Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಬದಲಾವಣೆಯೊಂದಿಗೆ ಬರಲಿದೆ ಮಹೀಂದ್ರಾ ಟಿಯುವಿ300 ಪ್ಲಸ್ ಫೇಸ್‌ಲಿಫ್ಟ್..!
ನಿಗದಿತ ಅವಧಿಯೊಳಗೆ ಬಿಎಸ್-6 ಎಂಜಿನ್ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿರುವ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ರೋಡ್ ಟೆಸ್ಟಿಂಗ್ ಪ್ರಕ್ರಿಯೆ ಮೇಲೆ ಹೆಚ್ಚಿನ ಒತ್ತು ನೀಡುತ್ತಿದ್ದು, ಮಹೀಂದ್ರಾ ಕೂಡಾ ತನ್ನ ಟಿಯುವಿ300 ಪ್ಲಸ್ ಸೇರಿದಂತೆ ವಿವಿಧ ಕಾರು ಮಾದರಿಗಳನ್ನು ಹೊಸ ನಿಯಮ ಅನುಸಾರ ಉನ್ನತೀಕರಿಸುತ್ತಿದೆ.

2020ರ ಏಪ್ರಿಲ್ 1 ರಿಂದ ಜಾರಿಗೆ ಬರಲಿರುವ ಬಿಎಸ್-6 ನಿಯಮಕ್ಕೆ ಅನುಗುಣವಾಗಿ ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು ತಮ್ಮ ಜನಪ್ರಿಯ ಕಾರುಗಳನ್ನು ಉನ್ನತಿಕರಿಸುತ್ತಿದ್ದು, ಮಹೀಂದ್ರಾ ಕೂಡಾ ನೆಕ್ಸ್ಟ್ ಜನರೇಷನ್ ಕಾರು ಮಾದರಿಗಳ ಜೊತೆಗೆ ಟಿಯುವಿ 300 ಪ್ಲಸ್ ಮಾದರಿಯನ್ನು ಸಹ ಹೊಸ ನಿಯಮಕ್ಕೆ ಅನುಗುಣವಾಗಿ ಬಿಡುಗಡೆ ಮಾಡಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಹೊಸ ಎಂಜಿನ್ ಮಾದರಿಯನ್ನು ಜೋಡಿಸಲಾಗಿರುವ ಟಿಯುವಿ300 ಪ್ಲಸ್ ಮಾದರಿಯನ್ನು ರೋಡ್ ಟೆಸ್ಟಿಂಗ್ ನಡೆಸಲಾಗುತ್ತಿದ್ದು, ಹೊಸ ಕಾರು ಹಲವು ಬದಲಾವಣೆಗಳೊಂದಿಗೆ ರಸ್ತೆಗಿಳಿಯುವುದು ಬಹುತೇಕ ಖಚಿತವಾಗಿದೆ.

ದೇಶಾದ್ಯಂತ ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ಹೊಸ ವಾಹನಗಳ ಎಂಜಿನ್ ತಂತ್ರಜ್ಞಾನದಲ್ಲಿ ಮಹತ್ವದ ಬದಲಾವಣೆ ತರುತ್ತಿರುವ ಕೇಂದ್ರ ಸರ್ಕಾರವು ಆಟೋ ಉತ್ಪಾದನಾ ಸಂಸ್ಥೆಗಳಿಗೆ ಕೆಲವು ಕಡ್ಡಾಯ ನಿಯಮಗಳನ್ನು ಜಾರಿ ತರುತ್ತಿದೆ.

ಭಾರತದಲ್ಲಿ ಸದ್ಯ ಬಿಎಸ್-4(ಭಾರತ್ ಸ್ಟೇಜ್) ವೈಶಿಷ್ಟ್ಯತೆಯುಳ್ಳ ವಾಹನಗಳು ಮಾತ್ರ ಮಾರಾಟಗೊಳ್ಳುತ್ತಿದ್ದು, ಇದು ಕೂಡಾ ಮುಂಬರುವ 2020ರ ಏಪ್ರಿಲ್ 1ರಿಂದ ನಿಷೇಧಗೊಂಡು ಬಿಎಸ್-6 ನಿಯಮವು ಜಾರಿಗೆ ಬರಲಿದೆ. ಹೀಗಾಗಿ ಕೇಂದ್ರ ಸರ್ಕಾರದ ಹೊಸ ನಿಯಮದಂತೆ ಮಹೀಂದ್ರಾ ಸೇರಿದಂತೆ ಬಹುತೇಕ ಸಂಸ್ಥೆಗಳು 2019ರ ಕೊನೆಯಲ್ಲಿ ಇಲ್ಲವೇ 20202ರ ಆರಂಭದಲ್ಲಿ ಬಿಎಸ್-6 ಎಂಜಿನ್ ಪ್ರೇರಿತ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ.

ಇದರಲ್ಲಿ ಮಹೀಂದ್ರಾ ನಿರ್ಮಾಣದ ಟಿಯುವಿ300 ಪ್ಲಸ್, ನ್ಯೂ ಜನರೇಷನ್ ಸ್ಕಾರ್ಪಿಯೋ, ಎಕ್ಸ್‌ಯುವಿ500, ಎಕ್ಸ್‌ಯುವಿ300 ಮತ್ತು ನೆಕ್ಸ್ಟ್ ಜನರೇಷನ್ ಥಾರ್ ಕಾರುಗಳು ಹೊಸ ಮಾದರಿಯ ಬಿಎಸ್-6 ಎಂಜಿನ್ ಸೌಲಭ್ಯದೊಂದಿಗೆ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದ್ದು, ಮಾಹಿತಿಗಳ ಪ್ರಕಾರ ಮಹೀಂದ್ರಾ ಹೊಸ ಕಾರುಗಳು ಮುಂದಿನ ನಾಲ್ಕೈದು ತಿಂಗಳ ಅವಧಿಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿವೆ ಎನ್ನಲಾಗಿದೆ. ಹೀಗಾಗಿ ಬಿಡುಗಡೆಯ ಉದ್ದೇಶಕ್ಕಾಗಿಯೇ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುತ್ತಿದ್ದು, ತದನಂತರವಷ್ಟೇ ಉತ್ಪಾದನಾ ಪ್ರಕ್ರಿಯೆಗೆ ಚಾಲನೆ ಸಿಗಲಿದೆ.

ಇನ್ನು ಬಿಎಸ್-6 ವೈಶಿಷ್ಟ್ಯತೆಗಳಿಂದಾಗಿ ಹೊಸ ಕಾರುಗಳಲ್ಲಿ ಹಲವಾರು ಹೊಸ ಸುರಕ್ಷಾ ಸೌಲಭ್ಯಗಳನ್ನು ನೀಡಲಾಗಿದ್ದು, ಸ್ಕಾರ್ಪಿಯೋ, ಎಕ್ಸ್‌ಯುವಿ500, ಎಕ್ಸ್‌ಯುವಿ300, ಟಿಯುವಿ300 ಪ್ಲಸ್ ಮತ್ತು ಥಾರ್ ಕಾರುಗಳಲ್ಲಿ ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್ ಜೊತೆ ಇಬಿಡಿ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೊಲ್ ಸಿಸ್ಟಂ, ಸ್ಪೀಡ್ ಅಲರ್ಟ್, ಸೀಟ್ ಬೆಲ್ಟ್ ರಿಮೆಂಡರ್ ಸೌಲಭ್ಯಗಳಿವೆ.

