ಭಾರತದಲ್ಲೇ ಅಭಿವೃದ್ದಿಗೊಂಡ ಬಿಡಿಭಾಗಗಗಳಿಂದಲೇ ನಿರ್ಮಾಣ ಗುರಿಹೊಂದಿದ್ದು, ಇದೀಗ ಉತ್ಪಾದನೆ ಮಾಡಲಾಗುತ್ತಿರುವ ಇವಿ ಸ್ಕೂಟರ್‌ಗಳಿಗೆ ವಿದೇಶಿ ಮಾರುಕಟ್ಟೆಯಿಂದ ಆಮದು ಮಾಡಿಕೊಳ್ಳಲಾದ ಬ್ಯಾಟರಿ ಮತ್ತು ಎಲೆಕ್ಟ್ರಾನಿಕ್ ಬಿಡಿಭಾಗಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಭಾರತದಲ್ಲಿ ಮತ್ತೆರಡು ಹೊಸ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಬಿಗೌಸ್

ಮೇಕ್ ಇನ್ ಇಂಡಿಯಾ ಯೋಜನೆ ಅಡಿ ಹಲವಾರು ಆಟೋ ಬಿಡಿಭಾಗಗಳ ಉತ್ಪಾದನಾ ಕಂಪನಿಯು ಇದೀಗ ಭಾರತದಲ್ಲಿ ಉತ್ಪಾದನೆ ಕೈಗೊಳ್ಳಲು ಆರಂಭಿಸುತ್ತಿದ್ದು, ಮುಂದಿನ ಕೆಲ ವರ್ಷಗಳಲ್ಲಿ ಭಾರತದಲ್ಲೇ ಪೂರ್ಣ ಪ್ರಮಾಣ ಆಟೋ ಉತ್ಪಾದನಾ ಬಿಡಿಭಾಗಗಳು ಉತ್ಪಾದನೆಗೊಳ್ಳಲಿವೆ.

ಭಾರತದಲ್ಲಿ ಮತ್ತೆರಡು ಹೊಸ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಬಿಗೌಸ್

ಭಾರತದಲ್ಲೇ ಪೂರ್ಣಪ್ರಮಾಣದಲ್ಲಿ ನಿರ್ಮಾಣಗೊಂಡ ಆಟೋ ಬಿಡಿಭಾಗಗಳಿಗೆ ವಿಧಿಸಲಾಗುವ ಆಮದು ಸುಂಕ ತಗ್ಗುವುದರಿಂದ ವಾಹನಗಳ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಬಹುದಾಗಿದ್ದು, ಬಿಗೌಸ್ ಕೂಡಾ ಇದೇ ಕಾರಣಕ್ಕೆ ಭಾರತದಲ್ಲೇ ಉತ್ಪಾದನಾ ಮಾಡಲಾದ ಇವಿ ವಾಹನಗಳ ಬಿಡಿಭಾಗಗಳಿಗೆ ಆದ್ಯತೆ ನೀಡುತ್ತಿದೆ.

ಭಾರತದಲ್ಲಿ ಮತ್ತೆರಡು ಹೊಸ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಬಿಗೌಸ್

ಇನ್ನು ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಮೈಲೇಜ್ ರೇಂಜ್ ಆಧಾರದ ಮೇಲೆ ಎ2 ಮತ್ತು ಬಿ8 ಮಾದರಿಗಳನ್ನು ಮಾರಾಟ ಮಾಡಲಾಗುತ್ತಿದ್ದು, ಪ್ರತಿ ಸ್ಕೂಟರ್ ಮಾದರಿಯಲ್ಲೂ ಲೀಡ್ ಆ್ಯಸಿಡ್ ಮತ್ತು ಲೀಥಿಯಂ ಅಯಾನ್ ಬ್ಯಾಟರಿಗಳ ಆಯ್ಕೆ ನೀಲಾಗಿದೆ.

