ಮಾರಾಟ ಕುಸಿತ ತಡೆಗಟ್ಟಲು ಹೊಸ ಯೋಜನೆ ರೂಪಿಸಿದ ಫಿಯೆಟ್

ಫಿಯೆಟ್ ಕ್ರೈಸ್ಲರ್ ಆಟೋ‍‍ಮೋಬೈಲ್ ಕಂಪನಿಯು, ಪ್ಯಾಸೆಂಜರ್ ವಾಹನದ ಮಾರುಕಟ್ಟೆಯಲ್ಲಿ ಉಂಟಾಗಿರುವ ಮಾರಾಟ ಕುಸಿತವನ್ನು ತಡೆಗಟ್ಟಲು ಹೊಸ ಯೋಜನೆಯನ್ನು ರೂಪಿಸಿದೆ. ಹಾಗೆಯೇ ಮುಂದಿನ ವರ್ಷದ ಏಪ್ರಿಲ್‍‍ನಿಂದ ಹೊಸ ಬಿ‍‍ಎಸ್6 ಮಾಲಿನ್ಯ ನಿಯಮಗಳನ್ನು ತನ್ನ ವಾಹನಗಳಲ್ಲಿ ಅಳವಡಿಸಿಕೊಳ್ಳಲು ಮುಂದಾಗಿದೆ.

ಮಾರಾಟ ಕುಸಿತ ತಡೆಗಟ್ಟಲು ಹೊಸ ಯೋಜನೆ ರೂಪಿಸಿದ ಫಿಯೆಟ್

ಎಕಾನಾಮಿಕ್ ಟೈಮ್ಸ್ ಆಟೋ ವರದಿಗಳ ಪ್ರಕಾರ, ಸ್ಥಳೀಯ ನಾಲ್ಕು ವಾಹನಗಳ ಮಾರುಕಟ್ಟೆಯು, ಎಲ್ಲಾ ವಾಹನ ತಯಾರಕ ಕಂಪನಿಗಳು 100% ಬಿ‍ಎಸ್ 6 ನಿಯಮಗಳನ್ನು ಅಳವಡಿಸಿಕೊಂಡ ನಂತರ 2020-21ರ ವೇಳೆಗೆ ಚೇತರಿಸಿಕೊಳ್ಳುವ ಸಾಧ್ಯತೆಗಳಿವೆ. ಫಿಯೆಟ್ ಕಂಪನಿಯು ತನ್ನ ಜೀಪ್ ಕಾಂಪಾಸ್ ಎಸ್‍‍ಯು‍‍‍ವಿ ವಾಹನವನ್ನು ಡೀಸೆಲ್ ಆಟೋಮ್ಯಾಟಿಕ್, 4x4 ಆಫ್ ರೋಡ್ ಟ್ರೇಲ್ ಹಾಕ್‍‍ನೊಂದಿಗೆ ವಿಸ್ತರಿಸಲು ಗಮನ ಹರಿಸುತ್ತಿದ್ದು, ಇದಾದ ನಂತರ 2020ರಲ್ಲಿ ಮಧ್ಯಮ ಗಾತ್ರದ ಕಾಂಪಾಸ್ ಎಸ್‍‍ಯು‍‍ವಿಯತ್ತ ಚಿತ್ತ ಹರಿಸಲಿದೆ.

ಮಾರಾಟ ಕುಸಿತ ತಡೆಗಟ್ಟಲು ಹೊಸ ಯೋಜನೆ ರೂಪಿಸಿದ ಫಿಯೆಟ್

ಈ ಯೋಜನೆಯನ್ನು ಕಂಪನಿಯು ತನ್ನ ಹೊಸ ವಾಹನಗಳಾದ 7 ಸೀಟರ್‍‍ನ ಎಸ್‍‍ಯು‍‍ವಿ ಜೀಪ್ ಕಾಂಪಾಸ್ ಮತ್ತು ಸಣ್ಣ ಬಿ ಎಸ್‍‍ಯು‍‍ವಿ ವಾಹನಗಳ ಬಿಡುಗಡೆಯ ನಂತರ ಕೈಗೆತ್ತಿಕೊಳ್ಳಲಿದೆ. ಫಿಯೆಟ್ ಕ್ರೈಸ್ಲರ್ ಆಟೋಮೋಬೈಲ್ಸ್ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ಕೆವಿನ್ ಫ್ಲಿನ್ ರವರು ಈ ಬಗ್ಗೆ ಮಾತನಾಡಿದ್ದಾರೆ.

ಮಾರಾಟ ಕುಸಿತ ತಡೆಗಟ್ಟಲು ಹೊಸ ಯೋಜನೆ ರೂಪಿಸಿದ ಫಿಯೆಟ್

ಕಂಪನಿಯು ಮಾರುಕಟ್ಟೆಯಲ್ಲಿ ದೀರ್ಘಾವಧಿ ಬೆಳವಣಿಗೆಯ ಭಾಗವಾಗಿ ಹೂಡಿಕೆ ಮಾಡಿದೆ. ಈಗ ಉಂಟಾಗಿರುವ ಕುಸಿತವು ತಾತ್ಕಾಲಿಕವಾಗಿದ್ದು, ಚುನಾವಣೆಗಳ ನಂತರ ಮಾರುಕಟ್ಟೆಯು ಯಥಾಸ್ಥಿತಿಗೆ ಬರಲಿದೆ ಎಂದು ತಿಳಿಸಿದರು.

ಮಾರಾಟ ಕುಸಿತ ತಡೆಗಟ್ಟಲು ಹೊಸ ಯೋಜನೆ ರೂಪಿಸಿದ ಫಿಯೆಟ್

ಇದರ ಜೊತೆಗೆ ಫಿಯೆಟ್ ಕಂಪನಿಯು ಇತ್ತೀಚಿಗಷ್ಟೆ ಒರಿಕ್ಸ್ ಆಟೋ ಇನ್ಫಾಸ್ಟ್ರಕ್ಚರ್ ಸರ್ವಿಸ್ ಸಹಭಾಗಿತ್ವದಲ್ಲಿ ಜೀಪ್ ಮಾದರಿಗಳಿಗಾಗಿ ಲೀಸ್ ಸೇವೆಯನ್ನು ಘೋಷಿಸಿದೆ. ಈ ಯೋಜನೆಯಡಿಯಲ್ಲಿ ಗ್ರಾಹಕರು ಜೀಪ್ ಕಾಂಪಾಸ್ ವಾಹನವನ್ನು 2 ರಿಂದ 5 ವರ್ಷಗಳವರೆಗೆ ಲೀಸ್ ಪಡೆಯಲಿದ್ದಾರೆ, ಈ ಯೋಜನೆಯಲ್ಲಿ ವಾಹನಗಳಿಗೆ ಪೂರ್ತಿಯಾಗಿ ಹಣ ಪಾವತಿಸುವಂತಿಲ್ಲ. ಈ ಲೀಸಿಂಗ್ ಸೇವೆಯನ್ನು ದೇಶಾದ್ಯಂತವಿರುವ ಐದು ಮೆಟ್ರೋ ನಗರಗಳಾದ ಬೆಂಗಳೂರು, ಪುಣೆ, ಮುಂಬೈ, ಹೈದರಾಬಾದ್ ಮತ್ತು ದೆಹಲಿ ಎನ್‍‍ಸಿ‍ಆರ್ ಗಳಲ್ಲಿ ಆರಂಭಿಸಲಾಗುವುದು.

ಮಾರಾಟ ಕುಸಿತ ತಡೆಗಟ್ಟಲು ಹೊಸ ಯೋಜನೆ ರೂಪಿಸಿದ ಫಿಯೆಟ್

ಒರಿಕ್ಸ್ ಆಟೋ ಇನ್ಫಾಸ್ಟ್ರಕ್ಚರ್ ಸರ್ವಿಸ್‍‍ನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿ‍ಇ‍ಒ ಸಂದೀಪ್ ಗಂಭೀರ್ ರವರು ಮಾತನಾಡಿ, ಒರಿಕ್ಸ್ ತನ್ನ ಲೀಸಿಂಗ್ ಸೇವೆಯನ್ನು ವಿಸ್ತರಿಸಲು ಬಯಸಿದ್ದು, ತಮ್ಮ ಗ್ರಾಹಕರಿಗೆ ಹೊಸ ಬಗೆಯ ಸೌಲಭ್ಯಗಳನ್ನು ನೀಡಲಿದೆ. ನಮಗೆ ಫಿಯೆಟ್ ಕಂಪನಿಯ ಜೊತೆ ಕೈಜೋಡಿಸಲು ಸಂತೋಷವಾಗುತ್ತಿದ್ದು, ಗ್ರಾಹಕರಿಗೆ ಇನ್ನೂ ಹೆಚ್ಚಿನ ಕೊಡುಗೆಗಳನ್ನು ನೀಡಲಿದ್ದೇವೆ ಎಂದು ತಿಳಿಸಿದರು.

MOST READ: ಈ ಪುಸ್ತಕದ ಬೆಲೆ ಒಂದು ಐಷಾರಾಮಿ ಬಂಗಲೆಗಿಂತಲೂ ದುಬಾರಿ..!

ಮಾರಾಟ ಕುಸಿತ ತಡೆಗಟ್ಟಲು ಹೊಸ ಯೋಜನೆ ರೂಪಿಸಿದ ಫಿಯೆಟ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಫಿಯೆಟ್‍‍ನ ಯೋಜನೆಯ ಬಗ್ಗೆ ಇನ್ನೂ ಸ್ಪಷ್ಟತೆ ದೊರಕಿಲ್ಲ. ಲೀಸ್‍ ಸೇವೆಗಳನ್ನು ನೀಡುವುದು ಒಳ್ಳೆಯ ಯೋಜನೆಯಾದರೂ ಎಷ್ಟು ಮಾದರಿಗಳಲ್ಲಿ ಈ ಯೋಜನೆಯನ್ನು ನೀಡಲಾಗುವುದು ಎಂಬುದು ಖಚಿತವಾಗಿಲ್ಲ. ಮಾರಾಟದ ಬೆಲೆ ಲೀಸ್‍‍ನ ಬೆಲೆ ಒಂದೇ ಆದರೆ ಯಾವುದೇ ಪ್ರಯೋಜನವಾಗುವುದಿಲ್ಲ.

Most Read Articles

Kannada
Read more on ಫಿಯೆಟ್ fiat
English summary
Fiat’s Plan To Stay Afloat — Surviving The Lean Phase - Read in kannada
Story first published: Monday, May 20, 2019, 13:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X