ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ವರ್ಚುವಲ್ ಶೋರೂಂಗಳಿಗೆ ಚಾಲನೆ ನೀಡಿದ Honda Motorcycle

ಕರೋನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಗ್ರಾಹಕರ ಸುರಕ್ಷತೆಗಾಗಿ Honda Motorcycle ಕಂಪನಿಯು ತನ್ನ ದ್ವಿ ಚಕ್ರ ವಾಹನಗಳ ಮಾರಾಟಕ್ಕಾಗಿ ವರ್ಚುವಲ್ ಶೋರೂಂ ಅನ್ನು ತೆರೆದಿದೆ. ಈ ಶೋರೂಂ ಮೂಲಕ ಗ್ರಾಹಕರು ಬೈಕ್ ಖರೀದಿಸುವಾಗ ಡಿಜಿಟಲ್ ಅನುಭವವನ್ನು ಪಡೆಯಲಿದ್ದಾರೆ. Honda ತನ್ನ ಪ್ರೀಮಿಯಂ ಬಿಗ್ ವಿಂಗ್ ಡೀಲರ್‌ಶಿಪ್‌ಗಳಿಗಾಗಿ ಈ ವರ್ಚುವಲ್ ಶೋರೂಂ ಅನ್ನು ಆರಂಭಿಸಿದೆ.

ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ವರ್ಚುವಲ್ ಶೋರೂಂಗಳಿಗೆ ಚಾಲನೆ ನೀಡಿದ Honda Motorcycle

ಗ್ರಾಹಕರು ಬಿಗ್ ವಿಂಗ್ ಡೀಲರ್‌ಶಿಪ್‌ನಲ್ಲಿ ಮಾರಾಟವಾಗುವ ಬೈಕ್‌ಗಳನ್ನು ಮಾತ್ರ ಈ ವರ್ಚುವಲ್ ಶೋರೂಂ ಮೂಲಕ ಖರೀದಿಸಬಹುದು. Honda Motorcycleನ ಈ ವರ್ಚುವಲ್ ಶೋರೂಂ ಮೂಲಕ ಗ್ರಾಹಕರು ತಮ್ಮ ಮನೆಯಲ್ಲಿಯೇ ಕುಳಿತು ಬೈಕ್ ಖರೀದಿಸಬಹುದು. Honda ಬಿಗ್‌ವಿಂಗ್‌ನ ವೆಬ್‌ಸೈಟ್ www.hondabigwingindia.com ವರ್ಚುವಲ್ ಶೋರೂಂ ಮೂಲಕ ಗ್ರಾಹಕರು ಬೈಕ್ ಖರೀದಿಸಬಹುದು.

ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ವರ್ಚುವಲ್ ಶೋರೂಂಗಳಿಗೆ ಚಾಲನೆ ನೀಡಿದ Honda Motorcycle

ವಿಭಿನ್ನ ಬೈಕುಗಳ ಆಕ್ಸೇಸರಿಸ್'ಗಳು ವರ್ಚುವಲ್ ಶೋರೂಂನಲ್ಲಿ ಲಭ್ಯವಿರುವುದರಿಂದ ಗ್ರಾಹಕರು ಬೈಕ್ ಖರೀದಿಸುವಾಗ ಅವುಗಳನ್ನು ಕಸ್ಟಮೈಸ್ ಮಾಡಬಹುದು. ವರ್ಚುವಲ್ ಶೋರೂಂನಲ್ಲಿ ಬೈಕ್ ಖರೀದಿಸುವ ಅನುಭವವು ನೈಜ ಶೋರೂಂನಲ್ಲಿ ಬೈಕ್ ಖರೀದಿಸಿದಂತೆ ಮಾಡಲು ಬೈಕಿನ 360 ಡಿಗ್ರಿ ಚಿತ್ರಗಳನ್ನು ತೋರಿಸಲಾಗುತ್ತದೆ.

ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ವರ್ಚುವಲ್ ಶೋರೂಂಗಳಿಗೆ ಚಾಲನೆ ನೀಡಿದ Honda Motorcycle

ಈ ಚಿತ್ರಗಳು ಬೈಕಿನ ಪ್ರತಿಯೊಂದು ಭಾಗದ ಸಂಪೂರ್ಣ ಮಾಹಿತಿಯನ್ನು ನೀಡುತ್ತವೆ. ಇದರ ಹೊರತಾಗಿ ಆಡಿಯೋ, ವೀಡಿಯೊ ಮೂಲಕ ಬೈಕ್‌ಗಳ ಪ್ರತಿಯೊಂದು ಬಿಡಿ ಭಾಗಗಳ ಬಗ್ಗೆಯೂ ವಿವರವಾದ ಮಾಹಿತಿಯನ್ನು ನೀಡಲಾಗುತ್ತದೆ. ಈ ವೆಬ್‌ಸೈಟ್‌ನಲ್ಲಿ ವರ್ಚುವಲ್ ಚಾಟ್ ಸಪೋರ್ಟ್ ಸಹ ನೀಡಲಾಗುತ್ತದೆ.

ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ವರ್ಚುವಲ್ ಶೋರೂಂಗಳಿಗೆ ಚಾಲನೆ ನೀಡಿದ Honda Motorcycle

ಇದರಿಂದ ಗ್ರಾಹಕರ ಪ್ರತಿಯೊಂದು ಸಮಸ್ಯೆಗೂ ಪರಿಹಾರ ಸಿಗಲಿದೆ. ತಮ್ಮ Honda ಬೈಕ್ ಅನ್ನು ಕಸ್ಟಮೈಸ್ ಮಾಡಿದ ನಂತರ ಗ್ರಾಹಕರು ತಮ್ಮ ಹತ್ತಿರದ ಬಿಗ್ ವಿಂಗ್ ಡೀಲರ್‌ಶಿಪ್‌ನಿಂದ ಬೈಕ್ ವಿತರಣೆಯನ್ನು ಪಡೆದು ಕೊಳ್ಳಬಹುದು. ಕಂಪನಿಯು ಈ ವೆಬ್‌ಸೈಟ್‌ನಲ್ಲಿ ವೈವಿಧ್ಯಮಯ ಬಿಡಿ ಭಾಗ ಹಾಗೂ ಪ್ರೀಮಿಯಂ ಬೈಕುಗಳ ರೈಡಿಂಗ್ ಉಡುಪುಗಳನ್ನು ಸಹ ಲಭ್ಯವಾಗುವಂತೆ ಮಾಡಿದೆ.

ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ವರ್ಚುವಲ್ ಶೋರೂಂಗಳಿಗೆ ಚಾಲನೆ ನೀಡಿದ Honda Motorcycle

Honda Motorcycle ಕಂಪನಿಯ Hness CB350, CB350 RS, CB500X, CB650R, CBR650R, Africa Twin, CBR1000RR-R ನಂತಹ ಬಿಗ್ ವಿಂಗ್ಮೂಲಕ ಮಾರಾಟವಾಗುವ ಪ್ರೀಮಿಯಂ ಬೈಕುಗಳು Honda ಕಂಪನಿಯ ಈ ವರ್ಚುವಲ್ ಶೋರೂಂನಲ್ಲಿ ಲಭ್ಯವಿರಲಿವೆ.

ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ವರ್ಚುವಲ್ ಶೋರೂಂಗಳಿಗೆ ಚಾಲನೆ ನೀಡಿದ Honda Motorcycle

Honda ಬೈಕ್ ಮಾರಾಟ

Honda Motorcycle ಕಂಪನಿಯು ತನ್ನ ಆಗಸ್ಟ್ ತಿಂಗಳ ಮಾರಾಟದ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿದೆ. ಈ ಅಂಕಿ ಅಂಶಗಳ ಪ್ರಕಾರ ಕಂಪನಿಯು ಆಗಸ್ಟ್ ತಿಂಗಳಿನಲ್ಲಿ 4,30,683 ಯುನಿಟ್ ದ್ವಿ ಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಈ ಪ್ರಮಾಣವು ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಮಾರಾಟವಾದ 4,43,969 ಯುನಿಟ್‌ಗಳಿಗಿಂತ 2.99% ನಷ್ಟು ಕಡಿಮೆಯಾಗಿದೆ.

ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ವರ್ಚುವಲ್ ಶೋರೂಂಗಳಿಗೆ ಚಾಲನೆ ನೀಡಿದ Honda Motorcycle

ಕಂಪನಿಯ ದೇಶಿಯ ಮಾರುಕಟ್ಟೆಯ ಮಾರಾಟದ ಬಗ್ಗೆ ಹೇಳುವುದಾದರೆ Honda Motorcycle ಕಳೆದ ತಿಂಗಳು 4,01,469 ಯುನಿಟ್‌ ದ್ವಿ ಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಕಂಪನಿಯು 4,28,231 ಯುನಿಟ್‌ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿತ್ತು.

ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ವರ್ಚುವಲ್ ಶೋರೂಂಗಳಿಗೆ ಚಾಲನೆ ನೀಡಿದ Honda Motorcycle

Honda Motorcycle ಕಂಪನಿಯು ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ 15,738 ಯುನಿಟ್‌ ದ್ವಿಚಕ್ರ ವಾಹನಗಳನ್ನು ರಫ್ತು ಮಾಡಿತ್ತು. ಈ ಬಾರಿ 29,214 ಯುನಿಟ್‌ಗಳನ್ನು ರಫ್ತು ಮಾಡಿದೆ. ಈ ಮೂಲಕ ಕಂಪನಿಯ ರಫ್ತು ಪ್ರಮಾಣವು ಈ ಬಾರಿ 85.63% ನಷ್ಟು ಏರಿಕೆಯಾಗಿದೆ.

ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ವರ್ಚುವಲ್ ಶೋರೂಂಗಳಿಗೆ ಚಾಲನೆ ನೀಡಿದ Honda Motorcycle

Honda Motorcycle ಕಂಪನಿಯು ಮುಂದಿನ ಮೂರು ವರ್ಷಗಳಲ್ಲಿ ಭಾರತದಾದ್ಯಂತ 1,000 ಮಳಿಗೆಗಳನ್ನು ತೆರೆಯುವ ಮೂಲಕ ದೇಶದಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸಲು ಮುಂದಾಗಿದೆ. Honda Motorcycle ಕಂಪನಿಯು ತನ್ನ ಮುಂದಿನ ಯೋಜನೆಯ ಬಗ್ಗೆ ಘೋಷಿಸಿದೆ.

ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ವರ್ಚುವಲ್ ಶೋರೂಂಗಳಿಗೆ ಚಾಲನೆ ನೀಡಿದ Honda Motorcycle

ಗ್ರಾಮೀಣ ಭಾರತದ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು Honda Motorcycle ಕಂಪನಿಯು ಸಣ್ಣ ಪಟ್ಟಣಗಳು ​​ಸೇರಿದಂತೆ ಭಾರತದಾದ್ಯಂತ ಸುಮಾರು 6,000 ಮಳಿಗೆಗಳನ್ನು ಹೊಂದಿದೆ. ಈ ಶೋರೂಂಗಳಲ್ಲಿ ವಿತರಕರು, ಮಾರಾಟ ಹಾಗೂ ಸೇವಾ ಕೇಂದ್ರಗಳು ಸೇರಿವೆ.

ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ವರ್ಚುವಲ್ ಶೋರೂಂಗಳಿಗೆ ಚಾಲನೆ ನೀಡಿದ Honda Motorcycle

Honda Motorcycle ಕಂಪನಿಯು ತನ್ನ ಹೊಸ Africa Twin ಮಾದರಿಯ 300 ಯೂನಿಟ್‌ಗಳನ್ನು ದೇಶದಲ್ಲಿ ಮಾರಾಟ ಮಾಡಿರುವುದಾಗಿ ಘೋಷಿಸಿದೆ. ಅದರಲ್ಲಿ 100 ಯೂನಿಟ್‌ಗಳನ್ನು ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ವಿತರಿಸಲಾಗಿದೆ ಎಂದು ವರದಿಯಾಗಿದೆ. ಈ 100 ನೇ Africa Twin ಅಡ್ವಂಚರ್ ಬೈಕ್ ಅನ್ನು ಬೆಂಗಳೂರಿನ ಬಿಗ್‌ ವಿಂಗ್ ಶೋರೂಂ ಮೂಲಕ ವಿತರಿಸಲಾಯಿತು.

ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ವರ್ಚುವಲ್ ಶೋರೂಂಗಳಿಗೆ ಚಾಲನೆ ನೀಡಿದ Honda Motorcycle

Honda Motorcycle ಕಂಪನಿಯ ಪ್ರೀಮಿಯಂ ಬಿಗ್‌ ವಿಂಗ್ ಶೋರೂಂಗಳನ್ನು ಬೆಂಗಳೂರು, ಗುರುಗ್ರಾಮ, ಮುಂಬೈ, ಕೊಚ್ಚಿ, ಇಂದೋರ್, ಚೆನ್ನೈ ಹಾಗೂ ಹೈದರಾಬಾದ್‌ ಸೇರಿದಂತೆ ಭಾರತದ ವಿವಿಧ ನಗರಗಳಲ್ಲಿ ತೆರೆಯಲಾಗಿದೆ. ಜಪಾನ್ ಮೂಲದHonda Motorcycle ಕಂಪನಿಯು ಹಲವಾರು ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ತನ್ನ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುತ್ತಿದೆ.

Most Read Articles

Kannada
English summary
Honda motorcycle opens virtual showroom for premium bikes details
Story first published: Monday, September 6, 2021, 19:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X