ಭಾರತದಲ್ಲಿ ಬಿಡಗಡೆಗೊಂಡ ರೇಂಜ್ ರೋವರ್ ಇವೊಕ್ ಕನ್ವರ್ಟಬಲ್ ಕಾರು..

Written By: Rahul TS

ಬ್ರಿಟಿಷ್ ಮೂಲದ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆ ರೇಂಜ್ ರೋವರ್ ತನ್ನ ಇವೊಕ್ ಕನ್ವರ್ಟಬಲ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರುಂ ಪ್ರಕಾರ ಇದರ ಬೆಲೆಯನ್ನು ರೂ. 69.53 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಭಾರತದಲ್ಲಿ ಬಿಡಗಡೆಗೊಂಡ ರೇಂಜ್ ರೋವರ್ ಇವೊಕ್ ಕನ್ವರ್ಟಬಲ್ ಕಾರು..

ಹೊಸ ರೇಂಜ್ ರೋವರ್ ಇವೊಕ್ ಕನ್ವರ್ಟಬಲ್ ಕಾರು ಎರಡು ಬಾಗಿಲುಗಳುಳ್ಳ ವಿನ್ಯಾಸದಲ್ಲಿ ಲಭ್ಯವಿರಲಿದ್ದು, ಎಂಜಿನ್ ಮತ್ತು ಇನ್ನಿತರೆ ವೈಶಿಶ್ಟ್ಯತೆಗಳನ್ನು ಸಾಧಾರಣ ರೇಂಜ್ ರೋವರ್ ಇವೊಕ್ ಕಾರಿನಿಂದಲೇ ಎರವಲು ಪಡೆದುಕೊಂಡಿದೆ ಎನ್ನಲಾಗಿದೆ.

ಭಾರತದಲ್ಲಿ ಬಿಡಗಡೆಗೊಂಡ ರೇಂಜ್ ರೋವರ್ ಇವೊಕ್ ಕನ್ವರ್ಟಬಲ್ ಕಾರು..

ಎಂಜಿನ್ ಸಾಮರ್ಥ್ಯ

ರೇಂಜ್ ರೋವರ್ ಇವೊಕ್ ಕನ್ವರ್ಟಬಲ್ ಕಾರು 2 ಲೀಟರ್ ಇಂಜಿನಿಯಂ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 237-ಬಿಹೆಚ್‍ಪಿ ಮತ್ತು 340-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ. ಜೊತೆಗೆ ಹೊಸ ಕಾರಿನ ಎಂಜಿನ್ ಅನ್ನು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಭಾರತದಲ್ಲಿ ಬಿಡಗಡೆಗೊಂಡ ರೇಂಜ್ ರೋವರ್ ಇವೊಕ್ ಕನ್ವರ್ಟಬಲ್ ಕಾರು..

ಈ ಕಾರಿನ ವಿಶೇಷ ಅಂದ್ರೆ, ಇದರಲ್ಲಿ ಅಳವಡಿಸಲಾಗಿರುವ ಫೋಲ್ಡಿಂಗ್ ರೂಫ್. ಇದರಲ್ಲಿರುವ ರೂಫ್ ಅನ್ನು ಪಾಲಿಯಾಕ್ರಿಕ್ ಫ್ಯಾಬ್ರಿಕ್‌ನೊಂದಿಗೆ 5 ಪದರಗಳಿಂದ ವಿನ್ಯಾಸಗೊಳಿಸಲಾಗಿದ್ದು, ರೂಫ್‍ಅನ್ನು ಝೆಡ್ ಫೋಲ್ಡ್ ಮೆಕ್ಯಾನಿಸಂ ಮತ್ತು ನಾಲ್ಕು ಎಲೆಕ್ಟ್ರಿಕ್ ಮೋಟಾರ್‍‍ನಿಂದ ನಿಯಂತ್ರಿಸಬಹುದಾಗಿದೆ.

ಭಾರತದಲ್ಲಿ ಬಿಡಗಡೆಗೊಂಡ ರೇಂಜ್ ರೋವರ್ ಇವೊಕ್ ಕನ್ವರ್ಟಬಲ್ ಕಾರು..

ಹೀಗಾಗಿ ಕಾರಿನ ಫ್ಯಾಬ್ರಿಕ್ ರೂಫ್‌ಗಳು ಕೇವಲ 18 ಸೆಕೆಂಡುಗಳಲ್ಲಿ ಮಡಚುವ ಸಾಮರ್ಥ್ಯವನ್ನು ಪಡೆದಿದ್ದು, ಕಾರು ಗಂಟೆಗೆ ಗರಿಷ್ಠ ಮಟ್ಟದ 48 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿರುವಾಗಲೂ ರೂಫ್ ಟಾಪ್‍ಅನ್ನು ಮಡಚಬಹುದಾಗಿದೆ.

ಭಾರತದಲ್ಲಿ ಬಿಡಗಡೆಗೊಂಡ ರೇಂಜ್ ರೋವರ್ ಇವೊಕ್ ಕನ್ವರ್ಟಬಲ್ ಕಾರು..