ಭಾರತದಲ್ಲಿ ಮತ್ತೆರಡು ಹೊಸ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಬಿಗೌಸ್

ಪ್ರತಿ ವೆರಿಯೆಂಟ್‌‌ನಲ್ಲೂ ಲೋ, ಮಿಡ್ ಮತ್ತು ಹೈ ಸ್ಪೀಡ್ ರೇಂಜ್ ನೀಡಲಾಗಿದ್ದು, ಬಿ8 ಲೀಡ್ ಆ್ಯಸಿಡ್ ಬ್ಯಾಟರಿ ಪ್ರೇರಿತ ಬಿಗೌಸ್ ಸ್ಕೂಟರ್‌ ಮಾದರಿಯು ಪ್ರತಿ ಚಾರ್ಜ್‌ಗೆ 78 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದರೆ, ಲೀಥಿಯಂ ಅಯಾನ್ ಬ್ಯಾಟರಿ ಪ್ರೇರಿತ ಸ್ಕೂಟರ್ ಮಾದರಿಯು ಪ್ರತಿ ಚಾರ್ಜ್‌ಗೆ ಗರಿಷ್ಠ 70 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಭಾರತದಲ್ಲಿ ಮತ್ತೆರಡು ಹೊಸ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಬಿಗೌಸ್

ಎ2 ಮಾದರಿಯಲ್ಲಿ ಲೀಡ್ ಆ್ಯಸಿಡ್ ಮತ್ತು ಲೀಥಿಯಂ ಅಯಾನ್ ಬ್ಯಾಟರಿಗಳು ಲೋ ಸ್ಪೀಡ್(ಗಂಟೆ 25 ಕಿ.ಮೀ) ವೇಗದಲ್ಲಿ ಕನಿಷ್ಠ 85 ಕಿ.ಮೀ ಮತ್ತು ಗರಿಷ್ಠ 110 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಲೀಡ್ ಆ್ಯಸಿಡ್ ಬ್ಯಾಟರಿಯು ಪೂರ್ಣಪ್ರಮಾಣದ ಚಾರ್ಜ್ ಆಗಲು ಗರಿಷ್ಠ 8 ಗಂಟೆ ತೆಗೆದುಕೊಳ್ಳಲಿದ್ದರೆ ಲೀಥಿಯಂ ಅಯಾನ್ ಬ್ಯಾಟರಿಯು ಪೂರ್ಣಪ್ರಮಾದ ಚಾರ್ಜ್ ಆಗಲು ಗರಿಷ್ಠ 2 ಗಂಟೆ 15 ನಿಮಿಷ ಸಮಯಾವಕಾಶ ತೆಗೆದುಕೊಳ್ಳಲಿದೆ.

ಭಾರತದಲ್ಲಿ ಮತ್ತೆರಡು ಹೊಸ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಬಿಗೌಸ್

ಆರಂಭಿಕ ಮಾದರಿಯಾದ A2 ಲೀಡ್ ಆ್ಯಸಿಡ್ ಬ್ಯಾಟರಿ ಪ್ರೇರಣೆಯೊಂದಿಗೆ ರೂ. 52,499 ಬೆಲೆ ಹೊಂದಿದ್ದರೆ ಟಾಪ್ ಎಂಡ್ ಎಂಡ್ ಮಾದರಿಯಾದ B8 ಲೀ-ಟೆಕ್ ವೆರಿಯೆಂಟ್ ಮಾದರಿಯು ರೂ. 88,999 ಬೆಲೆ ಹೊಂದಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಇವಿ ಸ್ಕೂಟರ್‌ಗಳು ಕೂಡಾ ಆಕರ್ಷಕ ಬೆಲೆಯೊಂದಿಗೆ ಉತ್ತಮ ಮೈಲೇಜ್ ಪ್ರೇರಿತ ಬ್ಯಾಟರಿ ಪ್ಯಾಕ್ ಪಡೆದುಕೊಳ್ಳಲಿವೆ.

Most Read Articles

Kannada
Read more on ಬಿಗೌಸ್ bgauss
English summary
BGauss To launch Two New Electric Scooter. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X