ಎಸ್‍‍ಯು‍‍ವಿ ಮಾರಾಟದಲ್ಲಿ ನಂ.1 ಸ್ಥಾನಕ್ಕೇರಿದ ಹ್ಯುಂಡೈ ಕ್ರೆಟಾ

ಭಾರತೀಯ ಆಟೋ ಮೊಬೈಲ್ ಉದ್ಯಮದ ಪ್ರಗತಿಯು ನಿಧಾನಗತಿಯಲ್ಲಿ ಸಾಗಿದ್ದರೂ, ವಿವಿಧ ಕಾರುಗಳ ಮಾರಾಟದ ರ್‍ಯಾಕಿಂಗ್‍‍ನಲ್ಲಿ ಬದಲಾವಣೆಗಳಾಗಿವೆ. ಎಸ್‍‍ಯು‍‍ವಿ ಕಾರುಗಳು ದೇಶಿಯ ಮಾರುಕಟ್ಟೆಯಲ್ಲಿ ಸದ್ಯಕ್ಕೆ ಹೆಚ್ಚಿನ ಬೇಡಿಕೆಯನ್ನು ಹೊಂದಿರುವ ಸೆಗ್‍‍‍ಮೆಂಟ್‍‍ಗಳಾಗಿವೆ. ಈ ಸೆಗ್‍‍ಮೆಂಟಿನ ಕಾರುಗಳ ಮಾರುಕಟ್ಟೆಯು ಮೇ 2019ರಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡಿದೆ.

ಎಸ್‍‍ಯು‍‍ವಿ ಮಾರಾಟದಲ್ಲಿ ನಂ.1 ಸ್ಥಾನಕ್ಕೇರಿದ ಹ್ಯುಂಡೈ ಕ್ರೆಟಾ

ಕಾಂಪ್ಯಾಕ್ಟ್ ಎಸ್‍‍ಯು‍‍ವಿ ಸೆಗ್‍‍ಮೆಂಟಿನಲ್ಲಿ ಮುಂಚೂಣಿಯಲ್ಲಿದ್ದ ಮಾರುತಿ ಸುಜುಕಿ ಕಂಪನಿಯ ವಿಟಾರಾ ಬ್ರಿಝಾ ಕಾರು ತನ್ನ ಮೊದಲನೇ ಸ್ಥಾನವನ್ನು ಕಳೆದುಕೊಂಡಿದೆ. ಹ್ಯುಂಡೈನ ಕ್ರೆಟಾ ಈಗ ನಂ.1 ಸ್ಥಾನದಲ್ಲಿದೆ. ಮೇ 2018ಕ್ಕೆ ಹೋಲಿಸಿದರೆ, ಬ್ರಿಝಾ ಕಾರಿನ ಮಾರಾಟವು ಮೇ 2019ರಲ್ಲಿ 43.82%ರಷ್ಟು ಕುಸಿದಿದೆ. ಹ್ಯುಂಡೈ ವೆನ್ಯೂ ಕಾರು ಬಿಡುಗಡೆಯಾದ ನಂತರ ಬ್ರಿಝಾದ ಮಾರಾಟವು ಕುಸಿದಿದೆ. ವೆನ್ಯೂ ಕಾರು ಈಗ ಮಾರಾಟದಲ್ಲಿ ನಂ.3 ಸ್ಥಾನದಲ್ಲಿದೆ.

ಎಸ್‍‍ಯು‍‍ವಿ ಮಾರಾಟದಲ್ಲಿ ನಂ.1 ಸ್ಥಾನಕ್ಕೇರಿದ ಹ್ಯುಂಡೈ ಕ್ರೆಟಾ

2019ರ ಮೇ ತಿಂಗಳಿನಲ್ಲಿ ಕ್ರೆಟಾ ಹಾಗೂ ವೆನ್ಯೂವಿನ 16,103 ಕಾರುಗಳ ಮಾರಾಟವಾಗಿದ್ದು, ಈ ಪೈಕಿ 7,049 ವೆನ್ಯೂ ಕಾರುಗಳನ್ನು ಮಾರಾಟ ಮಾಡಲಾಗಿದೆ. ಹ್ಯುಂಡೈ ಕಂಪನಿಯು 20,000 ವಾಹನಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ. ಇದರಿಂದಾಗಿ ಹ್ಯುಂಡೈ ಭಾರತದ ನಂ.1 ಎಸ್‍‍ಯು‍‍ವಿ ಕಂಪನಿಯಾಗಲಿದೆ.

ಎಸ್‍‍ಯು‍‍ವಿ ಮಾರಾಟದಲ್ಲಿ ನಂ.1 ಸ್ಥಾನಕ್ಕೇರಿದ ಹ್ಯುಂಡೈ ಕ್ರೆಟಾ

ಮಾರುಕಟ್ಟೆ ಪರಿಣಿತರ ಪ್ರಕಾರ, ಮುಂಬರುವ ದಿನಗಳಲ್ಲಿ ವೆನ್ಯೂ ಕಾರು ಮಾರಾಟದಲ್ಲಿ ಹೆಚ್ಚಿನ ಪ್ರಗತಿಯನ್ನು ದಾಖಲಿಸಿದರೆ ಬ್ರಿಝಾವನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಲಿದೆ. ಬ್ರಿಝಾ ಕಾರು ಸಹ ಸ್ಪರ್ಧೆಯನ್ನು ಒಡ್ಡುತ್ತಿದ್ದು, ಇತ್ತೀಚಿಗೆ ತನ್ನ ಸ್ಫೋರ್ಟ್ಸ್ ಲಿಮಿಟೆಡ್ ಎಡಿಷನ್ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ.

ಎಸ್‍‍ಯು‍‍ವಿ ಮಾರಾಟದಲ್ಲಿ ನಂ.1 ಸ್ಥಾನಕ್ಕೇರಿದ ಹ್ಯುಂಡೈ ಕ್ರೆಟಾ

ಹೊಸ ಬ್ರಿಝಾ ಎಸ್‍‍ಯು‍‍ವಿಯ ವಿನ್ಯಾಸದಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗಿದ್ದು, ಸ್ಟೈಲಿಶ್ ಆಗಿರುವ ಆಕ್ಸೆಸರೀಸ್‍‍ಗಳನ್ನು ಅಳವಡಿಸಲಾಗಿದೆ. ಬ್ರಿಝಾ ಹಾಗೂ ವೆನ್ಯೂ ಕಾರುಗಳ ಮಧ್ಯೆ ಸ್ಪರ್ಧೆ ಏರ್ಪಟಿದ್ದರೆ, ಉಳಿದ ಕಾಂಪ್ಯಾಕ್ಟ್ ಎಸ್‍‍ಯು‍‍ವಿಗಳು ಗ್ರಾಹಕರ ಮೇಲೆ ಯಾವುದೇ ಪ್ರಭಾವವನ್ನು ಬೀರಲು ವಿಫಲವಾಗಿವೆ. ಆದರೆ ಈ ಪಟ್ಟಿಯಲ್ಲಿ ಕೆಲವು ಬದಲಾವಣೆಗಳಾಗಿದ್ದು, ಮಹೀಂದ್ರಾ ಎಕ್ಸ್ ಯುವಿ300 ಕಾರು ಟಾಟಾ ನೆಕ್ಸಾನ್ ಕಾರಿಗಿಂತ ಸತತ ಎರಡನೇ ತಿಂಗಳಲ್ಲೂ ಮುಂದಿದ್ದು, ಮೇ ತಿಂಗಳಿನಲ್ಲಿ ಹೆಚ್ಚು ಮಾರಾಟವಾಗುವ ವಾಹನಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.

ಮಾದರಿಗಳು ಮೇ 2019

ಮೇ 2018

ಶೇಕಡಾ

1 ಹ್ಯುಂಡೈ ಕ್ರೆಟಾ

9,054

11,004

-17.72

2 ಮಾರುತಿ ಬ್ರಿಝಾ

8,781

15,629

-43.82

3 ಹ್ಯುಂಡೈ ವೆನ್ಯೂ

7,049

-

-

4 ಮಹೀಂದ್ರಾ ಎಕ್ಸ್ ಯುವಿ300

5,113

-

-

5 ಟಾಟಾ ನೆಕ್ಸಾನ್

4,506

4,308

4.60

6 ಫೋರ್ಡ್ ಇಕೋಸ್ಪೋರ್ಟ್ 3,604

5,003

-27.96

7 ಮಹೀಂದ್ರಾ ಸ್ಕಾರ್ಪಿಯೊ 3,476

3,775

-7.92

8 ಟಾಟಾ ಹ್ಯಾರಿಯರ್

1,779

-

-

9 ಹೋಂಡಾ ಡಬ್ಲ್ಯು ಆರ್-ವಿ

1,520

1,962

-22.53

10 ಮಾರುತಿ ಎಸ್ ಕ್ರಾಸ್

1,507

4,610

-67.31

ಎಸ್‍‍ಯು‍‍ವಿ ಮಾರಾಟದಲ್ಲಿ ನಂ.1 ಸ್ಥಾನಕ್ಕೇರಿದ ಹ್ಯುಂಡೈ ಕ್ರೆಟಾ

ಏಪ್ರಿಲ್ ತಿಂಗಳಿಗೆ ಹೋಲಿಸಿದರೆ, ಮೇ ತಿಂಗಳಿನಲ್ಲಿ ನೆಕ್ಸಾನ್ ಎಸ್‍‍ಯು‍‍ವಿ ಕಾರಿನ ಮಾರಾಟದಲ್ಲಿ 4.60% ನಷ್ಟು ಏರಿಕೆಯಾಗಿದೆ. 6ನೇ ಸ್ಥಾನದಲ್ಲಿರುವ ಫೋರ್ಡ್ ಇಕೋ ಸ್ಪೋರ್ಟ್ 27.96% ನಷ್ಟು ಕುಸಿತ ಕಂಡಿದೆ. ಆಟೋಮೊಬೈಲ್ ಮಾರುಕಟ್ಟೆಯು ನಿಧಾನಗತಿಯಲ್ಲಿರುವುದರಿಂದ, ವೆನ್ಯೂ ಹಾಗೂ ಎಕ್ಸ್ ಯುವಿ300 ವಾಹನಗಳ ಬಿಡುಗಡೆಯ ಕಾರಣದಿಂದಾಗಿ ಹಲವು ಕಾರುಗಳ ಮಾರಾಟದಲ್ಲಿ ಕುಸಿತ ಉಂಟಾಗಿದೆ.

ಮಾದರಿಗಳು

ಮೇ 2019

ಮೇ 2018

ಶೇಕಡಾ

11 ಮಹೀಂದ್ರಾ ಟಿ‍‍ಯು‍‍ವಿ 300

1,393

1,939

-28.16

12 ಮಹೀಂದ್ರಾ ಎಕ್ಸ್ ಯುವಿ 500

1,195

2,770

-56.86

13 ಜೀಪ್ ಕಂಪಾಸ್

977

1,518

-35.64

14 ರೆನಾಲ್ಟ್ ಡಸ್ಟರ್

672

1,046

-35.76

15 ನಿಸ್ಸಾನ್ ಟೆರಾನೋ

166

151

9.93

16 ಟಾಟಾ ಸಫಾರಿ

152

304

-50.00

17 ನಿಸ್ಸಾನ್ ಕಿಕ್ಸ್

79

-

-

18 ರೆನಾಲ್ಟ್ ಕ್ಯಾಪ್ಚರ್

76

324

-76.54

MOST READ: ಪ್ರಪಂಚದ ದೊಡ್ಡ ಜೆಟ್ ವಿಮಾನವನ್ನು ಎಳೆದ ಮಿನಿ ಕೂಪರ್..!