ಕಾರಿನ ಮುಂಭಾಗದಲ್ಲಿ ಅಡಾಪ್ಟಿವ್ ಕ್ಸೆನನ್ ಹೆಡ್‍ಲೈಟ್ಸ್, ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್ಸ್, ರೇಡಿಯೇಟರ್ ಗ್ರಿಲ್, ಏರ್ ಡ್ಯಾಮ್, ವೀಲ್ ಆರ್ಚ್ ಕ್ಲಾಡಿಂಗ್, ಬ್ಲೇಕ್ಡ್ ಔಟ್ ಒಆರ್‍‍ವಿಎಂ ಮತ್ತು ಸಾಫ್ಟ್ ಟಾಪ್ ರೂಫ್ ಅನ್ನು ಪಡೆದಿದ್ದು, ಜೊತೆಗೆ ಸಣ್ಣದಾದ ಬೂಟ್ ಸ್ಪೇಸ್ ಅನ್ನು ಕೂಡ ಪಡೆದಿದೆ.

ಭಾರತದಲ್ಲಿ ಬಿಡಗಡೆಗೊಂಡ ರೇಂಜ್ ರೋವರ್ ಇವೊಕ್ ಕನ್ವರ್ಟಬಲ್ ಕಾರು..

ಹೊಸ ರೇಂಜ್ ರೋವರ್ ಇವೊಕ್ ಕನ್ವರ್ಟಬಲ್ ಕಾರು ಸಾಧಾರಣ ಮಾದರಿಗಿಂತ ಗಾತ್ರದಲ್ಲಿ ಕೊಂಚ ಮಟ್ಟಿಗೆ ದೊಡ್ಡದಾಗಿದ್ದು, 4370-ಎಂಎಂ ಉದ್ದಳತೆಯನ್ನು ಪಡೆದುಕೊಂಡಿದೆ. ಇದಲ್ಲದೇ ಇದರ ಎತ್ತರ ಮತ್ತು ಉದ್ದವು ಐದು ಬಾಗಿಲುವುಳ್ಳ ಸಾಧಾರಣ ಮಾದರಿಗಿಂತ ಕಡಿಮೆಯಿದ್ದು, 1,900-ಎಂಎಂ ಎತ್ತರ ಮತ್ತು 1,609-ಎಂಎಂ ಅಗಲ ಮತ್ತು 2,660-ಎಂಎಂ ವೀಲ್‍ಬೇಸ್ ಸುತ್ತಳತೆಯನ್ನು ಪಡೆದಿದೆ.

ಭಾರತದಲ್ಲಿ ಬಿಡಗಡೆಗೊಂಡ ರೇಂಜ್ ರೋವರ್ ಇವೊಕ್ ಕನ್ವರ್ಟಬಲ್ ಕಾರು..

ಕಾರಿನ ಒಳಭಾಗದ ವಿನ್ಯಾಸವು ಕೂಡಾ ಗಮನ ಸೆಳೆಯುವಂತಿದ್ದು, ನಾಲ್ಕು ಆಸನವುಳ್ಳ ಬ್ಲಾಕ್ ಕ್ಯಾಬಿನ್, ಸಂಹನ ಸಂಜ್ಞೆಗಳು ಮತ್ತು ನ್ಯಾವಿಗೇಷನ್ ಪ್ರೋ, ಪರ್ಫೋರೇಟೆಡ್ ವಿಂಡ್‍ಸೋರ್ ಲೆದರ್ ಸೀಟ್, 10 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಮತ್ತು ನಿಯಂತ್ರಿಸಬಲ್ಲ ಇಂಟೀರಿಯರ್ ಎಂಬಿಯೆಂಟ್ ಲೈಟಿಂಗ್ ಅನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

1. ಭಾರತದಲ್ಲಿ 7 ಸೀಟರ್ ವ್ಯಾಗನ್ ಆರ್ ಬಿಡುಗಡೆಯಾಗುವುದು ಪಕ್ಕಾ ಅಂತೆ.!

2. ಹೆಚ್ಚುತ್ತಿರುವ ಮಾಲಿನ್ಯ ತಡೆಗೆ ಹೊಸ ಮಾರ್ಗವೇ ವೆಲ್ವ್ ಟೆಕ್ನಾಲಜಿ ಬಳಕೆ.!

3. ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

4. ಬಜಾಜ್ ಡೋಮಿನಾರ್ 400 v/s ಆರ್‌ಇ ಹಿಮಾಲಯನ್... ಈ ಬಾರಿ ಟಾಂಗ್ ಕೊಟ್ಟವರು ಯಾರು?

5. ಇಲ್ಲಿ ಇದ್ದವರಿಗೆ ಒಂದು ಕಾನೂನು.. ಇಲ್ಲದವರಿಗೆ ಇನ್ನೊಂದು ಕಾನೂನು..

Read more on range rover luxury car
English summary
Range Rover Evoque Convertible Launched In India; Priced At Rs 69.53 Lakh.
Story first published: Tuesday, March 27, 2018, 17:35 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark