ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಆಕರ್ಷಕ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಕಿಯಾ ಸೊನೆಟ್

ಕಿಯಾ ಮೋಟಾರ್ಸ್ ಕಂಪನಿಯು ತನ್ನ ಬಹುನೀರಿಕ್ಷಿತ ಕಾರು ಮಾದರಿಯಾದ ಸೊನೆಟ್ ಆವೃತ್ತಿಯನ್ನು ಇದೇ ತಿಂಗಳು 18ರಂದು ಅಧಿಕೃತವಾಗಿ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಆಕರ್ಷಕ ಬೆಲೆಯೊಂದಿಗೆ ಬಿಡುಗಡೆಯಾಗುವ ಸುಳಿವು ನೀಡಿದೆ.

ಆಕರ್ಷಕ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಕಿಯಾ ಸೊನೆಟ್

ಸಬ್ ಫೋರ್ ಮೀಟರ್ ಕಾರು ಮಾದರಿಯಲ್ಲೇ ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಕಿಯಾ ಸೊನೆಟ್ ಆವೃತ್ತಿಯ ಪ್ರತಿಸ್ಪರ್ಧಿ ಕಾರು ಮಾದರಿಗಳಾದ ಮಾರುತಿ ಸುಜುಕಿ ಬ್ರೆಝಾ, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ300 ಮತ್ತು ಫೋರ್ಡ್ ಇಕೋಸ್ಪೋರ್ಟ್ ಕಾರುಗಳಿಗೆ ಭರ್ಜರಿ ನೀಡುವ ತವಕದಲ್ಲಿದೆ. ಸದ್ಯ ಮಾರುಕಟ್ಟೆಯಲ್ಲಿ ಬಹುತೇಕ ಸಬ್ ಫೋರ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಗಳು ರೂ.7 ಲಕ್ಷದಿಂದ ರೂ.12 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳುತ್ತಿವೆ.

ಆಕರ್ಷಕ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಕಿಯಾ ಸೊನೆಟ್

ಸೊನೆಟ್ ಕಾರು ಮಾದರಿಯು ಕೂಡಾ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 12.99 ಲಕ್ಷ ಬೆಲೆ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಮೂರು ಎಂಜಿನ್ ಆಯ್ಕೆಯೊಂದಿಗೆ ಒಟ್ಟು 17 ವೆರಿಯೆಂಟ್‌ಗಳನ್ನು ಹೊಂದಿರಲಿದೆ.

ಆಕರ್ಷಕ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಕಿಯಾ ಸೊನೆಟ್

ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ವೆನ್ಯೂ ಕಾರಿನಿಂದ ಎರವಲು ಪಡೆದುಕೊಂಡಿರುವ ಬಿಎಸ್-6 ವೈಶಿಷ್ಟ್ಯತೆಯ 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದ್ದು, ಪರ್ಫಾಮೆನ್ಸ್ ಪ್ರಿಯರಿಗಾಗಿ 1.-0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯ ಆಯ್ಕೆ ನೀಡಲಾಗಿದೆ.

ಆಕರ್ಷಕ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಕಿಯಾ ಸೊನೆಟ್

1.2-ಲೀಟರ್ ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಜೊತೆಗೆ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದರೆ, 1.5-ಲೀಟರ್ ಡೀಸೆಲ್ ಮಾದರಿಯು 6-ಸ್ಪೀಡ್ ಇಂಟೆಲಿಜೆಂಟ್ ಮ್ಯಾನುವಲ್ ಗೇರ್‌ಬಾಕ್ಸ್ ಜೊತೆಗೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪಡೆದುಕೊಂಡಿದೆ. ಟರ್ಬೋ ಪೆಟ್ರೋಲ್ ಮಾದರಿಯು ಸ್ಟ್ಯಾಂಡರ್ಡ್ ಆಗಿ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿದ್ದು, ಜಿಟಿ ಲೈನ್ ಮಾದರಿಯಾಗಿರುವ ಟರ್ಬೋ ಮಾದರಿಯೇ ಸೊನೆಟ್ ಕಾರಿನ ಹೈಎಂಡ್ ಮಾದರಿಯಾಗಿ ಮಾರಾಟಗೊಳ್ಳಲಿದೆ.

ಆಕರ್ಷಕ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಕಿಯಾ ಸೊನೆಟ್

ಹೊಸ ಕಾರು ಬಿಡುಗಡೆಗೂ ಮುನ್ನವೇ ಈಗಾಗಲೇ ಸುಮಾರು 12 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಸಲ್ಲಿಕೆಯಾಗಿದ್ದು, ಸಬ್ ಫೋರ್ ಮೀಟರ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲೇ ವಿನೂತನ ಫೀಚರ್ಸ್ ಮತ್ತು ಎಂಜಿನ್ ಆಯ್ಕೆ ಹೊಂದಿರುವುದು ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದೆ.

