ಮಾಡಿದ ತಪ್ಪಿಗೆ ರೂ. 50 ಸಾವಿರ ದಂಡ ಪಾವತಿಸಿದ ಮಾರುತಿ ಸುಜುಕಿ

By Praveen Sannamani

ಹೊಸ ವಾಹನಗಳನ್ನು ಖರೀದಿ ಮಾಡುವಾಗ ಎಲ್ಲವೂ ಸರಿಯಾಗಿಯೇ ಇರುತ್ತೆ. ತದನಂತರವಷ್ಟೇ ಅದರ ಅಸಲಿಯತ್ತು ಗೊತ್ತಾಗುವುದು. ಹಾಗಂತ ಎಲ್ಲಾ ಹೊಸ ವಾಹನಗಳು ಹಂಗೆ ಇರುತ್ತವೆ ಅಂತಾ ಹೇಳೊದಕ್ಕೆ ಆಗುವುದಿಲ್ಲ. ಆದ್ರೆ ಹೊಸ ವಾಹನಗಳನ್ನು ಖರೀದಿಸುವ ಸ್ವಲ್ಪ ಎಚ್ಚರ ತಪ್ಪಿದ್ರೂ ಮಕ್ಮಲ್ ಟೋಪಿ ಗ್ಯಾರಂಟಿ ಅನ್ನೋದಕ್ಕೆ ಈ ಪ್ರಕರಣವೇ ಸ್ಪಷ್ಟ ಉದಾಹರಣೆ ಅಂದ್ರೆ ತಪ್ಪಾಗುದಿಲ್ಲ.

ಮಾಡಿದ ತಪ್ಪಿಗೆ ರೂ. 50 ಸಾವಿರ ದಂಡ ಪಾವತಿಸಿದ ಮಾರುತಿ ಸುಜುಕಿ

ಹೌದು, ಮಾರುತಿ ಸುಜುಕಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಖರೀದಿಸಿದ್ದ ಗ್ರಾಹಕರೊಬ್ಬರು ಡೀಲರ್ಸ್ ಮಾಡಿದ ಮೋಸದ ವ್ಯಾಪರದಿಂದ ಕಂಗೆಟ್ಟುಹೊಗಿದ್ದಲ್ಲದೇ ತನಗಾದ ಅನ್ಯಾಯವನ್ನು ಸರಿಪಡಿಸುವಂತೆ ಕೋರ್ಟ್ ಮೆಟ್ಟಿಲೇರಿದ ಪ್ರಸಂಗ ನಡೆದಿದೆ. ಈ ವೇಳೆ ಕಾರು ಮಾಲೀಕನ ಪರ ತೀರ್ಪು ಪ್ರಕಟಿಸಿರುವ ಗ್ರಾಹಕ ನ್ಯಾಯಾಲಯವು ಮೋಸ ಮಾಡಿದ ಮಾರುತಿ ಸುಜುಕಿ ವಿರುದ್ಧ ಭಾರೀ ಮೊತ್ತದ ದಂಡ ವಿಧಿಸಿದೆ.

ಮಾಡಿದ ತಪ್ಪಿಗೆ ರೂ. 50 ಸಾವಿರ ದಂಡ ಪಾವತಿಸಿದ ಮಾರುತಿ ಸುಜುಕಿ

ಘಟನೆಯ ಹಿನ್ನೆಲೆ..

ಗುಜರಾತಿನ ಪೋರಬಂದರ್ ನಿವಾಸಿ ನಳನಿಬಾಯಿ ಎನ್ನುವವರು 2011ರಲ್ಲಿ ರಾಜ್‌ಕೋಟ್‌ದಲ್ಲಿರುವ ಮಾರುತಿ ಸುಜುಕಿ ಡೀಲರ್ಸ್ ಬಳಿ ಹಳೆಯ ತಲೆಮಾರಿನ ಸ್ವಿಫ್ಚ್ ಹ್ಯಾಚ್‌ಬ್ಯಾಕ್ ಕಾರನ್ನು ಖರೀದಿ ಮಾಡಿದ್ದರು. ಆದ್ರೆ ಕಾರು ಖರೀದಿ ಮಾಡಿದ ಒಂದೇ ವರ್ಷದಲ್ಲಿ ಕಾರು ಗುಜುರಿಗೆ ಸೇರುವ ಮಟ್ಟಕ್ಕೆ ಬಂದಿತ್ತು.

