ದೇಶಾದ್ಯಂತ ಏಕರೂಪದಲ್ಲಿ ಜಾರಿಗೆ ಬರುತ್ತಿರುವ ಡಿಎಲ್ ಮತ್ತು ಆರ್‌ಸಿಯಿಂದ ಏನು ಲಾಭ ಗೊತ್ತಾ?

ಕಳೆದ 2 ವರ್ಷಗಳಿಂದ ಸಾರಿಗೆ ಇಲಾಖೆಯಲ್ಲಿ ಮಹತ್ತರ ಬದಲಾವಣೆಗಳಾಗುತ್ತಿದ್ದು, ವಾಹನಗಳ ದತ್ತಾಂಶ ಶೇಖರಣೆ ಮತ್ತು ಸುರಕ್ಷೆಯ ಸಂಬಂಧ ಇದೀಗ ಮತ್ತೊಂದು ವಿನೂತನ ಯೋಜನೆಯೊಂದನ್ನು ಜಾರಿಗೆ ತರಲಾಗುತ್ತಿದೆ. ಇದರ ಪರಿಣಾಮ ಮುಂಬರುವ ದಿನಗಳಲ್ಲಿ ದೇಶಾದ್ಯಂತ ಏಕರೂಪ ಡಿಎಲ್ ಮತ್ತು ಆರ್‌ಸಿ ವಿತರಣೆ ನಡೆಯಲಿದ್ದು, ಹೊಸ ಯೋಜನೆಯಿಂದ ಹತ್ತಾರು ಲಾಭಗಳಿವೆ ಎನ್ನಲಾಗುತ್ತಿದೆ.

ದೇಶಾದ್ಯಂತ ಏಕರೂಪದಲ್ಲಿ ಜಾರಿಗೆ ಬರುತ್ತಿರುವ ಡಿಎಲ್ ಮತ್ತು ಆರ್‌ಸಿಯಿಂದ ಏನು ಲಾಭ ಗೊತ್ತಾ?

ಹೊಸ ಯೋಜನೆಯ ಪ್ರಕಾರ, ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್) ಹಾಗೂ ವಾಹನ ನೋಂದಣಿ ಪ್ರಮಾಣಪತ್ರ (ಆರ್‌ಸಿ) ವಿತರಣೆಯು ಒಂದೇ ತೆರನಾಗಿರಲಿದ್ದು, ಬಣ್ಣ, ವಿನ್ಯಾಸ, ಗಾತ್ರ, ಭದ್ರತಾ ವೈಶಿಷ್ಟ್ಯ ಎಲ್ಲವೂ ಒಂದೇ ರೀತಿಯಾಗಿರುತ್ತದೆ.

ದೇಶಾದ್ಯಂತ ಏಕರೂಪದಲ್ಲಿ ಜಾರಿಗೆ ಬರುತ್ತಿರುವ ಡಿಎಲ್ ಮತ್ತು ಆರ್‌ಸಿಯಿಂದ ಏನು ಲಾಭ ಗೊತ್ತಾ?

2019ರಿಂದಲೇ ಹೊಸ ಯೋಜನೆ ಜಾರಿ..!

2019ರ ಜುಲೈನಿಂದ ಹೊಸ ಯೋಜನೆಯು ಜಾರಿಗೆ ಬರಲಿದ್ದು, ಜುಲೈ ನಂತರ ವಿತರಣೆ ಮಾಡಲಾಗುವ ಡಿಎಲ್ ಮತ್ತು ಆರ್‌ಸಿ ಪ್ರಮಾಣಪತ್ರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದೇ ರೀತಿಯಾಗಿರುತ್ತದೆ.

ದೇಶಾದ್ಯಂತ ಏಕರೂಪದಲ್ಲಿ ಜಾರಿಗೆ ಬರುತ್ತಿರುವ ಡಿಎಲ್ ಮತ್ತು ಆರ್‌ಸಿಯಿಂದ ಏನು ಲಾಭ ಗೊತ್ತಾ?

ಹೊಸ ಯೋಜನೆಯಿಂದ ಏನು ಲಾಭ?

