ಇನ್ಮುಂದೆ ಭಾರತದಲ್ಲೇ ನಿರ್ಮಾಣಗೊಳ್ಳಲಿವೆ ಟೊಯೊಟಾ ಹೈಬ್ರಿಡ್ ಕಾರುಗಳು

ಹೈಬ್ರಿಡ್ ಕಾರುಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟೊಯೊಟಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿನ ಹೊಸ ಯೋಜನೆಗಳ ಕುರಿತಾಗಿ ಕೆಲವು ಮಹತ್ವದ ಮಾಹಿತಿಗಳು ಹಂಚಿಕೊಂಡಿದ್ದು, ಮುಂಬರುವ ದಿನಗಳಲ್ಲಿ ಹೈಬ್ರಿಡ್ ಕಾರು ಆವೃತ್ತಿಗಳನ್ನು ಸಂಪೂರ್ಣವಾಗಿ ಭಾರತದಲ್ಲೇ ಸಿದ್ದಪಡಿಸುವುದಾಗಿ ಹೇಳಿಕೊಂಡಿದೆ.

ಇನ್ಮುಂದೆ ಭಾರತದಲ್ಲೇ ನಿರ್ಮಾಣಗೊಳ್ಳಲಿವೆ ಟೊಯೊಟಾ ಹೈಬ್ರಿಡ್ ಕಾರುಗಳು

ವಿಶ್ವಾದ್ಯಂತ ಸದ್ಯ ಆತಂಕ ಸೃಷ್ಛಿಸಿರುವ ಕರೋನಾ ವೈರಸ್‌ನಿಂದಾಗಿ ಬಹುತೇಕ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣ ಬಂದ್ ಆಗಿದ್ದು, ಆಟೋ ಉದ್ಯಮವು ಕೂಡಾ ಭಾರೀ ಪ್ರಮಾಣದ ನಷ್ಟ ಅನುಭವಿಸುತ್ತಿದೆ. ಈ ಹಿನ್ನಲೆಯಲ್ಲಿ ಸದ್ಯದ ಪರಿಸ್ಥಿತಿ ಕುರಿತು ಸುದ್ದಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಉಪನಿರ್ದೇಶಕರಾದ ವಿಕ್ರಂ ಕಿರ್ಲೋಸ್ಕರ್ ಅವರು, ಭವಿಷ್ಯದಲ್ಲಿ ಮತ್ತಷ್ಟು ಹೊಸ ಹೈಬ್ರಿಡ್ ಕಾರುಗಳ ಉತ್ಪಾದನೆ ಮೇಲೆ ಗಮನಹರಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಇನ್ಮುಂದೆ ಭಾರತದಲ್ಲೇ ನಿರ್ಮಾಣಗೊಳ್ಳಲಿವೆ ಟೊಯೊಟಾ ಹೈಬ್ರಿಡ್ ಕಾರುಗಳು

ಜೊತೆಗೆ ಹೊಸ ಹೈಬ್ರಿಡ್ ಕಾರುಗಳನ್ನು ಭಾರತದಲ್ಲೇ ಪೂರ್ಣ ಪ್ರಮಾಣದಲ್ಲಿ ನಿರ್ಮಾಣಕ್ಕಾಗಿ ಯೋಜನೆ ರೂಪಿಸಲಾಗಿದ್ದು, 2022ರ ವೇಳೆಗೆ ಸಂಪೂರ್ಣವಾಗಿ ಸ್ಥಳೀಯ ಸಂಪನ್ಮೂಲಗಳೊಂದಿಗೆ ಅಭಿವೃದ್ದಿಪಡಿಸುವುದಾಗಿ ಸ್ಪಷ್ಟಪಡಿಸಿದೆ.

MOST READ: ಕರೋನಾ ವೈರಸ್: ವೆಂಟಿಲೆಟರ್ ಉತ್ಪಾದನೆ ಚಾಲನೆ ನೀಡಿದ ಮಾರುತಿ ಸುಜುಕಿ

ಇನ್ಮುಂದೆ ಭಾರತದಲ್ಲೇ ನಿರ್ಮಾಣಗೊಳ್ಳಲಿವೆ ಟೊಯೊಟಾ ಹೈಬ್ರಿಡ್ ಕಾರುಗಳು

ಭಾರತದಲ್ಲೇ ಹೈಬ್ರಿಡ್ ಕಾರುಗಳನ್ನು ಅಭಿವೃದ್ದಿಪಡಿಸುವುದರಿಂದ ಕಾರು ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ನೆರವಾಗುವ ಬಗ್ಗೆ ಹೇಳಿಕೊಂಡಿರುವ ಟೊಯೊಟಾ ಸಂಸ್ಥೆಯು ಮಧ್ಯಮ ಗಾತ್ರದ ಕಾರುಗಳಲ್ಲಿ ಹೈಬ್ರಿಡ್ ತಂತ್ರಜ್ಞಾನ ಪರಿಚಯಿಸುವ ಸಾಧ್ಯತೆಗಳ ಬಗ್ಗೆ ಸ್ಪಷ್ಟಪಡಿಸಿಲ್ಲ.

