ಇನ್ಮೇಲೆ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಸ್ವತಃ ಮಾರುತಿ ಸುಜುಕಿ ಮಾರಾಟ ಮಾಡುತ್ತೆ !!

Written By:

ಮಾರುತಿ ಸುಜುಕಿ ಸಂಸ್ಥೆಯು ಭಾರತದಲ್ಲಿ ಅತಿದೊಡ್ಡ ಕಾರು ತಯಾರಿಕಾ ಕಂಪನಿಯಾಗಿದ್ದು, ಬಳಸಲಾದ ಕಾರುಗಳ ಮಾರಾಟ ಮಾಡುವ 150 ಸ್ಟ್ಯಾಂಡ್ ಅಲೋನ್ ಟ್ರೂ ವ್ಯಾಲ್ಯೂ ಮಾರಾಟ ಮಳಿಗೆಗಳನ್ನು ಸ್ಥಾಪನೆ ಮಾಡಲಿದೆ.

To Follow DriveSpark On Facebook, Click The Like Button
ಇನ್ಮೇಲೆ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಸ್ವತಃ ಮಾರುತಿ ಸುಜುಕಿ ಮಾರಾಟ ಮಾಡುತ್ತೆ !!

ಮಾರುತಿ ಟ್ರೂ ವ್ಯಾಲ್ಯೂ ಮಳಿಗೆಯೂ ಮೊದಲ ಬಾರಿಗೆ 2001ರಲ್ಲಿ ಆರಂಭಗೊಂಡಿದ್ದು, ಬಸಲಾದ ಕಾರುಗಳ ಖರೀದಿದಾರರಿಗೆ ಹೆಚ್ಚು ಆಕರ್ಷಕ ಮತ್ತು ಪಾರದರ್ಶಕ ವ್ಯವಹಾರ ವಹಿವಾಟು ನೆಡೆಸುವ ಕಾರ್ಯಕ್ಕೆ ಸಂಪೂರ್ಣ ರೀತಿಯ ಪುನರುಜ್ಜೀವನ ಮಾಡುವ ಕಾರ್ಯಕ್ಕೆ ಕೈಹಾಕಿದೆ.

ಇನ್ಮೇಲೆ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಸ್ವತಃ ಮಾರುತಿ ಸುಜುಕಿ ಮಾರಾಟ ಮಾಡುತ್ತೆ !!

ಸ್ವತಂತ್ರವಾಗಿರುವ ಟ್ರೂ ವ್ಯಾಲ್ಯೂ ಮಾರಾಟ ಮಳಿಗೆಗಳನ್ನು ಭಾರತದಾದ್ಯಂತ ಸ್ಥಾಪನೆ ಮಾಡಲು ಕಂಪನಿ ಯೋಜನೆ ರೂಪಿಸಿದ್ದು, ಈ ಮಳಿಗೆಗಳಲ್ಲಿ ಸೆಕೆಂಡ್ ಹ್ಯಾಂಡ್ ಮಾರುತಿ ಕಾರುಗಳ ಮಾರಾಟ ಮತ್ತು ಪ್ರದರ್ಶನ ನೆಡೆಸಲಿದೆ.

ಇನ್ಮೇಲೆ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಸ್ವತಃ ಮಾರುತಿ ಸುಜುಕಿ ಮಾರಾಟ ಮಾಡುತ್ತೆ !!

ಅಲ್ಲದೆ, ಈ ಮಳಿಗೆಗಳನ್ನು ಸಂಪೂರ್ಣ ಡಿಜಿಟಲೀಕರಣ ಮಾಡಲು ಕಂಪನಿ ಉದ್ದೇಶಿಸಿದ್ದು, ಈ ಮೂಲಕ ಗ್ರಾಹಕರು ಸಂಸ್ಥೆಯ ವೆಬ್‌ಸೈಟ್ ಮೂಲಕ ಭಾರತದಾದ್ಯಂತ ಇರುವಂತಹ ಸೆಕೆಂಡ್ ಹ್ಯಾಂಡ್ ಕಾರುಗಳ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ಇನ್ಮೇಲೆ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಸ್ವತಃ ಮಾರುತಿ ಸುಜುಕಿ ಮಾರಾಟ ಮಾಡುತ್ತೆ !!

"ಹೊಸ ಕಾರು ಖರೀದಿದಾರರು ಪಡೆಯುವ ಅನುಭವವನ್ನು ಪೂರ್ವ ಸ್ವಾಮ್ಯದ ಕಾರುಗಳ ಖರೀದಿ ಮಾಡುವ ಗ್ರಾಹಕರಿಗೂ ಸಹ ನೀಡುವ ಗುರಿ ಹೊಂದಿದೆ ಮತ್ತು ವಿಶಾಲವಾದ ಹೊಸ ಮಳಿಗೆಗಳಲ್ಲಿ ಗ್ರಾಹಕ ಡಿಜಿಟಲ್ ತಂತ್ರಜ್ಞಾನ ಬಳಸಿ, ಗುಣಮಟ್ಟದ ಕಾರುಗಳನ್ನು ಪಡೆದುಕೊಳ್ಳಬಹುದು ಮತ್ತು ಖಾತರಿ ಭರವಸೆಯನ್ನು ಹೊಂದಬಹುದು" ಎಂದು ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಕೆನಿಚಿ ಶಿಂಜಿ ತಿಳಿಸಿದರು.

Recommended Video - Watch Now!
TVS Jupiter Classic Launched In India | In Kannada - DriveSpark ಕನ್ನಡ
ಇನ್ಮೇಲೆ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಸ್ವತಃ ಮಾರುತಿ ಸುಜುಕಿ ಮಾರಾಟ ಮಾಡುತ್ತೆ !!

ಬದಲಾವಣೆ ಕಡೆ ದಿಟ್ಟ ಹೆಜ್ಜೆ ಇಟ್ಟಿರುವ ಮಾರುತಿ ಸುಜುಕಿ ಸಂಸ್ಥೆಯು, ಹೊಸ ಉತ್ಪನ್ನ, ಮಾರಾಟ ಮತ್ತು ಸೇವೆಗೆ ನೆಕ್ಸಾ ಷೋ ರೂಂ ಹೊರತಂದಿದೆ. ಇವುಗಳ ಜೊತೆ ಮಾರುತಿ ಸುಜುಕಿ ಸೆಕೆಂಡ್ ಹ್ಯಾಂಡ್ ಮಾರಾಟದ ಕಡೆಗೂ ಗಮನಹರಿಸಿದ್ದು, ಟ್ರೂ ವ್ಯಾಲ್ಯೂ ಮಾರಾಟ ಮಳಿಗೆಗಳನ್ನು ಸ್ಥಾಪನೆ ಮಾಡಲಿದೆ.

ಇನ್ಮೇಲೆ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಸ್ವತಃ ಮಾರುತಿ ಸುಜುಕಿ ಮಾರಾಟ ಮಾಡುತ್ತೆ !!

ಗುಣಮಟ್ಟ ಮತ್ತು ವಿಶ್ವಾಸಾರ್ಹತೆ ಖಚಿತಪಡಿಸಿಕೊಳ್ಳಲು, ಪೂರ್ವ ಸ್ವಾಮ್ಯದ ಸುಜುಕಿ ಮಾರುತಿ ಕಾರುಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಲಿದ್ದು, ಮಾರುತಿ ಸುಜುಕಿ ಕಾರ್ಯಾಗಾರಗಳಲ್ಲಿ ನವೀಕರಿಸಿದ ನಂತರ ಮಾರಾಟ ಮಾಡಲಾಗುತ್ತದೆ. ಈ ಕಾರುಗಳು ಖಾತರಿ ಮತ್ತು ಉಚಿತ ಸೇವೆಗಳನ್ನು ಪಡೆದುಕೊಳ್ಳಲಿವೆ.

English summary
Read in Kannada about Maruti Suzuki, India's largest carmaker, will setup 150 standalone True Value outlets, a used car dealership.
Story first published: Friday, August 11, 2017, 16:23 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark