ಕಾರ್ನಿವಾಲ್ ಎಂಪಿವಿ ಟೀಸರ್ ಬಿಡುಗಡೆ ಮಾಡಿದ ಕಿಯಾ ಮೋಟಾರ್ಸ್

ಕಿಯಾ ಮೋಟಾರ್ಸ್ ಸಂಸ್ಥೆಯ ಬಹುನೀರಿಕ್ಷಿತ ಕಾರ್ನಿವಾಲ್ ಎಂಪಿವಿ ಕಾರು ಮಾದರಿಯು ಮುಂದಿನ ತಿಂಗಳು ಜನವರಿ ಕೊನೆಯ ವಾರದಲ್ಲಿ ಬಿಡುಗಡೆಯಾಗುವ ಸುಳಿವು ನೀಡಿದ್ದು, ಹೊಸ ಕಾರಿನ ಬಿಡುಗಡೆಯ ಕುರಿತಂತೆ ಮೊದಲ ಟೀಸರ್ ಒಂದನ್ನು ಬಿಡುಗಡೆಗೊಳಿಸಲಾಗಿದೆ.

ಕಾರ್ನಿವಾಲ್ ಎಂಪಿವಿ ಟೀಸರ್ ಬಿಡುಗಡೆ ಮಾಡಿದ ಕಿಯಾ ಮೋಟಾರ್ಸ್

ಮಲ್ಟಿ ಪ್ಯಾಸೆಂಜರ್ ವೆಹಿಕಲ್(ಎಂಪಿವಿ) ವಿಭಾಗದಲ್ಲಿ ಅಗ್ರಸ್ಥಾನದಲ್ಲಿರುವ ಕಿಯಾ ಕಾರ್ನಿವಾಲ್ ಕಾರು ಮಾದರಿಯು ವಿದೇಶಿ ಮಾರುಕಟ್ಟೆಗಳಲ್ಲಿ ಭಾರೀ ಬೇಡಿಕೆ ಹೊಂದಿದ್ದು, ಗ್ರಾಹಕರ ಬೇಡಿಕೆಯೆಂತೆ 11 ಸೀಟರ್ ಮತ್ತು 9 ಸೀಟರ್ ಮತ್ತು 7 ಸೀಟರ್ ಆವೃತ್ತಿಗಳಲ್ಲಿ ಮಾರಾಟವಾಗುತ್ತಿದೆ. ಇದು ದೇಶಿಯ ಮಾರುಕಟ್ಟೆಯಲ್ಲಿ ಕೆಲವು ಬದಲಾವಣೆಯೊಂದಿಗೆ ಬಿಡುಗಡೆಯಾಗಲಿದ್ದು, ಹೊಸ ಕಾರು 6 ಸೀಟರ್, 7 ಸೀಟರ್ ಮತ್ತು 8 ಸೀಟರ್ ಆವೃತ್ತಿಯೊಂದಿಗೆ ಮಾರಾಟಕ್ಕೆ ಲಭ್ಯವಾಗಲಿದೆ.

ಕಾರ್ನಿವಾಲ್ ಎಂಪಿವಿ ಟೀಸರ್ ಬಿಡುಗಡೆ ಮಾಡಿದ ಕಿಯಾ ಮೋಟಾರ್ಸ್

6 ಸೀಟರ್ ಮಾದರಿಯು ಪ್ರತ್ಯೇಕವಾಗಿ 2+2+2 ಆಸನ ವ್ಯವಸ್ಥೆಯನ್ನು ಹೊಂದಿದ್ದರೆ 7 ಸೀಟರ್ ಮಾದರಿಯು 2+2+3 ಮತ್ತು 8 ಸೀಟರ್ ಮಾದರಿಯು 2+3+3 ಆಸನ ಸೌಲಭ್ಯವನ್ನು ಪಡೆದುಕೊಳ್ಳಲಿದ್ದು, ಗ್ರಾಹಕರು ತಮ್ಮ ಆದ್ಯತೆ ಮೇರೆಗೆ ವಿವಿಧ ಮಾದರಿಗಳನ್ನು ಖರೀದಿ ಮಾಡಬಹುದಾಗಿದೆ.