ಮಾಡಿದ ತಪ್ಪಿಗೆ ರೂ. 50 ಸಾವಿರ ದಂಡ ಪಾವತಿಸಿದ ಮಾರುತಿ ಸುಜುಕಿ

ಕಾರು ಖರೀದಿ ನಂತರ ಕೇವಲ 17 ಸಾವಿರ ಕಿ.ಮೀ ಓಡಿದ್ದ ಆ ಕಾರು ಒಂದು ದಿನ ಕಾರು ಚಾಲನೆಯಲ್ಲಿರುವಾಗಲೇ ಕುಸಿದು ಬಿದ್ದಿತ್ತು. ಅರೇ, ಕಾರು ಖರೀದಿ ಮಾಡಿ ಒಂದು ವರ್ಷ ಕೂಡಾ ಆಗಿಲ್ಲಾ ಹೀಗಾದ್ರೆ ಹೇಗೆ ಅಂತಾ ಡೀಲರ್ಸ್ ಬಳಿ ದೂರು ಹೇಳಿದ್ದರು.

ಮಾಡಿದ ತಪ್ಪಿಗೆ ರೂ. 50 ಸಾವಿರ ದಂಡ ಪಾವತಿಸಿದ ಮಾರುತಿ ಸುಜುಕಿ

ಇದಕ್ಕೆ ನಾನಾ ಕಾರಣ ನೀಡಿದ ಮಾರುತಿ ಸುಜುಕಿ ಡೀಲರ್ಸ್ ಅಧಿಕಾರಿಗಳು ಸರಿಯಾಗಿ ಡ್ರೈವ್ ಮಾಡದ ಹಿನ್ನೆಲೆ ಹೀಗಾಗಿದೆ ಹೊರತು ಇದರಲ್ಲಿ ನಮ್ಮದು ತಪ್ಪಿಲ್ಲಾ ಅಂತಾ ಕೈತೊಳೆದುಕೊಂಡಿದ್ದಾರೆ. ಜೊತೆಗೆ ಕೊಟ್ಟಿರುವ ವಾರಂಟಿ ಅವಧಿಗೂ ಮುನ್ನ ಹೀಗಾದ್ದರೂ ರಿಫೇರಿಗಾಗಿ ಹೆಚ್ಚುವರಿ ಮೊತ್ತ ಕೇಳಿದ್ದಾರೆ.

ಮಾಡಿದ ತಪ್ಪಿಗೆ ರೂ. 50 ಸಾವಿರ ದಂಡ ಪಾವತಿಸಿದ ಮಾರುತಿ ಸುಜುಕಿ

ಇದಕ್ಕೆ ವಿರೋಧಿಸಿದ ನಳನಿಬಾಯಿಯವರು ಅಹಮದಾಬಾದ್ ಗ್ರಾಹಕ ನ್ಯಾಯಲಯದಲ್ಲಿ ಈ ಕುರಿತಂತೆ ಪ್ರಕರಣ ದಾಖಲಿಸಿದ್ದಲ್ಲದೇ ತನದಾಗ ಅನ್ಯಾಯಕ್ಕೆ ಹೊಸ ಕಾರಿನೊಂದಿಗೆ ಹೆಚ್ಚುವರಿಯಾಗಿ ಪರಿಹಾರ ನೀಡುವಂತೆ ಬೇಡಿಕೆ ಸಲ್ಲಿಸಿದ್ದರು.

ಮಾಡಿದ ತಪ್ಪಿಗೆ ರೂ. 50 ಸಾವಿರ ದಂಡ ಪಾವತಿಸಿದ ಮಾರುತಿ ಸುಜುಕಿ

ಈ ಕುರಿತಂತೆ ನಡೆದ 6 ವರ್ಷಗಳ ಅವಧಿಯಲ್ಲಿನ ಹಲವು ವಿಚಾರಣೆಗಳಲ್ಲಿ ಪರ-ವಿರೋಧ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದ ಕೋರ್ಟ್ ಕಳೆದ ವಾರ ಅಂತಿಮ ತೀರ್ಪು ನೀಡಿದ್ದು, ಹೊಸ ಕಾರಿನ ಬದಲಾಗಿ ಕಾರಿನಲ್ಲಿ ಪ್ರತಿಯೊಂದು ಕಳಪೆ ಬಿಡಿಭಾಗಗಳನ್ನು ಬದಲಿಸುವುದು ಸೇರಿದಂತೆ ಇದುವರೆಗೂ ಆದ ಖರ್ಚುಗಳಿಗಾಗಿ ರೂ.50 ಸಾವಿರ ಪರಿಹಾರ ನೀಡುವಂತೆ ಮಾರುತಿ ಸುಜುಕಿ ಸಂಸ್ಥೆಗೆ ಖಡಕ್ ಸೂಚನೆ ನೀಡಿದೆ.

ಮಾಡಿದ ತಪ್ಪಿಗೆ ರೂ. 50 ಸಾವಿರ ದಂಡ ಪಾವತಿಸಿದ ಮಾರುತಿ ಸುಜುಕಿ

ಈ ಮಧ್ಯೆ ಮಹಿಳೆ ವಿರುದ್ಧವು ದೂರು ದಾಖಸಿದ್ದ ಮಾರುತಿ ಸುಜುಕಿ ಸಂಸ್ಥೆಯು ಸರಿಯಾದ ರೀತಿ ಚಾಲನೆ ಮಾಡದ ಹಿನ್ನೆಲೆಯಲ್ಲಿ ಇಂತಹ ಅವಘಡ ಸಂಭವಿಸಿದೇ ಹೊರತು ನಮ್ಮ ಸಂಸ್ಥೆಯು ಯಾವುದೇ ರೀತಿಯಲ್ಲಿ ಕಳಪೆ ಗುಣಮಟ್ಟದ ವಾಹನಗಳನ್ನು ಮಾರಾಟ ಮಾಡುತ್ತಿಲ್ಲ ಎಂದು ವಾದಿಸಿತ್ತು.

ಮಾಡಿದ ತಪ್ಪಿಗೆ ರೂ. 50 ಸಾವಿರ ದಂಡ ಪಾವತಿಸಿದ ಮಾರುತಿ ಸುಜುಕಿ

ಜೊತೆಗೆ ಹೊಸ ಕಾರು ಪಡೆಯುವ ಉದ್ದೇಶದಿಂದಲೇ ಈ ರೀತಿಯಾಗಿ ಮಾಡಲಾಗಿದೆ ಎಂದು ವಾದಿಸಿದ್ದ ಮಾರುತಿ ಸುಜುಕಿ ಸಂಸ್ಥೆಯು ಹೊಸ ಕಾರುನ್ನು ಒದಗಿಸಲು ಸಾಧ್ಯವಿಲ್ಲ ಎಂದು ಪಟ್ಟುಹಿಡಿತ್ತು. ಆದ್ರೆ ಕಳಪೆ ಮಟ್ಟದ ಬೀಡಿಭಾಗಗಳು ಕಂಡುಬಂದಲ್ಲಿ ಬದಲಿಸುವ ಭರವಸೆ ನೀಡಿತ್ತು.