ಇನ್ಮುಂದೆ ಭಾರತದಲ್ಲೇ ನಿರ್ಮಾಣಗೊಳ್ಳಲಿವೆ ಟೊಯೊಟಾ ಹೈಬ್ರಿಡ್ ಕಾರುಗಳು

ಆದರೆ ಮಧ್ಯಮ ಗಾತ್ರದ ಕಾರುಗಳಲ್ಲಿ ಹೈಬ್ರಿಡ್ ತಂತ್ರಜ್ಞಾನದ ಬದಲಾಗಿ ಎಲೆಕ್ಟ್ರಿಕ್ ಆವೃತ್ತಿಗಳನ್ನೇ ಪರಿಚಯಿಸುವುದಾಗಿ ಹೇಳಿಕೊಂಡಿರುವ ಟೊಯೊಟಾ ಕಂಪನಿಯು ಹೊಸ ಯೋಜನೆಯ ಚಾಲನೆಗಾಗಿ ಭಾರೀ ಪ್ರಮಾಣದ ಹೂಡಿಕೆಗೆ ಮುಂದಾಗಿದೆ. ಸದ್ಯಕ್ಕೆ ಮಾರುಕಟ್ಟೆಯಲ್ಲಿ ಟೊಯೊಟಾ ನಿರ್ಮಾಣದ ಕ್ಯಾಮ್ರಿ ಮತ್ತು ವೆಲ್‌ಫೈರ್ ಕಾರುಗಳು ಸೆಲ್ಪ್ ಚಾರ್ಜಿಂಗ್ ಹೈಬ್ರಿಡ್ ಕಾರು ಮಾದರಿಗಳಾಗಿದ್ದು, ರೀಬ್ಯಾಡ್ಜ್ ಆವೃತ್ತಿಯಾದ ಗ್ಲಾಂಝಾ ಕಾರಿನಲ್ಲಿ ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನ ಜೋಡಣೆ ಮಾಡಲಾಗಿದೆ.

MOST READ: ಭಾರತದಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಟಾಪ್ 5 ಎಲೆಕ್ಟ್ರಿಕ್ ಕಾರುಗಳಿವು..!

ಇನ್ಮುಂದೆ ಭಾರತದಲ್ಲೇ ನಿರ್ಮಾಣಗೊಳ್ಳಲಿವೆ ಟೊಯೊಟಾ ಹೈಬ್ರಿಡ್ ಕಾರುಗಳು

ಕ್ಯಾಮ್ರಿ ಮತ್ತು ವೆಲ್‌ಫೈರ್ ಕಾರುಗಳನ್ನು ವಿದೇಶಿ ಮಾರುಕಟ್ಟೆಗಳಿಂದ ಸಿಕೆಡಿ ನೀತಿ ಅಡಿ ಆಮದು ಮಾಡಿಕೊಂಡು ಭಾರತದಲ್ಲಿ ಅಸೆಂಬ್ಲಿ ಮೂಲಕ ಮಾರಾಟ ಮಾಡುವ ಟೊಯೊಟಾ ಕಂಪನಿಯು ಮುಂಬರುವ ದಿನಗಳಲ್ಲಿ ಪೂರ್ಣಪ್ರಮಾಣದಲ್ಲಿ ಇಲ್ಲಿಯೇ ಸಿದ್ದಪಡಿಸುತ್ತದೆ.

ಇನ್ಮುಂದೆ ಭಾರತದಲ್ಲೇ ನಿರ್ಮಾಣಗೊಳ್ಳಲಿವೆ ಟೊಯೊಟಾ ಹೈಬ್ರಿಡ್ ಕಾರುಗಳು

ಇನ್ನು ಕಳೆದ ತಿಂಗಳು ಹೊಸದಾಗಿ ಬಿಡುಗಡೆಯಾಗಿರುವ ವೆಲ್‌ಫೈರ್ ಎಂಪಿವಿ ಕಾರು ಮಾದರಿಯನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಹೊಸ ಆಮದು ನೀತಿ ಅಡಿಯಲ್ಲಿ ಬಿಡುಗಡೆಗೊಳಿಸಲಾಗಿದ್ದು, ಈಗಾಗಲೇ ಹೊಸ ಕಾರು 180 ಯುನಿಟ್ ಬೇಡಿಕೆ ಪಡೆದುಕೊಳ್ಳುವ ಮೂಲಕ ಮುಂದಿನ ಮೂರು ತಿಂಗಳ ಅವಧಿಗೆ ಹೊಸ ಕಾರಿನ ಬುಕ್ಕಿಂಗ್ ಪ್ರಕ್ರಿಯೆಯು ಭರ್ತಿಯಾಗಿದೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕಾಗಿ ರೂ.100 ಕೋಟಿ ದೇಣಿಗೆ ನೀಡಿದ ಬಜಾಜ್ ಗ್ರೂಪ್

ಇನ್ಮುಂದೆ ಭಾರತದಲ್ಲೇ ನಿರ್ಮಾಣಗೊಳ್ಳಲಿವೆ ಟೊಯೊಟಾ ಹೈಬ್ರಿಡ್ ಕಾರುಗಳು

ಜಪಾನ್‌ ಮಾರುಕಟ್ಟೆಯಿಂದ ಸಿಬಿಯು ಆಮದು ನೀತಿಯಡಿ ಭಾರತದಲ್ಲಿ ಮಾರಾಟವಾಗುವ ವೆಲ್‌ಫೈರ್ ಕಾರು ಪ್ರತಿ ಮೂರು ತಿಂಗಳಿಗೆ ಒಂದು ಬಾರಿ 180 ಯುನಿಟ್ ಮಾತ್ರ ಆಮದುಗೊಳ್ಳಲಿದ್ದು, ಗ್ರಾಹಕರ ಬೇಡಿಕೆಗೆ ತಕ್ಕಂತೆ ಹೊಸ ಕಾರುಗಳನ್ನು ಮಾರಾಟ ಮಾಡಲಿದೆ.

ಇನ್ಮುಂದೆ ಭಾರತದಲ್ಲೇ ನಿರ್ಮಾಣಗೊಳ್ಳಲಿವೆ ಟೊಯೊಟಾ ಹೈಬ್ರಿಡ್ ಕಾರುಗಳು

2019ರಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಹೊಸ ಆಮದು ನೀತಿ ಅಡಿ ವಿದೇಶಿ ಆಟೋ ಉತ್ಪಾದನಾ ಸಂಸ್ಥೆಗಳು ಭಾರತಕ್ಕೆ ವಾರ್ಷಿಕವಾಗಿ 2,500 ವಾಹನಗಳನ್ನು ಯಾವುದೇ ಹೆಚ್ಚುವರಿ ಷರತ್ತುಗಳಿಲ್ಲದೆ ಆಮದು ಮಾಡಿಕೊಳ್ಳುವ ಅವಕಾಶವನ್ನು ನೀಡಲಾಗಿದ್ದು, ಇದು ಐಷಾರಾಮಿ ಕಾರು ಉತ್ಪಾದನಾ ಕಂಪನಿಗಳಿಗೆ ವರವಾಗಿದೆ.

MOST READ: ಆಕರ್ಷಕ ಬೆಲೆಯಲ್ಲಿ ಬಿಡುಗಡೆಯಾದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಇನ್ಮುಂದೆ ಭಾರತದಲ್ಲೇ ನಿರ್ಮಾಣಗೊಳ್ಳಲಿವೆ ಟೊಯೊಟಾ ಹೈಬ್ರಿಡ್ ಕಾರುಗಳು

ವೆಲ್‌ಫೈರ್ ಕಾರು ಸದ್ಯಕ್ಕೆ 'ಎಕ್ಸಿಕ್ಯೂಟಿವ್ ಲೌಂಜ್' ಎನ್ನುವ ಸಿಂಗಲ್ ವೆರಿಯೆಂಟ್‌ನಲ್ಲಿ ಮಾತ್ರವೇ ಖರೀದಿಗೆ ಲಭ್ಯವಿದ್ದು, ಹೊಸ ಕಾರು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ.79.50 ಲಕ್ಷ ಬೆಲೆ ಪಡೆದುಕೊಂಡಿದೆ.

ಇನ್ಮುಂದೆ ಭಾರತದಲ್ಲೇ ನಿರ್ಮಾಣಗೊಳ್ಳಲಿವೆ ಟೊಯೊಟಾ ಹೈಬ್ರಿಡ್ ಕಾರುಗಳು

ವಿದೇಶಿ ಮಾರುಕಟ್ಟೆಗಳಲ್ಲಿ ವೆಲ್‌ಫೈರ್ ಕಾರು 2.5-ಲೀಟರ್ ಪೆಟ್ರೋಲ್ ಹೈಬ್ರಿಡ್ ಮತ್ತು 3.5-ಲೀಟರ್ ಸಾಮಾನ್ಯ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದು, ಭಾರತದಲ್ಲಿ ಬಿಡುಗಡೆಯಾಗಿರುವ ಹೊಸ ಕಾರಿನಲ್ಲಿ ಸದ್ಯಕ್ಕೆ 2.5-ಲೀಟರ್ ಪೆಟ್ರೋಲ್ ಹೈಬ್ರಿಡ್ ವರ್ಷನ್(ಸೆಲ್ಫ್ ಚಾರ್ಜಿಂಗ್ ಹೈಬ್ರಿಡ್ ಪವರ್‌ಟ್ರೈನ್) ಮಾತ್ರವೇ ಬಿಡುಗಡೆ ಮಾಡಲಾಗಿದೆ.

Most Read Articles

Kannada
Read more on ಟೊಯೊಟಾ toyota
English summary
Toyota Hybrid Cars To Be Made In India From 2022. Read in Kannada.
Story first published: Saturday, April 11, 2020, 14:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X