ಹಾಗೆಯೇ 6 ಏರ್‌ಬ್ಯಾಗ್‌ಗಳು(ಟಾಪ್ ಎಂಡ್‌ಗಳಲ್ಲಿ), ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಆಯ್ದ ವೆರಿಯೆಂಟ್‌ಗಳಲ್ಲಿ ಸನ್‌ರೂಫ್, ರೂಫ್ ರೈಲ್ಸ್, ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಫಾಗ್ ಲ್ಯಾಂಪ್, ಟರ್ನ್ ಇಂಡಿಕೇಟಕ್ ಲೈಟ್, ಸಿಲ್ವರ್ ಸ್ಕೀಡ್ ಪ್ಲೇಟ್, ರಿಯರ್ ಎಸಿ ವೆಂಟ್ಸ್, ಲೆದರ್ ಸೀಟುಗಳು, 6 ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟು ಮತ್ತು ಒಂದೇ ಸೂರಿನಡಿ ವಿವಿಧ ಮಾಹಿತಿಗಳನ್ನು ನೀಡಬಲ್ಲ ಟಚ್ ಸ್ಕ್ರಿನ್ ಇನ್ಪೋಟೈನ್‌ಟೆಂಟ್ ಸಿಸ್ಟಂ ಜೋಡಣೆ ಮಾಡಲಾಗಿದೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಇದರೊಂದಿಗೆ ಕಾರು ಕಳ್ಳತನಗಳಿಗೆ ಬ್ರೇಕ್ ಹಾಕಲು ಜಿಯೋ ಫೆನ್ಸ್ ಅಲರ್ಟ್ ಸೇರಿದಂತೆ ಸೆಂಟರ್ ಲಾಕಿಂಗ್ ಸಿಸ್ಟಂ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಒಟ್ಟಿನಲ್ಲಿ ಪ್ರಯಾಣಿಕರ ಸುರಕ್ಷೆತೆಗಾಗಿ ಗರಿಷ್ಠ ಮಟ್ಟದಲ್ಲಿ ಸುರಕ್ಷಾ ಸೌಲಭ್ಯ ಗಳನ್ನು ಅಳವಡಿಸಿರುವುದೇ ಹೊಸ ಕಾರುಗಳ ಪ್ರಮುಖ ಆಕರ್ಷಣೆಯಾಗಲಿದೆ.
MOST READ: ಅಚ್ಚರಿಯಾದ್ರು ಸತ್ಯ: ಎತ್ತಿನ ಗಾಡಿಗೂ ದುಬಾರಿ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು..!

ಅದಕ್ಕಿಂತಲೂ ಮುಖ್ಯವಾಗಿ ಸ್ಕಾರ್ಪಿಯೋ, ಎಕ್ಸ್‌ಯುವಿ500, ಎಕ್ಸ್‌ಯುವಿ300, ಟಿಯುವಿ300 ಪ್ಲಸ್ ಮತ್ತು ಥಾರ್ ನ್ಯೂ ಜನರೇಷನ್ ಕಾರುಗಳಲ್ಲಿ ಬಿಎಸ್-6 ಎಂಜಿನ್ ಅಳವಡಿಸಿರುವುದು ಮಾಲಿನ್ಯ ತಡೆಯುವಲ್ಲಿ ಸಾಕಷ್ಟು ಸಹಕಾರಿಯಾಗಲಿದ್ದು, ಶೇ.25ರಷ್ಚು ಹೊಗೆ ಉಗುಳುವ ಪ್ರಮಾಣ ಕಡಿಮೆಯಾಗಿದ್ದಲ್ಲಿ ಶೇ. 10ರಷ್ಟು ಮೈಲೇಜ್ ಪ್ರಮಾಣದಲ್ಲೂ ಏರಿಕೆಯಾಗಲಿದೆ.
MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಇದರೊಂದಿಗೆ ಹೊಸ ಕಾರುಗಳ ಬೆಲೆಯಲ್ಲೂ ತುಸು ಏರಿಕೆಯಾಗಲಿದ್ದು, ಬಿಎಸ್-4 ಕಾರುಗಳ ಬೆಲೆಗಳಿಂತಲೂ ಬಿಎಸ್-6 ಕಾರುಗಳ ಬೆಲೆಯು ತಾಂತ್ರಿಕ ಸೌಲಭ್ಯಗಳ ಅಳವಡಿಕೆಯ ಆಧಾರದ ಮೇಲೆ ರೂ. 1.50 ಲಕ್ಷದಿಂದ ರೂ.2.50 ಲಕ್ಷದ ತನಕ ಹೆಚ್ಚಿನ ಬೆಲೆ ಪಡೆದುಕೊಳ್ಳಬಹುದು ಎಂದು ನೀರಿಕ್ಷಿಸಲಾಗಿದೆ.
Source: Autocarindia