ಮಾಡಿದ ತಪ್ಪಿಗೆ ರೂ. 50 ಸಾವಿರ ದಂಡ ಪಾವತಿಸಿದ ಮಾರುತಿ ಸುಜುಕಿ

ಇದಕ್ಕೆ ಒಪ್ಪದ ಕಾರಿನ ಒಡತಿ ನಳನಿಬಾಯಿ ಹೊಸ ಕಾರು ಬೇಕೇಬೇಕು ಅಂತಾ ಕಳೆದ 5 ವರ್ಷಗಳಿಂದ ಪಟ್ಟು ಹಿಡಿದ್ದರು. ಆದರೂ ಕೊನೆಯ ಹಂತದಲ್ಲಿ ಅಂತಿಮ ತೀರ್ಮಾನಕ್ಕೆ ಬಂದು ಬೀಡಿಭಾಗಗಳು ಸಂಪೂರ್ಣ ಬದಲಿಸುವ ಮತ್ತು ರೂ.50 ಸಾವಿರ ಹೆಚ್ಚುವರಿ ಪರಿಹಾರ ಒದಗಿಸುವ ಬಗ್ಗೆ ಮಾರುತಿ ಸುಜುಕಿ ಒಪ್ಪಿಗೆ ಸೂಚಿಸಿದೆ.

ಮಾಡಿದ ತಪ್ಪಿಗೆ ರೂ. 50 ಸಾವಿರ ದಂಡ ಪಾವತಿಸಿದ ಮಾರುತಿ ಸುಜುಕಿ

ಹೀಗಾಗಿ ಯಾವುದೇ ಹೊಸ ಕಾರು ಖರೀದಿಸುವಾಗ ಗ್ರಾಹಕರು ಎಚ್ಚರ ವಹಿಸಿಸುವ ಮೂಲಕ ಕಾರು ಆಯ್ಕೆ ಮಾಡುವುದು ಒಳ್ಳೆಯದು. ಇಲ್ಲವಾದ್ರೆ ಆಟೋ ಉತ್ಪಾದನಾ ಸಂಸ್ಥೆಗಳು ಮಾಡುವ ಎಡವಟ್ಟಿನಿಂದಾಗಿ ಲಕ್ಷಾಂತರ ರೂಪಾಯಿ ಸಾಲಸೂಲ ಮಾಡಿ ಇಕ್ಕಟ್ಟಿಗೆ ಸಿಲುಕವಂತಹ ಪರಿಸ್ಥಿತಿ ಎದುರಾಗಬಹುದು.

ಮಾಡಿದ ತಪ್ಪಿಗೆ ರೂ. 50 ಸಾವಿರ ದಂಡ ಪಾವತಿಸಿದ ಮಾರುತಿ ಸುಜುಕಿ

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

'ಒಬ್ಬ ವ್ಯಕ್ತಿಗೆ ಒಂದೇ ವಾಹನ' - ಟ್ರಾಫಿಕ್ ನಿರ್ವಹಣೆಗಾಗಿ ಹೊಸ ರೂಲ್ಸ್

ಏರ್‌ಬ್ಯಾಗ್ ಇದ್ರು ಕೆಲಸ ಮಾಡ್ಲಿಲ್ಲಾ- ಮಹೀಂದ್ರಾ ವಿರುದ್ಧ ಕಾರು ಮಾಲೀಕನ ಆಕ್ರೋಶ

ಫೆಹರ್ ಸಂಸ್ಥೆಯು ಬಿಡುಗಡೆ ಮಾಡಿರುವ ಈ ಎಸಿ ಹೆಲ್ಮೆಟ್ ಬೆಲೆ ಕೇಳಿದ್ರೆ ನಿಮಗೆ ಶಾಕ್ ಆಗುತ್ತೆ..!

ಬೈಕ್ ತಪಾಸಣೆ ವೇಳೆ ಟ್ರಾಫಿಕ್ ಪೊಲೀಸರು ಮಾಡಿದ್ದೇನು ಗೊತ್ತಾ?

ಥರ್ಡ್ ಪಾರ್ಟಿ ಇನ್ಸುರೆನ್ಸ್ ವಿಚಾರದಲ್ಲಿ 'ಸುಪ್ರೀಂ' ಆದೇಶ ಕಷ್ಟ ಕಷ್ಟ

Most Read Articles

Kannada
Read more on auto news maruti suzuki
English summary
Maruti Suzuki Pays Rs 50,000 To A Swift Owner Who Had Defective Parts In His Car.
Story first published: Wednesday, August 29, 2018, 11:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X