ದುಬಾರಿ ವೆಚ್ಚದಲ್ಲಿ ಮಾಡಿಫೈಗೊಂಡ ಐತಿಹಾಸಿಕ ಮಾರುತಿ 800 ಕಾರು

ಭಾರತಕ್ಕೆ ಆಧುನಿಕ ಕಾರುಗಳನ್ನು ಮೊದಲ ಬಾರಿ ಪರಿಚಯಿಸಿದ ಖ್ಯಾತಿ ಮಾರುತಿ ಸುಜುಕಿ ಕಂಪನಿಗೆ ಸಲ್ಲುತ್ತದೆ. ಅಂಬಾಸಿಂಡರ್, ಫಿಯೆಟ್ ಪದ್ಮಿನಿ ಕಾರುಗಳನ್ನು ಓಡಿಸಿ ಬೇಸರವಾಗಿದ್ದ ಕಾರು ಪ್ರಿಯರಿಗೆ ಹೊಸ ಮಾದರಿಯ ಆಧುನಿಕ ಕಾರನ್ನು ಪರಿಚಯಿಸಿದ ಖ್ಯಾತಿ ಮಾರುತಿಯದು.

ದುಬಾರಿ ವೆಚ್ಚದಲ್ಲಿ ಮಾಡಿಫೈಗೊಂಡ ಐತಿಹಾಸಿಕ ಮಾರುತಿ 800 ಕಾರು

ಮಾರುತಿ ಸುಜುಕಿಯ 800 ಕಾರು ಒಂದು ಕಾಲದಲ್ಲಿ ಕನಸಿನ ಕಾರ್ ಆಗಿತ್ತು. ಸುಮಾರು 2 ದಶಕಗಳ ಕಾಲ ಭಾರತೀಯ ರಸ್ತೆಯನ್ನು ಆಳಿದ್ದು ಅದರ ಹಿರಿಮೆಯನ್ನು ತೋರುತ್ತದೆ. ಭಾರತದ ಆಟೋಮೊಬೈಲ್ ಕ್ಷೇತ್ರಕ್ಕೆ ಹೊಸ ಭಾಷ್ಯ ಬರೆದ ಕೀರ್ತಿ ಐತಿಹಾಸಿಕ ಮಾರುತಿ 800 ಕಾರಿಗೆ ಸಲ್ಲುತ್ತದೆ.

ದುಬಾರಿ ವೆಚ್ಚದಲ್ಲಿ ಮಾಡಿಫೈಗೊಂಡ ಐತಿಹಾಸಿಕ ಮಾರುತಿ 800 ಕಾರು

ಮೊಟ್ಟ ಮೊದಲ ಬಾರಿಗೆ ಭಾರತದಲ್ಲೇ ನಿರ್ಮಾಣಗೊಂಡ ಈ ಕಾರು ಭಾರತೀಯರ ಮನ ಗೆದ್ದ ಕಾರು. ಎಸ್‍ಎಸ್ 80 ಎಂದೂ ಕರೆಯಲ್ಪಡುವ ಮೊದಲ ತಲೆಮಾರಿನ ಮಾರುತಿ 800 ಅನ್ನು ಹೊಸ ಲುಕ್ ನೊಂದಿಗೆ ಮಾಡಿಫೈ ಮಾಡಲಾಗಿದೆ.

ದುಬಾರಿ ವೆಚ್ಚದಲ್ಲಿ ಮಾಡಿಫೈಗೊಂಡ ಐತಿಹಾಸಿಕ ಮಾರುತಿ 800 ಕಾರು

ಮಾರುತಿ 800 ಉತ್ಪಾದನೆಯ ಅಂತಿಮವಾಗಿ 2014ರಲ್ಲಿ ಸ್ಥಗಿತಗೊಳಿಸುವ ಮೂಲಕ ಮಾರುತಿ 800 ವೆಂಟೇಜ್ ಕಾರ್ ಆಗಿ ಮಾರ್ಪಟ್ಟಿದೆ. 1984ರ ಮಾರುತಿ 800 ಕಾರ್ ಅನ್ನು ಮಾಡಿಫೈ ಮಾಡಿ ಸ್ಪೋರ್ಟಿ ಲುಕ್ ಅನ್ನು ನೀಡಲಾಗಿದೆ.

