ಬ್ಯಾಟರಿ ವಿನಿಮಯಕ್ಕಾಗಿ Park+ ಜೊತೆಗೆ ಪಾಲುದಾರಿಕೆ ಮಾಡಿಕೊಂಡ Bounce

ಖ್ಯಾತ ಸ್ಕೂಟರ್ ಬಾಡಿಗೆ ಕಂಪನಿಯಾದ ಬೌನ್ಸ್ (Bounce) ಮುಂದಿನ ತಿಂಗಳು ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲಿದೆ. ಕಂಪನಿಯು ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬ್ಯಾಟರಿ ಹೊರ ತೆಗೆದು ಚಾರ್ಜ್ ಮಾಡುವ ಸೌಲಭ್ಯವನ್ನು ನೀಡಲಿದೆ. ಬೌನ್ಸ್ ಕಂಪನಿಯು ದೇಶದ 10ಕ್ಕೂ ಹೆಚ್ಚು ನಗರಗಳ 3,500 ಪ್ರದೇಶಗಳಲ್ಲಿ ಬ್ಯಾಟರಿ ವಿನಿಮಯ ಹಾಗೂ ಚಾರ್ಜಿಂಗ್ ಸೌಲಭ್ಯ ಒದಗಿಸಲು Park+ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದೆ.

ಬ್ಯಾಟರಿ ವಿನಿಮಯಕ್ಕಾಗಿ Park+ ಜೊತೆಗೆ ಪಾಲುದಾರಿಕೆ ಮಾಡಿಕೊಂಡ Bounce

ಈ ಬ್ಯಾಟರಿ ವಿನಿಮಯ ಕೇಂದ್ರಗಳು ಶಾಪಿಂಗ್ ಕಾಂಪ್ಲೆಕ್ಸ್‌, ಮಾಲ್‌, ಕಾರ್ಪೊರೇಟ್ ಕಚೇರಿ, ಮೆಟ್ರೋ ನಿಲ್ದಾಣಗಳು, ಪಾರ್ಕಿಂಗ್ ವಲಯ ಹಾಗೂ ಇತರ ಪ್ರಮುಖ ಸ್ಥಳಗಳಲ್ಲಿ ಲಭ್ಯವಿರಲಿವೆ. ಈ ನಿಲ್ದಾಣಗಳ ಕುರಿತು ಮಾಹಿತಿಯನ್ನು ಬೌನ್ಸ್ ಆ್ಯಪ್ ಅಥವಾ Park+ ಆ್ಯಪ್ ನಲ್ಲಿ ಪಡೆಯಬಹುದು. ಈ ಕೇಂದ್ರಗಳಲ್ಲಿ ಖಾಲಿ ಬ್ಯಾಟರಿಯನ್ನು ಕೇವಲ ಒಂದು ನಿಮಿಷದಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಿದ ಬ್ಯಾಟರಿಯೊಂದಿಗೆ ಬದಲಾಯಿಸಬಹುದು.

ಬ್ಯಾಟರಿ ವಿನಿಮಯಕ್ಕಾಗಿ Park+ ಜೊತೆಗೆ ಪಾಲುದಾರಿಕೆ ಮಾಡಿಕೊಂಡ Bounce

ಬೌನ್ಸ್‌ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಆದ ಬೌನ್ಸ್ ಇನ್ಫಿನಿಟಿಯನ್ನು ಡಿಸೆಂಬರ್ 2ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಬಿಡುಗಡೆಯ ದಿನವೇ ರೂ. 499 ಪಾವತಿಸಿ ಈ ಸ್ಕೂಟರ್ ಅನ್ನು ಬುಕ್ಕಿಂಗ್ ಮಾಡಬಹುದು. ಹೊಸ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್‌ನ ವಿತರಣೆಗಳು ಮುಂದಿನ ವರ್ಷದಿಂದ ಆರಂಭವಾಗಲಿದೆ ಎಂದು ಬೌನ್ಸ್ ಕಂಪನಿ ತಿಳಿಸಿದೆ.

ಬ್ಯಾಟರಿ ವಿನಿಮಯಕ್ಕಾಗಿ Park+ ಜೊತೆಗೆ ಪಾಲುದಾರಿಕೆ ಮಾಡಿಕೊಂಡ Bounce

ಬಿಡುಗಡೆಯಾದ ನಂತರ ಬೌನ್ಸ್ ಎಲೆಕ್ಟ್ರಿಕ್ ಸ್ಕೂಟರ್ ದೇಶಿಯ ಮಾರುಕಟ್ಟೆಯಲ್ಲಿ Ather, Ola, Bajaj Chetak, TVS Iqube ಹಾಗೂ Simple Oneಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಪೈಪೋಟಿ ನೀಡಲಿದೆ. ಕಂಪನಿಯು ತನ್ನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬ್ಯಾಟರಿ ಇಲ್ಲದೆ ಖರೀದಿಸುವ ಆಯ್ಕೆಯನ್ನು ಒದಗಿಸುತ್ತದೆ. ಈ ಆಯ್ಕೆಯ ಅಡಿಯಲ್ಲಿ, ಗ್ರಾಹಕರು ಬ್ಯಾಟರಿ ಇಲ್ಲದೆ ಸ್ಕೂಟರ್ ಅನ್ನು ಖರೀದಿಸಬಹುದು.

ಬ್ಯಾಟರಿ ವಿನಿಮಯಕ್ಕಾಗಿ Park+ ಜೊತೆಗೆ ಪಾಲುದಾರಿಕೆ ಮಾಡಿಕೊಂಡ Bounce

ಇದರಿಂದ ಈ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಕಡಿಮೆಯಾಗಲಿದೆ. ಬೌನ್ಸ್ ಇನ್ಫಿನಿಟಿ ಬ್ಯಾಟರಿಗಳನ್ನು ಬ್ಯಾಟರಿ ಸ್ವಾಪಿಂಗ್ ನೆಟ್‌ವರ್ಕ್‌ನಲ್ಲಿ ಚಂದಾದಾರಿಕೆಯ ಆಧಾರದ ಮೇಲೆ ಲಭ್ಯವಾಗುವಂತೆ ಮಾಡಲಾಗುತ್ತದೆ. ಇದರ ಅಡಿಯಲ್ಲಿ ಗ್ರಾಹಕರು ಡಿಸ್ಚಾರ್ಜ್ ಮಾಡಿದ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿದ ಬ್ಯಾಟರಿಯೊಂದಿಗೆ ಬದಲಾಯಿಸಲು ಸಾಧ್ಯವಾಗುತ್ತದೆ.

ಬ್ಯಾಟರಿ ವಿನಿಮಯಕ್ಕಾಗಿ Park+ ಜೊತೆಗೆ ಪಾಲುದಾರಿಕೆ ಮಾಡಿಕೊಂಡ Bounce

ಇದರನ್ವಯ ಬ್ಯಾಟರಿ ಸ್ವಾಪ್ ಶುಲ್ಕವನ್ನು ಮಾತ್ರ ಪಾವತಿಸಬೇಕಾಗುತ್ತದೆ. ಈ ಆಯ್ಕೆಯು ಸ್ಕೂಟರ್‌ ಬೆಲೆಯನ್ನು ಸುಮಾರು 40% ನಷ್ಟು ಕಡಿಮೆ ಮಾಡುತ್ತದೆ. ಬೌನ್ಸ್ ಕಂಪನಿಯು ಇತ್ತೀಚಿಗೆ 7 ಮಿಲಿಯನ್ ಡಾಲರ್ ಅಂದರೆ ಅಂದಾಜು ರೂ. 52 ಕೋಟಿ ಮೌಲ್ಯದ ಒಪ್ಪಂದದ ಮೂಲಕ 22 ಮೋಟಾರ್ಸ್‌ನಲ್ಲಿ 100% ನಷ್ಟು ಪಾಲನ್ನು ಪಡೆದುಕೊಂಡಿದೆ.

