ಬಹಿರಂಗಗೊಳ್ಳಲಿದೆ ರೋಲ್ಸ್ ರಾಯ್ಸ್ ಸಂಸ್ಥೆಯ ಮೊದಲ ಐಷಾರಾಮಿ ಎಸ್‍ಯುವಿ ಕಾರು..
ಬ್ರಿಟಿಶ್ ಮೂಲದ ವಾಹನ ತಯಾರಕ ಸಂಸ್ಥೆಯಾದ ರೋಲ್ಸ್ ರಾಯ್ಸ್ ತಮ್ಮ ಮೊದಲ ಐಷಾರಾಮಿ ಎಸ್‍ಯುವಿ ಕಾರನ್ನು ಬಿಡುಗಡೆಗೊಳಿಸುವ ಯೋಜನೆಯಲಿದ್ದು, ಸಂಸ್ಥೆಯು ಇದೇ ತಿಂಗಳಿನ 10 ನೇ ತಾರೀಕಿನಂದು ಜಾಗತಿಕವಾಗಿ ಬಹಿರಂಗಗೊಳಿಸಲಿದೆ ಎಂಬುದು ಖಚಿತವಾಗಿದೆ.
ಬ್ರಿಟಿಶ್ ಮೂಲದ ವಾಹನ ತಯಾರಕ ಸಂಸ್ಥೆಯಾದ ರೋಲ್ಸ್ ರಾಯ್ಸ್ ತಮ್ಮ ಮೊದಲ ಐಷಾರಾಮಿ ಎಸ್‍ಯುವಿ ಕಾರನ್ನು ಬಿಡುಗಡೆಗೊಳಿಸುವ ಯೋಜನೆಯಲಿದ್ದು, ಸಂಸ್ಥೆಯು ಇದೇ ತಿಂಗಳಿನ 10 ನೇ ತಾರೀಕಿನಂದು ಜಾಗತಿಕವಾಗಿ ಬಹಿರಂಗಗೊಳಿಸಲಿದೆ ಎಂಬುದು ಖಚಿತವಾಗಿದೆ.

ರೋಲ್ಸ್ ರಾಯ್ಸ್ ಸಂಸ್ಥೆಯ ಮೊದಲ ಐಷಾರಾಮಿ ಎಸ್‍ಯುವಿ ಕಾರು ಕುಲ್ಲಿನನ್ ಎಂಬ ಹೆಸರಿನಲ್ಲಿ ಬಹಿರಂಗಗೊಳ್ಳಲಿದ್ದು, ಸತತ ಮೂರು ವರ್ಷ ಸ್ಪಾಟ್ ಟೆಸ್ಟಿಂಗ್ ನಡೆದಿದೆ ಎನ್ನಲಾಗಿದೆ. ಹೊಸ ರೋಲ್ಸ್ ರಾಯ್ಸ್ ಕುಲ್ಲಿನಿನ್ ಐಷಾರಾಮಿ ಎಸ್‍ಯುವಿ ಕಾರು ಸಂಸ್ಥೆಯ ಪ್ಯಾಂಥಮ್ ಸೆಡಾನ್ ಕಾರನ್ನು ಆದರಿಸುತ್ತದೆ.

ರೋಲ್ಸ್ ರಾಯ್ಸ್ ಕುಲ್ಲಿನಿನ್ ಐಷಾರಾಮಿ ಎಸ್‍ಯುವಿ ಕಾರಿನ ಮುಂಭಾಗದಲ್ಲಿ ಸಂಸ್ಥೆಯ ಟ್ರೇಡ್‍ಮಾರ್ಕ್ ಗ್ರಿಲ್, ಎರಡು ಬದಿಯಲ್ಲಿ ಆಯತಾಕಾರದ ಹೆಡ್‍ಲ್ಯಾಂಪ್ ಅನ್ನು ಪಡೆದಿದ್ದು ಜೊತೆಗೆ ರೈಸ್ಡ್ ಹುಡ್, ಚೂಪಾದ ಫೆಂಡರ್‍ಗಳನ್ನು ಅಳವಡಿಸಲಾಗಿದೆ. ಹಾಗೆಯೆ ಕಾರಿನ ಹಿಂಭಾಗದಲ್ಲಿ ಮರುಕಳಿಸುವ ರೂಫ್‍ಲೈನ್ ಅನ್ನು ಪಡೆದುಕೊಂಡಿದೆ.