ಕಾರ್ನಿವಾಲ್ ಎಂಪಿವಿ ಟೀಸರ್ ಬಿಡುಗಡೆ ಮಾಡಿದ ಕಿಯಾ ಮೋಟಾರ್ಸ್

ಜೊತೆಗೆ ಹೊಸ ಕಾರಿನಲ್ಲಿ ಕೆಲವು ಫೀಚರ್ಸ್‌ಗಳನ್ನು ಮಾಡಿಫೈ ಕೂಡಾ ಮಾಡಿಕೊಳ್ಳಬಹುದಾಗಿದ್ದು, ಡ್ಯುಯಲ್ ಸನ್‌ರೂಫ್ ಮತ್ತು ರೂಫ್ ಬಾಕ್ಸ್ ಸೌಲಭ್ಯವನ್ನು ಹೆಚ್ಚುವರಿ ಶುಲ್ಕದೊಂದಿಗೆ ಖರೀದಿ ಮಾಡಬೇಕಾಗುತ್ತದೆ.

ಕಾರ್ನಿವಾಲ್ ಎಂಪಿವಿ ಟೀಸರ್ ಬಿಡುಗಡೆ ಮಾಡಿದ ಕಿಯಾ ಮೋಟಾರ್ಸ್

ಎಂಪಿವಿ ಕಾರುಗಳ ಮಾರಾಟ ವಿಭಾಗದಲ್ಲಿ ಸದ್ಯ ಭಾರೀ ಬೇಡಿಕೆ ಹೊಂದಿರುವ ಟೊಯೊಟಾ ಇನೋವಾ ಕ್ರಿಸ್ಟಾ ಕಾರಿಗೆ ಪೈಪೋಟಿಯಾಗಿ ಬಿಡುಗಡೆಯಾಗುತ್ತಿರುವ ಕಿಯಾ ಕಾರ್ನಿವಾಲ್ ಎಂಪಿವಿ ಕಾರು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 18 ಲಕ್ಷದಿಂದ ಟಾಪ್ ಎಂಡ್ ಮಾದರಿಯ ಬೆಲೆಯು ರೂ.25 ಲಕ್ಷ ಬೆಲೆ ಹೊಂದಬಹುದೆಂದು ಅಂದಾಜಿಸಲಾಗಿದೆ.

ಕಾರ್ನಿವಾಲ್ ಎಂಪಿವಿ ಟೀಸರ್ ಬಿಡುಗಡೆ ಮಾಡಿದ ಕಿಯಾ ಮೋಟಾರ್ಸ್

ಕಾರ್ನಿವಾಲ್ ಕಾರು 5, 115-ಎಂಎಂ ಉದ್ದ, 1,985-ಎಂಎಂ ಅಗಲ ಮತ್ತು 1,755 ಎತ್ತರವನ್ನು ಹೊಂದಿದ್ದು, ಇದ್ದು ಇನೋವಾ ಕ್ರಿಸ್ಟಾ ಕಾರಿಗಿಂತಲೂ 375-ಎಂಎಂ ಹೆಚ್ಚು ಉದ್ದ,155-ಎಂಎಂ ಹೆಚ್ಚು ಅಗಲ ಮತ್ತು 40-ಎಂಎಂ ನಷ್ಟು ಕಡಿಮೆ ಎತ್ತರವನ್ನು ಪಡೆದುಕೊಂಡಿರಲಿದೆ.

ಕಾರ್ನಿವಾಲ್ ಎಂಪಿವಿ ಟೀಸರ್ ಬಿಡುಗಡೆ ಮಾಡಿದ ಕಿಯಾ ಮೋಟಾರ್ಸ್

ಎಂಜಿನ್ ಸಾಮರ್ಥ್ಯ

ಕಿಯಾ ಕಾರ್ನಿವಾಲ್ ಕಾರು ಇನೋವಾ ಕ್ರಿಸ್ಟಾಗೆ ಪೈಪೋಟಿಯಾಗಿ 2.2-ಲೀಟರ್ ಟರ್ಬೋ ಡೀಸೆಲ್ ಜೊತೆ 3.3-ಲೀಟರ್ ವಿ6 ಎಂಪಿಐ ಪೆಟ್ರೋಲ್ ಎಂಜಿನ್ ಮಾದರಿಯೊಂದಿಗೆ ಮಾರಾಟವಾಗುತ್ತಿದ್ದು, ಭಾರತದಲ್ಲಿ ಬಿಡುಗಡೆಯಾಗಲಿರುವ ಮಾದರಿಯು ಬೆಲೆ ತಗ್ಗಿಸುವುದಕ್ಕಾಗಿ 2.5-ಲೀಟರ್ ಡೀಸೆಲ್ ಎಂಜಿನ್ ಮತ್ತು 2.6-ಲೀಟರ್ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಗಳಿವೆ.

MOST READ: ಪಾರ್ಕಿಂಗ್ ವೇಳೆ ಸಿಬ್ಬಂದಿ ಎಡವಟ್ಟು- ಮೊದಲ ಮಹಡಿಯಿಂದ ಜಿಗಿದ ಕಿಯಾ ಸೆಲ್ಟೊಸ್

ಕಾರ್ನಿವಾಲ್ ಎಂಪಿವಿ ಟೀಸರ್ ಬಿಡುಗಡೆ ಮಾಡಿದ ಕಿಯಾ ಮೋಟಾರ್ಸ್

ಹಾಗೆಯೇ ಕಾರ್ನಿವಾಲ್ ಕಾರು ಇನೋವಾ ಕ್ರಿಸ್ಟಾಗಿಂತಲೂ ಉತ್ತಮ ಪ್ರೀಮಿಯಂ ಸೌಲಭ್ಯ ಹೊಂದಿದ್ದು, 10.1-ಇಂಚಿನ ಇನ್ಪೋಟೈನ್ ಸಿಸ್ಟಂ, ಕಿಯಾ ಯುವಿಒ ಕನೆಕ್ಟ್, ಕಾರ್ ಕನೆಕ್ಟಿವಿಟಿ ಸೂಟ್, ಲಾರ್ಜ್ ಟಚ್‌ಸ್ಕೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಎರಡು ಸನ್‌ರೂಫ್, ಪವರ್ ಅಡ್ಜೆಸ್ಟ್‌ಬಲ್ ಡ್ರೈವರ್ ಸೀಟ್, ತ್ರಿ ಕ್ಲೈಮೆಟ್ ಜೋನ್ ಕಂಟ್ರೋಲ್ ಸೌಲಭ್ಯ ಹೊಂದಿದೆ.

MOST READ: ಪತ್ನಿಯ ಸರ್ಪ್ರೈಸ್ ಗಿಫ್ಟ್‌ಗೆ ಪತಿ ಫುಲ್ ಖುಷ್..

ಪ್ರಯಾಣಿಕರ ಸುರಕ್ಷತೆಗಾಗಿ 6 ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಬ್ರೇಕ್ ಅಸಿಸ್ಟ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಅಸಿಸ್ಟ್ ಮತ್ತು ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಸಹ ಈ ಕಾರಿನಲ್ಲಿವೆ.

MOST READ: ವಾಹನ ಡೀಲರ್‍‍ಗಳ ಟ್ರೇಡ್ ಸರ್ಟಿಫಿಕೇಟ್ ಅಮಾನತುಗೊಳಿಸಿದ ಸಾರಿಗೆ ಇಲಾಖೆ

ಕಾರ್ನಿವಾಲ್ ಎಂಪಿವಿ ಟೀಸರ್ ಬಿಡುಗಡೆ ಮಾಡಿದ ಕಿಯಾ ಮೋಟಾರ್ಸ್

ಹೀಗಾಗಿ ಇನೋವಾ ಕ್ರಿಸ್ಟಾ ಆವೃತ್ತಿಗೆ ಪ್ರತಿಹಂತದಲ್ಲೂ ಪೈಪೋಟಿ ನೀಡಬಹುದಾದ ಎಲ್ಲಾ ಗುಣಲಕ್ಷಣಗಳನ್ನು ಹೊಂದಿರುವ ಕಿಯಾ ಕಾರ್ನಿವಾಲ್ ಕಾರು ಮಾದರಿಯು ಭಾರತದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ಫೆಬ್ರುವರಿ 5ರಿಂದ ಆರಂಭವಾಗಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಕ್ಕೂ ಮುನ್ನ ಹೊಸ ಕಾರ್ನಿವಾಲ್ ಖರೀದಿಗೆ ಲಭ್ಯವಿರಲಿದೆ.

Most Read Articles

Kannada
English summary
Kia Motors India has released a first teaser of Carnival MPV ahead of launch.
Story first published: Saturday, December 21, 2019, 14:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X