ಬ್ಯಾಟರಿ ವಿನಿಮಯಕ್ಕಾಗಿ Park+ ಜೊತೆಗೆ ಪಾಲುದಾರಿಕೆ ಮಾಡಿಕೊಂಡ Bounce

ಈ ಒಪ್ಪಂದದ ಭಾಗವಾಗಿ ಬೌನ್ಸ್ ಕಂಪನಿಯು ರಾಜಸ್ಥಾನದ ಭಿವಾಡಿಯಲ್ಲಿರುವ 22 ಮೋಟಾರ್ಸ್ ಉತ್ಪಾದನಾ ಘಟಕ ಹಾಗೂ ಎಲ್ಲಾ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಪಡೆದುಕೊಂಡಿದೆ. ಭಿವಂಡಿ ಉತ್ಪಾದನಾ ಘಟಕವು ಪ್ರತಿ ವರ್ಷ ಸುಮಾರು 1,80,000 ಸ್ಕೂಟರ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಬ್ಯಾಟರಿ ವಿನಿಮಯಕ್ಕಾಗಿ Park+ ಜೊತೆಗೆ ಪಾಲುದಾರಿಕೆ ಮಾಡಿಕೊಂಡ Bounce

ಬೌನ್ಸ್ ಭಾರತದ ದಕ್ಷಿಣ ಭಾಗದಲ್ಲಿ ಮತ್ತೊಂದು ಉತ್ಪಾದನಾ ಘಟಕವನ್ನು ತೆರೆಯಲು ಚಿಂತನೆ ನಡೆಸುತ್ತಿದೆ. ಕಂಪನಿಯು ಮುಂದಿನ ಒಂದು ವರ್ಷದಲ್ಲಿ ತನ್ನ ಎಲೆಕ್ಟ್ರಿಕ್ ವಾಹನ ತಯಾರಿಕಾ ವ್ಯವಹಾರದಲ್ಲಿ 25 ಮಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ. 2022ರ ವೇಳೆಗೆ ಬೌನ್ಸ್ ತನ್ನ ಫ್ಲೀಟ್‌ನಲ್ಲಿರುವ ಎಲ್ಲಾ ಸ್ಕೂಟರ್‌ಗಳನ್ನು ಎಲೆಕ್ಟ್ರಿಕ್‌ಗೆ ಪರಿವರ್ತಿಸುವ ಗುರಿಯನ್ನು ಹೊಂದಿದೆ.

ಬ್ಯಾಟರಿ ವಿನಿಮಯಕ್ಕಾಗಿ Park+ ಜೊತೆಗೆ ಪಾಲುದಾರಿಕೆ ಮಾಡಿಕೊಂಡ Bounce

ಈಗ ಬೌನ್ಸ್ ಕಂಪನಿಯು ಬೆಂಗಳೂರು ಹಾಗೂ ಹೈದರಾಬಾದ್‌ ನಗರಗಳಲ್ಲಿ ಸೇವೆಗಳನ್ನು ನೀಡುತ್ತಿದೆ. ಕಂಪನಿಯು ಬೆಂಗಳೂರಿನಲ್ಲಿ 22,000 ಸ್ಕೂಟರ್‌ ಹಾಗೂ ಹೈದರಾಬಾದ್‌ನಲ್ಲಿ 5,000 ಸ್ಕೂಟರ್‌ಗಳೊಂದಿಗೆ ರೈಡ್ ಬುಕಿಂಗ್ ಸೇವೆಗಳನ್ನು ಒದಗಿಸುತ್ತಿದೆ. ಭವಿಷ್ಯದಲ್ಲಿ ಕಂಪನಿಯು ಇತರ ಪ್ರಮುಖ ನಗರಗಳಲ್ಲಿಯೂ ತನ್ನ ಸೇವೆಗಳನ್ನು ಆರಂಭಿಸಲು ಚಿಂತನೆ ನಡೆಸುತ್ತಿದೆ.

ಬ್ಯಾಟರಿ ವಿನಿಮಯಕ್ಕಾಗಿ Park+ ಜೊತೆಗೆ ಪಾಲುದಾರಿಕೆ ಮಾಡಿಕೊಂಡ Bounce

ಬೌನ್ಸ್ ಕಂಪನಿಯು ಮೂರು ರೀತಿಯಲ್ಲಿ ಸ್ಕೂಟರ್ ಗಳನ್ನು ಬಾಡಿಗೆಗೆ ನೀಡುತ್ತದೆ. ಇವುಗಳಲ್ಲಿ ಅಲ್ಪಾವಧಿ ಬಾಡಿಗೆ, ದೀರ್ಘಾವಧಿ ಬಾಡಿಗೆ ಹಾಗೂ ರೈಡ್ ಶೇರ್ ಗಳು ಸೇರಿವೆ. ಅಲ್ಪಾವಧಿಯ ಬಾಡಿಗೆಯಲ್ಲಿ, ಸ್ಕೂಟರ್‌ಗಳನ್ನು 2ರಿಂದ 12 ಗಂಟೆಗಳವರೆಗೆ ಬುಕ್ ಮಾಡಬಹುದು. ದೀರ್ಘಾವಧಿ ಬಾಡಿಗೆಗಳಲ್ಲಿ 15ರಿಂದ 45 ದಿನಗಳವರೆಗೆ ಬುಕ್ಕಿಂಗ್ ಮಾಡಬಹುದು.

ಬ್ಯಾಟರಿ ವಿನಿಮಯಕ್ಕಾಗಿ Park+ ಜೊತೆಗೆ ಪಾಲುದಾರಿಕೆ ಮಾಡಿಕೊಂಡ Bounce

ಮೇಡ್ ಇನ್ ಇಂಡಿಯಾ ಉತ್ಪನ್ನವಾದ ಬೌನ್ಸ್ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್ ಸುಧಾರಿತ ತಂತ್ರಜ್ಙಾನ ಮತ್ತು ಅತ್ಯಾಧುನಿಕ ಪೀಚರ್ಸ್ ಗಳನ್ನು ಹೊಂದಿದೆ. ಇವುಗಳಲ್ಲಿ ರೌಂಡ್ ಹೆಡ್‌ಲ್ಯಾಂಪ್, ರೆಟ್ರೊ-ಶೈಲಿಯ ಫ್ರಂಟ್ ಫೆಂಡರ್, ಎಲ್‌ಸಿಡಿ ಇನ್‌ಸ್ಟ್ರುಮೆಂಟ್ ಕನ್ಸೋಲ್, ಸಿಂಗಲ್ ಪೀಸ್ ಸೀಟ್, ಸ್ಪೋರ್ಟಿ ಅಲಾಯ್ ವ್ಹೀಲ್, ಸೇರಿದಂತೆ ಹಲವು ಫೀಚರ್ ಗಳು ಸೇರಿವೆ.

ಬ್ಯಾಟರಿ ವಿನಿಮಯಕ್ಕಾಗಿ Park+ ಜೊತೆಗೆ ಪಾಲುದಾರಿಕೆ ಮಾಡಿಕೊಂಡ Bounce

ಈ ಸ್ಕೂಟರ್ ಅನ್ನು ಸಿಂಗಲ್ ಟೋನ್ ಬಣ್ಣದ ಆಯ್ಕೆಗಳಲ್ಲಿ ನೀಡುವ ಸಾಧ್ಯತೆಯಿದೆ. ಬೌನ್ಸ್ ಇನ್ಫಿನಿಟಿ ಹಬ್ ಮೌಂಟೆಡ್ ಮೋಟರ್ ಅನ್ನು ಬಳಸುತ್ತದೆ. ಮುಂಬರುವ ದಿನಗಳಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರಿನ ಮತ್ತಷ್ಟು ತಾಂತ್ರಿಕ ವಿವರಗಳು ಬಹಿರಂಗಗೊಳ್ಳುವ ನಿರೀಕ್ಷೆಗಳಿವೆ. ಇನ್ನು ಬೌನ್ಸ್ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್ ಸಸ್ಪೆಂಷನ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ರೇರ್ ಸಸ್ಪೆಂಷನ್ ಸೆಟಪ್ ಹೊಂದಿದೆ.

ಬ್ಯಾಟರಿ ವಿನಿಮಯಕ್ಕಾಗಿ Park+ ಜೊತೆಗೆ ಪಾಲುದಾರಿಕೆ ಮಾಡಿಕೊಂಡ Bounce

ಬ್ರೇಕಿಂಗ್ ಗಳಿಗಾಗಿ ಈ ಎಲೆಕ್ಟ್ರಿಕ್ ಸ್ಕೂಟರಿನ ಮುಂಭಾಗ ಹಾಗೂ ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ನೀಡಲಾಗಿದೆ. ಬೌನ್ಸ್ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಬಯಸುವವರಿಗೆ ಎರಡು ಆಯ್ಕೆಗಳನ್ನು ನೀಡಲಾಗುತ್ತದೆ.

Most Read Articles

Kannada
English summary
Bounce joins with park plus for battery swapping details
Story first published: Monday, November 29, 2021, 10:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X