ದುಬಾರಿ ವೆಚ್ಚದಲ್ಲಿ ಮಾಡಿಫೈಗೊಂಡ ಐತಿಹಾಸಿಕ ಮಾರುತಿ 800 ಕಾರು

ನವದೆಹಲಿ ಮೂಲದ ಎಜಿಎಂ ಟೆಕ್ನಾಲಜೀಸ್‍‍ನವರು ಈ ಹ್ಯಾಚ್‍‍ಬ್ಯಾಕ್ ಅನ್ನು ಮಾಡಿಫೈ ಮಾಡಿದ್ದಾರೆ. ಮಾರುತಿ 800 ಕಾರಿಗೆ ಹೊಸ ಲುಕ್ ಅನ್ನು ನೀಡಿದ್ದಾರೆ. ಮಾರುತಿ 800 ಕಾರಿಗೆ ಕೆಂಪು ಬಣ್ಣವನ್ನು ನೀಡಲಾಗಿದೆ. ಈ ಕಾರಿನಲ್ಲಿ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್‍‍ಗಳು, ಎಲ್‍ಇಡಿ ಡಿಆರ್‍ಎಲ್‍‍ಗಳು ಮತ್ತು ಟೇಲ್‍‍‍ಲೈಟ್‍‍ಗಳನ್ನು ಅಳವಡಿಸಿ ಅಧುನಿಕ ಲುಕ್ ನೀಡಿದ್ದಾರೆ.

ದುಬಾರಿ ವೆಚ್ಚದಲ್ಲಿ ಮಾಡಿಫೈಗೊಂಡ ಐತಿಹಾಸಿಕ ಮಾರುತಿ 800 ಕಾರು

ಮಾರುತಿ 800 ಮೂಲ ಮಾದರಿಯಲ್ಲಿ 12 ಇಂಚಿನ ಸ್ಟೀಲ್ ವ್ಹೀಲ್‍ಗಳಿದ್ದವು. ಇದನ್ನು ಬದಲಾಯಿಸಿ 13 ಇಂಚಿನ ಬ್ಲ್ಯಾಕ್ ಅಲಾಯ್ ವ್ಹೀಲ್‍‍ಗಳನ್ನು ಅಳವಡಿಸಲಾಗಿದೆ. ಬಂಪರ್ ಮತ್ತು ಸೈಡ್ ಸ್ಕರ್ಟ್‍‍ಗಳ ಮೇಲಿನ ಕ್ಯಾಬನ್ ಫೈಬರ್ ಬಾಡಿ ಕಿಡ್ ಅನ್ನು ಅಲಂಕರಿಸಿದ್ದಾರೆ.

ದುಬಾರಿ ವೆಚ್ಚದಲ್ಲಿ ಮಾಡಿಫೈಗೊಂಡ ಐತಿಹಾಸಿಕ ಮಾರುತಿ 800 ಕಾರು

ಸುಜುಕಿ ಬ್ಯಾಡ್ಜ್‌ನೊಂದಿಗೆ ಕಸ್ಟಮ್ ಗ್ರಿಲ್ ಅನ್ನು ಹೊರಭಾಗದಲ್ಲಿ ಅಳವಡಿಸಲಾಗಿದೆ. ಇನ್ನೂ ಕಾರಿನ ಇಂಟಿರಿಯರ್‍‍ನಲ್ಲಿನ ಕಾರ್ಬನ್ ಪೈಬರ್ ಅನ್ನು ಬದಲಾವಣೆ ಮಾಡಲಾಗಿಲ್ಲ. ಮೂಲ ಡ್ಯಾಶ್ ಬೋರ್ಡ್ ವಿನ್ಯಾಸವನ್ನು ಹಾಗೇ ಉಳಿಸಿಕೊಳ್ಳಲಾಗಿದೆ.

ದುಬಾರಿ ವೆಚ್ಚದಲ್ಲಿ ಮಾಡಿಫೈಗೊಂಡ ಐತಿಹಾಸಿಕ ಮಾರುತಿ 800 ಕಾರು

ಆದರೆ ಎಸಿ, ಮ್ಯೂಸಿಕ್ ಸಿಸ್ಟಂ, ಸ್ಟ್ಯಾಂಡ್ ಅಲೋನ್ ಟ್ಯಾಜೊ ಡಯಲ್ ಮತ್ತು ಅಂಬರ್-ಲಿಟ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಸೇರಿದಂತೆ ಹೆಚ್ಚಿನ ಪೀಚರ್ಸ್‍‍ಗಳನ್ನು ಹೆಚ್ಚುವರಿಯಾಗಿ ಅಳವಡಿಸಲಾಗಿದೆ. ಹಳೆಯ ತಲೆಮಾರಿನ ಅಲ್ಟೋ ಕಾರಿನ ಸ್ಟೀಯರಿಂಗ್ ವ್ಹೀಲ್ ಅನ್ನು ಅಳವಡಿಸಲಾಗಿದೆ.