ಏಕರೂಪದ ಡಿಎಲ್ ಮತ್ತು ಆರ್‌ಸಿ ಸೌಲಭ್ಯದಿಂದ ವಾಹನ ಸವಾರರಿಗೆ ಗರಿಷ್ಠ ಲಾಭಗಳಿದ್ದು, ಸ್ಮಾರ್ಟ್‌ ಕಾರ್ಡ್ ರೂಪದಲ್ಲಿರುವ ಬರಲಿರುವ ಹೊಸ ಡಿಎಲ್‌ ಮತ್ತು ಆರ್‌ಸಿಗಳಲ್ಲಿ ಮೈಕ್ರೋ ಚಿಪ್‌ಗಳನ್ನು ಅಳವಡಿಸಲಾಗಿರುತ್ತದೆ.

ದೇಶಾದ್ಯಂತ ಏಕರೂಪದಲ್ಲಿ ಜಾರಿಗೆ ಬರುತ್ತಿರುವ ಡಿಎಲ್ ಮತ್ತು ಆರ್‌ಸಿಯಿಂದ ಏನು ಲಾಭ ಗೊತ್ತಾ?

ಕಾರ್ಡ್‌ನಲ್ಲಿರುವ ಕ್ಯೂ ಆರ್‌ ಕೋಡ್‌ಗಳು ವಾಹನ ಮಾಲೀಕರ ಸಂಪೂರ್ಣ ಡೇಟಾ ಹೊಂದಿರಲಿದ್ದು, ಎನ್‌ಎಫ್‌ಸಿ (ನಿಯರ್ ಫೀಲ್ಡ್‌ ಕಮ್ಯುನಿಕೇಶನ್‌) ವೈಶಿಷ್ಟ್ಯತೆ ಮೂಲಕ ಮೆಟ್ರೋ ಮತ್ತು ಎಟಿಎಂ ಕಾರ್ಡ್‌ಗಳ ರೀತಿಯಲ್ಲಿ ಬಳಸಬಹುದಾಗಿದೆ.

ದೇಶಾದ್ಯಂತ ಏಕರೂಪದಲ್ಲಿ ಜಾರಿಗೆ ಬರುತ್ತಿರುವ ಡಿಎಲ್ ಮತ್ತು ಆರ್‌ಸಿಯಿಂದ ಏನು ಲಾಭ ಗೊತ್ತಾ?

ಇದರಿಂದ ಟ್ರಾಫಿಕ್‌ ಪೊಲೀಸರು ವಿಶೇಷ ಸಾಧನಗಳ ಮೂಲಕ (ಹ್ಯಾಂಡ್‌ಹೆಲ್ಡ್‌ ಡಿವೈಸಸ್‌) ಈ ಕಾರ್ಡ್‌ಗಳನ್ನು ಸ್ಕ್ಯಾನ್ ಮಾಡಿ ಎಲ್ಲ ವಿವರ ಪಡೆಯಬಹುದಾಗಿದ್ದು, ನಕಲಿ ಡಿಎಲ್ ಮತ್ತು ಆರ್‌ಸಿ ಹಾವಳಿಗೂ ಇದರಿಂದ ಬ್ರೇಕ್ ಹಾಕಬಹುದಾಗಿದೆ.

ದೇಶಾದ್ಯಂತ ಏಕರೂಪದಲ್ಲಿ ಜಾರಿಗೆ ಬರುತ್ತಿರುವ ಡಿಎಲ್ ಮತ್ತು ಆರ್‌ಸಿಯಿಂದ ಏನು ಲಾಭ ಗೊತ್ತಾ?

ಇದಲ್ಲದೇ ಹೊಸ ಯೋಜನೆಯಿಂದ ವಾಹನಗಳ ಡೇಟಾ ಸಂಗ್ರಹಣೆಗೂ ಸಹಕಾರಿಯಾಗಲಿದ್ದು, ವಾಹನ ಮಾದರಿ, ಎಂಜಿನ್ ವೈಶಿಷ್ಟ್ಯತೆ, ಮಾಲೀಕರ ವಿವರಣೆ ಮತ್ತು ಕಾರು ಬಳಕೆಯ ವಿಧಾನ(ವ್ಯಯಕ್ತಿಕ ಮತ್ತು ವಾಣಿಜ್ಯ) ಸೇರಿದಂತೆ ಹಲವು ಮಾಹಿತಿಗಳು ಒಂದೇ ಸೂರಿನಡಿ ಲಭ್ಯವಾಗುತ್ತೆ.

ದೇಶಾದ್ಯಂತ ಏಕರೂಪದಲ್ಲಿ ಜಾರಿಗೆ ಬರುತ್ತಿರುವ ಡಿಎಲ್ ಮತ್ತು ಆರ್‌ಸಿಯಿಂದ ಏನು ಲಾಭ ಗೊತ್ತಾ?

ಸವಾರರಿಗೆ ತಪ್ಪಲಿದೆ ಕಿರಿಕಿರಿ..!

ಸದ್ಯ ಟ್ರಾಫಿಕ್ ಪೊಲೀಸರು ನಿಮ್ಮ ವಾಹನಗಳನ್ನು ತಪಾಸಣೆ ಮಾಡುವಾಗ ವಾಹನದ ಪ್ರತಿಯೊಂದು ದಾಖಲೆಗಳನ್ನು ಕೇಳುವುದು ಕಾಮನ್. ಆದ್ರೆ ಏಕರೂಪದ ಡಿಎಲ್ ಮತ್ತು ಆರ್‌ಸಿ ಬಂದ ಮೇಲೆ ವಾಹನಗಳ ದಾಖಲೆಯನ್ನು ಇಟ್ಟುಕೊಂಡು ತಿರುಗುವುದು ತಪ್ಪಲಿದೆ.

ದೇಶಾದ್ಯಂತ ಏಕರೂಪದಲ್ಲಿ ಜಾರಿಗೆ ಬರುತ್ತಿರುವ ಡಿಎಲ್ ಮತ್ತು ಆರ್‌ಸಿಯಿಂದ ಏನು ಲಾಭ ಗೊತ್ತಾ?

ಹೊಸ ಕಾರ್ಡ್‌ಗಳ ಬೆಲೆ

ಕೇಂದ್ರ ಸಾರಿಗೆ ಜಾರಿಗೆ ತರಲು ಹೊರಟಿರುವ ಏಕರೂಪದ ಡಿಎಲ್ ಮತ್ತು ಆರ್‌ಸಿ ಸೌಲಭ್ಯವನ್ನು ಪಡೆಯಲು ರೂ.15ರಿಂದ ರೂ.20 ಇರಬಹುದೆಂದು ಹೇಳಲಾಗಿದ್ದು, ಸಾರಿಗೆ ಇಲಾಖೆಯಲ್ಲಿ ಅಷ್ಟೇ ಅಲ್ಲದೇ ಇತರೆ ಸರ್ಕಾರಿ ಕಚೇರಿಗಳಲ್ಲೂ ಈ ಕಾರ್ಡ್ ದೊರೆಯಲಿದೆಯಂತೆ.

MOST READ:ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ದೇಶಾದ್ಯಂತ ಏಕರೂಪದಲ್ಲಿ ಜಾರಿಗೆ ಬರುತ್ತಿರುವ ಡಿಎಲ್ ಮತ್ತು ಆರ್‌ಸಿಯಿಂದ ಏನು ಲಾಭ ಗೊತ್ತಾ?

ಜೊತೆಗೆ ನೂತನ ಡಿಎಲ್‌ನಲ್ಲಿ ಅಂಗಾಂಗ ದಾನ ಕುರಿತಾದ ಚಾಲಕನ ಘೋಷಣೆ ಮತ್ತು ದೈಹಿಕ ವಿಕಲಚೇತನರಿಗಾಗಿ ವಿಶೇಷ ಚಾಲಾನಾ ನಿಯಮಗಳು ಸಹ ಇದರಲ್ಲಿದ್ದು, ದೇಶದ ಪ್ರಮುಖ ಕಡೆಗಳಲ್ಲಿ ಈಗಾಗಲೇ ಈ ಯೋಜನೆಗೆ ಚಾಲನೆ ನೀಡಲಾಗಿದೆಯೆಂತೆ.

ದೇಶಾದ್ಯಂತ ಏಕರೂಪದಲ್ಲಿ ಜಾರಿಗೆ ಬರುತ್ತಿರುವ ಡಿಎಲ್ ಮತ್ತು ಆರ್‌ಸಿಯಿಂದ ಏನು ಲಾಭ ಗೊತ್ತಾ?

ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ಮಾಹಿತಿಯೆಂತೆ, ದೇಶಾದ್ಯಂತ ಪ್ರತಿದಿನ ಸುಮಾರು 32,000 ಡಿಎಲ್‌ಗಳ ವಿತರಣೆ/ ನವೀಕರಣ ನಡೆಯುತ್ತಿದ್ದು, 43,000 ವಾಹನಗಳ ನೋಂದಣಿ ನಡೆಯುತ್ತದೆ. ಇನ್ನು ಮುಂದೆ ನವೀಕರಣಗೊಳ್ಳುವ ಎಲ್ಲ ಡಿಎಲ್‌ ಮತ್ತು ಆರ್‌ಸಿಗಳನ್ನು ಹೊಸ ನಿಯಮಕ್ಕೆ ಬದಲಾಯಿಸಲಾಗುತ್ತದೆ ಎಂದಿದ್ದಾರೆ.

MOST READ:ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ದೇಶಾದ್ಯಂತ ಏಕರೂಪದಲ್ಲಿ ಜಾರಿಗೆ ಬರುತ್ತಿರುವ ಡಿಎಲ್ ಮತ್ತು ಆರ್‌ಸಿಯಿಂದ ಏನು ಲಾಭ ಗೊತ್ತಾ?

ಒಟ್ಟಿನಲ್ಲಿ ಎನ್‌ಎಫ್‌ಸಿ ವೈಶಿಷ್ಟ್ಯದ ಮೂಲಕ ಡಿಎಲ್‌ ಅಥವಾ ಆರ್‌ಸಿಯನ್ನು ಪೊಲೀಸರ ಬಳಿಯಿರುವ ಸಾಧನಕ್ಕೆ ಸ್ಪರ್ಶಿಸಿದ ಕೂಡಲೇ ವಾಹನದ ಪ್ರತಿಯೊಂದು ವಿವರಣೆ ದೊರೆಯುವಂತೆ ಹೊಸ ಸೌಲಭ್ಯವನ್ನು ಅಭಿವೃದ್ಧಿ ಪಡಿಸಲಾಗಿದ್ದು, ಮುಂದಿನ ಜುಲೈ ಹೊತ್ತಿಗೆ ಪ್ರತಿ ವಾಹನ ಮಾಲೀಕರ ಬಳಿಯೂ ಹೊಸ ಡಿಎಲ್ ಮತ್ತು ಆರ್‌ಸಿ ಕಡ್ಡಾಯವಾಗಿರಬೇಕಿದೆ.

ದೇಶಾದ್ಯಂತ ಏಕರೂಪದಲ್ಲಿ ಜಾರಿಗೆ ಬರುತ್ತಿರುವ ಡಿಎಲ್ ಮತ್ತು ಆರ್‌ಸಿಯಿಂದ ಏನು ಲಾಭ ಗೊತ್ತಾ?

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ದೇಶಾದ್ಯಂತ ಏಕರೂಪದ ಡಿಎಲ್ ಮತ್ತು ಆರ್‌ಸಿ ವಿತರಣೆಯಿಂದಾಗಿ ಹಲವು ಲಾಭಗಳಿದ್ದು, ಇದು ಕೇವಲ ಸಾರಿಗೆ ಇಲಾಖೆಗೆ ಅಷ್ಟೇ ಅಲ್ಲದೇ ವಾಹನ ಮಾಲೀಕರಿಗೂ ವಿವಿಧ ಹಂತಗಳಲ್ಲಿ ಸಹಾಯಕ್ಕೆ ಬರಲಿದೆ. ಒಂದು ಕಡೆ ಸಾರಿಗೆ ಇಲಾಖೆಗೆ ವಾಹನ ದತ್ತಾಂಶವನ್ನು ಒಂದೇ ಸೂರಿನಡಿ ಪಡೆದುಕೊಳ್ಳಲು ಸಹಾಯವಾಗಿದ್ದಲ್ಲಿ ಇನ್ನೊಂದಡೆ ವಾಹನ ಮಾಲೀಕರಿಗೆ ವಾಹನದ ದಾಖಲೆಗಳನ್ನು ಹೊತ್ತು ತಿರುಗುವ ಕಿರಿಕಿರಿಯು ಸಹ ಕಡಿಮೆಯಾಗಲಿದೆ.

Most Read Articles

ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗುತ್ತಿರುವ ನ್ಯೂ ಜನರೇಷನ್ ಹ್ಯುಂಡೈ ಸ್ಯಾಂಟ್ರೋ ಕಾರಿನ ಫೋಟೋ ಗ್ಯಾಲರಿ..!

Kannada
English summary
Indian Government To Introduce Uniform Driving Licence Across all States In 2019; Comes With NFC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X