ಎಸ್‍‍ಯು‍‍ವಿ ಮಾರಾಟದಲ್ಲಿ ನಂ.1 ಸ್ಥಾನಕ್ಕೇರಿದ ಹ್ಯುಂಡೈ ಕ್ರೆಟಾ

ಬಹುತೇಕ ಕಂಪನಿಯ ಕಾರುಗಳ ಮಾರಾಟದಲ್ಲಿ ಎರಡು ಅಂಕಿಯ ನಷ್ಟವುಂಟಾಗಿದೆ. ಮಾರಾಟ ಕುಸಿತದಲ್ಲಿ ರೆನಾಲ್ಟ್ ಕಂಪನಿಯ ಕ್ಯಾಪ್ಚರ್ 76.54% ನೊಂದಿಗೆ ಮೊದಲ ಸ್ಥಾನದಲ್ಲಿದೆ. ಮಾರುತಿ ಸುಜುಕಿಯ ಎಸ್ ಕ್ರಾಸ್ 67.31%, ಮಹೀಂದ್ರಾ ಎಕ್ಸ್ ಯುವಿ500 56.86%, ಟಾಟಾ ಸಫಾರಿ 50%, ರೆನಾಲ್ಟ್ ಡಸ್ಟರ್ 35.76% ಹಾಗೂ ಜೀಪ್ ಕಂಪಾಸ್ 35.64% ಕುಸಿತದೊಂದಿಗೆ ನಂತರದ ಸ್ಥಾನಗಳಲ್ಲಿವೆ.

MOST READ: ನೆಕ್ಸಾ ಟರ್ಮಿನಲ್ ಶುರು ಮಾಡಿದ ಮಾರುತಿ ಸುಜುಕಿ

ಎಸ್‍‍ಯು‍‍ವಿ ಮಾರಾಟದಲ್ಲಿ ನಂ.1 ಸ್ಥಾನಕ್ಕೇರಿದ ಹ್ಯುಂಡೈ ಕ್ರೆಟಾ

ಟಾಟಾ ನೆಕ್ಸಾನ್ ಹೊರತಾಗಿ, ನಿಸ್ಸಾನ್ ಟೆರಾನೊ ಮಾರಾಟದಲ್ಲಿ ಏರುಗತಿಯನ್ನು ದಾಖಲಿಸಿದೆ. ಮೇ 2018ರಲ್ಲಿ 151 ಕಾರುಗಳನ್ನು ಮಾರಾಟ ಮಾಡಲಾಗಿದ್ದರೆ, ಮೇ 2019ರಲ್ಲಿ 166 ಕಾರುಗಳ ಮಾರಾಟವಾಗಿ 9.93% ನಷ್ಟು ಏರಿಕೆ ಕಂಡಿದೆ. ಮೇ 2019ರಲ್ಲಿ 1,779 ಟಾಟಾ ಹ್ಯಾರಿಯರ್ ಕಾರುಗಳನ್ನು ಮಾರಾಟ ಮಾಡಲಾಗಿದೆ.

MOST READ: ಉತ್ಪಾದನಾ ಹಂತದಲ್ಲಿರುವ ಎಂ‍‍ಜಿ ಎಲೆಕ್ಟ್ರಿಕ್ ಕಾರಿನ ವೀಡಿಯೊ ಬಹಿರಂಗ

ಎಸ್‍‍ಯು‍‍ವಿ ಮಾರಾಟದಲ್ಲಿ ನಂ.1 ಸ್ಥಾನಕ್ಕೇರಿದ ಹ್ಯುಂಡೈ ಕ್ರೆಟಾ

ಗ್ರಾಹಕರ ಆದ್ಯತೆಗಳು ಬದಲಾಗುತ್ತಿದ್ದು, ಕಾರು ಖರೀದಿಸುವವರು ಕಂಪನಿಗಳ ಬ್ರಾಂಡಿಗೆ ಆದ್ಯತೆ ನೀಡದೇ, ಕಂಪನಿಗಳು ಬಿಡುಗಡೆ ಮಾಡುವ ಹೊಸ ಬಗೆಯ ವಾಹನಗಳು ಹಾಗೂ ಅದರಲ್ಲಿರುವ ಫೀಚರ್‍‍‍ಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಇದು ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಎಂ‍‍ಜಿ ಹೆಕ್ಟರ್, ಕಿಯಾ ಸೆಲ್ಟೊಸ್, ಜೀಪ್ ಕಂಪಾಸ್ ಮೊದಲಾದ ವಾಹನಗಳ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.

Most Read Articles

Kannada
English summary
Hyundai Creta beats Maruti Brezza in May 2019 to become India’s No 1 selling SUV - Read in kannada
Story first published: Thursday, June 6, 2019, 13:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X