ಆಕರ್ಷಕ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಕಿಯಾ ಸೊನೆಟ್

ಶಾರ್ಪ್ ಸ್ಟೈಲಿಷ್ ಲುಕ್ ಹೊಂದಿರುವ ಹೊಸ ಕಿಯಾ ಸೊನೆಟ್ ಕಾರಿನಲ್ಲಿ ಕ್ರೌನ್ ಜ್ಯುವೆಲ್ ಎಲ್ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಸ್ ಮತ್ತು ಟರ್ನ್ ಇಂಡಿಕೇಟರ್, ಎಲ್ಇಡಿ ಪ್ರೋಜೆಕ್ಟರ್ ಫಾಗ್ ಲ್ಯಾಂಪ್, ಹಾರ್ಟ್‌ಬೀಟ್ ವಿನ್ಯಾಸದ ಎಲ್ಇಡಿ ಟೈಲ್ ಲ್ಯಾಂಪ್ ಮತ್ತು ಟೈಲ್ ಲೈಟ್‌ಗೆ ಹೊಂದಿಕೊಂಡಿರುವ ರಿಪ್ಲೆಕ್ಟರ್ ಸ್ಟ್ಪೀಪ್ ಆಕರ್ಷಕವಾಗಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಆಕರ್ಷಕ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಕಿಯಾ ಸೊನೆಟ್

ಹಾಗೆಯೇ ಕಾರಿನ ಇಂಟಿರಿಯರ್ ಕೂಡಾ ಆಕರ್ಷಕವಾಗಿದ್ದು, ಆರಾಮದಾಯಕ ಆಸನ ಸೌಲಭ್ಯದೊಂದಿಗೆ ರಿಯರ್ ಎಸಿ ವೆಂಟ್ಸ್, ಎಲೆಕ್ಟ್ರಿಕ್ ಸನ್‌ರೂಫ್, ಏರ್ ಪ್ಲೂರಿಫ್ಲೈರ್, ವೆಂಟಿಲೆಟೆಡ್ ಫ್ರಂಟ್ ಸೀಟ್ ಮತ್ತು ವಿವಿಧ ಫೀಚರ್ಸ್ ಒಂದೇ ಸೂರಿನಡಿ ನಿಯಂತ್ರಣ ಮಾಡಬಲ್ಲ ಯುವಿಒ ಕನೆಟೆಡ್ ಟೆಕ್ನಾಲಜಿ ಸಹ ಈ ಕಾರಿನಲ್ಲಿದೆ.

ಆಕರ್ಷಕ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಕಿಯಾ ಸೊನೆಟ್

ಕಾರಿನ ಒಳಭಾಗದ ವಿನ್ಯಾಸಕ್ಕೆ ಮತ್ತಷ್ಟು ಮೆರಗು ನೀಡುವ ಉದ್ದೇಶದಿಂದ ಅಲ್ಲಲ್ಲಿ ಸಿಲ್ವರ್ ಆಕ್ಸೆಂಟ್ ಸಹ ನೀಡಲಾಗಿದ್ದು, ಗೇರ್ ಲೀವರ್, ಸ್ಟೀರಿಂಗ್ ವೀಲ್ಹ್, ಎಸಿ ವೆಂಟ್ಸ್ ಸುತ್ತ ನೀಡಲಾಗಿದ್ದು, ಇದು ಕಾರಿನ ಒಳಭಾಗದ ಖದರ್ ಹೆಚ್ಚಿಸಿರುವುದಲ್ಲದೆ ಲೆದರ್ ವ್ಯಾರ್ಪ್ ಆಸನಗಳು, ವೈರ್ ಲೆಸ್ ಚಾರ್ಜರ್ ಪ್ರಮುಖವಾಗಿರಲಿವೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಆಕರ್ಷಕ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಕಿಯಾ ಸೊನೆಟ್

ಹೊಸ ಸೊನೆಟ್ ಕಾರು ಸೆಲ್ಟೊಸ್ ಮಾದರಿಯಲ್ಲಿ ಟೆಕ್ ಲೈನ್ ಮತ್ತು ಜಿಟಿ ಲೈನ್ ವೆರಿಯೆಂಟ್ ಹೊಂದಿರುವುದು ಪ್ರಮುಖ ಆಕರ್ಷಣೆಯಾಗಲಿದ್ದು, ಹೊಸ ಕಾರು ಸಾಮಾನ್ಯ ಮಾದರಿಯ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಜೊತೆಗೆ ಟರ್ಬೋ ಪೆಟ್ರೋಲ್ ಮಾದರಿಯನ್ನು ಹೊಂದಿರುವುದು ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಗಳನ್ನು ಆಯ್ಕೆ ಮಾಡಬಹುದಾಗಿದೆ.

Most Read Articles

Kannada
English summary
Kia Sonet Prices Leaked In Online. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X