ಕಾರು ಖರೀದಿಸಲು ಸರ್ಕಾರಿ ನೌಕರರಿಗೆ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ ಮಹೀಂದ್ರಾ

ದೇಶಿಯ ಮೂಲದ ಮಹೀಂದ್ರಾ ಕಂಪನಿಯು ಹಬ್ಬದ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರಿಗೆ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ. ದೀಪಾವಳಿಯ ಸಂದರ್ಭದಲ್ಲಿ ಮಹೀಂದ್ರಾ ಕಂಪನಿಯು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಪಿಎಸ್ ಯು ನೌಕರರಿಗೆ ಈ ಕೊಡುಗೆಗಳನ್ನು ನೀಡುತ್ತಿದೆ.

ಕಾರು ಖರೀದಿಸಲು ಸರ್ಕಾರಿ ನೌಕರರಿಗೆ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ ಮಹೀಂದ್ರಾ

ಈ ಕೊಡುಗೆಯಡಿಯಲ್ಲಿ ನೌಕರರಿಗೆ ರೂ.11,500ಗಳವರೆಗೆ ನಗದು ರಿಯಾಯಿತಿ ನೀಡಲಾಗುತ್ತಿದೆ. ಇದರೊಂದಿಗೆ ಮಹೀಂದ್ರಾ ವಾಹನಗಳ ಖರೀದಿಗೆ ಪ್ರೊಸೆಸಿಂಗ್ ಶುಲ್ಕದಲ್ಲಿ 100%ನಷ್ಟು ರಿಯಾಯಿತಿ ನೀಡಲಾಗುತ್ತದೆ. ವಾಹನಗಳ ಇಎಂಐ ಖರೀದಿಗೆ ಸರ್ಕಾರಿ ನೌಕರರಿಗೆ ಕನಿಷ್ಠ 7.25%ನಷ್ಟು ಬಡ್ಡಿದರ ವಿಧಿಸಲಾಗುತ್ತದೆ.

ಕಾರು ಖರೀದಿಸಲು ಸರ್ಕಾರಿ ನೌಕರರಿಗೆ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ ಮಹೀಂದ್ರಾ

ಇದರೊಂದಿಗೆ 8 ವರ್ಷಗಳವರೆಗೆ ಹಣಕಾಸು ಸೌಲಭ್ಯವನ್ನೂ ಒದಗಿಸಲಾಗುತ್ತದೆ. ಕಂಪನಿಯು ಕಾರುಗಳ ಮೇಲೆ ರೂ.799ಗಳ ಇಎಂಐ ಅನ್ನು ಪರಿಚಯಿಸಿದೆ. ಇತರ ಕೊಡುಗೆಗಳ ಬಗ್ಗೆ ಹತ್ತಿರವಿರುವ ಕಂಪನಿಯ ಮಾರಾಟಗಾರರ ಬಳಿ ಮಾಹಿತಿ ಪಡೆಯಬಹುದು ಎಂದು ಮಹೀಂದ್ರಾ ಕಂಪನಿ ಹೇಳಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಕಾರು ಖರೀದಿಸಲು ಸರ್ಕಾರಿ ನೌಕರರಿಗೆ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ ಮಹೀಂದ್ರಾ

ಮಹೀಂದ್ರಾ ಕಂಪನಿಯು ಹಲವಾರು ಕಂಪನಿಗಳಿಂದ ಹಣಕಾಸು ಸೌಲಭ್ಯವನ್ನು ಒದಗಿಸಲಿದೆ. ಕಂಪನಿಯ ಶೋ ರೂಂಗಳು ಹಾಗೂ ವರ್ಕ್ ಶಾಪ್ ಗಳಲ್ಲಿ ಕಾಂಟ್ಯಾಕ್ಟ್ ಲೆಸ್ ಪಾವತಿ ಸೌಲಭ್ಯವನ್ನು ಒದಗಿಸಲಾಗಿದೆ.

ಕಾರು ಖರೀದಿಸಲು ಸರ್ಕಾರಿ ನೌಕರರಿಗೆ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ ಮಹೀಂದ್ರಾ

ಮಹೀಂದ್ರಾ ಕಂಪನಿಯು ಇತ್ತೀಚಿಗೆ ತನ್ನ ಥಾರ್ ಎಸ್‌ಯುವಿಯ ವಿತರಣೆಯನ್ನು ಆರಂಭಿಸಿದೆ. ಕಂಪನಿಯು ಈ ಎಸ್‌ಯುವಿಗಾಗಿ ಇದುವರೆಗೂ 20,000 ಯುನಿಟ್ ಗಳಿಗೂ ಹೆಚ್ಚಿನ ಬುಕ್ಕಿಂಗ್ ಗಳನ್ನು ಸ್ವೀಕರಿಸಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಕಾರು ಖರೀದಿಸಲು ಸರ್ಕಾರಿ ನೌಕರರಿಗೆ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ ಮಹೀಂದ್ರಾ

ಹೊಸ ಥಾರ್ ಎಸ್‌ಯುವಿಯ ವಿತರಣೆಯನ್ನು ಪಡೆಯಲು 5ರಿಂದ 7 ತಿಂಗಳವರೆಗೆ ಕಾಯಬೇಕಾಗುತ್ತದೆ ಎಂದು ಕಂಪನಿ ಹೇಳಿದೆ. ಥಾರ್ ಎಸ್‌ಯುವಿಯ ಹಾರ್ಡ್ ಟಾಪ್ ಆಟೋಮ್ಯಾಟಿಕ್ ಹಾಗೂ ಮ್ಯಾನುವಲ್ ಮಾದರಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬುಕ್ಕಿಂಗ್ ಮಾಡಲಾಗುತ್ತಿದೆ.

ಕಾರು ಖರೀದಿಸಲು ಸರ್ಕಾರಿ ನೌಕರರಿಗೆ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ ಮಹೀಂದ್ರಾ

ಈ ವಾರಾಂತ್ಯದಲ್ಲಿ ಸುಮಾರು 500 ಯುನಿಟ್ ಥಾರ್ ಎಸ್‌ಯುವಿಯನ್ನು ಏಕಕಾಲದಲ್ಲಿ ವಿತರಿಸಲಾಗುವುದು ಎಂದು ಕಂಪನಿಯು ಮಾಹಿತಿ ನೀಡಿದೆ. ಈ ವಾರಾಂತ್ಯದಲ್ಲಿ ಸುಮಾರು 500 ಗ್ರಾಹಕರು ತಾವು ಬುಕ್ ಮಾಡಿದ್ದ ಥಾರ್ ಎಸ್‌ಯುವಿಯನ್ನು ಪಡೆಯಲಿದ್ದಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕಾರು ಖರೀದಿಸಲು ಸರ್ಕಾರಿ ನೌಕರರಿಗೆ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ ಮಹೀಂದ್ರಾ

ವೇಟಿಂಗ್ ಅವಧಿಯನ್ನು ಕಡಿಮೆ ಮಾಡುವ ಸಲುವಾಗಿ ಕಂಪನಿಯು ನಾಸಿಕ್ ಘಟಕದಲ್ಲಿನ ಉತ್ಪಾದನೆಯನ್ನು ವೇಗಗೊಳಿಸುತ್ತಿದೆ. ಈ ಘಟಕದಲ್ಲಿ ಕಂಪನಿಯು ತಿಂಗಳಿಗೆ 3000 ಯುನಿಟ್‌ಗಳಷ್ಟು ಥಾರ್ ಎಸ್‌ಯುವಿಯನ್ನು ಉತ್ಪಾದಿಸಲಿದ್ದು ವೇಟಿಂಗ್ ಅವಧಿಯು ಕಡಿಮೆಯಾಗಲಿದೆ.

ಕಾರು ಖರೀದಿಸಲು ಸರ್ಕಾರಿ ನೌಕರರಿಗೆ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ ಮಹೀಂದ್ರಾ

ಥಾರ್ ಎಸ್‌ಯುವಿಯನ್ನು ವಿತರಿಸಲು ಮಹೀಂದ್ರಾ ಹೊಸ ಪ್ರಕ್ರಿಯೆಯನ್ನು ಸಿದ್ಧಪಡಿಸಿದೆ. ಇದರಿಂದಾಗಿ ಗ್ರಾಹಕರಿಗೆ ಯಾವಾಗ ಈ ಎಸ್‌ಯುವಿ ವಿತರಣೆಯಾಗುತ್ತದೆ ಎಂಬ ಬಗ್ಗೆ ಸ್ಪಷ್ಟತೆ ದೊರೆಯಲಿದೆ. ಹೊಸ ಥಾರ್‌ ಎಸ್‌ಯುವಿಯು ಜನರಿಗೆ ಹೆಚ್ಚು ಇಷ್ಟವಾಗುತ್ತಿರುವ ಕಾರಣಕ್ಕೆ ಹೆಚ್ಚಿನ ಸಂಖ್ಯೆಯ ಬುಕ್ಕಿಂಗ್ ಗಳನ್ನು ಪಡೆದಿದೆ.

Most Read Articles

Kannada
English summary
Mahindra offers special discounts for government officials. Read in Kannada.
Story first published: Friday, November 6, 2020, 9:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X