ದುಬಾರಿ ವೆಚ್ಚದಲ್ಲಿ ಮಾಡಿಫೈಗೊಂಡ ಐತಿಹಾಸಿಕ ಮಾರುತಿ 800 ಕಾರು

ಕಾರಿನ ಸೀಟುಗಳು ಲೇದರ್‍‍ನಿಂದ ಕೂಡಿವೆ. ಹಿಂಭಾಗದ ವಿಂಡ್ ಷೀಲ್ಡ್ ಮೂಲಕ ಬೂಟ್ ಅನ್ನು ಉಪಯೋಗಿಸಬಹುದಾಗಿದೆ. ಕೇವಲ ವಿನ್ಯಾಸದಲ್ಲಿ ಮಾತ್ರ ಬದಲಾವಣೆಯನ್ನು ಮಾಡಲಾಗಿಲ್ಲ. ತಾಂತ್ರಿಕ ಅಂಶಗಳಲ್ಲಿಯೂ ಸಣ್ಣ ಬದಲಾವಣೆಗಳನ್ನು ಮಾಡಲಾಗಿದೆ.

ದುಬಾರಿ ವೆಚ್ಚದಲ್ಲಿ ಮಾಡಿಫೈಗೊಂಡ ಐತಿಹಾಸಿಕ ಮಾರುತಿ 800 ಕಾರು

ಮೂಲ ಮಾದರಿ ಎಸ್ಎಸ್ 80 ಕಾರು ಅಥವಾ ಮಾರುತಿ 800 ಕಾರು ಇನ್‍‍ಲೈನ್ ಮೂರು ಸಿಲಿಂಡರ್ 796 ಸಿಸಿ ಎಂಜಿನ್ ಅನ್ನು ಹೊಂದಿದೆ. ಇದನ್ನು ಹಾಗೇ ಮುಂದುವರೆಸಲಾಗಿದೆ, ಆದರೆ ಸ್ಟಾಕ್ ಕಾರಿನ ಕಾರ್ಬುರೇಟರ್ ಅನ್ನು ಎಂಪಿಎಫ್‍ಐ ಸಿಸ್ಟಂಗೆ ಅನುಗುಣವಾಗಿ ಬದಲಾಯಿಸಲಾಗಿದೆ.

ದುಬಾರಿ ವೆಚ್ಚದಲ್ಲಿ ಮಾಡಿಫೈಗೊಂಡ ಐತಿಹಾಸಿಕ ಮಾರುತಿ 800 ಕಾರು

ಮಾಡಿಫೈ ಮಾಡಲಾದ ಮಾರುತಿ 800 ಕಾರಿನಲ್ಲಿರುವ ಎಂಜಿನ್ ಪವರ್ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಇದರೊಂದಿಗೆ ಕಾರಿನಲ್ಲಿ ಫ್ರಂಟ್ ಡಿಸ್ಕ್ ಬ್ರೇಕ್ ಮತ್ತು ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ನಂತಹ ಕೆಲವು ಗಮನಾರ್ಹ ಮಾಡಿಫೈ ಮಾಡಲಾಗಿದೆ.

ದುಬಾರಿ ವೆಚ್ಚದಲ್ಲಿ ಮಾಡಿಫೈಗೊಂಡ ಐತಿಹಾಸಿಕ ಮಾರುತಿ 800 ಕಾರು

ಮಾರುತಿ 800 ಕಾರ್ ಅನ್ನು ಸಂಪೂರ್ಣ ಮಾಡಿಫೈ ಮಾಡಲು ಸುಮಾರು 6.ಲಕ್ಷಗಳಷ್ಟು ವೆಚ್ಚವಾಗಿದೆ ಎಂದು ವರದಿಯಾಗಿದೆ. 1984ರಲ್ಲಿ ಈ ಕಾರಿನ ಅನ್ ರೋಡ್ ಬೆಲೆಯು ರೂ.52,500 ಗಳಾಗಿತ್ತು ಎಂಬುದನ್ನು ಗಮನಿಸಬೇಕು. ಮಾರುತಿ 800 ಕಾರಿಗೆ ದುಬಾರಿ ವೆಚ್ಚವನ್ನು ಹೊಡಿಕೆ ಮಾಡಿ ಮಾಡಿಫೈ ಮಾಡಿರುವುದು ಮೆಚ್ಚುವ ವಿಷಯವಾಗಿದೆ ಅಲ್ಲದೇ ಅವರಿಗೆ ಕಾರಿನ ಮೇಲೆ ಇರುವ ಪ್ರೀತಿ ಎಷ್ಟು ಎಂಬುದನ್ನು ತೋರುತ್ತದೆ.

Most Read Articles

Kannada
English summary
1984 Maruti 800 first gen modified - Read in Kannada
Story first published: Wednesday, January 8, 2020, 12:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X