ರೋಲ್ಸ್ ರಾಯ್ಸ್ ಕಲ್ಲಿನನ್ ಕಾರು 3 ವೀಲ್ ಡ್ರೈವ್ ಮತ್ತು ಅಫ್ ರೋಡಿಂಗ್ ಸಾಮರ್ಥ್ಯವನ್ನು ಪಡೆದಿದ್ದು, ಸಂಸ್ಥೆಯ ಹೊಸ ಅಲ್ಯೂಮೀನಿಯಂ ಸ್ಪೇಸ್‍ಫ್ರೇಮ್ ಪ್ಲಾಟ್‍ಫಾರ್ಮ್ ಅನ್ನು ಆದರಿಸುತ್ತದೆ. ಇದಲ್ಲದೆ ಭವಿಷ್ಯದ ದಿನಗಳಲ್ಲಿ ಸಂಸ್ತೆಯಿಂದ ತಯಾರಾಗುವ ಕಾರುಗಳಲ್ಲಿಯು ಇದೆ ಪ್ಲಾಟ್‍ಫಾರ್ಮ್ ಅನ್ನು ಆದರಿಸುತ್ತವೆ.

ರೋಲ್ಸ್ ರಾಯ್ಸ್ ಕುಲ್ಲಿನನ್ ಕಾರು ಮಾರುಕಟ್ಟೆಯಲ್ಲಿನ ಸಾರ್ವಜನಿಕರು ಮತ್ತು ಗ್ರಾಹಕರಿಗೆ ಹೊಸ ದೃಷ್ಟಿಕೋನವನ್ನು ನೀಡಲಿದ್ದು, ಇನ್ನು ಕೆಲವೆ ತಿಂಗಳುಗಳಲ್ಲಿ ಗ್ರಾಹಕರು ನಮ್ಮ ಹೊಸ ಐಷಾರಾಮಿ ಎಸ್‍ಯುವಿ ಕಾರನ್ನು ಅನುಭವಿಸಲಿದ್ದಾರೆ. ಎಂದು ರೋಲ್ಸ್ ರಾಯ್ಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಟೊರ್ಸೊನ್ ಮುಲ್ಲರ್ ಒಟ್ವೊಸ್ ಹೇಳಿದ್ದಾರೆ.

ಇನ್ನು ಬಹಿರಂಗಗೊಳ್ಲಲಿರುವ ರೋಲ್ಸ್ ರಾಯ್ಸ್ ಕುಲ್ಲಿನನ್ ಕಾರಿನ ತಾಂತ್ರಿಕತೆ, ಒಳ ವಿನಾಸ ಹಾಗು ಬೆಲೆಯ ಬಗ್ಗೆ ಯಾವುದೆ ಮಾಹಿತಿ ದೊರೆತಿಲ್ಲವಾದರೂ, ಬೇರೆಲ್ಲಾ ಮಾಹಿತಿಗಳಿಗಾಗಿ ಕಾಯ್ದು ನೋಡಬೇಕಿದೆ.

ರೋಲ್ಸ್ ರಾಯ್ಸ್ ಕುಲ್ಲಿನನ್ ಐಷಾರಾಮಿ ಎಸ್‍ಯುವಿ ಕಾರು ಮಾರುಕಟ್ಟೇಗೆ ಲಗ್ಗೆಯಿಟ್ಟಲ್ಲಿ 2017ರಲ್ಲಿ ಬಿಡುಗಡೆಗೊಂಡ ಲ್ಯಾಂಬೋರ್ಗಿನಿ ಉರುಸ್ ಮತ್ತು 2016ರಲ್ಲಿ ಬಿಡುಗಡೆಗೊಂಡ ಬೆಂಟ್ಲಿ ಬೆಂಟ್ಯಾಗ ಕಾರುಗಳಿಗೆ ತೀವ್ರ ಪೈಪೋಟಿಯನ್ನು ನೀಡಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
ಕಾರಿನ ಎಂಜಿನ್ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಹೇಗೆ?
ಕಾರು ಚಾಲಕನ ನಿರ್ಲಕ್ಷದಿಂದ ನಡೆಯಿತು ಭೀಕರ ಅಪಘಾತ
ಡ್ರೈವಿಂಗ್ ವೇಳೆ ಮೊಬೈಲ್ ಬಳಕೆ ಮಾಡುವ ಮುನ್ನ ಇತ್ತ ನೋಡಿ...
ಈತ ಮಾಡಿದ ತಪ್ಪಿಗೆ 18 ತಿಂಗಳ ಕಾಲ ಕಾರ್ ಚಲಾಯಿಸುವ ಹಾಗಿಲ್ಲ..!!
ಬಿಡುಗಡೆಯಾಗಲಿರುವ ವಿನೂತನ 7 ಸೀಟರ್ ವ್ಯಾಗನರ್ ಬೆಲೆ ಎಷ್ಟು ಗೊತ್ತಾ?


Click it and Unblock the Notifications








